ವಾಸ್ತು ಸಲಹೆ: ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿದ್ದೀರಾ? ಈ ವಾಸ್ತು ಟಿಪ್ಸ್ ಪಾಲಿಸಿದರೆ ದಾರಿದ್ರ್ಯ ತೊಲಗುವುದು ಖಚಿತ

Vastu Tips : ಕೆಲವರು ವಾಸ್ತು ಶಾಸ್ತ್ರವನ್ನು ಬಲವಾಗಿ ನಂಬುತ್ತಾರೆ. ಇನ್ನು ಕೆಲವರು ಸ್ವಲ್ಪವೂ ಕಾಳಜಿ ವಹಿಸುವುದಿಲ್ಲ. ದೇವರು ಮತ್ತು ವಾಸ್ತುವನ್ನು ನಂಬುವುದು ಅವರವರ ಆಯ್ಕೆಯನ್ನು ಅವಲಂಬಿಸಿರುತ್ತದೆ. ಆದರೆ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಬಹಳಷ್ಟು ಮಂದಿ ಏನೇ ಕೆಲಸ ಆರಭಂಸಿಬೇಕೆಂದರೆ ವಾಸ್ತುವನ್ನು ನೋಡುತ್ತಾರೆ.

ವಾಸ್ತು ಸಲಹೆ: ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿದ್ದೀರಾ? ಈ ವಾಸ್ತು ಟಿಪ್ಸ್ ಪಾಲಿಸಿದರೆ ದಾರಿದ್ರ್ಯ ತೊಲಗುವುದು ಖಚಿತ
ಮನೆಯ ಡ್ರಾಯಿಂಗ್ ರೂಮಿನಲ್ಲಿ ಗಣೇಶನ ಫೋಟೋ ಇಡಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Apr 06, 2023 | 2:32 PM

Vastu Tips: ಕೆಲವರು ವಾಸ್ತು ಶಾಸ್ತ್ರವನ್ನು ಬಲವಾಗಿ ನಂಬುತ್ತಾರೆ. ಇನ್ನು ಕೆಲವರು ಸ್ವಲ್ಪವೂ ಕಾಳಜಿ ವಹಿಸುವುದಿಲ್ಲ. ದೇವರು ಮತ್ತು ವಾಸ್ತುವನ್ನು ನಂಬುವುದು ಅವರವರ ಆಯ್ಕೆಯನ್ನು ಅವಲಂಬಿಸಿರುತ್ತದೆ. ಆದರೆ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಬಹಳಷ್ಟು ಮಂದಿ ಏನೇ ಕೆಲಸ ಆರಭಂಸಿಬೇಕೆಂದರೆ ವಾಸ್ತುವನ್ನು ನೋಡುತ್ತಾರೆ. ಅಂತಹವರಿಗಾಗಿ ಈ ಲೇಖನ. ನೀವು ಶ್ರೀಮಂತರಾಗಬೇಕಾದರೆ, ನೀವು ಕಷ್ಟಪಟ್ಟು ಕೆಲಸ ಮಾಡಬೇಕು. ಆದರೆ ಕೆಲವರಿಗೆ ಎಷ್ಟೇ ಪ್ರಯತ್ನ ಪಟ್ಟರೂ ಯಾವುದೂ ಹೊಂದಾಣಿಕೆ ಆಗುವುದಿಲ್ಲ, ಯಾವುದೂ ಕೈಗೂಡುವುದಿಲ್ಲ. ಅಂತಹ ಜನರು ಕೆಲವು ಪರಿಹಾರಗಳನ್ನು ಕಂಡುಕೊಂಡು (Home Vastu), ಬಹಳ ಸುಲಭವಾಗಿ ಫಲಪ್ರದವಾಗಬಹುದು. ನಿಮ್ಮನ್ನು ಶ್ರೀಮಂತರನ್ನಾಗಿ (Rich) ಮಾಡುವ ಕೆಲವು ವಾಸ್ತು ಸಲಹೆಗಳನ್ನು ಇಲ್ಲಿ ತಿಳಿಯಿರಿ (spiritual). 

