ಮನೆಯಲ್ಲಿ ಉಪ್ಪು ಚೆಲ್ಲುವುದು ಅಶುಭವೇ? ವಾಸ್ತು ನಂಬಿಕೆ ಮತ್ತು ವಾಸ್ತವದ ಸ್ಪಷ್ಟ ವಿಶ್ಲೇಷಣೆ!

ಭಾರತೀಯ ಸಾಂಪ್ರದಾಯಿಕ ಅಡುಗೆಮನೆಯಲ್ಲಿ ಉಪ್ಪು ಕೇವಲ ರುಚಿಗಷ್ಟೇ ಅಲ್ಲ, ಸಾಂಸ್ಕೃತಿಕ ಮಹತ್ವವನ್ನೂ ಹೊಂದಿದೆ. ಉಪ್ಪು ನೆಲಕ್ಕೆ ಚೆಲ್ಲಿದರೆ ಅಶುಭವೆಂಬುದು ಜನಪ್ರಿಯ ನಂಬಿಕೆ. ಇದು ವಾಸ್ತು, ಜಾನಪದ ಹಾಗೂ ಹಿಂದಿನ ಉಪ್ಪಿನ ಮೌಲ್ಯದಿಂದ ಬಂದಿದೆ. ಆದರೆ, ಇದಕ್ಕೆ ವೈಜ್ಞಾನಿಕ ಆಧಾರವಿಲ್ಲ. ಕೇವಲ ಮಾನವ ನಿರ್ಮಿತ ನಂಬಿಕೆಯಾಗಿದ್ದು, ನೈರ್ಮಲ್ಯಕ್ಕೆ ಆದ್ಯತೆ ನೀಡುವುದು ಮುಖ್ಯ.

ಮನೆಯಲ್ಲಿ ಉಪ್ಪು ಚೆಲ್ಲುವುದು ಅಶುಭವೇ? ವಾಸ್ತು ನಂಬಿಕೆ ಮತ್ತು ವಾಸ್ತವದ ಸ್ಪಷ್ಟ ವಿಶ್ಲೇಷಣೆ!
ಉಪ್ಪು

Updated on: Sep 19, 2026 | 7:50 AM

ಭಾರತೀಯ ಸಾಂಪ್ರದಾಯಿಕ ಅಡುಗೆಮನೆಯಲ್ಲಿ ಉಪ್ಪು ಕೇವಲ ರುಚಿಗೆ ಮಾತ್ರವಲ್ಲದೆ ಸಾಂಸ್ಕೃತಿಕವಾಗಿಯೂ ವಿಶೇಷ ಪ್ರಾಮುಖ್ಯತೆ ಪಡೆದಿದೆ. ಕೈಯಿಂದ ಉಪ್ಪು ನೆಲಕ್ಕೆ ಬಿದ್ದರೆ ಅದನ್ನು ಅಶುಭ ಚಿಹ್ನೆ ಎಂದು ಪರಿಗಣಿಸುವ ಜನಪ್ರಿಯ ನಂಬಿಕೆ ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿದೆ. ವಾಸ್ತು ಹಾಗೂ ಜಾನಪದ ನಂಬಿಕೆಗಳ ಪ್ರಕಾರ, ಉಪ್ಪು ಇದ್ದಕ್ಕಿದ್ದಂತೆ ಅಥವಾ ಪದೇ ಪದೇ ನೆಲಕ್ಕೆ ಬಿದ್ದರೆ ಮನೆಯಲ್ಲಿ ಮನಸ್ತಾಪಗಳು, ಕೌಟುಂಬಿಕ ಭಿನ್ನಾಭಿಪ್ರಾಯಗಳು ಹಾಗೂ ಮಾನಸಿಕ ಒತ್ತಡ ಹೆಚ್ಚಾಗುತ್ತದೆ ಎಂದು ಭಾವಿಸಲಾಗುತ್ತದೆ.

ವಾಸ್ತು ಶಾಸ್ತ್ರದಲ್ಲಿ ಉಪ್ಪಿಗೆ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಗುಣವಿದೆ ಎಂದು ನಂಬಲಾಗಿದೆ. ಹೀಗಾಗಿ ಅನೇಕರು ಗಾಜಿನ ಪಾತ್ರೆಯಲ್ಲಿ ಉಪ್ಪನ್ನಿಡುವುದು ಅಥವಾ ಮನೆ ಒರೆಸುವ ನೀರಿಗೆ ಉಪ್ಪು ಹಾಕಿ ಸ್ವಚ್ಛಗೊಳಿಸುವ ಅಭ್ಯಾಸವಿಟ್ಟುಕೊಂಡಿದ್ದಾರೆ. ಪ್ರಾಚೀನ ಕಾಲದಲ್ಲಿ ಉಪ್ಪು ಇಂದಿನಂತೆ ಸುಲಭವಾಗಿ ಮತ್ತು ಅಗ್ಗವಾಗಿ ಸಿಗುತ್ತಿರಲಿಲ್ಲ. ಅದಕ್ಕೊಂದು ನಿರ್ದಿಷ್ಟ ಮೌಲ್ಯವಿತ್ತು. ಹೀಗಾಗಿ ಉಪ್ಪನ್ನು ವ್ಯರ್ಥ ಮಾಡಬಾರದು ಎಂಬ ಉದ್ದೇಶದಿಂದ ಹಿರಿಯರು ಜಾಗರೂಕತೆಗಾಗಿ ಜಾಗೃತಿ ಮೂಡಿಸುತ್ತಿದ್ದರು. ಕಾಲಕ್ರಮೇಣ ಈ ಅಭ್ಯಾಸವೇ ಅಶುಭ ನಂಬಿಕೆಯಾಗಿ ಮಾರ್ಪಟ್ಟಿತು.

ಇದನ್ನೂ ಓದಿ: ಜಪಾನ್‌ನಲ್ಲಿದೆ ‘ಡಿವೋರ್ಸ್ ಟೆಂಪಲ್’: ಗಂಡನ ಕಿರುಕುಳಕ್ಕೆ ಒಳಗಾದ ಮಹಿಳೆಯರಿಗೆ ಆಸರೆಯಾಗುವ 700 ವರ್ಷ ಹಳೆಯ ಕ್ಷೇತ್ರ!

ವೈಜ್ಞಾನಿಕ ದೃಷ್ಟಿಕೋನ:

ಉಪ್ಪು ಚೆಲ್ಲುವುದಕ್ಕೂ ಮನೆಯಲ್ಲಿ ಅಶಾಂತಿ ಉಂಟಾಗುವುದಕ್ಕೂ ಯಾವುದೇ ವೈಜ್ಞಾನಿಕ ಆಧಾರ ಅಥವಾ ಸಾಕ್ಷ್ಯಾಧಾರಗಳಿಲ್ಲ. ಇದು ಕೇವಲ ಮಾನವ ನಿರ್ಮಿತ ಸಾಂಸ್ಕೃತಿಕ ಹಾಗೂ ಜಾನಪದ ನಂಬಿಕೆಯಷ್ಟೇ. ತವಕ ಅಥವಾ ಭಯಕ್ಕೆ ಒಳಗಾಗುವ ಬದಲು, ಚೆಲ್ಲಿದ ಉಪ್ಪನ್ನು ತಕ್ಷಣವೇ ಸ್ವಚ್ಛಗೊಳಿಸಿ ಮನೆಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದೇ ಸರಿಯಾದ ಕ್ರಮವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us