Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಸೋಫಾ ಯಾವ ದಿಕ್ಕಿನಲ್ಲಿ ಇಡಬೇಕು?
ವಾಸ್ತು ಪ್ರಕಾರ ಸೋಫಾವನ್ನು ಯಾವ ಮೂಲೆಗೆ ಇಡುವುದು ಶುಭ ಎಂದು ತಿಳಿದುಕೊಳ್ಳುವುದು ಅವಶ್ಯಕ. ಸೋಫಾ ಬಣ್ಣದ ಆಯ್ಕೆಯಿಂದ ಹಿಡಿದು ಅದನ್ನು ಜೋಡಿಸುವವರೆಗೆ ಕೆಲವು ವಾಸ್ತು ಸಲಹೆಗಳನ್ನು ಅನುಸರಿಸಲು ವಾಸ್ತು ತಜ್ಞರು ಹೇಳುತ್ತಾರೆ.
ಮನೆಗೆ ಅತಿಥಿಗಳು ಬಂದಾಗ ಕುಳಿತುಕೊಳ್ಳುವುದು ಸೋಫಾದ ಮೇಲೆ ಇದಕ್ಕಾಗಿ ಆಕರ್ಷಕ ಬಣ್ಣದ ಹಾಗೂ ವಿನ್ಯಾಸದ ಸೋಫಾವನ್ನು ಇಡಲಾಗುತ್ತದೆ. ಆದರೆ ನೀವು ಅಂದದ ಬದಲಾಗಿ ಮನೆಯ ಸಮೃದ್ಧಿಯ ಬಗ್ಗೆ ಹೆಚ್ಚು ಗಮನ ಕೊಡಬೇಕು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ. ಅಂದರೆ ನೀವು ವಾಸ್ತು ಪ್ರಕಾರ ಸೋಫಾವನ್ನು ಯಾವ ಮೂಲೆಗೆ ಇಡುವುದು ಶುಭ ಎಂದು ತಿಳಿದುಕೊಳ್ಳುವುದು ಅವಶ್ಯಕ. ಅದಕ್ಕಾಗಿಯೇ ಸೋಫಾ ಬಣ್ಣದ ಆಯ್ಕೆಯಿಂದ ಹಿಡಿದು ಅದನ್ನು ಜೋಡಿಸುವವರೆಗೆ ಕೆಲವು ವಾಸ್ತು ಸಲಹೆಗಳನ್ನು ಅನುಸರಿಸಲು ತಜ್ಞರು ಹೇಳುತ್ತಾರೆ.
ವಾಸ್ತು ಶಾಸ್ತ್ರ ಪ್ರಕಾರ ಮನೆಯ ಲಿವೀಂಗ್ ರೂಮ್ನಲ್ಲಿ ಬಳಸುವ ಸೋಫಾ ಬಣ್ಣಗಳ ಬಗ್ಗೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಲಾಗುತ್ತದೆ. ವಿಶೇಷವಾಗಿ ಯಾವುದೇ ಸಂದರ್ಭದಲ್ಲಿ ಕಡು ಕೆಂಪು, ಕಡು ಹಸಿರು ಅಥವಾ ಕಡು ನೀಲಿ ಬಣ್ಣಗಳನ್ನು ಆಯ್ಕೆ ಮಾಡಬೇಡಿ. ಸಾಧ್ಯವಾದಷ್ಟು ತಿಳಿ ಬಣ್ಣಗಳಲ್ಲಿ ಸೋಫಾಗಳನ್ನು ಖರೀದಿಸಿ. ಗಾಢ ಬಣ್ಣವು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಗಣೇಶನ ಅನುಗ್ರಹ ಪ್ರಾಪ್ತಿಯಾಗಬೇಕಾ? ಈ ಕೆಲಸ ಮರೆಯದೆ ಮಾಡಿ
ಸೋಫಾವನ್ನು ಯಾವುದೇ ಸಂದರ್ಭದಲ್ಲಿ ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬಾರದು. ಅಲ್ಲದೇ ಮನೆಯ ಮಧ್ಯದಲ್ಲಿ ಸೋಫಾ ವ್ಯವಸ್ಥೆ ಮಾಡಬಾರದು ಎನ್ನುತ್ತಾರೆ ವಾಸ್ತು ಪಂಡಿತರು. ಸೋಫಾವನ್ನು ಇರಿಸಲು ಉತ್ತಮ ಸ್ಥಳವೆಂದರೆ ಪಶ್ಚಿಮ ದಿಕ್ಕು. ಈ ದಿಕ್ಕಿನಲ್ಲಿ ಸೋಫಾವನ್ನು ಇಡುವುದು ಒಳ್ಳೆಯದು. ಪ್ರಾಣಿಗಳ ಚರ್ಮವನ್ನು ಬಳಸಿ ತಯಾರಿಸಿದ ಲೆದರ್ ಸೋಫಾಗಳನ್ನು ಮನೆಯಲ್ಲಿ ಯಾವುದೇ ಸಂದರ್ಭದಲ್ಲೂ ಬಳಸದಿರುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 5:54 pm, Tue, 26 March 24