Ganpati: ಗಣಪತಿಗೆ ಏಕೆ ಮೊದಲ ಪೂಜೆ ಸಲ್ಲಬೇಕು? ರಾವಣನಿಗೆ ಆತ್ಮಲಿಂಗ ದಕ್ಕದಿರಲು, ಪಾಂಡವರಿಗೆ ರಾಜ್ಯ ಪ್ರಾಪ್ತವಾಗಲೂ ಅವನೇ ಕಾರಣ

ಸನಾತನ ಧರ್ಮದ ಮೇಲೆ ನಂಬಿಕೆಯಿರುವ ಆಸ್ತಿಕ ಜನರೆಲ್ಲರೂ ತಮ್ಮ ಕಾರ್ಯಾರಂಭದ ಮೊದಲು ಗಣಪತಿಯನ್ನು ಸ್ಮರಿಸುವುದು ಪೂಜಿಸುವುದು ಅನೂಚಾನವಾಗಿ ನಡೆದುಬಂದಿದೆ.

Ganpati: ಗಣಪತಿಗೆ ಏಕೆ ಮೊದಲ ಪೂಜೆ ಸಲ್ಲಬೇಕು? ರಾವಣನಿಗೆ ಆತ್ಮಲಿಂಗ ದಕ್ಕದಿರಲು, ಪಾಂಡವರಿಗೆ ರಾಜ್ಯ ಪ್ರಾಪ್ತವಾಗಲೂ ಅವನೇ ಕಾರಣ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 03, 2023 | 12:23 PM

ಸನಾತನ ಧರ್ಮದ ಮೇಲೆ ನಂಬಿಕೆಯಿರುವ ಆಸ್ತಿಕ ಜನರೆಲ್ಲರೂ ತಮ್ಮ ಕಾರ್ಯಾರಂಭದ ಮೊದಲು ಗಣಪತಿಯನ್ನು ಸ್ಮರಿಸುವುದು ಪೂಜಿಸುವುದು ಅನೂಚಾನವಾಗಿ ನಡೆದುಬಂದಿದೆ. ಸ್ವಾಭಾವಿಕವಾಗಿ ಯಾರೂ ಯಾಕೆ ಹೀಗೆ ಎಂದು ಪ್ರಶ್ನಿಸುವುದು ಕಡಿಮೆ. ಏಕೆಂದರೆ ಸನಾತನ ಧರ್ಮದ ಜೀವಾಳವೇ ನಂಬಿಕೆ. ನಂಬಿ ಕೆಟ್ಟವರಿಲ್ಲ” ಎಂಬ ಸಂತರ ಮಾತೂ ಇದೆ. ಆದರೂ ನಮ್ಮ ಆಚರಣೆಗಳ ಕುರಿತಾಗಿ ನಮಗೆ ಅರಿವಿರಬೇಕು. ಗಣಪತಿಯ ಜನ್ಮ ವೃತ್ತಾಂತ ತಮಗೆಲ್ಲಾ ತಿಳಿದೇ ಇದೆ. ಗಣಪತಿಯೆಂದರೆ ವಿಘ್ನಕರ್ತಾರನೂ ಹೌದು ವಿಘ್ನಹರ್ತಾರನೂ ಹೌದು. ವೇದದಗಳಲ್ಲಿ ಗಣಪತಿಯನ್ನು ಬ್ರಹ್ಮಣಸ್ಪತಿ ಎಂದು ಉಲ್ಲೇಖಿಸಿದ್ದಾರೆ. ಬ್ರಹ್ಮಣಾಂ ಬ್ರಹ್ಮಣಸ್ಪತಿಃ ಸಾಮಾನ್ಯ ಅರ್ಥ ದೇವಾನುದೇವತೆಗಳಿಗೇ ಈತ ಒಡೆಯ ಎಂದು. ಅಲ್ಲದೇ ಇವನು ನೀರಿಗೂ ಅಧಿಪತಿ. ಮನುಷ್ಯನ ಮುಖ್ಯ ಆದ್ಯತೆಗಳಲ್ಲಿ ನೀರಿಗೆ ಅತ್ಯಂತ ಮಹತ್ತರ ಸ್ಥಾನವಿದೆ. ಆದ್ದರಿಂದ ಇವನಿಗೆ ಮೊದಲ ಪೂಜೆ ಎಂದು ಹೇಳಬಹುದು. ಅಲ್ಲದೇ ಮನುಷ್ಯಾದಿ ಸಮಸ್ತ ಜೀವಿಗಳಿಗೆ ಸಿದ್ಧಿ ಮತ್ತು ಅದಕ್ಕೆ ಬೇಕಾದ ಬುದ್ಧಿಯನ್ನು ಇವನೇ ಅನುಗ್ರಹಿಸುವವನಾದ್ದರಿಂದ ದೇವತೆಗಳಲ್ಲಿ ಇವನಿಗೆ ವಿಶೇಷ ಸ್ಥಾನವಿದೆ. ಜನನೋತ್ತರದಲ್ಲಿ ತಾಯಿ ಪಾರ್ವತಿಯ ಆದೇಶ ಪಾಲಿಸುವಲ್ಲಿ ಕರ್ತವ್ಯ ನಿಷ್ಠೆ ಮೆರೆದ ಪ್ರಾಮಾಣಿಕ ಚೈತನ್ಯ ಈ ಗಣಪತಿ.

