AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Morning Ritual: ಬೆಳಗಿನ ಜಾವ ಹೊಸಿಲಿಗೆ ನೀರು ಚಿಮುಕಿಸುವುದು ಬರಿ ಸಂಪ್ರದಾಯವಲ್ಲ; ಇದರ ಹಿಂದಿದೆ ಅದ್ಭುತ ವೈಜ್ಞಾನಿಕ ರಹಸ್ಯ!

ಬೆಳಗಿನ ಜಾವ ಮನೆಯ ಮುಂದೆ ನೀರು ಚಿಮುಕಿಸುವುದು ಕೇವಲ ಸಂಪ್ರದಾಯವಲ್ಲ. ವೈಜ್ಞಾನಿಕವಾಗಿ ಶುಚಿತ್ವ, ಧಾರ್ಮಿಕವಾಗಿ ಪವಿತ್ರತೆ ಹಾಗೂ ಜ್ಯೋತಿಷ್ಯಶಾಸ್ತ್ರದ ಪ್ರಕಾರ ದುಷ್ಟ ಶಕ್ತಿಗಳ ನಿವಾರಣೆ ಮತ್ತು ಸಕಾರಾತ್ಮಕ ಶಕ್ತಿ ಆಕರ್ಷಿಸುತ್ತದೆ. ಇದು ಮನೆಯನ್ನು ತಂಪಾಗಿರಿಸಿ, ಧೂಳು ನಿವಾರಿಸಿ, ಧನಾತ್ಮಕ ವಾತಾವರಣ ಸೃಷ್ಟಿಸುತ್ತದೆ ಎಂದು ನಂಬಲಾಗಿದೆ.

Morning Ritual: ಬೆಳಗಿನ ಜಾವ ಹೊಸಿಲಿಗೆ ನೀರು ಚಿಮುಕಿಸುವುದು ಬರಿ ಸಂಪ್ರದಾಯವಲ್ಲ; ಇದರ ಹಿಂದಿದೆ ಅದ್ಭುತ ವೈಜ್ಞಾನಿಕ ರಹಸ್ಯ!
ಬೆಳಗಿನ ಜಾವ ಮನೆಯ ಮುಂದೆ ನೀರು ಚಿಮುಕಿಸುವುದುImage Credit source: gemini ai
ಅಕ್ಷತಾ ವರ್ಕಾಡಿ
|

Updated on:May 13, 2026 | 2:51 PM

Share

ಪಂಚಭೂತಗಳಲ್ಲಿ ನೀರು ಅತ್ಯಂತ ಪ್ರಮುಖವಾದ ಅಂಶವಾಗಿದೆ. ಆದರೆ, ಮನೆಯ ಮುಂದೆ ಬೆಳಗಿನ ಜಾವ ನೀರು ಚಿಮುಕಿಸುವುದು, ತೊಳೆಯುವುದು ಅಥವಾ ಸುರಿಯುವುದರ ಹಿಂದಿನ ಮಹತ್ವವೇನು ಎಂಬ ಪ್ರಶ್ನೆ ಅನೇಕರಿಗೆ ಮೂಡಬಹುದು. ಇದು ಕೇವಲ ಸಂಪ್ರದಾಯ ಅಥವಾ ಆಚರಣೆಯಲ್ಲ, ಇದರ ಹಿಂದೆ ವೈಜ್ಞಾನಿಕ, ಧಾರ್ಮಿಕ ಮತ್ತು ಜ್ಯೋತಿಷ್ಯಶಾಸ್ತ್ರದ ಆಧಾರವಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಬೆಳಗಿನ ಜಾವ ಗೃಹಿಣಿಯು ಮನೆಯ ಮುಖ್ಯ ದ್ವಾರ ಅಥವಾ ಗೇಟಿನ ಮುಂದೆ ಶುದ್ಧ ನೀರನ್ನು ಚಿಮುಕಿಸುವುದು ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿರುವ ಅಭ್ಯಾಸ. ಬಾಡಿಗೆ ಮನೆ ಅಥವಾ ಸ್ವಂತ ಮನೆಯಾಗಲಿ, ಈ ಸರಳ ಕಾರ್ಯದಿಂದ ಹಲವಾರು ಪ್ರಯೋಜನಗಳಿವೆ ಎಂದು ನಂಬಲಾಗಿದೆ. ಯಾವುದೇ ಶುಭ ಕಾರ್ಯವನ್ನು ಆರಂಭಿಸುವ ಮುನ್ನ ಗಂಗೆ ಪೂಜೆ ಮಾಡುವುದು ಅಥವಾ “ಅಪವಿತ್ರೋ ಪವಿತ್ರೋವಾ ಸರ್ವಾವಸ್ಥಾಂಗತೋಪಿವಾ ಯಸ್ಮರೇತ್ ಪುಂಡರೀಕಾಕ್ಷಂ ಸಬಾಹ್ಯಾಭ್ಯಂತರಃ ಶುಚಿಹಿ” ಮಂತ್ರವನ್ನು ಪಠಿಸಿ ನೀರನ್ನು ಪ್ರೋಕ್ಷಿಸಿ ಪವಿತ್ರಗೊಳಿಸುವುದು ನಮ್ಮ ಸಂಸ್ಕೃತಿಯ ಭಾಗವಾಗಿದೆ.