ವಾಸ್ತು ಸಲಹೆಗಳು ಬಡತನ ನಿವಾರಣೆಗಾಗಿ ಇವೆ, ವ್ಯಾಪಾರ ವೃದ್ಧಿಗಾಗಿ ಮನೆಯಲ್ಲಿ ಪಾರಿಜಾತ ಮರ ನೆಡಿ:

ಪಾರಿಜಾತ ಸಸ್ಯವು ಲಕ್ಷ್ಮಿ ದೇವಿಯ ನೆಚ್ಚಿನ ಸಸ್ಯವೆಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಈ ಸಸ್ಯ ಎಲ್ಲಿ ನೆಲೆಸಿರುತ್ತದೋ ಅಲ್ಲಿ ಲಕ್ಷ್ಮಿಯೂ ನೆಲೆಸುತ್ತಾಳೆ ಎಂಬ ನಂಬಿಕೆಯಿದೆ. ಅದಕ್ಕಾಗಿಯೇ ನೀವು ನಿಮ್ಮ ಮನೆಯ ತೋಟದಲ್ಲಿ ಪಾರಿಜಾತವನ್ನು ನೆಡಬೇಕು. ಎಲ್ಲಾ ರೀತಿಯ ವಾಸ್ತು ದೋಷಗಳು ಸಹ ಇದರಿಂದ ದೂರವಾಗುತ್ತವೆ. ಪೂಜೆಯಲ್ಲಿ ಹರಸಿಂಗಾರ್ ( ಅಂದರೆ ಪಾರಿಜಾತ ಗಿಡ)​ ಬೇರನ್ನು ಇಟ್ಟುಕೊಂಡರೆ ನಿಮಗೆ ಲಾಭ ವೃದ್ಧಿಸುತ್ತದೆ.

Also Read: 

parijatha Health Benefits: ಪಾರಿಜಾತ ಗಿಡದಲ್ಲಿ ಅಡಗಿದೆ ಔಷಧೀಯ ಗುಣ; ಹೂವು, ಎಲೆ, ತೊಗಟೆಯ ಪ್ರಯೋಜನಗಳ ಬಗ್ಗೆ ತಿಳಿಯಿರಿ

ಮನೆಯ ಡ್ರಾಯಿಂಗ್ ರೂಮಿನಲ್ಲಿ ಗಣೇಶನ ಫೋಟೋ ಇಡಿ:

ಶಾಸ್ತ್ರಗಳಲ್ಲಿ ಗಣೇಶನನ್ನು ವಿಘ್ನ ನಿವಾರಕ ಎಂದು ಕರೆಯುತ್ತಾರೆ. ಆತನ ಕೃಪೆಯಿಂದಾಗಿ ಮನುಷ್ಯ ಮಾಡುವ ಎಲ್ಲಾ ಕಾರ್ಯಗಳು ಶ್ರಮವಿಲ್ಲದೆ ಸುಲಭವಾಗಿ ನೆರವೇರುತ್ತವೆ. ಮನೆಯ ಡ್ರಾಯಿಂಗ್ ರೂಮಿನಲ್ಲಿ ವಿನಾಯಕನ ಫೋಟೋ ಹಾಕಿದರೂ ಅದೆಲ್ಲ ವಾಸ್ತು ದೋಷಗಳು ಮತ್ತು ಗ್ರಹ ದೋಷಗಳನ್ನು ನಿವಾರಿಸುತ್ತದೆ. ಆದರೆ ಡ್ರಾಯಿಂಗ್ ರೂಮಿನಲ್ಲಿ ಇಟ್ಟಿರುವ ಫೋಟೋಗೆ ಪೂಜೆ ಮಾಡಬಾರದು. ಅಲ್ಲದೆ, ಅದನ್ನು ಕೋಣೆಯ ಪೂರ್ವ ಅಥವಾ ಉತ್ತರ ಗೋಡೆಯ ಮೇಲೆ ಇಡಬೇಕು.

ಬಿಳಿ ಅಂಜೂರದ ಗಿಡವನ್ನು ಮನೆಗೆ ತನ್ನಿ:

ಧಾರ್ಮಿಕ ನಂಬಿಕೆಗಳ ಪ್ರಕಾರ, ಗಣೇಶನು ಬಿಳಿ ಅಂಜೂರದ ಮರದಲ್ಲಿ ನೆಲೆಸಿದ್ದಾನೆ. ವಾಸ್ತು ಶಾಸ್ತ್ರದ ಪ್ರಕಾರ ಇದನ್ನು ಮನೆಯಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದಕ್ಕಾಗಿ ಶನಿವಾರದಂದು ಶುಭ ಮುಹೂರ್ತಕ್ಕೆ ಹೋಗಿ ಗಿಡವನ್ನು ತನ್ನಿ. ಇದಾದ ನಂತರ ಮರುದಿನ ಅಂದರೆ ಭಾನುವಾರದಂದು ಶುಭ ಮುಹೂರ್ತದಲ್ಲಿ ತಂದು ನಿಮ್ಮ ಮನೆಯಲ್ಲಿ ಇಡಿ. ಈ ಸಸ್ಯವು ತುಳಸಿಯಂತೆ ಪವಿತ್ರವಾಗಿದೆ ಎಂಬುದನ್ನು ನೆನಪಿಡಿ. ಇದನ್ನು ಕೊಳಕು ಸ್ಥಳದಲ್ಲಿ ನೆಡಬಾರದು ಎಂಬುದನ್ನು ಪಾಲಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