AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

How to get blessing of planet Sun: ರವಿ ಗ್ರಹದ ದೋಷ ನಿವಾರಣೆಗೆ ಸರಳ ಮಾರ್ಗೋಪಾಯಗಳೇನು?

ರವಿ ಗ್ರಹದ ದೋಷ ಇರುವವರಿಗೆ ಅದರ ನಿವಾರಣೆಗೆ ಸರಳವಾದ ಮಾರ್ಗೋಪಾಯಗಳನ್ನು ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಅವರು ತಿಳಿಸಿದ್ದಾರೆ. ಜಾತಕ, ಗೋಚಾರ ಅಥವಾ ದಶಾ ಸಂದರ್ಭದಲ್ಲಿನ ರವಿ ದೋಷ ನಿವಾರಣೆಗೆ ಇದರಿಂದ ನಿಮಗೆ ಸಹಾಯ ಆಗಲಿದೆ.

How to get blessing of planet Sun: ರವಿ ಗ್ರಹದ ದೋಷ ನಿವಾರಣೆಗೆ ಸರಳ ಮಾರ್ಗೋಪಾಯಗಳೇನು?
ಸೂರ್ಯನ ಆರಾಧನೆ ಉತ್ತಮ ಫಲ.
Ghanashyam D M | ಡಿ.ಎಂ.ಘನಶ್ಯಾಮ
| Edited By: |

Updated on: Apr 10, 2021 | 6:25 AM

Share

ಎಲ್ಲ ಓದುಗರಿಗೂ ಈ ದಿನ ಸರಳವಾದ ಹಾಗೂ ಅತಿ ಮುಖ್ಯವಾದ ಮಾಹಿತಿಯೊಂದನ್ನು ನೀಡಲಿದ್ದೇನೆ. ಭಾನುವಾರಗಳಂದು ಈ ಆರಾಧನೆ ಮಾಡುವುದರಿಂದ ಕೆಲವು ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಆದರೆ ಅದಕ್ಕೆ ಈ ಲೇಖನದಲ್ಲಿ ಹೇಳುವ ಆರಾಧನಾ ವಿಧಾನವನ್ನು ಅನುಸರಿಸುವುದು ಬಹಳ ಮುಖ್ಯ. ಮೊದಲಿಗೆ ಯಾವ- ಯಾವ ಸಮಸ್ಯೆಗಳು ನಿವಾರಣೆ ಆಗುತ್ತವೆ ಎಂಬುದನ್ನು ತಿಳಿಸಿ, ಆ ನಂತರ ಯಾವ ಆರಾಧನೆಯನ್ನು, ಹೇಗೆ ಮಾಡಬೇಕು ಎನ್ನುವುದನ್ನು ಜ್ಯೋತಿಷಿ ವಿಠಲ್ ಭಟ್ ವಿವರಿಸಿದ್ದಾರೆ.

ಯಾವ್ಯಾವ ಸಮಸ್ಯೆಗಳು? -ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಇದ್ದಲ್ಲಿ -ಹೃದಯಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿದ್ದಲ್ಲಿ – ತಂದೆಗೆ ಅನಾರೋಗ್ಯ ಸಮಸ್ಯೆಗಳಿದ್ದಲ್ಲಿ -ತಂದೆ- ಮಕ್ಕಳ ಮಧ್ಯೆ ಭಿನ್ನಾಭಿಪ್ರಾಯ, ಮನಸ್ತಾಪಗಳು ತಲೆದೋರಿದ್ದಲ್ಲಿ – ಸರ್ಕಾರಿ ಕೆಲಸಗಳಿಗೆ ಪ್ರಯತ್ನ ಪಡುತ್ತಿರುವವರು – ರಾಜಕಾರಣಿಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿರುವರು – ರಾಜಕಾರಣದಲ್ಲಿ ಏಳ್ಗೆ, ಪ್ರಗತಿಗಾಗಿ ಪ್ರಯತ್ನ ಪಡುತ್ತಿರುವವರು – ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಸಮಸ್ಯೆಗಳು ಇರುವರು – ಸರ್ಕಾರದಿಂದ ಹಣ ಬರಬೇಕಾದದ್ದು ಬಾಕಿ ಇದ್ದಲ್ಲಿ – ಸರ್ಕಾರದಿಂದ ಆಗಬೇಕಾದ ಕೆಲಸಗಳು ಬಹಳ ಸಮಯದಿಂದ ಹಾಗೇ ಉಳಿದುಹೋಗಿದ್ದಲ್ಲಿ – ರವಿಯ ಕಾರಕತ್ವದ ಯಾವುದೇ ಸಮಸ್ಯೆ, ಗೋಚಾರ ದೋಷ ಅಥವಾ ದಶಾ ಕಾಲದ ದೋಷ ಅಥವಾ ಜನ್ಮ ಜಾತಕದಲ್ಲಿನ ದೋಷಗಳಿದ್ದಲ್ಲಿ

