Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗತ್ತಿಗೆ ಬೆಳಕು ನೀಡುವ ಸೂರ್ಯನ ಆರಾಧನೆಯಿಂದ ಬಾಳಲ್ಲಿರುವ ಕತ್ತಲು ದೂರವಾಗುತ್ತೆ; ಇಲ್ಲಿದೆ ಅಧಿಪತಿಯನ್ನು ಒಲಿಸಿಕೊಳ್ಳುವ ಮಂತ್ರಗಳು

ಸೂರ್ಯದೇವನನ್ನು ಪೂಜಿಸುವುದರಿಂದ ನಕಾರಾತ್ಮಕ ಶಕ್ತಿಯು ದೂರಾಗಿ ಗುಣಾತ್ಮಕ ಶಕ್ತಿಯು ನೆಲೆಯಾಗುತ್ತದೆ. ಜ್ಞಾನವು ಹೆಚ್ಚಾಗಲು ಸೂರ್ಯನನ್ನು ಪ್ರತಿನಿತ್ಯ ಮಡಿಯಿಂದ, ಶುದ್ಧ ಮನಸ್ಸಿನಿಂದ ಪೂಜಿಸಬೇಕು. ಸೂರ್ಯದೇವನನ್ನು ಒಲಿಸಿಕೊಳ್ಳುವ ಮಂತ್ರಗಳು ಇಲ್ಲಿವೆ.

ಜಗತ್ತಿಗೆ ಬೆಳಕು ನೀಡುವ ಸೂರ್ಯನ ಆರಾಧನೆಯಿಂದ ಬಾಳಲ್ಲಿರುವ ಕತ್ತಲು ದೂರವಾಗುತ್ತೆ; ಇಲ್ಲಿದೆ ಅಧಿಪತಿಯನ್ನು ಒಲಿಸಿಕೊಳ್ಳುವ ಮಂತ್ರಗಳು
ಸೂರ್ಯದೇವ
Follow us
TV9 Web
| Updated By: Digi Tech Desk

Updated on:Jun 07, 2021 | 10:37 AM

ಸೂರ್ಯದೇವ ಎಂದು ಕರೆಯಲ್ಪಡುವ ಸೂರ್ಯನು ಹಿಂದೂ ಧರ್ಮದ ಪ್ರಮುಖ ದೇವರುಗಳಲ್ಲಿ ಒಬ್ಬನು. 9 ಗ್ರಹಗಳ ಅಧಿಪತಿ ಕೂಡ ಸೂರ್ಯದೇವನೇ ಆಗಿದ್ದಾನೆ. ಈತನನ್ನು ಸೌರಮಂಡಲದ ರಾಜ ಮತ್ತು ಗ್ರಹರಾಜ ಎಂದೂ ಕೂಡ ಕರೆಯಲಾಗುತ್ತದೆ. ಏಳು ಕುದುರೆಗಳುಳ್ಳ ರಥವು ಸೂರ್ಯದೇವನ ವಾಹನವಾಗಿದ್ದು, ಈತ ದೇಹದಲ್ಲಿನ 7 ಚಕ್ರಗಳನ್ನು ಹಾಗೂ ಕಾಮನಬಿಲ್ಲಿನ 7 ಬಣ್ಣಗಳನ್ನು ಪ್ರತಿನಿಧಿಸುತ್ತಾನೆ.

