AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ಬ್ಯಾಟರ್​ಗಳು ಝೀರೋಗೆ ಔಟ್: 2 ಎಸೆತಗಳಲ್ಲಿ ಮುಗಿದ ಟಿ20 ಪಂದ್ಯ..!

T20 Cricket: ಟಿ20 ಪಂದ್ಯವೊಂದು ಕೇವಲ 2 ಎಸೆತಗಳ ಚೇಸ್​ನೊಂದಿಗೆ ಮುಗಿದಿದೆ. ಅದು ಕೂಡ ಕೇವಲ 5 ರನ್​ಗಳನ್ನು ಬೆನ್ನತ್ತುವ ಮೂಲಕ. ಇಂಟ್ರೆಸ್ಟಿಂಗ್ ವಿಷಯ ಎಂದರೆ ಮೊದಲು ಬ್ಯಾಟ್ ಮಾಡಿದ ತಂಡ ಒಂದೇ ಒಂದು ರನ್​ಗಳಿಸಿರಲಿಲ್ಲ ಎಂಬುದು. ಅಂದರೆ ಎಕ್ಸ್​ಟ್ರಾ ರನ್​ಗಳ ಮೂಲಕವೇ ಎದುರಾಳಿ ತಂಡಕ್ಕೆ ಗುರಿ ನೀಡಲಾಗಿದೆ.

10 ಬ್ಯಾಟರ್​ಗಳು ಝೀರೋಗೆ ಔಟ್: 2 ಎಸೆತಗಳಲ್ಲಿ ಮುಗಿದ ಟಿ20 ಪಂದ್ಯ..!
ಸಾಂದರ್ಭಿಕ ಚಿತ್ರ
ಝಾಹಿರ್ ಯೂಸುಫ್
|

Updated on: Aug 12, 2025 | 1:16 PM

Share

ಟಿ20 ಇನಿಂಗ್ಸ್​ ಮುಗಿಯಲು ಎಷ್ಟೊತ್ತು ಬೇಕು? ಈ ಪ್ರಶ್ನೆಗೆ ಸದ್ಯದ ಉತ್ತರ ಕೇವಲ 2 ಎಸೆತಗಳು. ಏಕೆಂದರೆ ರಾಜಸ್ಥಾನದಲ್ಲಿ ನಡೆದ ಮಹಿಳಾ ಟಿ20 ಪಂದ್ಯವೊಂದರ ಇನಿಂಗ್ಸ್​ ಕೇವಲ 2 ಎಸೆತಗಳಲ್ಲಿ ಮುಗಿದಿದೆ. ಅಂದರೆ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಒಂದೇ ಒಂದು ರನ್​ ಕಲೆಹಾಕಿರಲಿಲ್ಲ ಎಂಬುದು ಅಚ್ಚರಿ.

ರಾಜಸ್ಥಾನ್ ರಾಜ್ಯದ ಹಿರಿಯ ಮಹಿಳಾ ತಂಡಕ್ಕೆ ಸಂಭಾವ್ಯ ಆಟಗಾರ್ತಿಯರ ಆಯ್ಕೆಗಾಗಿ ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್ ಜೈಪುರ ಮತ್ತು ಉದಯಪುರ ಜಿಲ್ಲಾ ಕೇಂದ್ರಗಳಲ್ಲಿ ರಾಜ್ಯ ಮಟ್ಟದ ಹಿರಿಯ ಮಹಿಳಾ ಟಿ20 ಪಂದ್ಯಾವಳಿಯನ್ನು ಆಯೋಜಿಸುತ್ತಿದೆ. ಈ ಟಿ20 ಟೂರ್ನಿಯಲ್ಲಿ ಸಿಕಾರ್ ಮತ್ತು ಸಿರೋಹಿ ಜಿಲ್ಲೆಗಳ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿರೋಹಿ ತಂಡದ ಆಟಗಾರ್ತಿಯರು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದ್ದರು. ಪರಿಣಾಮ ತಂಡದ ಖಾತೆ ತೆರೆಯುವ ಮುನ್ನವೇ 9 ವಿಕೆಟ್​ಗಳು ಕಳೆದುಕೊಂಡಿತು. ಅಂದರೆ 9 ಬ್ಯಾಟರ್​ಗಳು ಶೂನ್ಯಕ್ಕೆ ಔಟಾಗಿದ್ದರು.

