AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ತಂದೆ ತಾಯಿ ಮಾಡಿದ ಪಾಪ ಪುಣ್ಯ ಮಕ್ಕಳಿಗೂ ಅನ್ವಯಿಸುತ್ತಾ?

ತಂದೆ ತಾಯಿಗಳ ಪುಣ್ಯ ಅಥವಾ ಪಾಪದ ಫಲಗಳು ಮಕ್ಕಳಿಗೆ ಅನ್ವಯಿಸುತ್ತವೆಯೇ ಎಂಬ ಪ್ರಶ್ನೆಗೆ ಡಾ. ಬಸವರಾಜ್ ಗುರೂಜಿಯವರು ಉತ್ತರ ನೀಡಿದ್ದಾರೆ. ಆಸ್ತಿ, ಸಾಲದಂತೆ ಕರ್ಮಫಲಗಳೂ ಮಕ್ಕಳಿಗೆ ಅನ್ವಯಿಸುತ್ತವೆ. ಹಿಂದಿನ ಜನ್ಮದ ಕರ್ಮದಿಂದ ನಾವು ಕೆಲವು ಪೋಷಕರಿಗೆ ಮಕ್ಕಳಾಗಿ ಹುಟ್ಟುತ್ತೇವೆ. ಧರ್ಮದ ಮಾರ್ಗದಲ್ಲಿ ನಡೆಯುವುದು ಮುಂದಿನ ಪೀಳಿಗೆಗೆ ಶುಭ ತರುತ್ತದೆ.

Daily Devotional: ತಂದೆ ತಾಯಿ ಮಾಡಿದ ಪಾಪ ಪುಣ್ಯ ಮಕ್ಕಳಿಗೂ ಅನ್ವಯಿಸುತ್ತಾ?
ಪಾಪ ಪುಣ್ಯ
ಅಕ್ಷತಾ ವರ್ಕಾಡಿ
|

Updated on: Feb 11, 2026 | 7:30 AM

Share

ತಂದೆ ತಾಯಿಗಳು ಮಾಡಿದಂತಹ ಪುಣ್ಯ ಅಥವಾ ಪಾಪಗಳು ಮಕ್ಕಳಿಗೆ ಅನ್ವಯಿಸುತ್ತವೆಯೇ ಎಂಬ ಮಹತ್ವದ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಉತ್ತರ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ, ಹಣ, ಬಂಗಾರ ಮುಂತಾದ ಭೌತಿಕ ಸಂಪತ್ತನ್ನು ವರ್ಗಾಯಿಸುವಂತೆಯೇ, ಸಾಲಗಳು ಸಹ ಮಕ್ಕಳಿಗೆ ವರ್ಗಾವಣೆಯಾಗುತ್ತವೆ. ಇದು ಶಾಸ್ತ್ರವಿಧಿತ ಸಂಗತಿಯಾಗಿದೆ. ಇದೇ ರೀತಿ, ಪಾಪ-ಪುಣ್ಯಗಳು ಮತ್ತು ಕರ್ಮಫಲಗಳೂ ಸಹ ಪೀಳಿಗೆಯಿಂದ ಪೀಳಿಗೆಗೆ ಹರಿಯುತ್ತವೆ. ನಾವು ಸಾಮಾನ್ಯವಾಗಿ ಮಕ್ಕಳನ್ನು ಹುಟ್ಟಿಸಿ ಬಿಟ್ಟಿದ್ದಾರೆ, ಏನೂ ಮಾಡಿಲ್ಲ ಎಂದು ಪೋಷಕರನ್ನು ದೂಷಿಸುತ್ತೇವೆ. ಆದರೆ ಇದು ತಪ್ಪು ತಿಳುವಳಿಕೆ. ಹಿಂದಿನ ಜನ್ಮದ ಕರ್ಮಫಲಗಳಿಂದಲೇ ನಾವು ನಿರ್ದಿಷ್ಟ ತಂದೆ ತಾಯಿಗಳ ಹೊಟ್ಟೆಯಲ್ಲಿ ಹುಟ್ಟುತ್ತೇವೆ. ಹಿಂದಿನ ಜನ್ಮದ ಪಾಪಕರ್ಮಗಳಿಗೆ ಅನುಸಾರವಾಗಿಯೇ ಭಗವಂತನು ನಮಗೆ ಈ ತಂದೆ ತಾಯಿಗಳ ಮುಖಾಂತರ ಜನ್ಮ ನೀಡುತ್ತಾನೆ ಎಂದು ಹೇಳಲಾಗುತ್ತದೆ.

ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಶುಭವಾಗಲಿ ಎಂದು ಬಯಸುತ್ತಾರೆ. ಆದರೆ ಅವರು ನಡೆಸಿದ ಜೀವನ, ಗಳಿಸಿದ ಆಸ್ತಿಪಾಸ್ತಿಗಳು, ಭೂಮಿ, ಅಧಿಕಾರ ಅಥವಾ ಗಳಿಕೆಗಳು ಯಾವ ರೀತಿಯಲ್ಲಿ ನಡೆದಿವೆ ಎಂಬುದು ಮುಖ್ಯವಾಗುತ್ತದೆ. ಧರ್ಮದ ಮಾರ್ಗದಲ್ಲಿ, ಪ್ರಾಮಾಣಿಕತೆಯಿಂದ ಗಳಿಸಿದ ಆಸ್ತಿ ಮಕ್ಕಳಿಗೆ ಸುಲಭವಾಗಿ ದೊರೆತು, ಅವರಿಗೆ ಇನ್ನಷ್ಟು ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ. ಆದರೆ, ಅಧರ್ಮದ ಮಾರ್ಗದಲ್ಲಿ, ಅಸಹಾಯಕರ ಮೇಲೆ ದೌರ್ಜನ್ಯ ಎಸಗಿ, ಮೋಸ ಮಾಡಿ, ಅಧಿಕ ಬಡ್ಡಿ ವಸೂಲಿ ಮಾಡಿ, ಅಥವಾ ಅಶಕ್ತರ ಮೇಲೆ ದೌರ್ಜನ್ಯದಿಂದ ಗಳಿಸಿದ ಆಸ್ತಿ ಮಕ್ಕಳಿಗೆ ಕಷ್ಟಗಳನ್ನು ತರಬಹುದು. ಇಂತಹ ಸಂದರ್ಭಗಳಲ್ಲಿ ಮಕ್ಕಳು ಆಸ್ತಿಯ ದಾಖಲೆಗಳನ್ನು ಸರಿಪಡಿಸಲು ಹೆಣಗಾಡುವುದು, ಆರ್ಥಿಕ ತೊಂದರೆಗಳನ್ನು ಎದುರಿಸುವುದು, ಅಥವಾ ಯಾವುದೇ ವಿಧದಲ್ಲೂ ಆ ಆಸ್ತಿಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗದಿರುವುದನ್ನು ನಾವು ನೋಡುತ್ತೇವೆ. ಇವೆಲ್ಲವೂ ಪೋಷಕರು ಮಾಡಿದ ಪಾಪ ಅಥವಾ ಪುಣ್ಯದ ಫಲಗಳೇ ಆಗಿರುತ್ತವೆ.

ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!

ಪೋಷಕರು ಮಾಡಿದ ಪುಣ್ಯದಿಂದಾಗಿ ಮಕ್ಕಳು ತಾವು ಪಡೆದ ಆಸ್ತಿಯನ್ನು ಸ್ವಂತಿಕೆಯಿಂದ ಇನ್ನಷ್ಟು ಚೆನ್ನಾಗಿ ಅಭಿವೃದ್ಧಿಪಡಿಸಿಕೊಳ್ಳಬಹುದು. ಆದರೆ, ಪಾಪದ ಫಲಗಳಾದಾಗ ಆರ್ಥಿಕವಾಗಿ ತೊಂದರೆಗಳು, ಅಭಿವೃದ್ಧಿಯ ನಿಲುಗಡೆ, ಮತ್ತು ಜೀವನದಲ್ಲಿ ಅಸಂತೃಪ್ತಿ ಉಂಟಾಗಬಹುದು. ಅಧರ್ಮದಿಂದ ನಡ್ಕೊಂಡಿರುವಿಕೆ, ಅಧಿಕ ಬಡ್ಡಿ ಪಡ್ಕೊಳ್ಳೋದು, ಅಶಕ್ತರ ಮೇಲೆ ದೌರ್ಜನ್ಯ ನಡೆಸುವುದು ಇವೆಲ್ಲವೂ ನಮ್ಮ ಕುಟುಂಬವರ್ಗದ ಮುಂದಿನ ಪೀಳಿಗೆಗೆ ಖಂಡಿತಾ ಪರಿಣಾಮ ಬೀರುತ್ತವೆ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ನೀವೆಷ್ಟೇ ಆಸ್ತಿ, ಭೂಮಿ, ಐಶ್ವರ್ಯ ಮಾಡಿದರೂ, ಅದು ನಿಮ್ಮ ನಂತರದ ಮೂರನೆಯ ಪೀಳಿಗೆಗೆ ಉಳಿಯುವುದು ಬಹಳ ವಿರಳ. ರಾಜ ಮಹಾರಾಜರ ವಿಚಾರದಲ್ಲೂ ಸಹ ಎಲ್ಲರೂ ಸಂತೃಪ್ತಿಯಾಗಿದ್ದಾರೆ ಎಂದು ಹೇಳುವುದು ಕಷ್ಟ.

