Tirupati Temple: ತಿರುಪತಿಯ ಅರ್ಚಕರಿಗೆ ಸಿಗುವ ಸಂಬಳ ಎಷ್ಟು? ತಿಳಿದರೆ ಶಾಕ್ ಆಗುವುದಂತೂ ಖಂಡಿತಾ!

ತಿರುಪತಿ ಬಾಲಾಜಿ ದೇವಸ್ಥಾನದ ಅರ್ಚಕರ ವೇತನಗಳು ದೇಶಾದ್ಯಂತ ಚರ್ಚೆಯ ವಿಷಯವಾಗಿದೆ. ವರದಿಗಳ ಪ್ರಕಾರ ಇಲ್ಲಿನ ಮುಖ್ಯ ಅರ್ಚಕರು, ಹಿರಿಯ ಮತ್ತು ಕಿರಿಯ ಅರ್ಚಕರ ವೇತನ ಸರ್ಕಾರಿ ಅಥವಾ ಕಾರ್ಪೊರೇಟ್ ವಲಯದ ಉದ್ಯೋಗಿಗಳ ಸಂಬಳಕ್ಕಿಂತಲೂ ಹೆಚ್ಚಿದೆ. ಸಂಬಳ ಎಷ್ಟು ಅಂತ ತಿಳಿದರೆ ನೀವು ಶಾಕ್ ಆಗುವುದಂತೂ ಖಂಡಿತಾ.

Tirupati Temple: ತಿರುಪತಿಯ ಅರ್ಚಕರಿಗೆ ಸಿಗುವ ಸಂಬಳ ಎಷ್ಟು? ತಿಳಿದರೆ ಶಾಕ್ ಆಗುವುದಂತೂ ಖಂಡಿತಾ!
Tirupati Balaji Priests' Salaries

Updated on: Apr 11, 2025 | 3:08 PM

ತಿರುಪತಿ ಬಾಲಾಜಿ ಅಥವಾ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು ಹಿಂದೂ ಪುರಾಣದ ಅತ್ಯಂತ ಪ್ರಮುಖ ಹೆಗ್ಗುರುತುಗಳಲ್ಲಿ ಒಂದಾಗಿದೆ. ಭಕ್ತರು ತಮ್ಮೆಲ್ಲಾ ಇಚ್ಛೆ ಈಡೇರಿಸುವಂತೆ ಇಲ್ಲಿ ಬೇಡಿಕೊಳ್ಳುತ್ತಾರೆ ಮತ್ತು ಇಚ್ಛೆ ಫಲಿಸಿದ ನಂತರ ದೇವಾಲಯದ ಹುಂಡಿಯಲ್ಲಿ ತಮ್ಮ ದಾನವನ್ನು ನೀಡುವುದು ವಾಡಿಕೆಯ ಅಭ್ಯಾಸವಾಗಿದೆ. ಈ ರೀತಿಯಾಗಿ ಲಕ್ಷಾಂತರ ಭಕ್ತರು ತಮ್ಮ ದಾನವನ್ನು ನೀಡಲು ಇಲ್ಲಿನ ದೇವಾಲಯಕ್ಕೆ ಆಗಮಿಸುತ್ತಾರೆ. ತಿರುಪತಿ ಬಾಲಾಜಿ ದೇವಾಲಯವು ಭಕ್ತಿ ಮತ್ತು ನಂಬಿಕೆಯ ಕೇಂದ್ರ ಮಾತ್ರವಲ್ಲ, ಇಲ್ಲಿನ ಅರ್ಚಕರ ಸಂಬಳವೂ ದೇಶಾದ್ಯಂತ ಚರ್ಚೆಯ ವಿಷಯವಾಗಿ ಉಳಿದಿದೆ. ಯಾಕೆಂದರೆ ಇಲ್ಲಿನ ಅರ್ಚಕರ ಸಂಬಳ ಸರ್ಕಾರಿ ಅಥವಾ ಕಾರ್ಪೊರೇಟ್ ವಲಯದ ಉದ್ಯೋಗಿಗಳ ಸಂಬಳಕ್ಕಿಂತಲೂ ಹೆಚ್ಚಿದೆ. ಸಂಬಳ ಎಷ್ಟು ಅಂತ ತಿಳಿದರೆ ನೀವು ಶಾಕ್ ಆಗುವುದಂತೂ ಖಂಡಿತಾ.

