Axar Patel IPL 2021 DC Team Player: ಟೀಂ ಇಂಡಿಯಾ ಪರ ಟೆಸ್ಟ್ನಲ್ಲಿ ಮಿಂಚಿದ ಅಕ್ಷರ್ ಪಟೇಲ್, ಡೆಲ್ಲಿ ತಂಡದ ಸ್ಪಿನ್ ಮಾಂತ್ರಿಕ!
Axar Patel profile: ಅಕ್ಷರ್ ಇದುವರೆಗೆ ಏಳು ಐಪಿಎಲ್ ಆವೃತ್ತಿಗಳಲ್ಲಿ ಭಾಗವಹಿಸಿದ್ದು 97 ಪಂದ್ಯಗಳನ್ನು ಆಡಿದ್ದಾರೆ. ಈ ಐಪಿಎಲ್ ಪಂದ್ಯಗಳಲ್ಲಿ ಅವರು 80 ವಿಕೆಟ್ ದಾಖಲಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಬೌಲಿಂಗ್ ಅಸ್ತ್ರ ಅಕ್ಷರ್ ಪಟೇಲ್ ಈ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಆದರೆ ಕೆಲವೇ ದಿನಗಳಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಅಕ್ಷರ್ ಡೆಲ್ಲಿ ತಂಡದ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಸಾಂಪ್ರದಾಯಿಕ ಕ್ರಿಕೆಟ್ಗೆ ಚೆನೈಯಲ್ಲಿ ಪದಾರ್ಪಣೆ ಮಾಡಿದ ಪಟೇಲ್ ಕೇವಲ 2 ಟೆಸ್ಟ್ಗಳಲ್ಲಿ ಮಾಡಿರುವ ಕರಾಮತ್ತು ನೋಡಿದರೆ ಇವರನ್ನು ನಖಶಿಖಾಂತ ದ್ವೇಷಿಸುವ ವೈರಿಯೂ ‘ಭಲೇ ಪಟೇಲ್!’ ಎನ್ನದಿರಲಾರ. ಹೌದು, ಗುಜರಾತಿನ ನೀಳಕಾಯದ ಅಕ್ಷರ್ ಪಟೇಲ್ ಟೆಸ್ಟ್ ಕ್ರಿಕೆಟ್ ತಮ್ಮ ಆಗಮನವನ್ನು ಯಾರೂ ಊಹಿಸದ ರೀತಿಯಲ್ಲಿ ಘೋಷಿಸಿದ್ದರು.
ಟೀಂ ಇಂಡಿಯಾ ಪರ ಮಿಂಚಿಂಗ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆಡುವ ಅವಕಾಶ ಗಿಟ್ಟಿಸಿದ ಪಟೇಲ್, ಚೆನೈನ ಮೊಟೆರಾ ಸ್ಟೇಡಿಯಂನಲ್ಲಿ ಕೊನೆಗೊಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಚೆನ್ನೈನಲ್ಲಿ 2/40 ಮತ್ತು 5/60 ಹಾಗೂ ಮೊಟೆರಾದಲ್ಲಿ 6/38 ಮತ್ತು 5/32. ವಿಶ್ವದ ಯಾವುದೇ ಬೌಲರ್ ಇಂಥ ಪ್ರದರ್ಶನಗಳನ್ನು ತನ್ನ ಮೊದಲ ಎರಡು ಟೆಸ್ಟ್ಗಳಲ್ಲಿ ನೀಡುತ್ತೇನೆಂದು ಕನಸು ಕಂಡಿರಲಾರ.
ಮೊಟೆರಾ ಕ್ರೀಡಾಂಗಣದಲ್ಲಿ ಅಕ್ಷರ್ ಪಟೇಲ್ ಮತ್ತೂ ಕೆಲ ದಾಖಲೆಗಳನ್ನು ಸೃಷ್ಟಿಸಿದರು. ಟೆಸ್ಟ್ ಪಂದ್ಯವೊಂದರಲ್ಲಿ 10 ವಿಕೆಟ್ಗಳನ್ನು ಪಡೆದ ಭಾರತದ 28 ನೇ ಬೌಲರ್ ಮತ್ತು ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ ಭಾರತದ 8ನೇ ಬೌಲರ್ ಎನಿಸಿಕೊಂಡರು. ಹಾಗೆಯೇ, ಮೊಟರಾ ಮೈದಾನದಲ್ಲಿ 10 ವಿಕೆಟ್ ಪಡೆದ 5ನೇ ಬೌಲರ್ ಮತ್ತು ಅನಿಲ್ ಕುಂಬ್ಳೆ ನಂತರ ಈ ಸಾಧನೆಯನ್ನು ಪುನರಾವರ್ತಿಸಿದ ಭಾರತದ 2ನೇ ಬೌಲರ್ ಪಟೇಲ್ ಆಗಿರುತ್ತಾರೆ. ಹಾಗೆಯೇ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಪಡೆದ 9ನೇ ಎಡಗೈ ಸ್ಪಿನ್ನರ್ ಎನಿಸಿಕೊಂಡರು.
ಅಕ್ಷರ್ ಐಪಿಎಲ್ ಇತಿಹಾಸ ಅಕ್ಷರ್ ಇದುವರೆಗೆ ಏಳು ಐಪಿಎಲ್ ಆವೃತ್ತಿಗಳಲ್ಲಿ ಭಾಗವಹಿಸಿದ್ದು 97 ಪಂದ್ಯಗಳನ್ನು ಆಡಿದ್ದಾರೆ. ಈ ಐಪಿಎಲ್ ಪಂದ್ಯಗಳಲ್ಲಿ ಅವರು 80 ವಿಕೆಟ್ ದಾಖಲಿಸಿದ್ದಾರೆ. ಅದೇ ಸಮಯದಲ್ಲಿ, ಅವರ ಬ್ಯಾಟ್‌ನಿಂದ 913 ರನ್ ಗಳಿಸಲಾಗಿದೆ. ದೆಹಲಿ ಕ್ಯಾಪಿಟಲ್ಸ್ ಮೊದಲು ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದಾರೆ. ಅಕ್ಷರ್ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಸರಣಿಯ ಎಲ್ಲಾ ಟೆಸ್ಟ್ ಪಂದ್ಯಗಳಲ್ಲಿ ಆಡಿದ ಅವರು ತಮ್ಮ ಹೆಸರಿನಲ್ಲಿ 27 ವಿಕೆಟ್ ಪಡೆದರು.
