Personality Test: ‘S’ ಅಕ್ಷರದಿಂದ ಹೆಸರು ಪ್ರಾರಂಭವಾಗುವವರ ಸ್ವಭಾವ ಹೇಗಿರುತ್ತೆ? ಇವರ ಯಶಸ್ಸಿನ ರಹಸ್ಯವೇನು?
ಜ್ಯೋತಿಷ್ಯದ ಪ್ರಕಾರ, 'S' ಅಕ್ಷರದಿಂದ ಹೆಸರನ್ನು ಪ್ರಾರಂಭಿಸುವವರು ವಿಶಿಷ್ಟ ವ್ಯಕ್ತಿತ್ವ ಹೊಂದಿರುತ್ತಾರೆ. ಇವರು ರಹಸ್ಯ ಕಾಪಾಡುವಲ್ಲಿ, ಪರಿಶ್ರಮದಲ್ಲಿ ಮತ್ತು ಬಹುಮುಖ ಪ್ರತಿಭೆಯಲ್ಲಿ ಎತ್ತಿದ ಕೈ. ಸ್ವಭಾವತಃ ಬುದ್ಧಿವಂತರು, ಪರೋಪಕಾರಿಗಳು ಹಾಗೂ ಜೀವನದಲ್ಲಿ ಸ್ಪಷ್ಟ ಗುರಿ ಹೊಂದಿರುವ ಇವರು ರಾಜಕೀಯ ಮತ್ತು ವ್ಯವಹಾರದಲ್ಲಿ ಉನ್ನತ ಸ್ಥಾನಕ್ಕೇರುತ್ತಾರೆ. ಆದರೆ ಕೆಲವೊಮ್ಮೆ ಹಠಮಾರಿತನ ಎದುರಾಗಬಹುದು, ಇದನ್ನು ನಿಯಂತ್ರಿಸುವುದು ಅವರ ಏಳಿಗೆಗೆ ಸಹಕಾರಿ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೆಸರಿನ ಮೊದಲ ಅಕ್ಷರವು ವ್ಯಕ್ತಿಯ ವ್ಯಕ್ತಿತ್ವ ಮತ್ತು ಭವಿಷ್ಯದ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಅದರಲ್ಲೂ ‘S’ ಅಕ್ಷರದಿಂದ ಹೆಸರು ಪ್ರಾರಂಭವಾಗುವವರು ಬಹಳ ವಿಶೇಷವಾದ ಸ್ವಭಾವವನ್ನು ಹೊಂದಿರುತ್ತಾರೆ ಮತ್ತು ಇತರರಿಗಿಂತ ಭಿನ್ನವಾಗಿ ಗುರುತಿಸಿಕೊಳ್ಳುತ್ತಾರೆ.
ರಹಸ್ಯ ಕಾಪಾಡುವುದರಲ್ಲಿ ಇವರು ಎತ್ತಿದ ಕೈ:
‘S’ ಅಕ್ಷರದ ವ್ಯಕ್ತಿಗಳು ತಮ್ಮ ಜೀವನದ ಅನೇಕ ವಿಷಯಗಳನ್ನು ಗೌಪ್ಯವಾಗಿಡಲು ಇಷ್ಟಪಡುತ್ತಾರೆ. ವಿಶೇಷವಾಗಿ ಕುಟುಂಬದ ವಿಷಯಗಳು ಮತ್ತು ತಮ್ಮ ಯಶಸ್ಸಿನ ಹಿಂದಿನ ಗುಟ್ಟುಗಳನ್ನು ಅವರು ಯಾರೊಂದಿಗೂ ಅಷ್ಟು ಸುಲಭವಾಗಿ ಹಂಚಿಕೊಳ್ಳುವುದಿಲ್ಲ. ಈ ರಹಸ್ಯ ಪ್ರವೃತ್ತಿಯೇ ಅವರಿಗೆ ಒಂದು ರೀತಿಯ ವಿಶೇಷ ವ್ಯಕ್ತಿತ್ವವನ್ನು ನೀಡುತ್ತದೆ.
