ತಂದೆಯ ಆಸೆ ಈಡೇರಿಸಲು 14 ವರ್ಷಗಳಿಂದ ಆಂಜನೇಯನ ದೇವಸ್ಥಾನ ನಿರ್ಮಿಸುತ್ತಿರುವ ಮುಸಲ್ಮಾನ ಸಹೋದರರು

Muslim brothers building Anjaneya temple: ಚಿತ್ತೂರು ಜಿಲ್ಲೆಯ ಪುಲಿಚೆರ್ಲ ಮಂಡಲದ ಕೆ. ಕೊತ್ತಪೇಟ ಗ್ರಾಮದ ಸಹೋದರರಾದ ಫಿರೋಜ್ ಬಾಷಾ ಮತ್ತು ಚಾಂದ್ ಬಾಷಾ ಅವರು ತಮ್ಮ ತಂದೆ ಅಜೀದ್ ಬಾಷಾ ಅವರ ಆಸೆಯನ್ನು ಈಡೇರಿಸಲು ಬಯಸಿದ್ದರು. ತಂದೆಯ ಆಸೆಯಂತೆ ಆಂಜನೇಯಸ್ವಾಮಿ ಸೇರಿದಂತೆ ಏಳು ದೇವಾಲಯಗಳ ಸಂಕೀರ್ಣ ನಿರ್ಮಿಸುತ್ತಿದ್ದಾರೆ. ಹನುಮಂತನನ್ನು ಪೂಜಿಸಲು ಒಂದು ಕಾರಣವಿದೆ ಎಂದು ಈ ಸಹೋದರರು ಹೇಳುತ್ತಾರೆ.

ತಂದೆಯ ಆಸೆ ಈಡೇರಿಸಲು 14 ವರ್ಷಗಳಿಂದ ಆಂಜನೇಯನ ದೇವಸ್ಥಾನ ನಿರ್ಮಿಸುತ್ತಿರುವ ಮುಸಲ್ಮಾನ ಸಹೋದರರು
14 ವರ್ಷಗಳಿಂದ ಆಂಜನೇಯನ ದೇವಸ್ಥಾನ ನಿರ್ಮಿಸುತ್ತಿರುವ ಮುಸಲ್ಮಾನ ಸಹೋದರರು
Follow us
ಸಾಧು ಶ್ರೀನಾಥ್​
|

Updated on: Jul 18, 2024 | 5:54 PM

ಭಾರತದಲ್ಲಿ ಹಲವಾರು ಜಾತಿ, ಧರ್ಮಗಳಿವೆ. ಜಾತಿ, ಧರ್ಮ ಮೀರಿ ಬದುಕಿ ಹತ್ತು ಮಂದಿಗೆ ಮಾದರಿಯಾಗಿ ನಿಲ್ಲುವ ಕೆಲವರಿದ್ದಾರೆ. ಕೆರೆಗೆ ನಾಲ್ಕು ದಾರಿಗಳಿದ್ದರೆ ಯಾವ ದಾರಿಯಲ್ಲಿ ಹೋದರೂ ಕೆರೆಯಲ್ಲಿ ನೀರು ಸಿಗುತ್ತದೆ ಎಂಬ ಮಾತಿದೆ. ಪರಮಾರ್ಥದ ಸಂಕೇತವಾಗಿ ಈ ಮಾತನ್ನು ಹೇಳುತ್ತಾರೆ. ಹಿಂದೂಗಳು ಮುಸ್ಲಿಂ ಹಬ್ಬಗಳಿಗೆ ಶುಭಾಶಯ ಕೋರುತ್ತಾರೆ. ಹಿಂದೂ ದೇವರುಗಳನ್ನು ಪೂಜಿಸುವ ಅನೇಕ ಮುಸ್ಲಿಮರಿದ್ದಾರೆ. ಇತ್ತೀಚಿನ ಉದಾಹರಣೆಯಾಗಿ ಈ ಮುಸ್ಲಿಂ ಕುಟುಂಬ ಕಂಡುಬರುತ್ತದೆ. ಆಂಧ್ರಪ್ರದೇಶದ ಚಿತ್ತೂರು ( Chittoor district in Andhra Pradesh) ಜಿಲ್ಲೆಯ ಮುಸ್ಲಿಂ ಕುಟುಂಬದ ಸಹೋದರರು (Muslim brothers building Anjaneya temple) ತಂದೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಂಜನೇಯ ಸ್ವಾಮಿಗೆ ದೇವಾಲಯ ನಿರ್ಮಿಸುತ್ತಿದ್ದಾರೆ. ಸೋಜಿಗವೆಂದರೆ, 14 ವರ್ಷಗಳ ಹಿಂದೆ ಕೈಗೆತ್ತಿಕೊಂಡ ದೇವಸ್ಥಾನ ನಿರ್ಮಾಣ ಕಾರ್ಯಕ್ರಮವು ಇಂದಿಗೂ ನಡೆಯುತ್ತಿದೆ. ವಿವರಗಳಿಗೆ ಹೋದರೆ…

