AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Malabar Bridal Jewellery Show: ಬೆಂಗಳೂರಲ್ಲಿ ಮಲಬಾರ್​ ಗೋಲ್ಡ್​ನಿಂದ ವಧು ಸಿಂಗಾರಕ್ಕೆ ಸೊಗಸಾದ ವಜ್ರ, ಬಂಗಾರದ ಆಭರಣಗಳ ಪ್ರದರ್ಶನ

ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಮೇ 14ರಿಂದ 22ನೇ ತಾರೀಕಿನ ತನಕ "ಬ್ರೈಡಲ್ ಜ್ಯುವೆಲ್ಲರಿ ಶೋ" ನಡೆಯಲಿದೆ. ನೀವು ಖರೀದಿಸುತ್ತೀರೋ ಇಲ್ಲವೋ ಬೇರೆ ಮಾತು. ಆದರೆ ಒಮ್ಮೆಯಾದರೂ ನೋಡಲೇಬೇಕಾದ ವಧು ಆಭರಣಗಳ ಪ್ರದರ್ಶನ ಇದು.

Malabar Bridal Jewellery Show: ಬೆಂಗಳೂರಲ್ಲಿ ಮಲಬಾರ್​ ಗೋಲ್ಡ್​ನಿಂದ ವಧು ಸಿಂಗಾರಕ್ಕೆ ಸೊಗಸಾದ ವಜ್ರ, ಬಂಗಾರದ ಆಭರಣಗಳ ಪ್ರದರ್ಶನ
ಮಲಬಾರ್​ ಗೋಲ್ಡ್ ಅಂಡ್ ಡೈಮಂಡ್ಸ್​ನ ಬ್ರೈಡಲ್ ಜ್ಯುವೆಲ್ಲರಿ ಶೋ
TV9 Web
| Edited By: |

Updated on:May 16, 2022 | 2:52 PM

Share

ಬೆಂಗಳೂರು: ದೇಶದ ಅತಿ ದೊಡ್ಡ ಚಿನ್ನ ಹಾಗೂ ವಜ್ರದ ರೀಟೇಲ್ ಸರಣಿ ಹೊಂದಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್​ನಿಂದ (Malabar Gold And Diamonds) “ಬ್ರೈಡಲ್ ಜ್ಯುವೆಲ್ಲರಿ ಶೋ” (ವಧು ಆಭರಣ ಪ್ರದರ್ಶನ) ಅನಾವರಣಗೊಳಿಸಿದೆ. ಮದುವೆ ಸಲುವಾಗಿ ಹೆಣ್ಣುಮಕ್ಕಳು ಚಿನ್ನ, ವಜ್ರದ ಆಭರಣಗಳನ್ನು ಖರೀದಿ ಮಾಡಬೇಕು ಎಂದು ಇದ್ದಲ್ಲಿ ಈ ಸಂದರ್ಭ ನಿಮಗೆ ವಿಶೇಷ, ವಿಶಿಷ್ಟ ಆಭರಣಗಳು ದೊರೆಯಲಿದೆ. ಡಿಸೈನ್, ಬೆಲೆ, ಮೇಕಿಂಗ್, ವೇಸ್ಟೇಜ್ ಎಲ್ಲ ರೀತಿಯಿಂದಲೂ ಗ್ರಾಹಕರಿಗೆ ತೃಪ್ತಿ ನೀಡುವಂಥ ಬೆಲೆಯಲ್ಲಿ ದೊರೆಯಲಿದ್ದು, ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿನ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಆರ್ಟಿಸ್ಟ್ರಿ ಸ್ಟೋರ್​ನಲ್ಲಿ ಈ ಪ್ರದರ್ಶನವು ಆರಂಭಗೊಂಡಿದೆ. ವುಮೆನ್ ಎಂಟರ್​ಪ್ರೆನ್ಯೂರ್ ಲ್ಯಾಡರ್ಸ್ (WEL) ಸ್ಥಾಪಕರಾದ ರೇವತಿ ಅವರ ಸಮಕ್ಷಮದಲ್ಲಿ ಈ ಪ್ರದರ್ಶನವು ಅನಾವರಣಗೊಂಡಿದೆ. ಮಲಬಾರ್​ ಗೋಲ್ಡ್​ನ ಎಕ್ಸ್​ಕ್ಲೂಸಿವ್ ರೇಂಜ್​ನ ವಧು ಆಭರಣಗಳನ್ನು ಈ ಪ್ರದರ್ಶನದಲ್ಲಿ ಇಡಲಾಗಿದೆ.

ಈ ಆಭರಣ ಪ್ರದರ್ಶನವು ಇದೇ ಮೇ 14ನೇ ತಾರೀಕಿನಿಂದ ಶುರುವಾಗಿದ್ದು, 22ನೇ ತಾರೀಕಿನ ತನಕ ಇರಲಿದೆ. ಮದುವೆಯಲ್ಲಿ ವಧುವನ್ನು ಸಿಂಗರಿಸಲೆಂದೇ ವಿಶಿಷ್ಟವಾಗಿ ರೂಪಿಸಲಾದ, ಶ್ರೀಮಂತಿಕೆಯ ವಿನ್ಯಾಸದ ಒಡವೆಗಳನ್ನು ಇಲ್ಲಿ ಕಾಣಬಹುದು. ಚಿನ್ನದ ಆಭರಣಗಳು ಹಾಗೂ ಜತೆಗೆ ವಜ್ರ ಸೇರಿದಂತೆ ಬೆಲೆ ಬಾಳುವ ರತ್ನಗಳಿಂದ ಕೂಡಿರುವ ಒಡವೆಗಳ ಕುಸುರಿ ಕೆಲಸವನ್ನು ಇಲ್ಲಿ ಕಾಣಬಹುದು.

ಮಲಬಾರ್ ಗೋಲ್ಡ್​ನ ಇಂಥ ವಿಶಿಷ್ಟ ಆಭರಣಗಳ ಖರೀದಿಗೆ ಅಂತ ಮಾತ್ರ ಹೋಗಬೇಕು ಅಂತ ಅಲ್ಲ. ಈ ಆಭರಣಗಳ ಪ್ರದರ್ಶನವು ನೋಡುಗರ ಕಣ್ಣಿಗೆ ಹಬ್ಬದಂತಿದೆ. ಬೆಂಗಳೂರಿನ ಆಭರಣಪ್ರಿಯರು ಈ ಪ್ರದರ್ಶನಕ್ಕೆ ತಪ್ಪದೆ ಹಾಜರಾಗಬೇಕು ಎಂಬುದು ಸಹಜವಾಗಿ ಕೇಳಿಬರುತ್ತಿರುವ ಮಾತಾಗಿದೆ.

Published On - 2:24 pm, Mon, 16 May 22

Follow Us
TV9 Web
TV9 Web

TV9 Kannada

Read More
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
‘ಆ ಹೊಗಳಿಕೆಯನ್ನು ಹೇಳೋಕೆ ಮುಜುಗರ ಆಗುತ್ತೆ’; ರಮಿಕಾಶ ಶಿವು
‘ಆ ಹೊಗಳಿಕೆಯನ್ನು ಹೇಳೋಕೆ ಮುಜುಗರ ಆಗುತ್ತೆ’; ರಮಿಕಾಶ ಶಿವು
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’