AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Friday Puja: ಮದುವೆ ವಿಳಂಬ ಆಗ್ತಾ ಇದ್ರೆ ಶುಕ್ರವಾರ ಈ ಪರಿಹಾರ ಪ್ರಯತ್ನಿಸಿ

ಜಾತಕದಲ್ಲಿ ಗ್ರಹಗಳ ದುರ್ಬಲ ಸ್ಥಾನದಿಂದ ವಿವಾಹದಲ್ಲಿ ಅಡೆತಡೆಗಳು ಉಂಟಾಗಬಹುದು. ಶುಕ್ರವಾರ ಮಹಾಲಕ್ಷ್ಮೀ ಮತ್ತು ಶುಕ್ರನ ಪೂಜೆ, ದಾನ, ಮತ್ತು ನಿರ್ದಿಷ್ಟ ಮಂತ್ರಗಳ ಪಠಣೆಯಿಂದ ಈ ಸಮಸ್ಯೆಗಳನ್ನು ನಿವಾರಿಸಬಹುದು. ತುಳಸಿ ಪೂಜೆ ಮತ್ತು ವಿಷ್ಣು ಪೂಜೆಯು ಉತ್ತಮ ಜೀವನ ಸಂಗಾತಿಯನ್ನು ಪಡೆಯಲು ಸಹಾಯ ಮಾಡುತ್ತದೆ. ಆದರೆ ನಂಬಿಕೆ ಮತ್ತು ತಾಳ್ಮೆಯಿಂದ ಈ ಪರಿಹಾರಗಳನ್ನು ಅನುಸರಿಸುವುದು ಮುಖ್ಯ.

Friday Puja: ಮದುವೆ ವಿಳಂಬ ಆಗ್ತಾ ಇದ್ರೆ ಶುಕ್ರವಾರ ಈ ಪರಿಹಾರ ಪ್ರಯತ್ನಿಸಿ
ಮದುವೆ
ಅಕ್ಷತಾ ವರ್ಕಾಡಿ
|

Updated on:Sep 25, 2025 | 10:40 AM

Share

ಜಾತಕದಲ್ಲಿ ಕೆಲವು ಗ್ರಹ ಮತ್ತು ನಕ್ಷತ್ರಗಳು ದುರ್ಬಲ ಸ್ಥಾನದಲ್ಲಿದ್ದರೆ ಅವುಗಳಿಂದಾಗಿ, ವಿವಾಹದಲ್ಲಿ ಅನೇಕ ಅಡೆತಡೆಗಳಲಾಗುತ್ತವೆ. ಆದ್ದರಿಂದ ಶುಕ್ರವಾರ ಮಹಾಲಕ್ಷ್ಮಿಯನ್ನು ಪೂಜಿಸುವುದು ಒಳ್ಳೆಯದು. ಶುಕ್ರವಾರ ಶುಕ್ರನನ್ನು ಪೂಜಿಸುವ ದಿನವೂ ಹೌದು. ಆ ದಿನ ಕೆಲವು ಪರಿಹಾರಗಳನ್ನು ಅನುಸರಿಸುವುದರಿಂದ ಮದುವೆಯಲ್ಲಿನ ಅಡೆತಡೆಗಳನ್ನು ತಡೆಯಬಹುದು. ದೇವಿಯ ಪೂಜೆಯ ಜೊತೆಗೆ ದೀಪ ಮತ್ತು ನೈವೇದ್ಯಗಳನ್ನು ಅರ್ಪಿಸಿ, ಬಿಳಿ ಅಥವಾ ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ ಶುಕ್ರವಾರ ಪೂಜೆ ಮಾಡಿ. ಇದು ಶುಕ್ರನ ಬಲವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

ಈ ಪರಿಹಾರಗಳನ್ನು ಪಠಿಸಿ:

ಶುಕ್ರವಾರದಂದು ಚಿಕ್ಕ ಮಕ್ಕಳಿಗೆ ಮಜ್ಜಿಗೆ, ಹಾಲು, ಮೊಸರು ಇತ್ಯಾದಿಗಳನ್ನು ದಾನ ಮಾಡಿ. ನೀವು ಬಟ್ಟೆ ಮತ್ತು ಆಭರಣಗಳನ್ನು ಸಹ ನೀಡಬಹುದು. ಇದು ವಿವಾಹದ ಸಮಸ್ಯೆಗಳನ್ನು ದೂರ ಮಾಡುತ್ತದೆ. ಶುಕ್ರವಾರ, ತುಳಸಿ ಗಿಡದ ಬಳಿ ದೀಪಾರಾಧನೆ ಮಾಡಿ. ನಂತರ ವಿಷ್ಣುವನ್ನು ಪೂಜಿಸಿ. ಇದು ನಿಮಗೆ ಉತ್ತಮ ಜೀವನ ಸಂಗಾತಿಯನ್ನು ಪಡೆಯಲು ಸಹಾಯ ಮಾಡುತ್ತದೆ. ನೀವು ಯಾವುದೇ ಪೂಜೆಯನ್ನು ಪ್ರಾರಂಭಿಸಲು ಬಯಸಿದರೆ, ಮೊದಲು ಗಣೇಶನನ್ನು ಪೂಜಿಸಿ. ಶುಕ್ರವಾರ ಗಣಪತಿಯನ್ನು ಪೂಜಿಸುವುದರಿಂದ ಮದುವೆಯಲ್ಲಿನ ಅಡೆತಡೆಗಳು ದೂರಾಗುತ್ತವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಇದನ್ನೂ ಓದಿ: ಪಾದಗಳನ್ನು ಬಾಗಿಲಿನ ಕಡೆಗೆ ಇಟ್ಟುಕೊಂಡು ಮಲಗಬಾರದು ಎಂದು ಹೇಳುವುದೇಕೆ?

ಮಂತ್ರಗಳನ್ನು ಪಠಿಸಿ:

ಶುಕ್ರವಾರದಂದು ಶುಕ್ರ ಗ್ರಹಕ್ಕೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುವುದು ಒಳ್ಳೆಯದು. ಈ ಮಂತ್ರಗಳು ಮದುವೆಗೆ ಇರುವ ಅಡೆತಡೆಗಳನ್ನು ನಿವಾರಿಸುತ್ತದೆ. ಇದಲ್ಲದೇ ಶುಕ್ರವಾರದಂದು ವೆಂಕಟೇಶ್ವರ ದೇವರನ್ನು ಪೂಜಿಸುವುದರಿಂದ ಮದುವೆ ಬೇಗನೆ ಆಗುತ್ತದೆ. ಆದರೆ ಈ ಪರಿಹಾರಗಳನ್ನು ಅನುಸರಿಸುವಾಗ ನಂಬಿಕೆ ಮತ್ತು ತಾಳ್ಮೆಯನ್ನು ಹೊಂದಿರುವುದು ಒಳ್ಳೆಯದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:31 am, Thu, 25 September 25

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