ಶ್ರಾವಣ ಹುಣ್ಣಿಮೆ ಯಾಕೆ ವಿಶೇಷ? ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳಿ

ಜ್ಯೋತಿಷ್ಯದ ಪ್ರಕಾರ ಶ್ರವಣಾ ನಕ್ಷತ್ರ ದಿನ ಪೂರ್ಣ ಚಂದ್ರನಾದರೆ ಅದು ಶ್ರಾವಣ ಮಾಸ. ಇದು ವರ್ಷ ಋತುವಿನಲ್ಲಿ ಬರುವ ಮೊದಲ ಮಾಸ, ಮೊದಲ ಹುಣ್ಣಿಮೆ ಕೂಡ. ಧಾರ್ಮಿಕ ಹಿನ್ನೆಲೆ ಇರುವ ದಿನ ಇದು.

ಶ್ರಾವಣ ಹುಣ್ಣಿಮೆ ಯಾಕೆ ವಿಶೇಷ? ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳಿ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷತಾ ವರ್ಕಾಡಿ

Updated on:Aug 14, 2024 | 3:05 PM

ಹಿಂದೆ ವೇದ ಶಾಸ್ತ್ರಗಳ ಪರಂಪರೆ ಭಾರತದಲ್ಲಿ ಇತ್ತು. ಋಗ್ವೇದ, ಯಜುರ್ವೇದ, ಸಾಮವೇದ ಅಥರ್ವವೇದ ಎನ್ನುವ ನಾಲ್ಕು ವೇದಗಳು, ಆಯುರ್ವೇದ, ಧನುರ್ವೇದ, ಗಾಂಧರ್ವವೇದ, ಸ್ಥಾಪತ್ಯವೇದ ಎನ್ನುವ ಉಪವೇದಗಳು, ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರಕ್ತ, ಜ್ಯೋತಿಷ್ಯ, ಕಲ್ಪ, ಎನ್ನುವ ವೇದಾಂಗಗಳು ಹೀಗೆ ಅಧ್ಯಯನಗಳು ಇದ್ದವು. ಈಗಲೂ ಅಲ್ಲಲ್ಲಿ ಮಾತ್ರ ಇವೆ. ಆಧುನಿಕ ಅಧ್ಯಯನವು ಅವುಗಳನ್ನು ಮರೆಮಾಚಿದೆ.

ಪ್ರತಿಯೊಬ್ಬರೂ ವೇದ, ವೇದಾಂಗಗಳನ್ನು ಅಧ್ಯಯನ ಮಾಡಬೇಕಿತ್ತು. ಒಟ್ಟಿಗೆ ಎರಡನ್ನು ಅಧ್ಯಯನ ಮಾಡಿದಾಗ ಒಂದಕ್ಕೊಂದು ಪೂರಕವಾಗಿ ಇರುತ್ತವೆ. ಇದಕ್ಕೆ ಸಮಯ ಮಿತಿಯೂ ಬೇಕು. ಹಾಗಾಗಿ ಆರು ತಿಂಗಳು ವೇದಾಧ್ಯಯನ ಮತ್ತೆ ಆರು ತಿಂಗಳು ವೇದಾಂಗಗಳ, ಶಾಸ್ತ್ರಗಳ ಅಧ್ಯಯನ ಎಂಬುದಾಗಿ ಮಾಡಿದರು. ಶ್ರಾವಣ ಹುಣ್ಣುಮೆ ಶಾಸ್ತ್ರಗಳ ಅಧ್ಯಯನವನ್ನು ಆರಂಭಿಸುವ ಕಾಲ.

