ಮನೆಯಲ್ಲಿ ಮೆಟ್ಟಿಲುಗಳ ನಿರ್ಮಾಣ ವಿಷಯದಲ್ಲಿ ನೀವು ಈ ತಪ್ಪುಗಳನ್ನು ಮಾಡಿದ್ದೀರಾ? ಹಣಕಾಸಿನ ಸಮಸ್ಯೆ ಎದುರಿಸಬೇಕಾದೀತು
Stairs Construction: ಇನ್ನು ಮೆಟ್ಟಿಲುಗಳು ಎಲ್ಲಾ ಒಂದೇ ಸಮತಟ್ಟಿನಲ್ಲಿ ಇರಬೇಕು. ಒಂದು ಮೆಟ್ಟಿಲು ಹೆಚ್ಚು, ಒಂದು ಮೆಟ್ಟಿಲು ಕಡಿಮೆ ಇರಬಾರದು. ಹಾಗಾದಲ್ಲಿ ಆದಾಯದಲ್ಲಿ ವ್ಯತ್ಯಾಸ ಕಂಡುಬಂದು, ಆರ್ಥಿಕ ಸಮಸ್ಯೆಗಳು ಎದುರಾಗಬಹುದು. ಮೆಟ್ಟಿಲುಗಳ ಸಂಖ್ಯೆ ಯಾವಾಗಲೂ ಬೆಸ ಆಗಿರಬೇಕು?
ಮನೆ ನಿರ್ಮಾಣದಲ್ಲಿ ವಾಸ್ತುಗೆ ನೀಡುವ ಆದ್ಯತೆ/ ಕಾಳಜಿಯ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ವಾಸ್ತು ಆಧಾರದಲ್ಲಿ ಮನೆ ಕಟ್ಟುವವರು ಬಹಳ ಮಂದಿ ಇದ್ದಾರೆ. ಅದರಲ್ಲೂ ಭಾರತೀಯರು ವಾಸ್ತುವನ್ನು ತಮ್ಮ ಜೀವನದ ಅಖಂಡ ಭಾಗವಾಗಿ ಪರಿಗಣಿಸುತ್ಥಾರೆ. ಆದ್ದರಿಂದಲೇ ಮನೆಯ ತಳಪಾಯದಿಂದ ಹಿಡಿದು ಕೋಣೆಗಳ ನಿರ್ಮಾಣದವರೆಗೂ ವಾಸ್ತು ನಿಯಮಗಳನ್ನು ಪಾಲಿಸಲಾಗುತ್ತದೆ. ಅದಕ್ಕಾಗಿಯೇ ವಾಸ್ತು ಶಾಸ್ತ್ರದಲ್ಲಿ ಅನೇಕ ವಿಷಯಗಳನ್ನು ಉಲ್ಲೇಖಿಸಲಾಗಿದೆ.
ಮನೆಯಲ್ಲಿ ಮೆಟ್ಟಿಲುಗಳನ್ನು (Stairs) ನಿರ್ಮಿಸುವುದು ವಾಸ್ತುದಲ್ಲಿ ಉಲ್ಲೇಖಿಸಬೇಕಾದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಕೆಲವು ಸ್ಥಳಾವಕಾಶದ ಕಾರಣಗಳಿಂದ, ಮೆಟ್ಟಿಲುಗಳನ್ನು (Staircase) ಸರಿಯಾದ ದಿಕ್ಕಿನಲ್ಲಿ ನಿರ್ಮಿಸbಏಕಾಗುತ್ತದೆ. ಆದರೆ ಇದನ್ನು ತಿಳಿದುಕೊಳ್ಳಿ, ಸರಿಯಾದ ದಿಕ್ಕಿನಲ್ಲಿ ಮೆಟ್ಟಿಲುಗಳನ್ನು ನಿರ್ಮಿಸದಿದ್ದರೆ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ ಎಂದು ವಾಸ್ತು ತಜ್ಞರು (Vastu Guide) ಹೇಳುತ್ತಾರೆ. ಮೆಟ್ಟಿಲುಗಳು ಸರಿಯಾದ ಸ್ಥಳದಲ್ಲಿ ಇಲ್ಲದಿದ್ದರೆ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.
