AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asian Games 2023: ಭಾರತಕ್ಕೆ ಕಂಚಿನ ಪದಕ ಗೆದ್ದು ಕೊಟ್ಟ ಇಯಾಬಾದ್ ಅಲಿ

Asian Games 2023: ಪ್ರಸ್ತುತ ಪದಕ ಪಟ್ಟಿಯಲ್ಲಿ ಭಾರತ ತಂಡವು 6ನೇ ಸ್ಥಾನದಲ್ಲಿದೆ. ಭಾರತೀಯ ಕ್ರೀಡಾಪಟುಗಳು ಒಟ್ಟು 3 ಚಿನ್ನದ ಪದಕ, 4 ಬೆಳ್ಳಿ ಪದಕ ಮತ್ತು 7 ಕಂಚಿನ ಪದಕಗಳನ್ನು ತೆಗೆದುಕೊಂಡಿದ್ದಾರೆ. ಇನ್ನು 40 ಚಿನ್ನದ ಪದಕ, 21 ಬೆಳ್ಳಿ ಪದಕ ಮತ್ತು 9 ಕಂಚಿನ ಪದಕಗಳನ್ನು ಗೆದ್ದಿರುವ ಚೀನಾ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.

Asian Games 2023: ಭಾರತಕ್ಕೆ ಕಂಚಿನ ಪದಕ ಗೆದ್ದು ಕೊಟ್ಟ ಇಯಾಬಾದ್ ಅಲಿ
Eabad Ali
TV9 Web
| Edited By: |

Updated on: Sep 26, 2023 | 3:12 PM

Share

ಚೀನಾದ ಹ್ಯಾಂಗ್​ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನ ಸೈಲಿಂಗ್​ನಲ್ಲಿ (ನೌಕಾಯಾನ ಸ್ಪರ್ಧೆ) ಭಾರತ ಎರಡು ಪದಕಗಳನ್ನು ಗೆದ್ದುಕೊಂಡಿದೆ. ಮಂಗಳವಾರ ನಡೆದ ಈ ಸ್ಪರ್ಧೆಯ ಬಾಲಕಿಯ ವಿಭಾಗದಲ್ಲಿ 17ರ ಹರೆಯದ ನೇಹಾ ಠಾಕೂರ್ ಬೆಳ್ಳಿ ಪದಕ ಗೆದ್ದರೆ, ಪುರುಷರ ವಿಭಾಗದಲ್ಲಿ ಇಯಾಬಾದ್ ಅಲಿ ಕಂಚಿನ ಪದಕಕ್ಕೆ ಕೊರೊಳೊಡ್ಡಿದರು.

ಪುರುಷರ ವಿಂಡ್‌ಸರ್ಫರ್ ಆರ್‌ಎಸ್: ಎಕ್ಸ್ ಈವೆಂಟ್‌ನಲ್ಲಿ ಇಯಾಬಾದ್ ಅಲಿ 52 ಅಂಕಗಳು ಮತ್ತು ನೆಟ್​ ಸ್ಕೋರ್‌ನೊಂದಿಗೆ ಮೂರನೇ ಸ್ಥಾನ ಪಡೆದರು. ಈ ಮೂಲಕ ಸೈಲಿಂಗ್​ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಡುವಲ್ಲಿ ಯಶಸ್ವಿಯಾದರು. ಇನ್ನು ಸ್ಪರ್ಧೆಯಲ್ಲಿ ಕೊರಿಯಾದ ವೊನ್ವೂ ಚೋ ಚಿನ್ನದ ಪದಕ ಗೆದ್ದರೆ, ಥಾಯ್ಲೆಂಡ್‌ನ ನಟ್ಟಾಫೊಂಗ್ ಫೋನೊಫ್ಫರತ್ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.

ಬಾಲಕಿಯರ ಡಿಂಗಿ ಐಎಲ್‌ಸಿಎ-4 ಸ್ಪರ್ಧೆಯಲ್ಲಿ 17 ವರ್ಷದ ನೇಹಾ ಎರಡನೇ ಸ್ಥಾನ ಪಡೆದು ಭಾರತಕ್ಕೆ ದಿನದ ಮೊದಲ ಪದಕವನ್ನು ತಂದುಕೊಟ್ಟರು. ಭೋಪಾಲ್‌ನ ನ್ಯಾಷನಲ್ ಸೈಲಿಂಗ್ ಸ್ಕೂಲ್‌ನ ಉದಯೋನ್ಮುಖ ನಾವಿಕೆಯಾಗಿ ಗುರುತಿಸಿಕೊಂಡಿರುವ ನೇಹಾ ಒಟ್ಟು 32 ಅಂಕಗಳೊಂದಿಗೆ ಗುರಿ ಮುಟ್ಟಿದ್ದರು. ಅಲ್ಲದೆ 27 ನೆಟ್​ ಸ್ಕೋರ್​ಗಳೊಂದಿಗೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಈ ಸ್ಪರ್ಧೆಯಲ್ಲಿ ಥಾಯ್ಲೆಂಡ್‌ನ ನೊಪಾಸ್ಸೋರ್ನ್ ಖುನ್‌ಬೂಂಜಾನ್‌ ಚಿನ್ನ ಪದಕ ತಮ್ಮದಾಗಿಸಕೊಂಡರೆ, ಸಿಂಗಾಪುರದ ಕೀರಾ ಮೇರಿ ಕಾರ್ಲೈಲ್ ಕಂಚಿಗೆ ತೃಪ್ತಿಪಟ್ಟರು.

ಪ್ರಸ್ತುತ ಪದಕ ಪಟ್ಟಿಯಲ್ಲಿ ಭಾರತ ತಂಡವು 6ನೇ ಸ್ಥಾನದಲ್ಲಿದೆ. ಭಾರತೀಯ ಕ್ರೀಡಾಪಟುಗಳು ಒಟ್ಟು 3 ಚಿನ್ನದ ಪದಕ, 4 ಬೆಳ್ಳಿ ಪದಕ ಮತ್ತು 7 ಕಂಚಿನ ಪದಕಗಳನ್ನು ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಏಷ್ಯನ್ ಗೇಮ್ಸ್​: ಚಿನ್ನದ ಪದಕ ಗೆದ್ದ ಟೀಮ್ ಇಂಡಿಯಾ

ಇನ್ನು 40 ಚಿನ್ನದ ಪದಕ, 21 ಬೆಳ್ಳಿ ಪದಕ ಮತ್ತು 9 ಕಂಚಿನ ಪದಕಗಳನ್ನು ಗೆದ್ದಿರುವ ಚೀನಾ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.

ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