ಬ್ರಹ್ಮಚಾರಿ ಆಂಜನೇಯ ಸ್ವಾಮಿ ಮತ್ತು ಆತನ ಮಗ ಒಟ್ಟಿಗೇ ಇರುವ ದೇವಸ್ಥಾನ ಎಲ್ಲಿದೆ? ಇಲ್ಲಿ ದರ್ಶನ ಪಡೆದರೆ ತಂದೆ-ಮಗನ ಜಗಳ ಕೊನೆಗೊಳ್ಳುತ್ತೆ!

Hanuman Mandir in Dandi : ಆಂಜನೇಯ ತನ್ನ ಸುಡುವ ಬಾಲವನ್ನು ಶಾಂತಗೊಳಿಸಲು ಸಮುದ್ರದ ನೀರಿನಲ್ಲಿ ಅದ್ದಿದನು. ಆ ಸಮಯದಲ್ಲಿ ಅವನ ಬೆವರಿನ ಹನಿ ನೀರಿನಲ್ಲಿ ಬಿದ್ದಿತು. ಅದನ್ನು ಮೀನು ಕುಡಿಯಿತು. ಆ ಬೆವರಿನ ಹನಿಯಿಂದ ಮೀನು ಗರ್ಭಿಣಿಯಾಗಿ ಮಕರಧ್ವಜ ಎಂಬ ಮಗನಿಗೆ ಜನ್ಮ ನೀಡಿತು. ಮಕರಧ್ವಜ ಕೂಡ ಆಂಜನೇಯ ಸ್ವಾಮಿ ಹಾಗೆಯೇ ತೆಜಸ್ವೀ ಮತ್ತು ಅದ್ಭುತ ಪರಾಕ್ರಮಿ.

ಬ್ರಹ್ಮಚಾರಿ ಆಂಜನೇಯ ಸ್ವಾಮಿ ಮತ್ತು ಆತನ ಮಗ ಒಟ್ಟಿಗೇ ಇರುವ ದೇವಸ್ಥಾನ ಎಲ್ಲಿದೆ? ಇಲ್ಲಿ ದರ್ಶನ ಪಡೆದರೆ ತಂದೆ-ಮಗನ ಜಗಳ ಕೊನೆಗೊಳ್ಳುತ್ತೆ!
ಬ್ರಹ್ಮಚಾರಿ ಆಂಜನೇಯ ಮತ್ತು ಆತನ ಮಗ ಒಟ್ಟಿಗೇ ಇರುವ ದೇವಸ್ಥಾನ ಎಲ್ಲಿದೆ?
Follow us
|

Updated on:Aug 21, 2024 | 5:19 AM

Hanuman Mandir in Dandi: ಪ್ರಪಂಚದಾದ್ಯಂತ ಆಂಜನೇಯ ಸ್ವಾಮಿಯ ಅನೇಕ ಅದ್ಭುತ ದೇವಾಲಯಗಳಿವೆ. ಎಲ್ಲಾ ದೇವಾಲಯಗಳು ಸಹ ತಮ್ಮದೇ ಆದ ವಿಶೇಷ ಲಕ್ಷಣಗಳನ್ನು ಹೊಂದಿವೆ. ಕೆಲವು ದೇವಾಲಯಗಳಲ್ಲಿ, ಬಜರಂಗಬಲಿಯ ವಿಗ್ರಹವು ಮಲಗಿದ ರೂಪದಲ್ಲಿ ಮತ್ತು ಕೆಲವು ಸ್ಥಳಗಳಲ್ಲಿ ಕುಳಿತಿರುವ ಅಥವಾ ತುಂಬಾ ಎತ್ತರದ ವಿಗ್ರಹಗಳಿವೆ. ಈ ಎಲ್ಲಾ ದೇವಾಲಯಗಳಲ್ಲಿ ಆಂಜನೇಯ ಸ್ವಾಮಿ ಮೂರ್ತಿಯನ್ನು ಮಾತ್ರ ಪೂಜಿಸಲಾಗುತ್ತದೆ. ಆದರೆ ಭಾರತದಲ್ಲಿ ಅದೊಂದು ಹನುಮಾನ್ ದೇವಾಲಯ ಇದೆ, ಅಲ್ಲಿ ಆಂಜನೇಯ ತನ್ನ ಮಗ ಮಕರಧ್ವಜನೊಂದಿಗೆ ಇದ್ದಾನೆ.

