AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Raksha Bandhan 2024: ರಕ್ಷಾ ಬಂಧನದ ಇತಿಹಾಸ ಹಾಗೂ ರಾಖಿಯ ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ರಾಜಸೂಯ ಯಾಗದ ಸಂದರ್ಭದಲ್ಲಿ ದುಷ್ಟನಾದ ಶಿಶುಪಾಲನ ಶಿರಚ್ಛೇದವನ್ನು ಮಾಡುವಾಗ ಶ್ರೀಕೃಷ್ಣನ ಬೆರಳಿಗೆ ಗಾಯವಾಗುತ್ತದೆ. ಆಗ ದ್ರೌಪದಿಯು ತನ್ನ ಸೀರೆಯ ತುಂಡನ್ನು ಹರಿದು ಕೃಷ್ಣನ ಬೆರಳಿಗೆ ಕಟ್ಟಿ ರಕ್ತಸ್ರಾವವನ್ನು ತಡೆದಿದ್ದಳು. ಕೃಷ್ಣನು ಅದಕ್ಕೆ ಪ್ರತಿಯಾಗಿ, ದ್ರೌಪದಿಯನ್ನು ಯಾವುದೇ ತೊಂದರೆಯಿಂದ ರಕ್ಷಿಸುವುದಾಗಿ ಭರವಸೆ ನೀಡಿದ್ದನು.

Raksha Bandhan 2024: ರಕ್ಷಾ ಬಂಧನದ ಇತಿಹಾಸ ಹಾಗೂ ರಾಖಿಯ ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 14, 2024 | 2:52 PM

Share

ಶ್ರಾವಣ ಮಾಸ ಹುಣ್ಣಿಮೆ ವಿಶೇಷಗಳಲ್ಲಿ‌ ರಕ್ಷಾಬಂಧನವೂ ಒಂದು ಹೌದು. ಇದನ್ನು ರಾಖಿ ಹಬ್ಬ ಎಂದೂ ಕರೆಯುತ್ತಾರೆ. ರಕ್ಷಾ ಪದವೇ ರಾಖಿಯಾಗಿದೆ. ಇದು ಐತಿಹಾಸಿಕ ಕಾರ್ಯ ಮಾತ್ರವಲ್ಲ. ‌ಇದಕ್ಕೆ ಪೌರಾಣಿಕ ಹಿನ್ನೆಲೆ‌ ಇದೆ. ಅಲ್ಲಿಂದ ಆರಂಭಗೊಂಡಿದ್ದು ಈ ರಕ್ಷಾ ಬಂಧನ.

ಭಾತೃತ್ವವನ್ನು ಬೇಸೆಯುವ ಹಬ್ಬ :

ಇದು ಪ್ರಸಿದ್ದಿ ಪಡೆದಿರುವುದು ಭಾತೃತ್ವದ ದ್ಯೋತಕವಾಗಿ. ಯಾಕೆ ಬಂದಿತು ಮತ್ತು ಹೇಗೆ ಬಂದಿತು ಎನ್ನುವುದಕ್ಕೆ ಪುರಾಣ ಕಥೆಗಳು ಹೇಳುತ್ತವೆ. ಒಮ್ಮೆ ಬಲಿಷ್ಠನಾಗಿದ್ದ ರಾಕ್ಷಸರ ರಾಜನಾದ ಬಲಿಗೆ ಭಗವಾನ್ ವಿಷ್ಣುವು ವರವನ್ನು ನೀಡಿದ. ಅದು ಅವನನ್ನು ಅಜೇಯನನ್ನಾಗಿ ಮಾಡಿತು. ಯಾರೂ ಸೋಲಿಸದಂತ ಮಹತ್ತ್ವವುಳ್ಳ ವರವಾಯಿತು. ವಿಷ್ಣು ವರವನ್ನು ಕೊಟ್ಟರು ಭಯವಾಗಿದ್ದು ಲಕ್ಷ್ಮೀದೇವಿಗೆ. ವಿಷ್ಣುವಿನ ಪತ್ನಿಯಾದ ಲಕ್ಷ್ಮಿ ದೇವಿಯು ತನ್ನ ಪತಿಯನ್ನು ಮತ್ತು ಬ್ರಹ್ಮಾಂಡವನ್ನು ಬಲಿಯಿಂದ ರಕ್ಷಿಸಲು ಉಪಾಯ ಮಾಡಿದಳು.

ಲಕ್ಷ್ಮಿ ದೇವಿಯು ಬಲಿಯ ಮಣಿಕಟ್ಟಿನ ಸುತ್ತಲೂ ಪವಿತ್ರವಾದ ಸೂತ್ರವನ್ನು ಕಟ್ಟಿದಳು. ಅಷ್ಟು ಮಾತ್ರವಲ್ಲ ಅವನನ್ನು ತನ್ನ ಸಹೋದರ ಎಂದು ಘೋಷಿಸಿದಳು. ಇದರಿಂದ ಬಲಿಯ ಸಹೋದರಿಯಾಗಿ ಲಕ್ಷ್ಮೀ ಹಾಗೂ ವಿಷ್ಣುವು ಸಹೋದರಿಯ ಪತಿಯಾಗಿಯೂ ಇರುವ ಕಾರಣ ಅವರನ್ನು ರಕ್ಷಿಸುವ ಹೊಣೆಗಾರಿಕೆ ಬಲಿಗೆ ಬಂದಿತು.

