ದುರ್ಗಾದೇವಿಯ ಮೂರನೇ ಸ್ವರೂಪ -ಚಂದ್ರಘಂಟಾ: ತಾಯಿಯ ಈ ರೂಪ ಪೂಜಿಸುವುದರಿಂದ ಸಿಗುತ್ತೆ ಅನೇಕ ಫಲ
ನವರಾತ್ರಿಯ ದುರ್ಗಾ ಉಪಾಸನೆಯಲ್ಲಿ ಮೂರನೇ ದಿನದ ಪೂಜೆಯ ಮಹತ್ವ ಅತ್ಯಧಿಕವಾಗಿದೆ. ಈ ದಿನ ಸಾಧಕನ ಮನಸ್ಸು ಮಣಿಪೂರ ಚಕ್ರದಲ್ಲಿ ಪ್ರವೇಶಿಸುತ್ತದೆ. ತಾಯಿ ಚಂದ್ರಘಂಟೆಯ ಕೃಪೆಯಿಂದ ಅವನಿಗೆ ಅಲೌಕಿಕ ವಸ್ತುಗಳ ದರ್ಶನವಾಗುತ್ತದೆ.
ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ | ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||
ಜಗಜ್ಜನನೀ ದುರ್ಗಾದೇವಿಯ ಮೂರನೇ ಶಕ್ತಿ ಸ್ವರೂಪವನ್ನು ‘ಚಂದ್ರಘಂಟಾ’ ಎಂದು ತಿಳಿಯಲಾಗುತ್ತದೆ. ನವರಾತ್ರಿಯ ಉಪಾಸನೆಯಲ್ಲಿ ಮೂರನೆಯ ದಿನ ತಾಯಿಯ ಪೂಜೆ-ಆರಾಧನೆ ಮಾಡಲಾಗುತ್ತದೆ. ತಾಯಿಯ ಈ ಸ್ವರೂಪವು ಪರಮ ಶಾಂತಿದಾಯಕ ಮತ್ತು ಶ್ರೇಯಸ್ಕರವಾಗಿದೆ. ಇವಳ ಮಸ್ತಕದಲ್ಲಿ ಗಂಟೆಯ ಆಕಾರದ ಅರ್ಧಚಂದ್ರನಿದ್ದಾನೆ. ಇದರಿಂದಲೇ ತಾಯಿಯ ಈ ರೂಪವನ್ನು ಚಂದ್ರಘಂಟಾದೇವಿ ಎಂದು ಹೇಳಲಾಗುತ್ತದೆ. ತಾಯಿಯ ಶರೀರದ ಬಣ್ಣವು ಚಿನ್ನದಂತೆ ಹೊಳೆಯುತ್ತದೆ. ತಾಯಿಗೆ ಹತ್ತು ಕೈಗಳಿದ್ದು ಹತ್ತೂ ಕೈಗಳಲ್ಲಿ ಖಡ್ಗ ಇತ್ಯಾದಿ ಶಸ್ತ್ರಗಳು ಹಾಗೂ ಬಾಣ ಇತ್ಯಾದಿ ಅಸ್ತ್ರಗಳು ವಿಭೂಷಿತವಾಗಿವೆ. ತಾಯಿಯ ವಾಹನ ಸಿಂಹವಾಗಿದೆ. ತಾಯಿಯ ಮುದ್ರೆಯು ಯುದ್ಧಕ್ಕಾಗಿ ಹೊರಟಿದಂತಿದೆ. ತಾಯಿಯ ಗಂಟೆಯಂತೆ ಭಯಾನಕ ಚಂಡಧ್ವನಿಯಿಂದ ಅತ್ಯಾಚಾರಿ ದಾನವರು, ದೈತ್ಯರು, ರಾಕ್ಷಸರು ಯಾವಾಗಲೂ ನಡುಗುತ್ತಿರುತ್ತಾರೆ.
