ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022: ‘ದಸರಾ ದರ್ಶನ’ KSRTC ಬಸ್ಗಳಿಗೆ ಚಾಲನೆ
3 ದಿನ ದಸರಾ ದರ್ಶನಕ್ಕೆ ಒಟ್ಟು 81 ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ನಿತ್ಯ ಮೈಸೂರಿನ 1 ತಾಲೂಕಿಗೆ ಮೂರು ಬಸ್ಗಳ ನಿಯೋಜನೆ ಮಾಡಿದ್ದು, 3 ದಿನಗಳಲ್ಲಿ 4,455 ಜನರಿಗೆ ದಸರಾ ತೋರಿಸುವ ನಿರ್ಧರಿಸಲಾಗಿದೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022 ಹಿನ್ನೆಲೆ ಮೈಸೂರಿನಲ್ಲಿ ‘ದಸರಾ ದರ್ಶನ’ KSRTC ಬಸ್ಗಳಿಗೆ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಚಾಲನೆ ನೀಡಿದರು. 3 ದಿನ ದಸರಾ ದರ್ಶನಕ್ಕೆ ಒಟ್ಟು 81 ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ನಿತ್ಯ ಮೈಸೂರಿನ 1 ತಾಲೂಕಿಗೆ ಮೂರು ಬಸ್ಗಳ ನಿಯೋಜನೆ ಮಾಡಿದ್ದು, 3 ದಿನಗಳಲ್ಲಿ 4,455 ಜನರಿಗೆ ದಸರಾ ತೋರಿಸುವ ನಿರ್ಧರಿಸಲಾಗಿದೆ. 9.30ಕ್ಕೆ ಕೆ.ಎಸ್.ಆರ್.ಟಿ.ಸಿ ಚಾಲನೆ ಕಾರ್ಯಕ್ರಮಕ್ಕೆ ಸಮಯ ನಿಗದಿಯಾಗಿತ್ತು. ಆದರೆ ಉಸ್ತುವಾರಿ ಸಚಿವರಿಗಾಗಿ ಕಾದು ಕಾದು ಶಾಸಕ ಹಾಗೂ ಅಧಿಕಾರಿಗಳು ಸುಸ್ತಾದರು. ವಿಶ್ವ ವಿಖ್ಯಾತ ದಸರಾ ನೋಡಲು ಜಿಲ್ಲಾಡಳಿತ ವಿಶೇಷ ಬಸ್ಗಳ ವ್ಯವಸ್ಥೆ ಮಾಡಿದೆ. ಸ್ಥಳೀಯ ಶಾಸಕ ರಾಮದಾಸ್ ಬಂದು ಒಂದು ಗಂಟೆಯಾದರು ಸಚಿವ ಸ್ಥಳಕ್ಕೆ ಬಂದಿರಲಿಲ್ಲ.
ಈ ಬಾರಿಯ ಯುವ ದಸರಾ ಡಾ. ಪುನೀತ್ ರಾಜಕುಮಾರಗೆ ಅರ್ಪಣೆ
ಇಂದು ಸಂಜೆ 6.30ಕ್ಕೆ ಅಪ್ಪು ನಮನ ಹೆಸರಿನ ಕಾರ್ಯಕ್ರಮದೊಂದಿಗೆ ಯುವ ದಸರಾ ಉದ್ಘಾಟನೆಯಾಗಲಿದ್ದು, ಡಾ. ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಉದ್ಘಾಟನೆ ಮಾಡಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಗಾಯಕರಾದ ಕುನಾಲ್ ಗಾಂಜಾವಾಲ, ವಿಜಯಪ್ರಕಾಶ್ ಗಾಯನವಿರಲಿದೆ. ಅಪ್ಪು ಸಿನಿಮಾದ ಹಾಡುಗಳಿಗೆ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಮಾಡಲಿದ್ದಾರೆ. ಈ ಬಾರಿಯ ಯುವ ದಸರಾ ಡಾ. ಪುನೀತ್ ರಾಜಕುಮಾರಗೆ ಅರ್ಪಣೆ ಆಗಲಿದೆ.