ಧಾರ್ಮಿಕ ಸೌಹಾರ್ದತೆಯ ಪ್ರತೀಕ: ಚಿತ್ತೂರು ಜಿಲ್ಲೆಯ ಪುಲಿಚೆರ್ಲ ಮಂಡಲದ ಕೆ. ಕೊತ್ತಪೇಟ ಗ್ರಾಮದ ಸಹೋದರರಾದ ಫಿರೋಜ್ ಬಾಷಾ ಮತ್ತು ಚಾಂದ್ ಬಾಷಾ ಅವರು (Muslim family) ತಮ್ಮ ತಂದೆ ಅಜೀದ್ ಬಾಷಾ ಅವರ ಆಸೆಯನ್ನು ಈಡೇರಿಸಲು ಬಯಸಿದ್ದರು. ತಂದೆಯ ಆಸೆಯಂತೆ ಆಂಜನೇಯಸ್ವಾಮಿ ಸೇರಿದಂತೆ ಏಳು ದೇವಾಲಯಗಳ ಸಂಕೀರ್ಣ ನಿರ್ಮಿಸುತ್ತಿದ್ದಾರೆ. ಹನುಮಂತನನ್ನು ಪೂಜಿಸಲು ಒಂದು ಕಾರಣವಿದೆ ಎಂದು ಈ ಸಹೋದರರು ಹೇಳುತ್ತಾರೆ.

Also Read:  No Entry for Men Devotees – ಈ ದೇವಸ್ಥಾನಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ, ಅದರಲ್ಲಿ 2 ಪುರುಷರದ್ದೇ ದೇವಾಲಯಗಳು! ಯಾಕೀ ಶಾಪ, ಕಟ್ಟುಪಾಡು?

ತಮ್ಮ ತಾತನಿಗೆ ಬಹಳ ದಿನಗಳ ಕಾಲ ಮಕ್ಕಳು ಆಗಲಿಲ್ಲ ಎಂದು ಹೇಳುತ್ತಾರೆ.. ಆಗ ಸ್ವಾಮೀಜಿಯೊಬ್ಬರು ಹನುಮಂತನನ್ನು ಪೂಜಿಸಲು ಸಲಹೆ ನೀಡಿದರು.. ಆ ಪೂಜೆಯ ಫಲವಾಗಿ ಅವರ ತಂದೆ ಅಜೀದ್ ಬಾಷಾ ಜನಿಸಿದರು. ಹಾಗಾಗಿ ತಂದೆಗೆ ಆಂಜನೇಯಸ್ವಾಮಿ ಎಂದರೆ ಇಷ್ಟ ಎಂದರು. ಫಿರೋಜ್ ಮತ್ತು ಚಾಂದ್ ಭಾಷಾ ಅವರು ಈ ದೇವಾಲ ನಿರ್ಮಿಸುತ್ತಿದ್ದಾರೆ ಎಂದು ಸಂತಸಪಟ್ಟು ಹೇಳುತ್ತಾರೆ.

14 ವರ್ಷಗಳ ಹಿಂದೆ ಕೈಗೆತ್ತಿಕೊಂಡ ದೇವಸ್ಥಾನ ನಿರ್ಮಾಣ ಕಾರ್ಯ ಇಂದಿಗೂ ನಡೆಯುತ್ತಿದೆ: 2010ರಲ್ಲಿ ಸಪ್ತಪದಿ ದೇವಸ್ಥಾನದ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ ಅವರು.. ಈ ದೇವಾಲಯದ ಆವರಣದಲ್ಲಿ ಏಳು ದೇವತಾ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುವುದು. ತಮ್ಮ ಸ್ವಂತ ಹಣದಿಂದ ಈ ದೇವಾಲಯವನ್ನು ಕಟ್ಟುತ್ತಿರುವುದಾಗಿ ಅವರು ಹೇಳಿದರು. ತಾವು ಮೇಸ್ತ್ರಿಗಳು ಮತ್ತು ಕೂಲಿ ಕಾರ್ಮಿಕರು.

Also Read: Political Crime Thriller: ಭಾರತದ ಚೊಚ್ಚಲ ಲೈಂಗಿಕ ಹಗರಣದಿಂದಾಗಿ ಆ ನಾಯಕನಿಗೆ ಪ್ರಧಾನಿ ಖುರ್ಚಿ ಜಸ್ಟ್​​ ಮಿಸ್​ ಆಗಿತ್ತು! ಸಂಜಯ್​ ಗಾಂಧಿ ‘ಕೈ’ವಾಡ ಏನಿತ್ತು?

ಸದ್ಯ ಈ ದೇವಾಲಯದಲ್ಲಿ ಹನುಮಂತ, ವಿನಾಯಕ, ಶಿವ, ಸಾಯಿಬಾಬಾ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದ್ದು.. ಯಾವುದೇ ದಾನಿ ತಮ್ಮ ಮಂದಿರ ನಿರ್ಮಾಣಕ್ಕೆ ಸ್ಪಂದಿಸಿ ದೇಣಿಗೆ ನೀಡಿದರೆ ಉಳಿದ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುವುದು ಎನ್ನುತ್ತಾರೆ. ತಮ್ಮ ಆರ್ಥಿಕ ಶಕ್ತಿ ಮೀರಿ ನಿರ್ಮಾಣವಾಗುತ್ತಿರುವ ಈ ಮಂದಿರದ ನಿರ್ಮಾಣವನ್ನು ಪೂರ್ಣಗೊಳಿಸಲು ಕೆಲವು ದಾನಿಗಳು ನೆರವು ನೀಡುತ್ತಿದ್ದಾರೆ ಎಂದು ಫಿರೋಜ್ ಮತ್ತು ಚಾಂದ್ ಬಾಷಾ ಸೋದರರು ಮಾಹಿತಿ ಹಂಚಿಕೊಂಡರು.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