Mysore Dasara: ಮಹಿಷ ಪೂಜೆಗೆ ಅವಕಾಶ ನೀಡಲು ಹೈಕೋರ್ಟ್ ನಕಾರ

ಮಹಿಷ ಪ್ರತಿಮೆಗೆ ಅಗ್ರಪೂಜೆ ಸಲ್ಲಿಸಿರುವ ಅಧಿಕೃತ ಉಲ್ಲೇಖಗಳಿದ್ದರೆ ಹಾಜರುಪಡಿಸಿ ಎಂದು ಅರ್ಜಿದಾರರ ಪರ ವಕೀಲರಿಗೆ ಹೈಕೋರ್ಟ್​ ಕೇಳಿತು.

Mysore Dasara: ಮಹಿಷ ಪೂಜೆಗೆ ಅವಕಾಶ ನೀಡಲು ಹೈಕೋರ್ಟ್ ನಕಾರ
ಮಹಿಷಾಸುರ ಮತ್ತು ಕರ್ನಾಟಕ ಹೈಕೋರ್ಟ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 25, 2022 | 7:10 AM

ಬೆಂಗಳೂರು: ವಿಶ್ವಪ್ರಸಿದ್ಧ ಮೈಸೂರು ದಸರಾ (Mysore Dasara) ವೇಳೆ ಮಹಿಷ ಪ್ರತಿಮೆಗೆ (Mahisha Puja) ಅಗ್ರಪೂಜೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಪುರಸ್ಕರಿಸಿ, ಮಧ್ಯಂತರ ಆದೇಶ ನೀಡಲು ಕರ್ನಾಟಕ ಹೈಕೋರ್ಟ್ (Karnataka High Court) ನಿರಾಕರಿಸಿತು. ಈ ಸಂಬಂಧ ಮೈಸೂರಿನ ವಕೀಲ ಪಿ.ಚಂದ್ರಶೇಖರ್‌ ರಿಟ್‌ ಅರ್ಜಿ ಸಲ್ಲಿಸಿ, ಮಹಿಷ ಪ್ರತಿಮೆಯ ಪುಷ್ಪಾರ್ಚನೆಗೆ ನಿರ್ದೇಶನ ಕೋರಿದ್ದರು. ಪ್ರತಿಮೆಗೆ ಅಗ್ರಪೂಜೆಯ ಅಧಿಕೃತ ಉಲ್ಲೇಖಗಳಿದ್ದರೆ ಹಾಜರುಪಡಿಸಿ ಎಂದು ಅರ್ಜಿದಾರರ ಪರ ವಕೀಲ ಅಬೂಬಕರ್ ಶಫಿ ಅವರಿಗೆ ಹೈಕೋರ್ಟ್ ಸೂಚನೆ ನೀಡಿತು.

‘ರಾಕ್ಷಸರು ಎಂದಾಕ್ಷಣ ಅವರೆಲ್ಲಾ ಕೆಟ್ಟವರಲ್ಲ. ದೇವತೆಗಳು ಎಂದಾಕ್ಷಣ ತಪ್ಪೇ ಮಾಡದಿರುವವರಲ್ಲ. ಪುರಾಣಗ ಉಲ್ಲೇಖದಂತೆ ದೇವತೆಗಳು, ರಾಕ್ಷಸರು ಕಶ್ಯಪನ ಸಂತತಿ. ಕಶ್ಯಪನ ಮೊದಲ ಹೆಂಡತಿ ದಿತಿಯ ಮಕ್ಕಳು ದೈತ್ಯರು. ಎರಡನೇ ಹೆಂಡತಿ ಅದಿತಿಯ ಮಕ್ಕಳು ದೇವತೆಗಳು. ದೈತ್ಯರಲ್ಲೂ ಅನೇಕರು ಒಳ್ಳೆಯವರಿದ್ದಾರೆ. ರಾವಣ ರಾಕ್ಷಸನಾಗಿದ್ದರೂ ಸಾಕಷ್ಟು ಒಳ್ಳೆಯ ಗುಣಗಳಿದ್ದವು’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅಭಿಪ್ರಾಯಪಟ್ಟರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸುವಂತೆ ಕರ್ನಾಟಕ ಸರ್ಕಾರ, ಮೈಸೂರು ಜಿಲ್ಲಾಡಳಿತ, ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ಹೈಕೋರ್ಟ್ ನೊಟೀಸ್ ಜಾರಿ ಮಾಡಿತು.