ವೈಜ್ಞಾನಿಕವಾಗಿ ಹೇಳುವುದಾದರೆ, ಮನೆಯ ಮುಂದೆ ನೀರನ್ನು ಚಿಮುಕಿಸುವುದರಿಂದ ಧೂಳು ಮತ್ತು ಮಣ್ಣು ನಿವಾರಣೆಯಾಗಿ ಸ್ವಚ್ಛತೆ ಕಾಪಾಡಲಾಗುತ್ತದೆ. ಇದು ವಾತಾವರಣವನ್ನು ತಂಪಾಗಿರಿಸಿ, ಸೊಳ್ಳೆ, ನೊಣಗಳಂತಹ ಕ್ರಿಮಿಕೀಟಗಳನ್ನು ದೂರವಿಡುತ್ತದೆ. ಸ್ವಚ್ಛ ಮತ್ತು ತಂಪಾದ ಪರಿಸರವು ಉತ್ತಮ ಆರೋಗ್ಯಕ್ಕೆ ಪೂರಕವಾಗಿದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಆಧ್ಯಾತ್ಮಿಕವಾಗಿ ಮತ್ತು ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಆಚರಣೆಯು ಹೆಚ್ಚು ಮಹತ್ವ ಪಡೆಯುತ್ತದೆ. ಮನುಷ್ಯನು ಸುಖ, ನೆಮ್ಮದಿ, ಅದೃಷ್ಟ ಮತ್ತು ಉತ್ತಮ ಕುಟುಂಬ ಜೀವನವನ್ನು ಬಯಸುತ್ತಾನೆ. ಆದರೆ ನಮ್ಮ ಸುತ್ತಲೂ ದುಷ್ಟ ಗ್ರಹಗಳ ಪ್ರಭಾವ ಮತ್ತು ನಕಾರಾತ್ಮಕ ಶಕ್ತಿಗಳು ಇರುತ್ತವೆ ಎಂದು ನಂಬಲಾಗಿದೆ. ಬೆಳಗಿನ ಜಾವ ನೀರನ್ನು ಪ್ರೋಕ್ಷಣೆ ಮಾಡುವುದರಿಂದ ಈ ನಕಾರಾತ್ಮಕ ಶಕ್ತಿಗಳು ಮತ್ತು ದುಷ್ಟ ಗ್ರಹಗಳ ಪ್ರಭಾವವನ್ನು ಹೋಗಲಾಡಿಸಬಹುದು. “ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದೆ ಸಿಂಧು ಕಾವೇರಿ ಜಲಸ್ಮಿನ್ ಸನ್ನಿಧಿಂ ಕುರುಂ” ಎಂಬ ಮಂತ್ರವನ್ನು ಪಠಿಸುತ್ತಾ ನೀರನ್ನು ಚಿಮುಕಿಸುವುದು ಗಂಗಾ ಸ್ನಾನ ಮಾಡಿದಷ್ಟು ಪುಣ್ಯ ನೀಡುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಪಾಪ ನಿವಾರಣೆಯಾಗಿ ಸಕಾರಾತ್ಮಕ ಶಕ್ತಿ ವೃದ್ಧಿಯಾಗುತ್ತದೆ.