Hanuman Mandir in Dandi – ಈ ದೇವಾಲಯ ಎಲ್ಲಿದೆ? ಗುಜರಾತ್‌ನ ದ್ವಾರಕಾದಿಂದ ಸುಮಾರು ನಾಲ್ಕು ಮೈಲಿ ದೂರದಲ್ಲಿ ಬೆಟ್ ದ್ವಾರಕಾ ಹನುಮಾನ್ ದಂಡಿ ದೇವಸ್ಥಾನ (Bet Dwarka or Beyt Dwarka) ಇದೆ. ದೇವಾಲಯದ ಇತಿಹಾಸವು ಸುಮಾರು 500 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ಆಂಜನೇಯ ಸ್ವಾಮಿ ತನ್ನ ಮಗನನ್ನು ಮೊದಲ ಬಾರಿಗೆ ಭೇಟಿಯಾದ ಸ್ಥಳವೂ ಇದೇ ಎಂಬ ಮಾತಿದೆ. ಈ ಸ್ಥಳದಲ್ಲಿ ಆಂಜನೇಯ ಸ್ವಾಮಿ ವಿಗ್ರಹದ ಜೊತೆಗೆ ಆತನ ಮಗ ಮಕರಧ್ವಜ ವಿಗ್ರಹವನ್ನು ಸಹ ಸ್ಥಾಪಿಸಲಾಗಿದೆ.

Hanuman Mandir in Dandi – ಬ್ರಹ್ಮಚಾರಿ ಹನುಮಂತನಿಗೆ ಮಕರಧ್ವಜ ಹೇಗೆ ಸಿಕ್ಕಿದ? ಆಂಜನೇಯ ಸ್ವಾಮಿ ಅಖಂಡ ಬಾಲ ಬ್ರಹ್ಮಚಾರಿ. ಆದರೆ ಆತನಿಗೆ ಒಬ್ಬ ಮಗನೂ ಇದ್ದ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ರಾಮ ಮತ್ತು ಲಕ್ಷ್ಮಣರನ್ನು ಪಾತಾಳ ಲೋಕದಿಂದ ರಕ್ಷಿಸಲು ಬಂದಾಗಲಷ್ಟೇ ಬಜರಂಗಬಲಿಗೆ ತನ್ನ ಮಗನ ಬಗ್ಗೆ ತಿಳಿದುಬರುತ್ತದೆ. ಇಲ್ಲಿ ಅವನು ತನ್ನ ಮಗನೊಂದಿಗೆ ಘೋರ ಯುದ್ಧವನ್ನು ಮಾಡಿದನು. ತನ್ನ ಮಗನನ್ನು ಸೋಲಿಸುವ ಮೂಲಕ, ರಾಮನನ್ನು ಪಾತಾಳ ಲೋಕದಿಂದ ಮುಕ್ತಗೊಳಿಸಿದನು. ಆಗಷ್ಟೇ ಅಲ್ಲಿ ತನಗೆ ಒಬ್ಬ ಮಗನೂ ಇದ್ದಾನೆ ಎಂದು ತಿಳಿದುಬಂದಿದ್ದು. ಅವನ ಮಗನ ಹೆಸರೇ ಮಕರಧ್ವಜ.

Also Read:  God Krishna and Draupadi – ದ್ರೌಪದಿಯ ವಸ್ತ್ರಾಪಹರಣ ಪ್ರಸಂಗ ಮತ್ತು ರಕ್ಷಾ ಬಂಧನದ ಕತೆ: ಸೋದರನಿಗೆ ರಾಖಿ ಕಟ್ಟುವಾಗ ಈ ಮಂತ್ರ ಪಠಿಸಿ

Hanuman Mandir in Dandi – ಮಕರ ಧ್ವಜನ ಪ್ರತಿಮೆ ಬೆಳೆಯುತ್ತದೆ ಈ ದೇವಾಲಯದಲ್ಲಿ ಆಂಜನೇಯ ಸ್ವಾಮಿಯ ವಿಗ್ರಹದೊಂದಿಗೆ ಮಕರಧ್ವಜ ವಿಗ್ರಹವನ್ನು ಸಹ ಸ್ಥಾಪಿಸಲಾಗಿದೆ. ದೇವಾಲಯವನ್ನು ಪ್ರವೇಶಿಸಿದ ತಕ್ಷಣ ಮಕರಧ್ವಜದ ವಿಗ್ರಹವನ್ನು ಆಂಜನೇಯ ಸ್ವಾಮಿಯ ವಿಗ್ರಹದೊಂದಿಗೆ ಪ್ರತಿಷ್ಠಾಪಿಸಲಾಗಿದೆ. ಈ ಎರಡೂ ಮೂರ್ತಿಗಳು ಅತ್ಯಂತ ಪ್ರೀತಿ ವಾತ್ಸಲ್ಯ, ಸಂತೋಷದ ಭಂಗಿಯಲ್ಲಿವೆ. ಈ ಮೂರ್ತಿಗಳ ವಿಶೇಷವೆಂದರೆ ಅವರ ಕೈಯಲ್ಲಿ ಯಾವುದೇ ಆಯುಧಗಳಿಲ್ಲ. ಇದಲ್ಲದೆ ಇಲ್ಲಿ ಮಕರಧ್ವಜ ವಿಗ್ರಹವನ್ನು ಪ್ರತಿಷ್ಠಾಪಿಸಿದಾಗ ಅದು ಅವರ ತಂದೆ ಬಜರಂಗಬಲಿಯ ವಿಗ್ರಹಕ್ಕಿಂತ ಚಿಕ್ಕದಾಗಿತ್ತು ಎಂದು ಜನರು ಹೇಳುತ್ತಾರೆ. ಆದರೆ ಈಗ ಆ ಪ್ರತಿಮೆ ಬಜರಂಗಬಲಿಗೆ ಸಮನಾಗಿ ಬೆಳೆದಿದೆ.