ರಾಜವಂಶಸ್ಥರಿಗೆ ಅಧಿಕೃತ ಆಹ್ವಾನ

ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮೈಸೂರು ಒಡೆಯರ್ ರಾಜವಂಶಸ್ಥರಾದ ಪ್ರಮೋದಾದೇವಿ ಅವರನ್ನು ಶನಿವಾರ (ಸೆ 24) ಮೈಸೂರು ಅರಮನೆಯ ಖಾಸಗಿ ನಿವಾಸದಲ್ಲಿ ಭೇಟಿಯಾಗಿ ಸಾಂಪ್ರದಾಯಿಕವಾಗಿ ಫಲಪುಷ್ಪ ತಾಂಬೂಲ ನೀಡಿ ದಸರಾ ಉತ್ಸವಕ್ಕೆ ಆಹ್ವಾನ ನೀಡಿದರು.

ನಾಳೆ ಮೈಸೂರಿಗೆ ರಾಷ್ಟ್ರಪತಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ (ಸೆ 26) ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 6.15ಕ್ಕೆ ರಾಷ್ಟ್ರಪತಿ ಮುರ್ಮು ಅವರು ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದು, 9 ಗಂಟೆಗೆ ಮೈಸೂರಿನ ಮಂಡಕಳ್ಳಿ ಏರ್​ಪೋರ್ಟ್​ಗೆ ಆಗಮಿಸಲಿದ್ದಾರೆ. ನಂತರ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. 10 ಗಂಟೆಗೆ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೈಸೂರು ದಸರಾ ಉದ್ಘಾಟಿಸಲಿದ್ದಾರೆ. 10:45ಕ್ಕೆ ಚಾಮುಂಡಿ ಬೆಟ್ಟದಿಂದ ಹೊರಟು, ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತ್ರ ಮುರ್ಮು ಭಾಗವಹಿಸಲಿದ್ದಾರೆ. ನಂತರ 11:15ಕ್ಕೆ ಮೈಸೂರಿನಿಂದ ಹುಬ್ಬಳ್ಳಿಗೆ ತೆರಳಲಿದ್ದಾರೆ.

ಕೆಎಸ್‌ಆರ್‌ಟಿಸಿ ಪ್ಯಾಕೇಜ್‌ ಪ್ರವಾಸ

ಮೈಸೂರು ದಸರಾ ಅಂಗವಾಗಿ ಕೆಎಸ್​ಆರ್​ಟಿಸಿ ವಿಶೇಷ ಪ್ಯಾಕೇಜ್‌ ಒದಗಿಸುತ್ತಿದೆ. ಈ ಪ್ಯಾಕೇಜ್‌ ಅ.1 ರಿಂದ 10ರವರೆಗೆ ಲಭ್ಯವಿರುತ್ತದೆ. www.ksrtc.government.in ಜಾಲತಾಣದ ಮೂಲಕ ಸೀಟು ಕಾಯ್ದಿರಿಸಬಹುದು.

