AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navratri 2023: ನವರಾತ್ರಿಯ ಏಳನೇ ದಿನ: ದೇವಿ ಕಾಲ ರಾತ್ರಿಯನ್ನು ಪೂಜಿಸುವುದರಿಂದ ಎಂತಹ ಫಲ ಪ್ರಾಪ್ತಿಯಾಗುತ್ತದೆ?

ಹೆಸರೇ ಹೇಳುವಂತೆ ತಾಯಿಯು ಕಗ್ಗತ್ತಲು ಮತ್ತು ಸಮಯದ ಸ್ವರೂಪಳಾಗಿದ್ದಾಳೆ. ಈ ದೇವಿಯು ಅಂಧಕಾರವನ್ನು ಹೋಗಲಾಡಿಸಿ ಬೆಳಕೆಂಬ ಶಕ್ತಿಯನ್ನು ನೀಡುತ್ತಾಳೆ. ಆಕೆಯು ತನ್ನ ಶಕ್ತಿಯಿಂದ ಅಂಧಕಾರವನ್ನು ಹೇಗೆ ದೂರ ಮಾಡುತ್ತಾಳೋ, ಅದೇ ರೀತಿ ಮನುಷ್ಯನ ಬದುಕಿನಲ್ಲಿಯೂ ಕಷ್ಟಗಳನ್ನು ದೂರಮಾಡಿ ಧೈರ್ಯ ತುಂಬುತ್ತಾಳೆ.

Navratri 2023: ನವರಾತ್ರಿಯ ಏಳನೇ ದಿನ: ದೇವಿ ಕಾಲ ರಾತ್ರಿಯನ್ನು ಪೂಜಿಸುವುದರಿಂದ ಎಂತಹ ಫಲ ಪ್ರಾಪ್ತಿಯಾಗುತ್ತದೆ?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Oct 21, 2023 | 6:00 AM

Share

ನವರಾತ್ರಿಯ ಏಳನೇ ದಿನದಂದು ತಾಯಿ ಕಾಲರಾತ್ರಿಯನ್ನು ಪೂಜಿಸಲಾಗುವುದು. ಹೆಸರೇ ಹೇಳುವಂತೆ ತಾಯಿಯು ಕಗ್ಗತ್ತಲು ಮತ್ತು ಸಮಯದ ಸ್ವರೂಪಳಾಗಿದ್ದಾಳೆ. ಈ ದೇವಿಯು ಅಂಧಕಾರವನ್ನು ಹೋಗಲಾಡಿಸಿ ಬೆಳಕೆಂಬ ಶಕ್ತಿಯನ್ನು ನೀಡುತ್ತಾಳೆ. ಆಕೆಯು ತನ್ನ ಶಕ್ತಿಯಿಂದ ಅಂಧಕಾರವನ್ನು ಹೇಗೆ ದೂರ ಮಾಡುತ್ತಾಳೋ, ಅದೇ ರೀತಿ ಮನುಷ್ಯನ ಬದುಕಿನಲ್ಲಿಯೂ ಕಷ್ಟಗಳನ್ನು ದೂರಮಾಡಿ ಧೈರ್ಯ ತುಂಬುತ್ತಾಳೆ. ಜೊತೆಗೆ ಧನಾತ್ಮಕ ಶಕ್ತಿಯನ್ನು ಪ್ರಾಪ್ತಿ ಮಾಡುತ್ತಾಳೆ ಎಂದು ನಂಬಲಾಗುತ್ತದೆ. ರೌದ್ರಾವತಾರ ಮತ್ತು ತುಂಬಾ ಉಗ್ರ ರೂಪದಲ್ಲಿರುವ ದುರ್ಗೆಯು ಎಲ್ಲಾ ರೀತಿಯ ದುಷ್ಟಶಕ್ತಿ, ದುಷ್ಟತೆ ಮತ್ತು ನಕಾರಾತ್ಮಕ ಶಕ್ತಿ ಹಾಗೂ ಭೀತಿಯನ್ನು ದೂರ ಮಾಡುತ್ತಾಳೆ. ಜೊತೆಗೆ ಭಕ್ತರಿಗೆ ಹೆಚ್ಚಿನ ಸಂತೋಷ ಕರುಣಿಸುವುದರಿಂದಾಗಿ ಆಕೆಯನ್ನು ಶುಭಾಂಕರಿ ಎಂದು ಕರೆಯಲಾಗುತ್ತದೆ.

