Festivals Calendar May 2024: ಮೇ ತಿಂಗಳಿನಲ್ಲಿ ಯಾವ ದಿನ ಯಾವ ವ್ರತವನ್ನು ಆಚರಣೆ ಮಾಡಬೇಕು? ಇಲ್ಲಿದೆ ಮಾಹಿತಿ

ಮೇ ತಿಂಗಳ ಮೊದಲ ವಾರದಲ್ಲಿ ಕಾಲಾಷ್ಟಮಿ, ವರುಥಿನಿ ಏಕಾದಶಿಯನ್ನು ಆಚರಣೆ ಮಾಡಲಾಗುತ್ತದೆ. ಎರಡನೇ ವಾರದಲ್ಲಿ ಮಾಸ ಶಿವರಾತ್ರಿ, ಅಕ್ಷತ್ತದಿಗೆ ಅಮವಾಸ್ಯೆ ಅಥವಾ ದರ್ಶ ಅಮವಾಸ್ಯೆ, ಅಕ್ಷಯ ತೃತೀಯಾ, ವಿನಾಯಕ ಚತುರ್ಥಿಯನ್ನು ಆಚರಣೆ ಮಾಡಲಾಗುತ್ತದೆ. ನಂತರ ಕೊನೆಯ ಎರಡು ವಾರದಲ್ಲಿ ಸೀತಾನವಮಿ, ಮೋಹಿನಿ ಏಕಾದಶಿ, ನರಸಿಂಹ ಜಯಂತಿ, ಬುದ್ಧ ಪೌರ್ಣಿಮೆ ಮತ್ತು ಸಂಕಷ್ಟ ಚತುರ್ಥಿ ಮುಂತಾದ ದಿನಗಳನ್ನು ಆಚರಣೆ ಮಾಡಲಾಗುತ್ತದೆ. ಹಾಗಾದರೆ ಈ ದಿನಗಳನ್ನು ಯಾವಾಗ ಆಚರಣೆ ಮಾಡಲಾಗುತ್ತದೆ? ಇಲ್ಲಿದೆ ಮಾಹಿತಿ.

Festivals Calendar May 2024: ಮೇ ತಿಂಗಳಿನಲ್ಲಿ ಯಾವ ದಿನ ಯಾವ ವ್ರತವನ್ನು ಆಚರಣೆ ಮಾಡಬೇಕು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Edited By:

Updated on: Apr 30, 2024 | 9:50 AM

ಮೇ ತಿಂಗಳಿನಲ್ಲಿ ವಿಶೇಷ ಹಬ್ಬಗಳನ್ನು (Festivals) ಆಚರಿಸಲಾಗುತ್ತದೆ. ಇದರಲ್ಲಿ ಅರ್ಧ ತಿಂಗಳು ಚೈತ್ರ, ಉಳಿದ ಅರ್ಧ ಭಾಗ ವೈಶಾಖ ಮಾಸವನ್ನು ಒಳಗೊಂಡಿದೆ. ಹಾಗಾಗಿ ಈ ತಿಂಗಳು ಬಹಳ ವಿಶೇಷ ಎಂದರೆ ತಪ್ಪಾಗಲಾರದು. ಮೇ ತಿಂಗಳ ಮೊದಲ ವಾರದಲ್ಲಿ ಕಾಲಾಷ್ಟಮಿ, ವರುಥಿನಿ ಏಕಾದಶಿಯನ್ನು ಆಚರಣೆ ಮಾಡಲಾಗುತ್ತದೆ. ಎರಡನೇ ವಾರದಲ್ಲಿ ಮಾಸ ಶಿವರಾತ್ರಿ, ಅಕ್ಷತ್ತದಿಗೆ ಅಮವಾಸ್ಯೆ ಅಥವಾ ದರ್ಶ ಅಮವಾಸ್ಯೆ, ಅಕ್ಷಯ ತೃತೀಯಾ ಮತ್ತು ವಿನಾಯಕ ಚತುರ್ಥಿಯನ್ನು ಆಚರಣೆ ಮಾಡಲಾಗುತ್ತದೆ. ನಂತರ ಕೊನೆಯ ಎರಡು ವಾರದಲ್ಲಿ ಸೀತಾನವಮಿ, ಮೋಹಿನಿ ಏಕಾದಶಿ, ನರಸಿಂಹ ಜಯಂತಿ, ಬುದ್ಧ ಪೌರ್ಣಿಮೆ ಮತ್ತು ಸಂಕಷ್ಟ ಚತುರ್ಥಿ ಮುಂತಾದ ದಿನಗಳನ್ನು ಆಚರಣೆ ಮಾಡಲಾಗುತ್ತದೆ. ಹಾಗಾದರೆ ಈ ದಿನಗಳನ್ನು ಯಾವಾಗ ಆಚರಣೆ ಮಾಡಲಾಗುತ್ತದೆ ಇಲ್ಲಿದೆ ಮಾಹಿತಿ.

ಮೇ 1 (ಬುಧವಾರ) -ಕಾಲಾಷ್ಟಮಿ

ಮೇ 4 (ಶನಿವಾರ) -ವರುಥಿನಿ ಏಕಾದಶಿ

ಮೇ 5 (ರವಿವಾರ) -ರವಿ ಪ್ರದೋಷ

ಮೇ 6 (ಸೋಮವಾರ) -ಮಾಸಶಿವರಾತ್ರಿ

ಮೇ 8 (ಬುಧವಾರ) -ಅಕ್ಷತ್ತದಿಗೆ ಅಮವಾಸ್ಯೆ

ಮೇ 10 (ಶುಕ್ರವಾರ) -ಅಕ್ಷಯ ತೃತೀಯಾ

ಮೇ 15 (ಬುಧವಾರ) -ದುರ್ಗಾಷ್ಟಮಿ

ಮೇ 16 (ಗುರುವಾರ) -ಸೀತಾನವಮಿ

ಮೇ 19 (ರವಿವಾರ) -ಮೋಹಿನಿ ಏಕಾದಶಿ

ಮೇ 20 (ಸೋಮವಾರ) -ಸೋಮ ಪ್ರದೋಷ

ಮೇ 21 (ಮಂಗಳವಾರ) -ನರಸಿಂಹ ಜಯಂತಿ

ಮೇ 23 (ಗುರುವಾರ) -ಬುದ್ಧ ಪೂರ್ಣಿಮೆ ಅಥವಾ ವೈಶಾಖ ಹುಣ್ಣಿಮೆ

ಮೇ 26 (ರವಿವಾರ ) -ಸಂಕಷ್ಟ ಚತುರ್ಥಿ

ಮೇ 30 (ಗುರುವಾರ) -ಕಾಲಾಷ್ಟಮಿ

ಇದನ್ನೂ ಓದಿ: ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿನಲ್ಲಿಡಬೇಕು?

ಈ ದಿನಗಳಲ್ಲಿ ನೀವು ವ್ರತಾಚರಣೆ ಮಾಡಿ ದೇವರ ಆಶೀರ್ವಾದ ಪಡೆಯಬಹುದು. ದೇವಾಲಯಗಳಿಗೆ ಹೋಗಲು ಸಾಧ್ಯವಾಗದಿದ್ದವರು ಮನೆಯಲ್ಲಿಯೇ ಪೂಜೆ ಮಾಡಿ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಬಹುದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

 

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us