ನಮ್ಮ ಪೂರ್ವಿಕರಿಗೆ ತರ್ಪಣ ನೀಡಲು ಮತ್ತು ದೇವರಿಗೆ ನೈವೇದ್ಯ ಅರ್ಪಿಸುವಾಗಲೂ ನೀರನ್ನು ಬಳಸುತ್ತೇವೆ. ಇದು ನೀರಿನ ಪವಿತ್ರತೆ ಮತ್ತು ಮಹತ್ವವನ್ನು ಎತ್ತಿ ತೋರಿಸುತ್ತದೆ. ಅಪಾರ್ಟ್ಮೆಂಟ್‌ನಲ್ಲಿ ವಾಸಿಸುವವರು ಅಥವಾ ಮನೆಯ ಮುಂದೆ ನೀರು ಹಾಕಲು ಅಸಾಧ್ಯವಾದವರು ತಮ್ಮ ಹೊಸಿಲಿನ ಮೇಲೆ ಮೂರು ಬೆರಳುಗಳಿಂದ ಮೂರು ಬಾರಿ ನೀರನ್ನು ಚಿಮುಕಿಸಬಹುದು. ಹೀಗೆ ಮಾಡುವುದರಿಂದ ಸಂಧ್ಯಾಕಾಲದವರೆಗೆ ಯಾವುದೇ ದುಷ್ಟ ಗ್ರಹಗಳು ಅಥವಾ ನಕಾರಾತ್ಮಕ ಶಕ್ತಿಗಳು ಮನೆ ಪ್ರವೇಶಿಸುವುದಿಲ್ಲ ಎಂದು ನಂಬಲಾಗಿದೆ. ರಾತ್ರಿ ಬಾಗಿಲ ಬಳಿ ಸುಳಿದಾಡುವ ದುಷ್ಟ ಶಕ್ತಿಗಳು ಬಾಗಿಲು ತೆಗೆದ ತಕ್ಷಣ ನೀರಿನ ಪ್ರೋಕ್ಷಣೆ ಕಂಡರೆ ದೂರವಾಗುತ್ತವೆ. ಇದು ಮನೆಯಲ್ಲಿ ದೃಷ್ಟಿ ದೋಷಗಳನ್ನು ತಡೆಯುತ್ತದೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:50 pm, Wed, 13 May 26

Follow Us
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಸಮನ್ಸ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಸಮನ್ಸ್
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ
ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ
ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ
ಭಾಮಾ ಹರೀಶ್ ಪುತ್ರ ನಿಧನ: ನಡೆದಿದ್ದೇನೆಂದು ವಿವರಿಸಿದ ಚಿಕ್ಕಪ್ಪ
ಭಾಮಾ ಹರೀಶ್ ಪುತ್ರ ನಿಧನ: ನಡೆದಿದ್ದೇನೆಂದು ವಿವರಿಸಿದ ಚಿಕ್ಕಪ್ಪ
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ಬಿಜೆಪಿಯಲ್ಲಿ ಸಂಚಲನ
ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ಬಿಜೆಪಿಯಲ್ಲಿ ಸಂಚಲನ
ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!
ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!