ಮಾತೆ ಕಾಲರಾತ್ರಿಯು ಕಪ್ಪು ಮೈ ಬಣ್ಣವನ್ನು ಹೊಂದಿರುತ್ತಾಳೆ. ಕತ್ತೆಯ ಮೇಲೆ ಕುಳಿತಿರುವ ಇವಳು ಬಿಚ್ಚು ಮುಡಿಯ ಕೇಶರಾಶಿಯನ್ನು ತನ್ನ ಸುತ್ತಲೂ ಹರಡಿಕೊಂಡಿದ್ದಾಳೆ. ಆಕೆಗೆ ನಾಲ್ಕು ಕೈಗಳಿವೆ. ಎಡ ಬದಿಯ ಎರಡು ಕೈಗಳ ಪೈಕಿ ಒಂದರಲ್ಲಿ ಕುಡುಗೋಲು ಹಾಗೂ ಮತ್ತೊಂದರಲ್ಲಿ ಕಬ್ಬಿಣದ ಮುಳ್ಳು ಹಿಡಿದಿರುತ್ತಾಳೆ. ಬಲಗಡೆಯ ಎರಡು ಕೈಗಳಲ್ಲಿ ವರ ಮುದ್ರೆ ಹಾಗೂ ಅಭಯ ಮುದ್ರೆಯನ್ನು ಹೊಂದಿದ್ದಾಳೆ.

ನವರಾತ್ರಿಯ ಏಳನೇ ದಿನವು ವ್ಯಕ್ತಿಯು ತಾಯಿ ಕಾಲರಾತ್ರಿಯ ಪೂಜೆ ನೆರವೇರಿಸಿದರೆ ಬದುಕಿನಲ್ಲಿ ಪೂರ್ಣ ಪ್ರಮಾಣದ ಅಭಿವೃದ್ಧಿ ಕಾಣುತ್ತಾನೆ ಎಂದು ಹೇಳಲಾಗುತ್ತದೆ. ಕಳಶ ಪೂಜೆ ಮಾಡುವ ಮೂಲಕ ತಾಯಿ ದುರ್ಗೆಯ ಒಂಭತ್ತು ಅವತಾರಗಳನ್ನು ನೆನೆದು ಪೂಜೆ ಮಾಡುವುದು ಮನೆಗೆ ಸುಖ, ಶಾಂತಿ, ನೆಮ್ಮದಿ ತರುತ್ತದೆ ಎಂದು ಹೇಳಲಾಗುತ್ತದೆ. ತಾಯಿಗೆ ಅರ್ಪಿಸುವ ಪ್ರಸಾದವು ಹಾಲು, ಜೇನುತುಪ್ಪವನ್ನು ಒಳಗೊಂಡಿದ್ದರೇ ಒಳ್ಳೆಯದು. ಪಾಯಸವೂ ಕೂಡ ಶ್ರೇಷ್ಠವೇ. ಮನುಷ್ಯನಿಗೆ ದುಃಖ, ನೋವು, ವಿನಾಶ ಮತ್ತು ಸಾವನ್ನು ಎಂದಿಗೂ ತಪ್ಪಿಸಲಾಗದು. ಅದು ಯಾರನ್ನೂ ಬಿಡುವುದಿಲ್ಲ. ಇವು ಜೀವನದ ಕಹಿ ಸತ್ಯಗಳು ಮತ್ತು ಅವುಗಳನ್ನು ನಿರಾಕರಿಸುವುದು ಅಸಾಧ್ಯ ಎಂಬುದನ್ನು ತಾಯಿ ಅರ್ಥ ಮಾಡಿಸುತ್ತಾಳೆ. ಇನ್ನು ತಾಯಿ ಕಾಲರಾತ್ರಿಯ ಮಂತ್ರವನ್ನು ಪಠಿಸುವುದರಿಂದ ನಮ್ಮ ಮನಸ್ಸಿನಲ್ಲಿರುವ ಭಯವು ದೂರವಾಗಿ ಧೈರ್ಯ ತುಂಬಿಕೊಳ್ಳುತ್ತದೆ.