ಹಾಗಾಗಿ, ತಂದೆ ತಾಯಿಗಳ ಪುಣ್ಯ, ಪಾಪ, ಕರ್ಮ ಎಲ್ಲವೂ ಮುಂದಕ್ಕೆ ವರ್ಗಾವಣೆಯಾಗುವುದರಿಂದ, ನಾವು ಜಾಗರೂಕರಾಗಿ ಧರ್ಮದ ಮಾರ್ಗದಲ್ಲಿ ನಡೆದುಕೊಂಡರೆ ಅದು ನಮ್ಮ ಮತ್ತು ಮುಂದಿನ ಪೀಳಿಗೆಯ ಒಳಿತಿಗೆ ಕಾರಣವಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಟಿವಿ9 ಎಕ್ಸ್​​ಪೋದಲ್ಲಿ ಹಯಗ್ರೀವ ಯಶಸ್ಸಿನ ಬಗ್ಗೆ ಧನ್ವೀರ್​-ಸಂಜನಾ ಮಾತು
ಟಿವಿ9 ಎಕ್ಸ್​​ಪೋದಲ್ಲಿ ಹಯಗ್ರೀವ ಯಶಸ್ಸಿನ ಬಗ್ಗೆ ಧನ್ವೀರ್​-ಸಂಜನಾ ಮಾತು
ಶ್ರೀಕೃಷ್ಣನಿಗೆ 16 ಸಾವಿರ ಪತ್ನಿಯರಿದ್ದಿದ್ದು ನಿಜವೇ? ಅಸಲಿಯತ್ತು ಇಲ್ಲಿದೆ
ಶ್ರೀಕೃಷ್ಣನಿಗೆ 16 ಸಾವಿರ ಪತ್ನಿಯರಿದ್ದಿದ್ದು ನಿಜವೇ? ಅಸಲಿಯತ್ತು ಇಲ್ಲಿದೆ
ಮಾರ್ಚ್ 7 ಶನಿವಾರ, ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮಾರ್ಚ್ 7 ಶನಿವಾರ, ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಾರ್ ಮುಂದೆ ಪ್ರತಿಭಟನೆ ವೇಳೆ ಕಲ್ಲು ತೂರಾಟ: ಪೊಲೀಸರಿಗೆ ಗಾಯ
ಬಾರ್ ಮುಂದೆ ಪ್ರತಿಭಟನೆ ವೇಳೆ ಕಲ್ಲು ತೂರಾಟ: ಪೊಲೀಸರಿಗೆ ಗಾಯ
ರಸ್ತೆಯಲ್ಲಿ ಮಲಗಿದ್ದ ಹಸುವನ್ನು ತಳ್ಳಿಕೊಂಡು ಹೋದ ಕಾರು
ರಸ್ತೆಯಲ್ಲಿ ಮಲಗಿದ್ದ ಹಸುವನ್ನು ತಳ್ಳಿಕೊಂಡು ಹೋದ ಕಾರು
GST ಹೊಡೆತ ಬಿದ್ದರೂ ಕರ್ನಾಟಕ 2ನೇ ಸ್ಥಾನ: ರಾಜ್ಯದ ಬೆಳವಣಿಗೆ ಉತ್ತಮ; ಸಿಎಂ
GST ಹೊಡೆತ ಬಿದ್ದರೂ ಕರ್ನಾಟಕ 2ನೇ ಸ್ಥಾನ: ರಾಜ್ಯದ ಬೆಳವಣಿಗೆ ಉತ್ತಮ; ಸಿಎಂ
ಮನೆಯ ಮುಂದಿದ್ದ ಮುದ್ದಾದ ನಾಯಿಮರಿಗಳನ್ನು ಎತ್ತಿ ಗೋಡೆಗೆ ಬಡಿದ ಯುವತಿ!
ಮನೆಯ ಮುಂದಿದ್ದ ಮುದ್ದಾದ ನಾಯಿಮರಿಗಳನ್ನು ಎತ್ತಿ ಗೋಡೆಗೆ ಬಡಿದ ಯುವತಿ!
ಕುವೈತ್​​ನ ಯುಎಸ್​ ನೆಲೆಗಳ ಮೇಲೆ ಇರಾನ್​ನಿಂದ ಅರಾಶ್-2 ಡ್ರೋನ್ ದಾಳಿ
ಕುವೈತ್​​ನ ಯುಎಸ್​ ನೆಲೆಗಳ ಮೇಲೆ ಇರಾನ್​ನಿಂದ ಅರಾಶ್-2 ಡ್ರೋನ್ ದಾಳಿ
‘ದಿ ಕೇರಳ ಸ್ಟೋರಿ 2’ ಉಚಿತ ಪ್ರದರ್ಶನಕ್ಕೆ ಬಂದವರಿಗೆ ಬೆದರಿಕೆ ಕರೆ: ವಿಡಿಯೋ
‘ದಿ ಕೇರಳ ಸ್ಟೋರಿ 2’ ಉಚಿತ ಪ್ರದರ್ಶನಕ್ಕೆ ಬಂದವರಿಗೆ ಬೆದರಿಕೆ ಕರೆ: ವಿಡಿಯೋ
ಮಾಲ್​​ನ ರೇಲಿಂಗ್ ಬಳಿ ತಮಾಷೆ ಮಾಡಲು ಹೋಗಿ ಕೆಳಗೆ ಬಿದ್ದ ಯುವಕರು
ಮಾಲ್​​ನ ರೇಲಿಂಗ್ ಬಳಿ ತಮಾಷೆ ಮಾಡಲು ಹೋಗಿ ಕೆಳಗೆ ಬಿದ್ದ ಯುವಕರು