“ಅಣೋರಣೀಯಾನ್ ಮಹತೋ ಮಹೀಯಾನ್”” – ಅಣುಗಳಲ್ಲಿ ಅಣುವು ಮಹತ್ತರದಲ್ಲಿ ಮಹತ್ತರವಾದದ್ದು ಎಂದರ್ಥ. ಇದು ಉಪನಿಷತ್ತಿನ ಮಾತು. ಇದನ್ನು ತನ್ನ ನಡೆಯಲ್ಲಿ ತೋರಿಸಿದಾತ ಈತ. ತನ್ನ ಕಾಯ ಮಹತ್ತರವಾಗಿದ್ದು ವಾಹನ ಅತ್ಯಂತ ಕಿರಿದಾಗಿದೆ. ಭಗವತ್ಸಂಕಲ್ಪದಲ್ಲಿ ಯಾವುದೂ ಅಸಾಧ್ಯವೆಂಬುದು ಇಲ್ಲ ಎನ್ನುವ ಸಂದೇಶ ಇದಾಗಿದೆ.

“ತ್ವಂ ಮೂಲಾಧಾರೇ ಸ್ಥಿತೋಸಿ ನಿತ್ಯಮ್” ಎಂದು ಉಪನಿಷತ್ ಹೇಳುವಂತೆ ಅವನ ಸ್ಥಾನ ಮೂಲಾಧಾರ ಚಕ್ರದಲ್ಲಿ. ಮನುಷ್ಯನ ಜೀವನದ ಆಧ್ಯಾತ್ಮಿಕ ಸಾಧನೆಯ ಆರಂಭ ಮೂಲಾಧಾರಚಕ್ರದಿಂದ ಎಂದು ಯೋಗಶಾಸ್ತ್ರವು ಹೇಳುತ್ತದೆ. ಈ ರೀತಿಯಾಗಿ ಹಲವು ಕಾರಣಗಳಿಂದ ಗಣೇಶನ ಪೂಜೆ ಮೊದಲು ನಡೆಯುತ್ತದೆ.

ಇದನ್ನೂ ಓದಿ:Spiritual: ದುಷ್ಟನಾದರೂ ರಾವಣನಲ್ಲಿ ಕಂಡ ಒಂದು ಒಳ್ಳೆಯ ಗುಣ, ರಾವಣನಿಗೆ ಯಾರ ಶಾಪ?

ರಾವಣ ಶಿವನ ಪರಮ ಭಕ್ತ. ಅಲ್ಲದೇ ರಜೋಗುಣ ಭರಿತವಾದ ರಾಕ್ಷಸ ಮನೋಭಾವದವನಾಗಿದ್ದರೂ ಧರ್ಮ ವಿಹಿತವಾದ ನಿತ್ಯ ಕರ್ಮಗಳನ್ನು ಎಂದೂ ಬಿಟ್ಟವನಲ್ಲ. ಹಾಗೇ ಒಂದು ದಿನ ರಾವಣನು ತನ್ನ ಮತ್ತು ತಾಯಿಯ ಇಚ್ಛೆಯ ಅನುಸಾರವಾಗಿ ಶಿವನ ಆತ್ಮಲಿಂಗ ಪಡೆಯುವ ಅಭಿಲಾಷೆ ಉಳ್ಳವನಾಗಿ ಘೋರ ತಪಸ್ಸು ಆರಂಭಿಸುತ್ತಾನೆ. ಈ ತಪಸ್ಸು ಎಲ್ಲಾ ಲೋಕಗಳಲ್ಲೂ ತಲ್ಲಣವುಂಟು ಮಾಡುತ್ತದೆ. ಪಾರ್ವತಿಯಿಂದಾರಂಭಿಸಿ ಎಲ್ಲಾ ದೇವಗಳು ಅವನ ಸತ್ವ ಪರೀಕ್ಷೆ ಮಾಡುತ್ತಾರೆ. ಆದರೆ ರಾವಣನು ಕಿಂಚಿತ್ತೂ ವಿಚಲಿತನಾಗದೆ ತನ್ನ ತಪಸ್ಸು ಮುಂದುವರಿಸುತ್ತಾನೆ. ಅವನ ತಪಸ್ಸಿಗೆ ಮಣಿದು ಶಿವ ಆತ್ಮಲಿಂಗವನ್ನು ನೀಡುತ್ತಾನೆ. ಬಹಳ ಆನಂದದ ಭರಿತನಾಗಿ ಕೈಲಾಸದಿಂದ ಲಂಕೆಗೆ ತೆರಳಲು ಉದ್ಯುಕ್ತನಾಗುವಾಗ ಗಣಪತಿ ಅವನ ಮುಂದೆ ಬರುತ್ತಾನೆ.