ಪರಿಶ್ರಮ ಮತ್ತು ಸ್ಪಷ್ಟತೆ:
ಇವರಲ್ಲಿ ಕೆಲಸದ ಬಗ್ಗೆ ಅಪಾರವಾದ ನಿಷ್ಠೆ ಇರುತ್ತದೆ. ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ಅದನ್ನು ಅತ್ಯಂತ ಪರಿಶ್ರಮದಿಂದ ಮಾಡುತ್ತಾರೆ. ಜೀವನದ ಬಗ್ಗೆ ಇವರಿಗೆ ಸ್ಪಷ್ಟವಾದ ಗುರಿ ಮತ್ತು ಜ್ಞಾನವಿರುತ್ತದೆ. ಎಂತಹ ಏರಿಳಿತಗಳು ಎದುರಾದರೂ ಎದೆಗುಂದದೆ, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾ ಇವರು ಮುನ್ನುಗ್ಗುತ್ತಾರೆ. ಒಮ್ಮೆ ಪ್ರಾರಂಭಿಸಿದ ಕೆಲಸವನ್ನು ಅರ್ಧಕ್ಕೆ ಬಿಡುವುದು ಇವರ ಸ್ವಭಾವವಲ್ಲ.
ಬಹುಮುಖ ಪ್ರತಿಭೆ ಮತ್ತು ಬುದ್ಧಿವಂತಿಕೆ:
- ಮಲ್ಟಿ-ಟಾಸ್ಕಿಂಗ್: ಇವರು ಕೇವಲ ಒಂದು ಕೆಲಸಕ್ಕೆ ಸೀಮಿತವಾಗದೆ, ಏಕಕಾಲದಲ್ಲಿ ನಾಲ್ಕೈದು ಕೆಲಸಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿರುತ್ತಾರೆ.
- ವ್ಯಕ್ತಿತ್ವ: ಇತರರನ್ನು ಸುಲಭವಾಗಿ ಮೆಚ್ಚಿಸುವ ಮತ್ತು ಪ್ರಭಾವಿಸುವ ಕಲೆ ಇವರಿಗೆ ಸಿದ್ಧಿಸಿರುತ್ತದೆ.
- ವೃತ್ತಿಜೀವನ: ತಮ್ಮ ಬುದ್ಧಿವಂತಿಕೆಯಿಂದಾಗಿ ಇವರು ರಾಜಕೀಯ ಮತ್ತು ವ್ಯವಹಾರ ರಂಗದಲ್ಲಿ ಉನ್ನತ ಸ್ಥಾನಕ್ಕೇರುತ್ತಾರೆ.
ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ
ಪರೋಪಕಾರಿ ಗುಣ:
‘S’ ಅಕ್ಷರದವರು ಸಹಾಯ ಹಸ್ತ ಚಾಚುವುದರಲ್ಲಿ ಯಾವಾಗಲೂ ಮೊದಲಿಗರು. ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಇತರರಿಗೆ ಸಹಾಯ ಮಾಡಲು ಇವರು ಹಿಂದೆಮುಂದೆ ನೋಡುವುದಿಲ್ಲ. ಕಷ್ಟಗಳನ್ನು ಮೆಟ್ಟಿ ನಿಂತು ಸಾಧನೆ ಮಾಡುವ ಛಲ ಇವರಲ್ಲಿ ಮನೆಮಾಡಿರುತ್ತದೆ.
ಎಚ್ಚರಿಕೆ ವಹಿಸಬೇಕಾದ ಅಂಶ:
ಇವರು ಎಲ್ಲಾ ಪರಿಸ್ಥಿತಿಗಳಿಗೂ ಚೆನ್ನಾಗಿ ಹೊಂದಿಕೊಂಡರೂ, ಇವರಲ್ಲಿ ಒಂದು ಸಣ್ಣ ಮೈನಸ್ ಪಾಯಿಂಟ್ ಎಂದರೆ ಹಠಮಾರಿತನ. ಕೆಲವೊಮ್ಮೆ ಈ ಹಠವೇ ಇವರನ್ನು ಸಂಕಷ್ಟಕ್ಕೆ ಸಿಲುಕಿಸಬಹುದು. ಆದ್ದರಿಂದ, ಅತಿಯಾದ ಹಠದ ವಿಷಯದಲ್ಲಿ ಇವರು ಸ್ವಲ್ಪ ಜಾಗರೂಕರಾಗಿರುವುದು ತಮ್ಮ ಏಳಿಗೆಗೆ ಒಳ್ಳೆಯದು.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