ಗ್ರಾಮೀಣ ದಸರಾಗೆ ಚಾಲನೆ:
ಇಂದು ಮೈಸೂರಿನಲ್ಲಿ ಬೆಳಗ್ಗೆ 9.00 ಗಂಟೆಗೆ ದಾರಿಪುರ ಗ್ರಾಮದ ದೇವಸ್ಥಾನದಲ್ಲಿ ಗ್ರಾಮೀಣ ದಸರಾವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಉದ್ಘಾಟನೆ ಮಾಡಿದರು. ಸುಮಾರು 2 ಕಿ.ಮೀ. ಅದ್ಧೂರಿ ಮೆರವಣಿಗೆ ಜರುಗಲಿದೆ. ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ, ಉಚಿತ ಜಾನುವಾರು ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿದೆ. ಮೆರವಣಿಗೆಯಲ್ಲಿ ಸರ್ಕಾರದ ವಿವಿಧ ಯೋಜನೆಗಳ ಸ್ಥಬ್ಧಚಿತ್ರ, ಸಾಂಸ್ಕೃತಿಕ ಕಲಾ ತಂಡಗಳು ಭಾಗಿಯಾಗಲಿವೆ. ಸಂಸದ ಪ್ರತಾಪ್ ಸಿಂಹ, ಶಾಸಕ ಜಿ.ಟಿ ದೇವೇಗೌಡ ಸೇರಿ ಹಲವರು ಭಾಗಿಯಾಗಲಿದ್ದಾರೆ.
ದೀಪಾಲಂಕಾರ ನೋಡಲು ಜನಸಾಗರ
ವಿದ್ಯುತ್ ದೀಪಾಲಂಕಾರದಿಂದ ಮೈಸೂರು ಕಂಗೊಳಿಸುತ್ತಿದ್ದು, ದೀಪಾಲಂಕಾರ ನೋಡಲು ಜನಸಾಗರ ಹುರಿದು ಬರುತ್ತಿದೆ. ಮೈಸೂರು ರಸ್ತೆಗಳು ಜನರಿಂದ ತುಂಬಿ ತುಳುಕುತ್ತಿದ್ದು, ದೀಪಾಲಂಕಾರ ವೀಕ್ಷಣೆಗೆ ಪೊಲೀಸ್ ಜೀಪ್‌ನಲ್ಲಿ ಸಾರ್ವಜನಿಕರು ಬಂದಿರುವ ವಿಡಿಯೋ ವೈರಲ್ ಆಗಿದೆ. ಕೆ ಎ 12 ಜಿ 647 ಸಂಖ್ಯೆಯ ಪೊಲೀಸ್ ಜೀಪ್. ನೆನ್ನೆ ರಾತ್ರಿ ವಿಡಿಯೋ ಮಾಡಿ ಯುವಕರು ವೈರಲ್ ಮಾಡಿದ್ದಾರೆ.
ಯೋಗ ನಗರಿಯಲ್ಲಿ ಯೋಗ ದಸರಾ ಆಚರಣೆ
ಮೈಸೂರು ದಸರಾ ಉತ್ಸವ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಅರಮನೆಯ ಮುಂಭಾಗದ ಒಳ ಆವರಣದಲ್ಲಿ ಯೋಗ ದಸರಾ ನಡೆಯಲಿದ್ದು, ಸುತ್ತೂರು ಶ್ರೀಗಳಿಂದ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಲಾಯಿತು. ಶಂಕನಾದದ ಮೂಲಕ ಯೋಗಾಸನ ಶುರು ಮಾಡಿದ್ದು, 75 ಕ್ಲೀಷ್ಟಕರ ಯೋಗಾಸನಗಳನ್ನ ಯೋಗಸಕ್ತರು ಮಾಡಿದರು. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ 75 ಆಸನಗಳ ಯೋಗ ಸಂಭ್ರಮ ಜರುಗಿತು. ಸುಮಾರು 300 ಕ್ಕೂ ಹೆಚ್ಚು ಮಂದಿ ಯೋಗ ದಸರಾದಲ್ಲಿ ಭಾಗಿ ಆಗಿ ಯೋಗಾಸನಗಳನ್ನ ಮಾಡಲಾಗ್ತಿದೆ. ಮಕ್ಕಳಿಂದ ಹಿಡಿದು ವಯೋವೃದ್ಧರು ಸೇರಿದಂತೆ ಎಲ್ಲಾ ವಯೋಮಾನದವರು ಯೋಗ ದಸರಾದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹಾಗೂ ಕೃಷ್ಣ ರಾಜ ಕ್ಷೇತ್ರದ ಶಾಸಕ ರಾಮ್ ದಾಸ್ ಭಾಗಿಯಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.