ಮೆಟ್ಟಿಲುಗಳನ್ನು ನಿರ್ಮಿಸುವಾಗ ಕೆಲವು ವಾಸ್ತು ನಿಯಮಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ. ವಾಸ್ತು ವಿಜ್ಞಾನದ ಆಧಾರದ ಮೇಲೆ ಮೆಟ್ಟಿಲುಗಳನ್ನು ನಿರ್ಮಿಸುವುದು ಕುಟುಂಬದಲ್ಲಿ ಸಂತೋಷವನ್ನು ತರುತ್ತದೆ. ಸರಿಯಾದ ದಿಕ್ಕಿನಲ್ಲಿ ಮೆಟ್ಟಿಲುಗಳನ್ನು ನಿರ್ಮಿಸುವ ಮೂಲಕ ಆರ್ಥಿಕ ನಷ್ಟವನ್ನು ನಿವಾರಿಸಿಕೊಳ್ಳಬಹುದು. ಜೀವನದಲ್ಲಿ ಪ್ರಗತಿಯ ಹಾದಿ ಸುಲಭವಾಗುತ್ತದೆ. ಈಗ ವಾಸ್ತು ಶಾಸ್ತ್ರದ ಪ್ರಕಾರ ಯಾವ ದಿಕ್ಕಿನಲ್ಲಿ ಮೆಟ್ಟಿಲುಗಳನ್ನು ಕಟ್ಟಿದರೆ ಏನಾಗುತ್ತದೆ? ಮೆಟ್ಟಿಲುಗಳ ನಿರ್ಮಾಣವನ್ನು ಯಾವ ದಿಕ್ಕಿನಲ್ಲಿ ಕೈಗೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಇದನ್ನೂಓದಿ: ಹೊಸ ಮನೆಯ ಕನಸು ನನಸಾಗಿದೆಯೇ.. ಗೃಹಪ್ರವೇಶ ಮಾಡುವಾಗ ಈ ವಾಸ್ತು ನಿಯಮಗಳ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ
ವಾಸ್ತು ಶಾಸ್ತ್ರದ ಪ್ರಕಾರ ಈಶಾನ್ಯ ದಿಕ್ಕಿನಲ್ಲಿ ಮೆಟ್ಟಿಲುಗಳನ್ನು ಕಟ್ಟಬಾರದು. ಈಶಾನ್ಯದಲ್ಲಿ ಸ್ನಾನಗೃಹದ ಜೊತೆಗೆ ಮೆಟ್ಟಿಲುಗಳು ಇರಬಾರದು. ಈ ದಿಕ್ಕಿನಲ್ಲಿ ನಿರ್ಮಿಸಿದರೆ ಆರ್ಥಿಕ ಸಮಸ್ಯೆ, ಆರೋಗ್ಯ, ವ್ಯಾಪಾರ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಹಾಗೆಯೇ ಆಗ್ನೇಯ ದಿಕ್ಕಿನಲ್ಲಿಯೂ ಮೆಟ್ಟಿಲುಗಳನ್ನು ನಿರ್ಮಿಸಬಾರದು. ಮೆಟ್ಟಿಲುಗಳು ಆಗ್ನೇಯ ದಿಕ್ಕಿನಲ್ಲಿದ್ದರೆ, ಮಕ್ಕಳು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ.
ಇನ್ನು ಮೆಟ್ಟಿಲುಗಳು ಎಲ್ಲಾ ಒಂದೇ ಸಮತಟ್ಟಿನಲ್ಲಿ ಇರಬೇಕು. ಒಂದು ಮೆಟ್ಟಿಲು ಹೆಚ್ಚು, ಒಂದು ಮೆಟ್ಟಿಲು ಕಡಿಮೆ ಇರಬಾರದು. ಹಾಗಾದಲ್ಲಿ ಆದಾಯದಲ್ಲಿ ವ್ಯತ್ಯಾಸ ಕಂಡುಬಂದು, ಆರ್ಥಿಕ ಸಮಸ್ಯೆಗಳು ಎದುರಾಗಬಹುದು. ಮೆಟ್ಟಿಲುಗಳ ಸಂಖ್ಯೆ ಯಾವಾಗಲೂ ಬೆಸ ಆಗಿರಬೇಕು? ಒಂದು ವೇಳೆ ಸಮ ಸಂಖ್ಯೆಯ ಮೆಟ್ಟಿಲುಗಳಿದ್ದರೆ ಅದು ದುರಾದೃಷ್ಟವನ್ನು ತರುತ್ತದೆ. ನೆಲದ ಕೆಳಗೆ ಯಾವುದೇ ಜಾಗವನ್ನು ಬಿಡಬಾರದು ಎಂದು ವಾಸ್ತು ತಜ್ಞರು ಹೇಳುತ್ತಾರೆ.
ಹೆಚ್ಚಿನ ಆಧ್ಯಾತ್ಮಿಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