ಇದನ್ನೂ ಓದಿ: ಅಕ್ಷರಾಭ್ಯಾಸದ ಆರಂಭ ಹೇಗಿರಬೇಕು? ಈ ಸಮಯದಲ್ಲಿ ಯಾಕೆ ಶಾರದೆಯನ್ನು ಪೂಜಿಸಬೇಕು? ಇಲ್ಲಿದೆ ಮಾಹಿತಿ

ದೇವಿ ಕಾಲ ರಾತ್ರಿಯನ್ನು ಪೂಜಿಸುವಾಗ ಯಾವ ಮಂತ್ರವನ್ನು ಪಠಿಸಬೇಕು?

– ಓಂ ದೇವಿ ಕಾಲರಾತ್ರಿಯೇ ನಮಃ

-ಓಂ ದೇವಿ ಕಾಲರಾತ್ರೈ ನಮಃ

-ಓಂ ದೇವಿ ಕಾಲರಾತ್ರೈ ನಮಃ ಎಕ್ವೇಣಿ ಜಪಕಾರ್ಣಪೂರ ನಗ್ನಾ ಖರಾಸ್ಥಿತಾ ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ ಶರೀರಿಣೀ ವಂ

-ಪಾದೋಲ್ಲಸಲ್ಲೋಹ್ಲತಾ ಕಂಟಕ್ಬುಷಾನಾ ಭರ್ಧನ್‌ ಮೂರ್ಧಂ ಧ್ವಜಾ ಕೃಷ್ಣ ಕಾಲರಾತ್ರಿ ಭಯಂಕರಿ

-ಯಾ ದೇವಿ ಸರ್ವಭೂತೇಷು ಮಾ ಕಾಲರಾತ್ರಿ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

– ಹಿಂ ಕಾಲರಾತ್ರಿ ಶ್ರಿಂ ಕರಾಲಿ ಚ ಕ್ಲಿಂ ಕಲ್ಯಾಣಿ ಕಲಾವತಿ ಕಲಾಮಾತಾ ಕಾಳಿದರ್ಪದ್ನಿ ಕಾಮದಿಶಾ ಕುಪನ್ವಿತಾ ಕಾಮಬಿಜಪಂದ ಕಮಬಿಜಸ್ವರೂಪಿಣಿ

-ಕುಮತಿಘ್ನಿ ಕುಲಿನಾರ್ತಿನಾಶಿನಿ ಕುಲಾ ಕಾಮಿನಿ ಕ್ಲಿಂ ಹ್ರಿಂ ಶ್ರೀಂ ಮಾಂತ್ರ್ವರ್ನೆನಾ ಕಾಲಾಕಂತಕಘಾತಿನಿ ಕೃಪಾಮಯಿ ಕೃಪಾಧಾರ ಕೃಪಾಪರ ಕೃಪಾಗಮಾ

-ವರ್ಜಿತಾನಿ ತು ಸ್ತಾನಾಭಿ ಯಾನಿ ಚ ಕವಚೇನಾ ಹೇ ತನಿ ಸರ್ವಾಣಿ ಮೀ ದೇವಿಸತತಾಪಂತು ಸ್ಥಾಂಭಿನಿ

ಹೆಚ್ಚಿನ ಆಧ್ಯಾತ್ಮಿಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