ಇನ್ನೊಂದು ಕಥೆ ಮಹಾಭಾರತದಲ್ಲಿ ಬರುವ ಪ್ರಸಂಗ:

ರಾಜಸೂಯ ಯಾಗದ ಸಂದರ್ಭದಲ್ಲಿ ದುಷ್ಟನಾದ ಶಿಶುಪಾಲನ ಶಿರಚ್ಛೇದವನ್ನು ಮಾಡುವಾಗ ಶ್ರೀಕೃಷ್ಣನ ಬೆರಳಿಗೆ ಗಾಯವಾಗುತ್ತದೆ. ಆಗ ಪಾಂಡವರ ಪತ್ನಿ ದ್ರೌಪದಿಯು ತನ್ನ ಸೀರೆಯ ತುಂಡನ್ನು ಹರಿದು ಕೃಷ್ಣನ ಬೆರಳಿಗೆ ಕಟ್ಟಿದಳು. ರಕ್ತಸ್ರಾವವನ್ನು ತಡೆದಳು. ಕೃಷ್ಣನು ಅದಕ್ಕೆ ಪ್ರತಿಯಾಗಿ, ದ್ರೌಪದಿಯನ್ನು ಯಾವುದೇ ತೊಂದರೆಯಿಂದ ರಕ್ಷಿಸುವುದಾಗಿ ಭರವಸೆ ನೀಡಿದನು.

ಇನ್ನೊಂದು ಐತಿಹಾಸಿಕ ಕಥೆ:

ಒಂದು ಬಾರಿ ಮೇವಾರದ ರಾಣಿ ಕರ್ಣಾವತಿಗೆ ಗುಜರಾತಿನ ಸುಲ್ತಾನನಾದ ಬಹದ್ದೂರ್ ಷಾನಿಂದ ಬೆದರಿಕೆ ಬರುತ್ತದೆ. ಆದರೆ ಆಕೆಯ ಸಹಾಯಕರಾಗಿ ಯಾರೂ ಇರದಿದ್ದಾಗ, ಅವಳು ಶತ್ರುಗಳಿಂದ ರಕ್ಷೆಯನ್ನು ಬಯಸಿ ರಾಜನಾಗಿದ್ದ ಹುಮಾಯೂನ್ ಗೆ ರಕ್ಷೆಯನ್ನು ಕಳುಹಿಸಿದಳು. ದೂರದ ದೇಶದಲ್ಲಿದ್ದ ಹುಮಾಯೂನ್ ನು ಆ ರಕ್ಷೆಗೆ ಬೆಲೆ ಕೊಟ್ಟು ಮೇವಾರಕ್ಕೆ ಬಂದು ಸುಲ್ತಾನ್ ಬಹದ್ದೂರ್ ಷಾ ನನ್ನು ಸೋಲಿಸಿ, ಕರ್ಣಾವತಿಯ ಪರವಾಗಿ ನಿಂತನು. ಇದು ಕೇವಲ ರಕ್ಷೆಯ ಕಾರಣದಿಂದಾಗಿ ಆಗಿದ್ದು.

ಇದನ್ನೂ ಓದಿ: ಶ್ರಾವಣ ಹುಣ್ಣಿಮೆ ಯಾಕೆ ವಿಶೇಷ? ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳಿ

ಹೀಗೆ ಭಾರತೀಯರು ಭ್ರಾತೃತ್ವವನ್ನು ಬೆಳೆಸಲು, ತೊಂದರೆಯಿಂದ ತಮ್ಮನ್ನು ಕಾಪಾಡಿಕೊಳ್ಳಲೂ ಸ್ತ್ರೀಯರು ಈ ಹಬ್ಬವನ್ನು ಆಚರಿಸುತ್ತಾರೆ. ಪುರುಷರೂ ಸಹೋದರಿಯನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಹೊತ್ತುಕೊಂಡು, ಆಕೆಗೆ ಮತ್ತು ಆಕೆಯ ಪರಿವಾರಕ್ಕೆ ರಕ್ಷಣೆಯಾಗಿರುವುದು ಹಬ್ಬದ ಉದ್ದೇಶ. ರಕ್ಷಾ ಬಂಧನವನ್ನು ಮಾಡುವಾಗ ಹೀಗೆ ಹೇಳಬೇಕು. ಈ ಹಬ್ಬವು ಮುಖ್ಯವಾಗಿ ಬಲಿ ಹಾಗೂ ಲಕ್ಷ್ಮೀ ದೇವಿಯ ನಡುವಿನ ಭಾತೃತ್ವವನ್ನು ಇಟ್ಟುಕೊಂಡಿದೆ.

ಯೇನ ಬದ್ಧೋ ಬಲೀ ರಾಜಾ ದಾನವೇಂದ್ರೋ ಮಹಾಬಲಃ | ತೇನ ತ್ವಾಮನುಬಧ್ನಾಮಿ ರಕ್ಷೇ ಮಾ ಚಲ‌ ಮಾ ಚಲ ||

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