ಪರಿಹಾರಗಳು ಏನು? – ರವಿ ಅಷ್ಟೋತ್ತರ ಪಠಣ ಮಾಡಬೇಕು – ಕೆಂಪು ವಸ್ತ್ರದಲ್ಲಿ ಗೋಧಿ ಧಾನ್ಯವನ್ನು ಕಟ್ಟಿ, ವೀಳ್ಯದೆಲೆ, ಬಾಳೇಹಣ್ಣು, ಅಡಿಕೆ, ದಕ್ಷಿಣೆಗಳ ಸಹಿತ ದಾನ ಮಾಡಬೇಕು – ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಬೇಕು – ಕೆಂಪು ಹೂವುಗಳಿಂದ ರವಿ ಅಷ್ಟೋತ್ತರ ಪಠಿಸುತ್ತಾ ರವಿಯ ಆರಾಧನೆ ಮಾಡಬೇಕು – ನವಗ್ರಹ ದೇವಸ್ಥಾನದಲ್ಲಿ ಮಧ್ಯದಲ್ಲಿ ಇರುವ ರವಿ ಗ್ರಹದ ವಿಗ್ರಹಕ್ಕೆ ಫಲ- ಪಂಚಾಮೃತದ ಅಭಿಷೇಕ ಮಾಡಿಸಬೇಕು – ಗೋಧಿ ಪಾಯಸದಲ್ಲಿ ನೈವೇದ್ಯ ಮಾಡಿಸಿ, ಪ್ರಸಾದ ಸ್ವೀಕರಿಸಬೇಕು

ಆದರೆ, ಒಂದು ಕೆಲವು ಮುಖ್ಯ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ. ಈ ಪರಿಹಾರಗಳ ಪೈಕಿ ನಿಮ್ಮ ಸಮಸ್ಯೆಗೆ ರವಿ ಗ್ರಹ ಯಾವ ರೀತಿಯಲ್ಲಿ ಕಾರಣ ಹಾಗೂ ಯಾವ ಪರಿಹಾರವನ್ನು ಮಾಡಿಕೊಳ್ಳಬೇಕು ಎಂಬುದನ್ನು ಜ್ಯೋತಿಷಿಗಳ ಬಳಿ ಜಾತಕ ಪರಾಮರ್ಶೆ ಮಾಡಿಸಿ, ತಿಳಿದುಕೊಳ್ಳಿ. ಪರಿಹಾರಗಳು ಸರಳವಾಗಿರುವಾಗ ಅದಕ್ಕೆ ಪ್ರಯತ್ನಿಸದಿದ್ದಲ್ಲಿ ಸಮಸ್ಯೆಗಳ ಜತೆಗೆ ಬದುಕಬೇಕಾಗುತ್ತದೆ. ರವಿಯ ಆರಾಧನೆಯಿಂದ ಎಷ್ಟೆಲ್ಲ ಪ್ರಯೋಜನ ಇದೆ ಎಂಬುದು ಈ ಮೇಲ್ಕಂಡ ಬಗೆಯಲ್ಲಿ ಕೈಂಕರ್ಯ ಮಾಡಿದ ನಂತರ ನಿಮಗೇ ಅನುಭವಕ್ಕೆ ಬರುತ್ತದೆ. ಎಲ್ಲರಿಗೂ ಶುಭವಾಗಲಿ, ಆ ಸೂರ್ಯ ಭಗವಾನ್ ಅನುಗ್ರಹ ದೊರೆಯಲಿ.

ಜ್ಯೋತಿಷಿ ವಿಠ್ಠಲ ಭಟ್ ಸಂಪರ್ಕ ಸಂಖ್ಯೆ: 6361335497.

(How to get blessings of planet sun according to Vedic astrology)

ಇದನ್ನೂ ಓದಿ: Ugadi Rashi Bhavishya: ಯುಗಾದಿ ಭವಿಷ್ಯ 2021- ಜ್ಯೋತಿಷಿ ಎಸ್ ಕೆ ಜೈನ್ ಅವರಿಂದ ದ್ವಾದಶ ರಾಶಿಗಳ ಭವಿಷ್ಯ

ಇದನ್ನೂ ಓದಿ: Ugadi Rashi Bhavishya 2021 | ಕಟಕ ರಾಶಿ ಯುಗಾದಿ ವರ್ಷ ಭವಿಷ್ಯ: ಭೂಮಿ ಲಾಭ, ದೇಹದ ತೂಕದ ಬಗ್ಗೆ ಎಚ್ಚರಿಕೆ ಅಗತ್ಯ

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