ಹಿಂದೂ ಧರ್ಮದಲ್ಲಿ ನಾಗರಹಾವನ್ನು ಹೊರತುಪಡಿಸಿ ಕಣ್ಣಿಗೆ ಕಾಣುವ ದೇವರೆಂದು ಸೂರ್ಯದೇವನನ್ನು ಕರೆಯುತ್ತಾರೆ. ಈತನನ್ನು ಪ್ರತಿದಿನವು ನಾವು ನೋಡಬಹುದಾಗಿದೆ. ಪ್ರತಿದಿನವು ಈತನಿಂದಲೇ ಆರಂಭ, ಈತನಿಂದಲೇ ಅಂತ್ಯ. ಶೈವ ಧರ್ಮದಲ್ಲಿ ಸೂರ್ಯನನ್ನು ಶಿವನೆಂದು, ವೈಷ್ಣವ ಧರ್ಮದಲ್ಲಿ ವಿಷ್ಣುವೆಂದು ಪೂಜಿಸುತ್ತಾರೆ. ಸೂರ್ಯನನ್ನು ವೈವಸ್ವತ, ರವಿ, ಆದಿತ್ಯ, ಪುಷ, ದಿವಾಕರ, ಸವಿತಾ, ಅರ್ಕ, ಮಿತ್ರ, ಭಾನು, ಭಾಸ್ಕರ ಮತ್ತು ಗ್ರಹಪತಿ ಅಥವಾ ಗ್ರಹರಾಜ ಎಂದೂ ಕೂಡ ಕರೆಯಲಾಗುತ್ತದೆ.

ಸೂರ್ಯ ಮಂತ್ರದ ಉಪಯೋಗ ಈಗಾಗಲೇ ಹೇಳಿರುವ ಹಾಗೇ ಹಿಂದೂ ಧರ್ಮದ ಪ್ರಮುಖ ದೇವರಾದ ಸೂರ್ಯನು ಕತ್ತಲನ್ನು ನಿವಾರಿಸಿ ಬೆಳಕನ್ನು ಹೊರಸೂಸುತ್ತಾನೆ. ಇದರರ್ಥ ಜಗತ್ತಿನಲ್ಲಿ ಅಜ್ಞಾನವನ್ನು ತೊಡೆದು ಹಾಕಿ ಸುಜ್ಞಾನವು ಬೆಳಗುವಂತೆ ಮಾಡುತ್ತಾನೆ. ಸೂರ್ಯ ದೇವನ ಕಿರಣಗಳಿಗೆ ಜನ ಜೀವನವನ್ನು ಸಂರಕ್ಷಿಸುವ, ಸಂಹಾರ ಮಾಡುವ ಎರಡೂ ಗುಣವೂ ಇದೆ. ಈತನ ಕೋಪಕ್ಕೆ ಕಾರಣರಾದವರು ಈತನ ಕಿರಣಗಳಿಂದಲೇ ಸುಟ್ಟು ಭಸ್ಮರಾಗುತ್ತಾರೆ. ಪ್ರತಿದಿನವು ಬೆಳಗಿನಿಂದ ಸಂಜೆಯವರೆಗೆ ಒಳಿತನ್ನು ಮಾಡುವ ಸೂರ್ಯದೇವನನ್ನು ಪೂಜಿಸಿದರೆ ಪ್ರತಿನಿತ್ಯದ ಕಷ್ಟವು ದೂರಾಗುತ್ತದೆ.

1.ಸೂರ್ಯ ಮಂತ್ರಗಳು ಸೂರ್ಯ ದೇವನನ್ನು ಮನಸ್ಸಾದಗಲೆಲ್ಲಾ ಪೂಜಿಸುವಂತಿಲ್ಲ. ಆತನನ್ನು ಪೂಜಿಸಲು ಪ್ರತ್ಯಕ ಸಮಯವಿದೆ. ಮುಂಜಾನೆ ಸೂರ್ಯ ಹುಟ್ಟಿದಾಕ್ಷಣ ಸ್ನಾನ ಮಾಡಿ ಪರಿಶುದ್ಧ ಮನಸ್ಸಿನಿಂದ ಆತನನ್ನು ಪೂಜಿಸಬೇಕು. ಸೂರ್ಯನನ್ನು ಪೂಜಿಸುವಾಗ ಪಠಿಸಬೇಕಾದ ಮಂತ್ರಗಳು ಹೀಗಿವೆ: ನಮಃ ಸೂರ್ಯಾಯ ಶಾಂತಾಯಾ ಸರ್ವರೋಗ ನಿವಾರಿಣೆ ಆಯುರ್‌ ಆರೋಗ್ಯ ಮ ಐಶ್ವರ್ಯ ಮ ದೇಹಿ ದೇವಾಃ ಜಗತ್ಪತೆ