ತಿರುಪತಿಯ ಅರ್ಚಕರ ಸಂಬಳ ಎಷ್ಟು?

ತಿರುಪತಿ ದೇವಸ್ಥಾನವನ್ನು ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ನಿರ್ವಹಿಸುತ್ತವೆ. ವರದಿಗಳ ಪ್ರಕಾರ, ಇಲ್ಲಿನ ಪ್ರಧಾನ ಅರ್ಚಕರು ಪ್ರತಿ ತಿಂಗಳು ಸುಮಾರು 82,000 ರೂ. ಸಂಬಳ ಪಡೆಯುತ್ತಾರೆ. ಹಿರಿಯ ಅರ್ಚಕರಿಗೆ 52,000 ರೂ.ಗಳವರೆಗೆ ವೇತನ ನೀಡಲಾಗುತ್ತದೆ. ಇದಲ್ಲದೆ, ಕಿರಿಯ ಪುರೋಹಿತರಿದ್ದಾರೆ, ಅವರಿಗೆ 30,000 ರೂ.ಗಳಿಂದ 60,000 ರೂ.ಗಳವರೆಗೆ ಸಂಬಳ ನೀಡಲಾಗುತ್ತದೆ.

ಇದನ್ನೂ ಓದಿ: ವರ್ಷದಲ್ಲಿ ಎರಡು ಬಾರಿ ಹನುಮ ಜಯಂತಿಯನ್ನು ಆಚರಿಸಲು ಕಾರಣವೇನು?

ಇದನ್ನೂ ಓದಿ
ಭಾನುವಾರ ಈ ವಸ್ತು ಖರೀದಿಸುವ ವ್ಯಕ್ತಿ ಶ್ರೀಮಂತನಾಗುತ್ತಾನೆ
ಪತ್ನಿಯನ್ನು ಹಿಂಸಿಸುವ ಪತಿಗೆ ಏನು ಶಿಕ್ಷೆ? ಗರುಡ ಪುರಾಣದ ಹೇಳುವುದೇನು?
ಮದುವೆಗೂ ಮುನ್ನ ಗ್ರಹ ಶಾಂತಿ ಪೂಜೆ ಮಾಡಿಸುವುದೇಕೆ? ಏನಿದರ ಮಹತ್ವ?
ಊಟ ಮಾಡಿದ ನಂತರ ಬಾಳೆ ಎಲೆಯನ್ನು ಒಳಮುಖವಾಗಿ ಮಡಚುವುದೇಕೆ?

ವರದಿಗಳ ಪ್ರಕಾರ, 2010 ರಲ್ಲಿಯೇ, ಟಿಟಿಡಿ ಮಂಡಳಿಯು ಅರ್ಚಕರ ವೇತನವನ್ನು ಗಣನೀಯವಾಗಿ ಹೆಚ್ಚಿಸಿತ್ತು. ಆ ಸಮಯದಲ್ಲಿ, ಪ್ರಧಾನ ಅರ್ಚಕರ ವೇತನವನ್ನು ತಿಂಗಳಿಗೆ 55,000 ರೂ. ಮತ್ತು ಕಿರಿಯ ಅರ್ಚಕರ ವೇತನವನ್ನು ತಿಂಗಳಿಗೆ 30,000 ರೂ.ಗಳಾಗಿ ಮಾಡಲಾಗಿತ್ತು.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:06 pm, Fri, 11 April 25

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us