Hanuman Mandir in Dandi – ತಂದೆ ಮತ್ತು ಮಗನ ನಡುವಿನ ಜಗಳ ಕೊನೆಗೊಳ್ಳುತ್ತದೆ ಈ ದೇವಾಲಯದ ಬಗ್ಗೆ ಒಂದು ಜನಪ್ರಿಯ ನಂಬಿಕೆಯಿದೆ. ಯಾವುದೇ ತಂದೆ ಮತ್ತು ಮಗನ ನಡುವೆ ಜಗಳ, ವಿವಾದ ಅಥವಾ ಭಿನ್ನಾಭಿಪ್ರಾಯ ಏರ್ಪಟ್ಟಿದ್ದರೆ ಅಂತಹ ಅಪ್ಪ-ಮಗ ಈ ದೇವಾಲಯಕ್ಕೆ ಭೇಟಿ ನೀಡಿದರೆ ಅವರ ನಡುವಿನ ಭಿನ್ನಾಭಿಪ್ರಾಯಗಳು ಕೊನೆಗೊಂಡು ಶಾಂತಿ ನೆಲೆಸುತ್ತದೆ. ಆಂಜನೇಯ ಸ್ವಾಮಿಯು ಅಂತಹ ತಂದೆ ಮತ್ತು ಮಗನ ನಡುವೆ ವಾತ್ಸಲ್ಯ ಮತ್ತು ಸಾಮರಸ್ಯವನ್ನು ಸೃಷ್ಟಿಸುತ್ತಾನೆ.

Also Read: Oh my Dog ಸ್ವಾಮಿನಿಷ್ಠೆಯ ನಾಯಿಗಳಿಗಾಗಿ ಶತ ಶತಮಾನಗಳ ಹಿಂದೆಯೇ ದೇಗುಲಗಳನ್ನು ಕಟ್ಟಲಾಗಿದೆ! ರೋಚಕ ಕತೆಗಳು ಇಲ್ಲಿವೆ

 Makaradhwaja (or Magardhwaja) – ಮಕರಧ್ವಜ ಹುಟ್ಟಿದ್ದು ಹೇಗೆ?

ಧಾರ್ಮಿಕ ಗ್ರಂಥಗಳ ಪ್ರಕಾರ, ಹನುಮಂತನು ಸೀತೆಯನ್ನು ಹುಡುಕುತ್ತಾ ಲಂಕಾವನ್ನು ತಲುಪಿದಾಗ ಮತ್ತು ಮೇಘನಾದನಿಂದ (ಇಂದ್ರಜಿತ್ – ಲಂಕಾ ರಾಜಕುಮಾರ ಮತ್ತು ರಾವಣನ ಮಗ) ಬಂಧಿಯಾದಾಗ, ಅವನನ್ನು ರಾವಣನ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಆಗ ರಾವಣನು ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಿದನು. ಹನುಮಂತನು ಬೆಂಕಿಯಿಂದ ಉರಿಯುತ್ತಿರುವ ತನ್ನ ಬಾಲದಿಂದ ಇಡೀ ಲಂಕೆಯನ್ನು ಸುಟ್ಟುಹಾಕಿದನು. ಹನುಮಂತನಿಗೆ ತನ್ನ ಸುಡುವ ಬಾಲದಿಂದ ಬಾಧೆಯಾಗುತ್ತಿತ್ತು. ಅದನ್ನು ಶಾಂತಗೊಳಿಸಲು ಹನುಮಂತ ತನ್ನ ಬಾಲವನ್ನು ಸಮುದ್ರದ ನೀರಿನಲ್ಲಿ ಅದ್ದಿದನು.

ಆ ಸಮಯದಲ್ಲಿ ಅವನ ಬೆವರಿನ ಒಂದು ಹನಿ ನೀರಿನಲ್ಲಿ ಬಿದ್ದಿತು. ಅದನ್ನು ಮೀನು ಕುಡಿಯಿತು. ಆ ಬೆವರಿನ ಹನಿಯಿಂದ ಮೀನು ಗರ್ಭಿಣಿಯಾಗಿ ಮಕರಧ್ವಜ ಎಂಬ ಮಗನಿಗೆ ಜನ್ಮ ನೀಡಿತು. ಮಕರಧ್ವಜ ಕೂಡ ಆಂಜನೇಯ ಸ್ವಾಮಿ ಹಾಗೆಯೇ ತೆಜಸ್ವೀ ಮತ್ತು ಅದ್ಭುತ ಪರಾಕ್ರಮಿ. ಮಕರಧ್ವಜ ಅರ್ಧ ವಾನರನಂತೆ ಮತ್ತರ್ಧ ಮಕರ (ಮೊಸಳೆ)ಯಂತೆ ಕಂಡುಬರುತ್ತಾನೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

Published On - 5:04 am, Wed, 21 August 24