ಈ ಮಂತ್ರವು ಸೂರ್ಯದೇವನನ್ನು ಹೊಗಳುವ ಮಂತ್ರವಾಗಿದೆ. ಈ ಮಂತ್ರದಲ್ಲಿ ಸೂರ್ಯನನ್ನು ಬ್ರಹ್ಮಾಂಡದ ಅಧಿಪತಿಯೆಂದು ಹೊಗಳಲಾಗುತ್ತದೆ. ಉತ್ತಮ ಆರೋಗ್ಯ, ಐಶ್ವರ್ಯ ಮತ್ತು ಸಮೃದ್ಧಿಗಾಗಿ ಭಕ್ತರು ಸೂರ್ಯದೇವನನ್ನು ಪ್ರಾರ್ಥಿಸಲಾಗುತ್ತದೆ. ಮಾನವನ ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಈ ಮಂತ್ರಕ್ಕಿದೆ ಎಂದು ನಂಬಲಾಗಿದೆ.

2.ಸೂರ್ಯ ಗಾಯತ್ರಿ ಮಂತ್ರ: ||ಓಂ ಆದಿತ್ಯಾಯ ವಿಧ್ಮಹೇ ಮಾರ್ತಾಂಡಾಯ ಧೀಮಹೀ ತನ್ನೋಃ ಸೂರ್ಯಃ ಪ್ರಚೋದಯಾತ್|| ಸೂರ್ಯನಿಗೆ ಸಂಬಂಧಿಸಿದ ಈ ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ ಪಠಿಸಬೇಕು. ಈ ಮಂತ್ರವನ್ನು ದಿನನಿತ್ಯ ಜಪಿಸುವುದರಿಂದ ಕಣ್ಣುಗಳ ಆರೋಗ್ಯ ವೃದ್ಧಿಸುವುದಲ್ಲದೇ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ಬಗೆಹರಿಯುತ್ತದೆ. ಅಷ್ಟು ಮಾತ್ರವಲ್ಲ, ಈ ಸೂರ್ಯ ಗಾಯತ್ರಿ ಮಂತ್ರವನ್ನು ದಿನನಿತ್ಯ ಪಠಿಸಿದರೆ ಸೂರ್ಯನನ್ನು ಹೊರತುಪಡಿಸಿ ಇತರೆ ಗ್ರಹಗಳಿಂದ ಉಂಟಾಗಬಹುದಾದ ಸಮಸ್ಯೆಗಳನ್ನು ನಿವಾರಿಸುತ್ತದೆ.

3) ಸೂರ್ಯ ವಶೀಕರಣ ಮಂತ್ರ: ||ಓಂ ನಮೋ ಭಗವತೇ ಶ್ರೀ ಸೂರ್ಯಾಯಾ ಹ್ರೀಂ ಸಹಸ್ರ ಕಿರಣಾಯ ಐಂ ಅತುಲಬಲ ಪರಾಕ್ರಮಾಯ ನವಗ್ರಹ ದಶದಿಕ್ಪಾಲ ಲಕ್ಷ್ಮಿ ದೇವತಾಯ ಧರ್ಮಕರ್ಮ ಸಹಿತಾಯ ಅಮುಕ ನಾಥಾಯ ನಾಥಾಯ ನಾಮ ಮೋಹಾಯ ಮೋಹಾಯ ಆಕರ್ಶಯ ಆಕರ್ಶಯ ದಾಸಾನುದಾಸಂ ಕುರು ಕುರು ವಶಂ ಕುರು ಕುರು ಸ್ವಾಹಾ||