ರಾವಣನು ಅವನ ರೂಪ ನೋಡಿ ನಕ್ಕು ಅವನಿಗೆ ನಮಸ್ಕರಿಸದೇ ಮುಂದೆ ಸಾಗುತ್ತಾನೆ. ಅದೇ ಸಮಯಕ್ಕೆ ದೇವತೆಗಳು ರಾವಣ ಆತ್ಮಲಿಂಗ ಪಡೆದುಕೊಂಡ ಇದರಿಂದ ಏನು ಅನಾಹುತ ಸಂಭವಿಸಬಹುದೋ ಎಂಬ ಭಯದಿಂದ ವಿಘ್ನನಿವಾರಕನಾದ ಮತ್ತು ವಿಘ್ನಕಾರಕನಾದ ಗಣಪತಿಯ ಮೊರೆ ಹೋಗುತ್ತಾರೆ. ಗಣಪತಿಯು ಒಂದು ಉಪಾಯ ಮಾಡುತ್ತಾನೆ. ಸೂರ್ಯನ ಬಳಿ ಅಸ್ತವಾಗುವಂತೆ ಸೂಚನೆಯನ್ನು ಕೊಟ್ಟು ಅದೇ ಸಮಯಕ್ಕೆ ಒಬ್ಬ ವಟುವಿನ ರೂಪವನ್ನು ಧರಿಸುತ್ತಾನೆ.

ಸಂಧ್ಯೆಯ ಕಾಲಕ್ಕೆ ಸಂಧ್ಯಾವಂದನೆಯನ್ನು ಮಾಡುವುದು ನಿಯಮ. ಆದರೆ ರಾವಣನ ಕೈಯಲ್ಲಿರುವ ಆತ್ಮಲಿಂಗವನ್ನು ಕೆಳಗಿಡುವಂತಿಲ್ಲ. ಸಂಧ್ಯಾವಂದನೆ ಬಿಡುವಂತಿಲ್ಲ. ಏನು ಮಾಡಲಿ ಎಂದು ರಾವಣ ಯೋಚಿಸುವ ವೇಳೆಗೆ ವಟುರೂಪಧಾರಿಯಾದ ಗಣಪತಿಯು ಅಲ್ಲಿ ಬರುತ್ತಾನೆ. ಅವರಲ್ಲಿ ಒಪ್ಪಂದ ನಡೆದು ರಾವಣ ಆತ್ಮಲಿಂಗವನ್ನು ಅವನಲ್ಲಿ ಕೊಟ್ಟು ಸ್ನಾನ ಪೂರೈಸಿ ಸಂಧ್ಯಾವಂದನೆಗೆ ಕೂರುತ್ತಾನೆ. ನಿಗದಿತ ಸಮಯಕ್ಕೆ ರಾವಣ ಬಾರದಿರುವುದನ್ನು ಗಮನಿಸಿ ಗಣಪತಿ ಆತ್ಮಲಿಂಗವನ್ನು ಭೂಮಿಯಲ್ಲಿ ಇಟ್ಟೇಬಿಡುತ್ತಾನೆ.

ರಾವಣನಿಗೆ ದಕ್ಕಿದ ಆತ್ಮಲಿಂಗವು ಅವನ ಉಪಯೋಗಕ್ಕೆ ಲಭ್ಯವಾಗದಂತಾಯಿತು. ಕಾರಣ ಇಷ್ಟೇ ಗಣಪತಿಯ ಕಡೆಗಣನೆ. ಅದೇ ರೀತಿ ಮಹಾಭಾರತದ ಯುದ್ಧ ಪೂರ್ವದಲ್ಲಿ ಧರ್ಮರಾಜನು ಗಣಪತಿಯನ್ನು ಪೂಜಿಸಿ ತನ್ನ ರಾಜ್ಯವನ್ನು ಪಡೆದ ಎಂದು ದಾಸರು ಹೇಳುವ ಮಾತು, “ಆದಿಯಲ್ಲಿ ನಿನ್ನ (ಗಣಪತಿಯ) ಪಾದ ಪೂಜಿಸಿದ ಧರ್ಮರಾಯ ಸಾಧಿಸಿದ ರಾಜ್ಯವ ಗಣನಾಥ”” ಎಂದು ಭಜನೆಯ ರೂಪದಲ್ಲಿ ಹೀಗಿದೆ.

ನಮ್ಮ ಜೀವನದಲ್ಲಿ ಹಲವು ಬಾರಿ ಕೆಲಸ ಆದಂತೆ ಕಂಡರೂ ಕೊನೆಗೆ ಕೈತಪ್ಪುವುದು ಕಾಣುತ್ತದೆ. ಅದಕ್ಕೆ ಶ್ರದ್ಧೆಯಿಂದ ಗಣಪತಿಯನ್ನು ಮೊದಲೇ ಪ್ರಾರ್ಥಿಸಿ ನಿರ್ವಿಘ್ನವಾಗಿ ನಮ್ಮ ಕಾರ್ಯ ಸಾಫಲ್ಯವನ್ನು ಹೊಂದೋಣ. ಡಾ.ಕೇಶವ ಕಿರಣ ಬಿ

Published On - 12:22 pm, Fri, 3 March 23

ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