ನವರಾತ್ರಿಯ ದುರ್ಗಾ ಉಪಾಸನೆಯಲ್ಲಿ ಮೂರನೇ ದಿನದ ಪೂಜೆಯ ಮಹತ್ವ ಅತ್ಯಧಿಕವಾಗಿದೆ. ಈ ದಿನ ಸಾಧಕನ ಮನಸ್ಸು ಮಣಿಪೂರ ಚಕ್ರದಲ್ಲಿ ಪ್ರವೇಶಿಸುತ್ತದೆ. ತಾಯಿ ಚಂದ್ರಘಂಟೆಯ ಕೃಪೆಯಿಂದ ಅವನಿಗೆ ಅಲೌಕಿಕ ವಸ್ತುಗಳ ದರ್ಶನವಾಗುತ್ತದೆ. ದಿವ್ಯ ಸುಗಂಧಗಳ ಅನುಭವವಾಗುತ್ತದೆ ಹಾಗೂ ವಿವಿಧ ಪ್ರಕಾರದ ದಿವ್ಯ ಧ್ವನಿಗಳು ಕೇಳಿಸುತ್ತವೆ. ಈ ಕ್ಷಣಗಳು ಸಾಧಕನು ತುಂಬಾ ಎಚ್ಚರವಾಗಿರಬೇಕಾಗುತ್ತವೆ. ಇದನ್ನೂ ಓದಿ: ನವರಾತ್ರಿಯ ಎರಡು ಮತ್ತು ಮೂರನೇಯ ದಿನದ ಪೂಜೆ ದೇವಿಯ ಯಾವ ಸ್ವರೂಪಕ್ಕೆ ಸಲ್ಲಬೇಕು? ಅದರ ಫಲವೇನು?ಇಂದಿನ ವಿಶೇಷ ಭಕ್ಷ್ಯವೇನು?
ಜಗಜ್ಜನನಿ ಚಂದ್ರಘಂಟೆಯ ಕೃಪೆಯಿಂದ ಸಾಧಕನ ಸಮಸ್ತಪಾಪಗಳು ನಾಶವಾಗಿ ಹೋಗುತ್ತವೆ. ತಾಯಿಯ ಆರಾಧನೆ ಬೇಗನೇ ಫಲದಾಯಕವಾಗಿದೆ. ತಾಯಿಯ ಮುದ್ರೆ ಯಾವಾಗಲೂ ಯುದ್ಧಕ್ಕಾಗಿ ಅಭಿಮುಖವಾದಂತಿರುತ್ತದೆ. ಆದ್ದರಿಂದ ಭಕ್ತರ ಕಷ್ಟಗಳ ನಿವಾರಣೆಯನ್ನು ಬಹುಬೇಗನೇ ಇಡೇರಿಸುತ್ತಾಳೆ. ಇವರ ವಾಹನ ಸಿಂಹವಾದ್ದರಿಂದ ತಾಯಿಯ ಉಪಾಸಕನು ಸಿಂಹದಂತೆ ಪರಾಕ್ರಮಿ ಮತ್ತು ನಿರ್ಭಯನಾಗುತ್ತಾನೆ. ತಾಯಿಯ ಗಂಟೆಯ ಧ್ವನಿಯು ಸದಾಕಾಲ ತನ್ನ ಭಕ್ತರನ್ನು ಪ್ರೇತಬಾಧೆಯೇ ಮುಂತಾದವುಗಖಿಂದ ರಕ್ಷಿಸುತ್ತದೆ. ತಾಯಿಯ ಧ್ಯಾನ ಮಾಡುತ್ತಲೇ ಶರಣಾಗತನ ರಕ್ಷಣೆಗಾಗಿ ಈ ಘಂಟೆಯ ಧ್ವನಿ ಮೊಳಗುತ್ತದೆ.
ದುಷ್ಟರ ದಮನ ಹಾಗೂ ವಿನಾಶ ಮಾಡುವುದರಲ್ಲಿ ಸದಾಕಾಲ ತತ್ಪರಳಾಗಿದ್ದರೂ ತಾಯಿಯ ಸ್ವರೂಪವು ದರ್ಶನೀಯ ಹಾಗೂ ಆರಾಧಕನಿಗಾಗಿ ಅತ್ಯಂತ ಸೌಮ್ಯ ಮತ್ತು ಶಾಂತಿಯಿಂದ ಪರಿಪೂರ್ಣವಾಗಿರುತ್ತದೆ. ತಾಯಿಯ ಆರಾಧನೆಯಿಂದ ಪ್ರಾಪ್ತವಾಗುವಂತಹ ಇನ್ನೊಂದು ಬಹುದೊಡ್ಡ ಸದ್ಗುಣವು ಸಾಧಕನಲ್ಲಿ ಪರಾಕ್ರಮ – ನಿರ್ಭಯದೊಂದಿಗೆ ಸೌಮ್ಯತೆ ಹಾಗೂ ವಿನಮ್ರತೆಯೂ ವಿಕಾಸವಾಗುವುದೂ ಆಗಿದೆ. ಅವನ ಮುಖದಲ್ಲಿ, ಕಣ್ಣುಗಳಲ್ಲಿ, ಇಡೀ ಶರೀರದಲ್ಲಿ ಕಾಂತಿ-ಗುಣದ ವೃದ್ಧಿಯಾಗುತ್ತದೆ. ಸ್ವರದಲ್ಲಿ ದಿವ್ಯ, ಅಲೌಕಿಕ ಮಾಧುರ್ಯ ತುಂಬಿ ಹೋಗುತ್ತದೆ.
ತಾಯಿ ಚಂದ್ರಘಂಟೆಯ ಭಕ್ತರು, ಉಪಾಸಕರು ಹೋದಲೆಲ್ಲ ಜನರು ಅವನನ್ನು ನೋಡಿ ಶಾಂತಿ ಮತ್ತು ಸುಖವನ್ನು ಅನುಭವಿಸುತ್ತಾರೆ. ಇಂತಹ ಸಾಧಕನ ಶರೀರದಿಂದ ದಿವ್ಯ ಪ್ರಕಾಶದಿಂದೊಡಗೂಡಿದ ಪರಮಾಣುಗಳ ಅದೃಶ್ಯ ವಿಕಿರಣವಾಗುತ್ತಿರುತ್ತದೆ. ಈ ದಿವ್ಯ ಕ್ರಿಯೆಯು ಸಾಧಾರಣ ಕಣ್ಣುಗಳಿಗೆ ಗೋಚರಿಸುವುದಿಲ್ಲ. ಆದರೆ ಸಾಧಕ ಮತ್ತು ಅವನ ಸಂಪರ್ಕದಲ್ಲಿ ಬರುವವರು ಈ ಮಾತನ್ನು ಅನುಭವಿಸುತ್ತಾರೆ. ಇದನ್ನೂ ಓದಿ: Navratri: ನವರಾತ್ರಿಯಲ್ಲಿ ಪ್ರತೀದಿನ ಈ ಒಂದು ಕಾರ್ಯ ಮಾಡದಿದ್ದರೆ ಪರ್ವಕಾಲದಲ್ಲಿ ಮಾಡಿದ ಪೂಜಾಫಲ ನಿಷ್ಫಲವಾಗುವುದು. ಅದೇನು ಮತ್ತು ಹೇಗೆ ?
ನಮ್ಮ ಮನ, ವಚನ, ಕರ್ಮ ಹಾಗೂ ಶರೀರವನ್ನು ವಿಹಿತ ವಿಧಿ-ವಿಧಾನಕ್ಕನುಸಾರ ಪೂರ್ಣವಾಗಿ ಪರಿಶುದ್ಧ ಮತ್ತು ಪವಿತ್ರವಾಗಿಸಿ ಜಗನ್ಮಾತೆ ಚಂದ್ರಘಂಟೆಗೆ ಶರಣಾಗತರಾಗಿ ತಾಯಿಯ ಉಪಾಸನೆ-ಆರಾಧನೆಯಲ್ಲಿ ತತ್ಪರರಾಗಬೇಕು. ತಾಯಿಯ ಉಪಾಸನೆಯಿಂದ ನಾವು ಎಲ್ಲ ಸಾಂಸಾರಿಕ ಕಷ್ಟಗಳಿಂದ ಮುಕ್ತರಾಗಿ ಸಹಜವಾಗಿಯೇ ಪರಮಪದದ ಅಧಿಕಾರಿ ಆಗಬಲ್ಲೆವು. ನಾವು ನಿರಂತರ ಅವಳ ಪವಿತ್ರ ವಿಗ್ರಹವನ್ನು ಧ್ಯಾನದಲ್ಲಿರಿಸುತ್ತಾ ಸಾಧನೆಯತ್ತ ಮುಂದುವರಿಯುವ ಪ್ರಯತ್ನ ಮಾಡಬೇಕು. ಅವಳ ಧ್ಯಾನವು ನಮ್ಮ ಇಹಲೋಕ ಮತ್ತು ಪರಲೋಕದ ಶ್ರೇಯಸ್ಕರ ಸದ್ಗತಿಯನ್ನು ಕೊಡುವಂತಹುದಾಗಿದೆ.
ವೇ!!ಶ್ರೀ!! ಕುಮಾರಸ್ವಾಮಿ, ಶ್ರೀ ಜ್ಯೋತಿಷ್ಯ ಸಲಹಾ ಕೇಂದ್ರ, ಬೆಂಗಳೂರು