ಶ್ರಾವಣ ಮಾಸದ ಹುಣ್ಣಿಮೆಯೇ ಯಾಕೆ ವಿಶೇಷ ಎನ್ನುವ ಪ್ರಶ್ನೆಯೂ ಬರಬಹುದು. ಮೇಘಛನ್ನೇಹ್ನಿ ದುರ್ದಿನಮ್‌ ಎಂಬ ಮಾತಿದೆ.‌ ಸೂರ್ಯೋದಯದ ಸಮಯದಲ್ಲಿ ಸೂರ್ಯನು ಮೋಡಗಳಿಂದ ತುಂಬಿದ್ದರೆ ಅದನ್ನು ದುರ್ದಿನ‌ ಎಂದು ಕರೆಯಬೇಕು ಎನ್ನುವುದು ಪ್ರಾಚೀನರ ಅಭಿಮತ. ಸೂರ್ಯನೇ ಎಲ್ಲರಿಗೂ ಚೈತನ್ಯವನ್ನು ಕೊಡುವ ಕಾರಣ ಅವನ‌ ದರ್ಶನವಿಲ್ಲದೇ ಯಾವುದೂ ಶುಭವಾಗದು. ವೇದವೆಂದರೆ ಮಂಗಲಕರವಾದ ಶಬ್ದರಾಶಿ. ಅಂತಹ ಪವಿತ್ರವೂ ಶುಭಕರವೂ ಆದ ವೇದವನ್ನು ದುರ್ದಿನ ಅಂದರೆ ಸೂರ್ಯನು ಕಾಣಿಸದೇ ಇರುವ ದಿನ ಪಠಿಸುವುದು ಉಚಿತವಲ್ಲ. ವರ್ಷ ಋತುವಿನಿಂದ ಆರಂಭಿಸಿ ಕೆಲವು ತಿಂಗಳು ಪ್ರಾತಃಕಾಲದ ಸೂರ್ಯನ ಅದರ್ಶನವಾಗುವ ಕಾರಣ ಅಂದು ವೇದ ಪಾಠಗಳು ನಿಷೇಧ ಎಂದೂ ಆ ದಿನಗಳಲ್ಲಿ ವೇದವನ್ನು ಅರ್ಥಮಾಡಿಕೊಳ್ಳುವ ಶಾಸ್ತ್ರಗಳ ಅಧ್ಯಯನವನ್ನು ಮಾಡಬೇಕೆಂದೂ ಹೇಳಿದ್ದಾರೆ.

ಇಂದಿನ ಭಾಷೆಯಲ್ಲಿ ಅದನ್ನು ಹೇಳುವುದಾದರೆ, ಆರು ತಿಂಗಳು ಥಿಯರಿ, ಆರು ತಿಂಗಳು ಪ್ರಾಕ್ಟಿಲ್ ಎನ್ನುವಂತೆ ಇತ್ತು. ಈ ದಿನ ಶುದ್ಧರಾಗಿ, ದೇವ, ಋಷಿ, ಪಿತೃ ತರ್ಪಣವನ್ನು ಬಿಟ್ಟು ಔಪಾಸಾನ ಹೋಮವನ್ನು ಮಾಡಿ ಉತ್ಸೃಷ್ಟಾ ವೈ ವೇದಾಃ ಎಂದು ಹೇಳಿ ವೇದಾಧ್ಯಯನ್ನು ನಿಲ್ಲಿಸಬೇಕು. ಹೊಸ ಉಪವೀತವನ್ನು ಧಾರಣೆ ಮಾಡಬೇಕು.

ಇದು ಉಪಾಕರ್ಮ ಅಥವಾ ಆಡು ಭಾಷೆಯಲ್ಲಿ ನೂಗಿಲು ಹುಣ್ಣಿಮೆ. ಆದರೆ ಇಂದು ಇಂತಹ ಕ್ರಮಗಳನ್ನು ಅನುಸರಿಸುವ ಪರಿಸ್ಥಿತಿ, ಅಧ್ಯಯನ ಕ್ರಮಗಳು ಇಲ್ಲವಾಗಿದೆ. ಎಲ್ಲವನ್ನೂ ಮರೆತಾಗಿದೆ. ತುದಿ, ಬುಡಗಳಿಲ್ಲದೆ ಆಚರಣೆಗಳು ಉಳಿದುಕೊಂಡಿದೆ. ಭಾರತೀಯ ವಿದ್ಯೆಗಳನ್ನು ಉಳಿಸಿಕೊಳ್ಳಲು ಹಿಂದಿನ ಕ್ರಮವೂ ವಿಶೇಷವಾಗಿತ್ತು. ಇಂತಹ ಪರಂಪರೆ ಮತ್ತೆ ಎಲ್ಲಿಯಾದರೂ ಒಂದು ಕಡೆ ಹುಟ್ಟಲಿ. ಭಾರತವು ಭಾರತವಾಗಿಯೇ ಬರಲಿ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:15 pm, Wed, 14 August 24

ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?
Video: ಆಟೋ ಚಾಲಕನನ್ನು ಥಳಿಸಿದ ಮಹಿಳೆ
Video: ಆಟೋ ಚಾಲಕನನ್ನು ಥಳಿಸಿದ ಮಹಿಳೆ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಸರಿಗಮ ವಿಜಿ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಇನ್ನಿತರೆ ಮಾಹಿತಿ
ಸರಿಗಮ ವಿಜಿ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಇನ್ನಿತರೆ ಮಾಹಿತಿ