ಇದಾದ ಬಳಿಕವಷ್ಟೇ ಸ್ಕೋರ್​ ಬೋರ್ಡ್ ಓಪನ್ ಆಗಿದೆ. ಅದು ಸಹ ಎಕ್ಸ್​ಟ್ರಾ ರನ್​ ಮೂಲಕ. ಸಿಕಾರ್ ತಂಡದ ಬೌಲರ್ 4 ಎಕ್ಸ್​ಟ್ರಾ ರನ್​ಗಳನ್ನು ನೀಡಿದ್ದರು. ಇದಾಗ್ಯೂ ಕೊನೆಯ ಬ್ಯಾಟರ್​ ರನ್​ಗಳಿಸಿಲ್ಲ ಎಂಬುದು ವಿಶೇಷ.

ಅಂದರೆ ಸಿರೋಹಿ ತಂಡದ 10 ಬ್ಯಾಟರ್​ಗಳು ಶೂನ್ಯಕ್ಕೆ ಔಟಾಗಿ ಪೆವಿಲಿಯನ್​ಗೆ ಮರಳಿದ್ದರು. ಅದರಂತೆ ಸಿಕಾರ್ ತಂಡವು 5 ರನ್​ಗಳ ಗುರಿ ಪಡೆಯಿತು. ಈ ಗುರಿಯನ್ನು 2 ಎಸೆತಗಳಲ್ಲಿ ಬೆನ್ನತ್ತುವ ಮೂಲಕ ಸಿಕಾರ್ ತಂಡ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಇದನ್ನೂ ಓದಿ: ರನ್​ ಸರದಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಿದ ಡೇವಿಡ್ ವಾರ್ನರ್

ಇದೀಗ ಸಿರೋಹಿ-ಸಿಕಾರ್ ತಂಡಗಳ ನಡುವಣ ಪಂದ್ಯದ ಸ್ಕೋರ್​ ಬೋರ್ಡ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪಂದ್ಯ ಆಯೋಜಿಸಿದ ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್ ಪ್ರತಿಭಾನ್ವೇಷಣಾ ಕಾರ್ಯಕ್ರಮವು ನಗೆಪಾಟಲಿಗೀಡಾಗಿದೆ.

Follow Us
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್
ಮಂತ್ರಾಲಯಕ್ಕೆ ಭಕ್ತ ಸಾಗರ: 21 ದಿನಗಳಲ್ಲೇ ಬಂತು ಕೋಟಿ ಕೋಟಿ ಕಾಣಿಕೆ!
ಮಂತ್ರಾಲಯಕ್ಕೆ ಭಕ್ತ ಸಾಗರ: 21 ದಿನಗಳಲ್ಲೇ ಬಂತು ಕೋಟಿ ಕೋಟಿ ಕಾಣಿಕೆ!
ಚಲಿಸುತ್ತಿದ್ದ ಓಮಿನಿ ಕಾರಿನಿಂದ ಕೆಳಗೆ ಬಿದ್ದ ಐವರು ಮಕ್ಕಳು!
ಚಲಿಸುತ್ತಿದ್ದ ಓಮಿನಿ ಕಾರಿನಿಂದ ಕೆಳಗೆ ಬಿದ್ದ ಐವರು ಮಕ್ಕಳು!
ಎಣ್ಣೆ ಕಿಕ್​ನಲ್ಲಿ ಮಹಿಳಾ PSIಗೇ ಕಾಲಿನಿಂದ ಒದ್ದು ನಿಂದಿಸಿದ ಯುವತಿ
ಎಣ್ಣೆ ಕಿಕ್​ನಲ್ಲಿ ಮಹಿಳಾ PSIಗೇ ಕಾಲಿನಿಂದ ಒದ್ದು ನಿಂದಿಸಿದ ಯುವತಿ