ಗಿರಿದರ್ಶಿನಿ: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ , ಬಿಳಿಗಿರಿರಂಗನ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟ. (ವಯಸ್ಕರಿಗೆ 400 ರೂ., ಮಕ್ಕಳಿಗೆ 250 ರೂ.) ಜಲದರ್ಶಿನಿ: ಗೋಲ್ಡನ್‌ ಟೆಂಪಲ್‌ (ಬೈಲಕುಪ್ಪೆ), ದುಬಾರೆ, ನಿಸರ್ಗಧಿಧಾಮ, ರಾಜಾಸೀಟ್‌, ಹಾರಂಗಿ ಮತ್ತು ಕೆಆರ್‌ಎಸ್‌. (ವಯಸ್ಕರಿಗೆ 450 ರೂ., ಮಕ್ಕಳಿಗೆ 250 ರೂ.)

ಶ್ರೀರಂಗಪಟ್ಟಣ. (ವಯಸ್ಕರಿಗೆ 300 ರೂ., ಮಕ್ಕಳಿಗೆ 175 ರೂ.)

ಮೈಸೂರು ನಗರ ದೀಪಾಲಂಕಾರ ದರ್ಶನ: ನಗರ ಬಸ್‌ ನಿಲ್ದಾಣದಿಂದ ಅರಮನೆ ರಸ್ತೆ, ಮೈಸೂರು ಕೇಂದ್ರೀಯ ಬಸ್‌ ನಿಲ್ದಾಣ ರಸ್ತೆ, ಎಲ್‌ಐಸಿ ವೃತ್ತ, ಬಂಬೂ ಬಜಾರ್‌ ರಸ್ತೆ, ರೈಲ್ವೆ ನಿಲ್ದಾಣ ವೃತ್ತ, ಜೆಎಲ್‌ಬಿ ರಸ್ತೆ(ಮೂಡ ಕಚೇರಿ ರಸ್ತೆ) ಮತ್ತು ನಗರ ಬಸ್‌ ನಿಲ್ದಾಣ. (ವಯಸ್ಕರಿಗೆ 200 ರೂ., ಮಕ್ಕಳಿಗೆ 150 ರೂ.). ವೋಲ್ವೊ ಸಂಜೆ 6ಕ್ಕೆ ಹೊರಡಲಿವೆ.

ಮೈಸೂರು ದರ್ಶಿನಿ: ನಗರ ವೋಲ್ವೊ ಬಸ್‌ಗಳಲ್ಲಿನಂಜನಗೂಡು, ಚಾಮುಂಡಿಬೆಟ್ಟ, ಮೃಗಾಲಯ, ಅರಮನೆ, ಶ್ರೀರಂಗಪಟ್ಟಣ, ಕೆಆರ್‌ಎಸ್‌.(ವಯಸ್ಕರಿಗೆ 400 ರೂ., ಮಕ್ಕಳಿಗೆ 200 ರೂ.)

ಐರಾವತ ಕ್ಲಬ್‌ ಕ್ಲಾಸ್‌ ಪ್ರವಾಸ: ಮಡಿಕೇರಿ ಪ್ಯಾಕೇಜ್‌: ನಿಸರ್ಗಧಾಮ, ಗೋಲ್ಡನ್‌ ಟೆಂಪಲ್‌, ಹಾರಂಗಿ ಜಲಾಶಯ, ರಾಜಾ ಸೀಟ್‌, ಅಬ್ಬಿಫಾಲ್ಸ್‌. (ವಯಸ್ಕರಿಗೆ 1200 ರೂ., ಮಕ್ಕಳಿಗೆ 1000 ರೂ.) ಊಟಿ ಪ್ಯಾಕೇಜ್‌: ಊಟಿ, ಬಟಾನಿಕಲ್‌ ಗಾರ್ಡನ್‌, ಇಟಾಲಿಯನ್‌ ರೋಸ್‌ ಗಾರ್ಡನ್‌, ಬೋಟ್‌ ಹೌಸ್‌. (ವಯಸ್ಕರಿಗೆ 1600 ರೂ., ಮಕ್ಕಳಿಗೆ 1200 ರೂ.)

Published On - 7:10 am, Sun, 25 September 22

ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು