Palmistry ‘M’ Sign: ಅಂಗೈಯಲ್ಲಿ ‘M’ ಗುರುತಿದ್ದರೆ ಅದೃಷ್ಟವೇ? ಹಸ್ತಸಾಮುದ್ರಿಕ ಶಾಸ್ತ್ರ ಹೇಳುವುದೇನು?
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿರುವ 'M' ಗುರುತು ಅಪಾರ ಸಂಪತ್ತು ಮತ್ತು ಅದೃಷ್ಟವನ್ನು ಸೂಚಿಸುತ್ತದೆ. ಜೀವನ, ಬುದ್ಧಿ, ಮತ್ತು ಹೃದಯ ರೇಖೆಗಳ ಜೋಡಣೆಯಿಂದ ಮೂಡುವ ಈ ಗುರುತು ಇರುವವರು ನಾಯಕತ್ವ ಗುಣ, ತೀಕ್ಷ್ಣ ಬುದ್ಧಿಶಕ್ತಿ, ಮತ್ತು ದೂರದೃಷ್ಟಿ ಹೊಂದಿರುತ್ತಾರೆ. ಮಹಿಳೆಯರ ಎಡಗೈ, ಪುರುಷರ ಬಲಗೈಯಲ್ಲಿ ಈ ಗುರುತು ಇದ್ದರೆ ಚಿಕ್ಕ ವಯಸ್ಸಿನಲ್ಲೇ ಕೋಟ್ಯಾಧಿಪತಿಯಾಗುವ ಯೋಗವಿರುತ್ತದೆ.

ನಮ್ಮ ಕೈಯಲ್ಲಿರುವ ರೇಖೆಗಳು ನಮ್ಮ ಅದೃಷ್ಠ ಮತ್ತು ಭವಿಷ್ಯವನ್ನು ನಿರ್ಧರಿಸುತ್ತವೆ ಎಂಬ ನಂಬಿಕೆ ಭಾರತೀಯ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದಲೂ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಮುಖ ಅಂಗಗಳಲ್ಲಿ ಒಂದಾದ ಹಸ್ತಸಾಮುದ್ರಿಕ ಶಾಸ್ತ್ರಕ್ಕೆ (Palmistry) ಅದರದ್ದೇ ಆದ ವಿಶೇಷ ಮಹತ್ವವಿದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಅಂಗೈಯಲ್ಲಿ ಒಂದು ನಿರ್ದಿಷ್ಟ ಗುರುತಿದ್ದರೆ ಅವರು ಜೀವನದಲ್ಲಿ ಅಪಾರ ಸಂಪತ್ತನ್ನು ಗಳಿಸಿ ಕೋಟ್ಯಧಿಪತಿಯಾಗುತ್ತಾರೆ ಎಂದು ಹೇಳಲಾಗುತ್ತದೆ. ಆ ರೇಖೆ ಅಥವಾ ಗುರುತು ಯಾವುದು ಗೊತ್ತೇ? ಅದೇ ಇಂಗ್ಲಿಷ್‌ನ ‘M’ (ಎಮ್) ಅಕ್ಷರ.
ನಿಮ್ಮ ಕೈಯಲ್ಲೂ ಈ ‘M’ ಗುರುತಿದೆಯೇ ಎಂದು ಒಮ್ಮೆ ಪರಿಶೀಲಿಸಿಕೊಳ್ಳಿ ಮತ್ತು ಅದರ ಹಿಂದಿನ ಆಸಕ್ತಿದಾಯಕ ರಹಸ್ಯಗಳನ್ನು ತಿಳಿಯಿರಿ.
ಅಂಗೈಯಲ್ಲಿ ‘M’ ಅಕ್ಷರ ಮೂಡುವುದು ಹೇಗೆ?
ಸಾಮಾನ್ಯವಾಗಿ ಎಲ್ಲರ ಕೈಯಲ್ಲೂ ಈ ಗುರುತು ಇರುವುದಿಲ್ಲ. ಅಂಗೈಯಲ್ಲಿರುವ ಮೂರು ಮುಖ್ಯ ರೇಖೆಗಳಾದ ಜೀವನ ರೇಖೆ (Life Line), ಮಸ್ತಿಷ್ಕ ರೇಖೆ ಅಥವಾ ಬುದ್ಧಿ ರೇಖೆ (Head Line), ಮತ್ತು ಹೃದಯ ರೇಖೆ (Heart Line) ಒಟ್ಟಾಗಿ ಸೇರಿದಾಗ ಈ ಮೂರು ರೇಖೆಗಳ ಜೋಡಣೆಯಿಂದ ‘M’ ಎಂಬ ಅಕ್ಷರ ಮೂಡುತ್ತದೆ. ಈ ಮೂರು ರೇಖೆಗಳು ಒಂದಕ್ಕೊಂದು ಬೆಸೆದುಕೊಂಡು ಸ್ಪಷ್ಟವಾದ ‘M’ ಆಕಾರವನ್ನು ಹೊಂದಿದ್ದರೆ, ಅಂತಹ ವ್ಯಕ್ತಿಗಳು ಅತ್ಯಂತ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ.
ಮಹಿಳೆಯರು ಮತ್ತು ಪುರುಷರಿಗೆ ಯಾವ ಕೈಯಲ್ಲಿರಬೇಕು?
ಹಸ್ತಸಾಮುದ್ರಿಕ ಶಾಸ್ತ್ರದ ನಿಯಮಗಳ ಪ್ರಕಾರ, ಈ ‘M’ ಅಕ್ಷರವು ಜನ್ಮಜಾತವಾಗಿ ಮಹಿಳೆಯರ ಎಡಗೈಯಲ್ಲಿ ಮತ್ತು ಪುರುಷರ ಬಲಗೈಯಲ್ಲಿ ಇದ್ದರೆ ಅದು ಅದ್ಭುತವಾದ ಲಾಭ ಹಾಗೂ ಯಶಸ್ಸನ್ನು ತಂದುಕೊಡುತ್ತದೆ.
ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!
‘M’ ರೇಖೆ ಇರುವವರ ಗುಣಲಕ್ಷಣಗಳು ಮತ್ತು ಭವಿಷ್ಯ:
ಅಪಾರ ಸಂಪತ್ತು ಮತ್ತು ಯಶಸ್ಸು: ಅಂಗೈಯಲ್ಲಿ ‘M’ ಗುರುತಿರುವವರು ಜೀವನದಲ್ಲಿ ಹಣದ ಕೊರತೆಯನ್ನು ಎದುರಿಸುವುದಿಲ್ಲ. ಇವರು ತುಂಬಾ ಚಿಕ್ಕ ವಯಸ್ಸಿನಲ್ಲೇ ಕಠಿಣ ಪರಿಶ್ರಮ ಮತ್ತು ಬುದ್ಧಿವಂತಿಕೆಯಿಂದ ಕೋಟ್ಯಧಿಪತಿಯಾಗುವ ಯೋಗವನ್ನು ಹೊಂದಿರುತ್ತಾರೆ.
- ನಾಯಕತ್ವದ ಗುಣ (Leadership Qualities): ಇಂತಹ ವ್ಯಕ್ತಿಗಳಲ್ಲಿ ನಾಯಕತ್ವದ ಗುಣಗಳು ಜನ್ಮಜಾತವಾಗಿರುತ್ತವೆ. ಯಾವುದೇ ರಂಗದಲ್ಲೂ ಇವರು ಮುಂಚೂಣಿಯಲ್ಲಿ ನಿಂತು ಮುನ್ನಡೆಸುವ ಸಾಮರ್ಥ್ಯ ಹೊಂದಿರುತ್ತಾರೆ.
- ರಾಜಕೀಯ ಮತ್ತು ವ್ಯಾಪಾರದಲ್ಲಿ ಯಶಸ್ಸು: ರಾಜಕೀಯ ರಂಗದಲ್ಲಿ ಇವರು ದೊಡ್ಡ ಮಟ್ಟದ ಯಶಸ್ಸು ಮತ್ತು ಜನಪ್ರಿಯತೆ ಗಳಿಸುತ್ತಾರೆ. ವ್ಯಾಪಾರ-ವ್ಯವಹಾರ ಕ್ಷೇತ್ರದಲ್ಲೂ ಇವರಿಗೆ ಸಾಟಿ ಯಾರು ಇರುವುದಿಲ್ಲ.
- ಬುದ್ಧಿವಂತಿಕೆ ಮತ್ತು ದೂರದೃಷ್ಟಿ: ಇವರು ತೀಕ್ಷ್ಣ ಬುದ್ಧಿಶಕ್ತಿ ಹಾಗೂ ಉತ್ತಮ ಶಿಕ್ಷಣವನ್ನು ಪಡೆಯುತ್ತಾರೆ. ಯಾವುದೇ ವಿಷಯದಲ್ಲೂ ಇವರಿಗೆ ದೂರದೃಷ್ಟಿ ಹೆಚ್ಚಾಗಿರುತ್ತದೆ. ವಿಶೇಷವಾಗಿ ಹಣಕಾಸಿನ ವಿಷಯದಲ್ಲಿ ತುಂಬಾ ಜಾಗರೂಕರಾಗಿರುತ್ತಾರೆ ಮತ್ತು ಹಣ ಖರ್ಚು ಮಾಡುವ ಮುನ್ನ ಒಂದಕ್ಕೆ ಎರಡರಷ್ಟು ಯೋಚಿಸುತ್ತಾರೆ.
- ಅದೃಷ್ಟದ ಒಲವು: ಇವರ ಅದೃಷ್ಟ ಎಷ್ಟು ಬಲವಾಗಿರುತ್ತದೆ ಎಂದರೆ, ಇವರು ಎಷ್ಟೇ ಬಡತನದ ಪರಿಸ್ಥಿತಿಯಲ್ಲಿ ಹುಟ್ಟಿದ್ದರೂ ಸಹ, ಕಾಲಕ್ರಮೇಣ ಸ್ವಪ್ರಯತ್ನ ಹಾಗೂ ಲಕ್‌ನಿಂದಾಗಿ ಶ್ರೀಮಂತರಾಗುತ್ತಾರೆ. ಆರ್ಥಿಕವಾಗಿ ಇವರ ಬೆಳವಣಿಗೆ ಅದ್ಭುತವಾಗಿರುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