ಈ ಮಂತ್ರವನ್ನು ಪಠಿಸಲಿಚ್ಛಿಸುವವರು ಸ್ನಾನ ಮಾಡಿ ಶುದ್ಧತೆಯಿಂದ ಈ ಮಂತ್ರವನ್ನು 108 ಬಾರಿ ಪಠಿಸಬೇಕು. ಈ ಮಂತ್ರವನ್ನು ಜಪಿಸುವುದರಿಂದ ಪ್ರೀತಿಗೆ ಸಂಬಂಧಿಸಿದ ಸಮಸ್ಯೆಗಳನ್ನು, ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಲು ಸಹಕರಿಸುತ್ತದೆ. ಸೂರ್ಯದೇವನನ್ನು ಪ್ರತಿನಿತ್ಯ ಬೆಳಗ್ಗೆ ಪೂಜಿಸಬೇಕು.

4) ಸೂರ್ಯ ಬೀಜ ಮಂತ್ರ: ||ಓಂ ಹ್ರಾಂ ಹ್ರೀಂ ಹ್ರೌಂ ಸಹ ಸೂರ್ಯಾಯ ನಮಃ||

ಈ ಮಂತ್ರವು ಸೂರ್ಯದೇವನಿಗೆ ನಮಸ್ಕರಿಸುವ ಮಂತ್ರವಾಗಿದೆ. ಸೂರ್ಯ ಬೀಜ ಮಂತ್ರವು ದೈವಿಕ ಶಕ್ತಿಯನ್ನು ಹೊಂದಿದೆ. ಈ ಮಂತ್ರ ಪಠಿಸುವುದರಿಂದ ಸೂರ್ಯ ದೇವನು ಸಕಾರಾತ್ಮಕ ಶಕ್ತಿಯನ್ನು ಕರುಣಿಸುತ್ತಾನೆ. ಮನುಷ್ಯನಿಗೆ ಈ ಮಂತ್ರವು ಕೀರ್ತಿ, ಸಮೃದ್ಧಿಯನ್ನು ನೀಡಿ ಕಷ್ಟಗಳನ್ನು ದೂರಾಗಿಸುತ್ತಾನೆ. ರೋಗನಿವಾರಣೆಯ ಶಕ್ತಿಯನ್ನು ಇದು ಹೊಂದಿದೆ.

5) ಆದಿತ್ಯ ಹೃದಯಂ ಮಂತ್ರ: ||ಆದಿತ್ಯ ಹೃದಯ ಪುಣ್ಯಂ ಸರ್ವ ಶತ್ರು ವಿನಾಶನಂ ಜಯಾವಹಂ ಜಪೇನ್ನಿತ್ಯಂ ಅಕ್ಷಯಂ ಪರಂ ಶಿವಂ||

ಈ ಮಂತ್ರವು ಸೂರ್ಯದೇವನಿಗೆ ಧನ್ಯವಾದವನ್ನು ಅರ್ಪಿಸುವ ಮಂತ್ರವಾಗಿದೆ. ಈ ಮಂತ್ರವನ್ನು ಸೂರ್ಯದೇವನಿಗೆ ಪಠಿಸುವುದರಿಂದ ನಿರ್ಭಯವನ್ನು, ಜ್ಞಾನವನ್ನು ಪಡೆಯುತ್ತಾನೆ. ವ್ಯಕ್ತಿಯ ಮನಸ್ಸಿನಲ್ಲಿನ ಅಹಂ, ದುರಾಸೆ, ದ್ರೋಹ, ಕೋಪ ಸೇರಿದಂತೆ ಇನ್ನಿತರ ನಕಾರಾತ್ಮಕ ಅಂಶವನ್ನು ತೊಡೆದು ಹಾಕುತ್ತದೆ.

ಇದನ್ನೂ ಓದಿ: ದೇವರನ್ನು ಒಲಿಸಿಕೊಳ್ಳೋಕೆ ಏನು ಮಾಡಬೇಕು?

Published On - 6:44 am, Mon, 7 June 21

ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