Sign In

By signing in or creating an account, you agree with Associated Broadcasting Company's Terms & Conditions and Privacy Policy.

1983 40th anniversary special: 2 ಟಿಕೆಟ್ ಕೊಡಲು ಒಪ್ಪದ್ದ ಇಂಗ್ಲೆಂಡ್; ಭಾರತ ಪ್ರತೀಕಾರ ತೀರಿಸಿಕೊಂಡಿದ್ದು ಹೇಗೆ ಗೊತ್ತಾ?

1983 40th anniversary special: ಆ ವೇಳೆ ಬಿಸಿಸಿಐ ಅಧ್ಯಕ್ಷ ಎನ್‌ಕೆಪಿ ಸಾಳ್ವೆ ಅವರು ಫೈನಲ್ ಪಂದ್ಯವನ್ನು ವೀಕ್ಷಿಸಲು ಅತಿಥೇಯ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಬಳಿ ಕೇವಲ ಎರಡೇ 2 ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದರು.

1983 40th anniversary special: 2 ಟಿಕೆಟ್ ಕೊಡಲು ಒಪ್ಪದ್ದ ಇಂಗ್ಲೆಂಡ್; ಭಾರತ ಪ್ರತೀಕಾರ ತೀರಿಸಿಕೊಂಡಿದ್ದು ಹೇಗೆ ಗೊತ್ತಾ?
ಭಾರತ ತಂಡ, ಅಂದಿನ ಬಿಸಿಸಿಐ ಅಧ್ಯಕ್ಷ ಎನ್‌ಕೆಪಿ ಸಾಳ್ವೆ
Follow us
ಪೃಥ್ವಿಶಂಕರ
|

Updated on:Jun 25, 2023 | 9:16 AM

25 ಜೂನ್ 1983.. ಅದೇಷ್ಟೋ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕನಸಲ್ಲೂ ಊಹಿಸಲಾಗದ ಘಟನೆಗೆ ಸಾಕ್ಷಿಯಾದ ದಿನ. ಕ್ರಿಕೆಟ್ ದುನಿಯಾದಲ್ಲಿ ಭಾರತವನ್ನು ಲೆಕ್ಕಕ್ಕೆ ಇಟ್ಟುಕೊಳ್ಳದ ದೇಶಗಳೆದುರು ಟೀಂ ಇಂಡಿಯಾದ (Team Inida)  ಹುಲಿಗಳು ತೊಡೆ ತಟ್ಟಿ ನಿಂತು ಎಲ್ಲರನ್ನೂ ಮಂತ್ರ ಮುಗ್ದರನ್ನಾಗಿಸಿದ ದಿನ. ವಿಶ್ವ ಕ್ರಿಕೆಟ್​ನಲ್ಲಿ ಸಾರ್ವಬೌಮರಾಗಿ ಮೆರೆಯುತ್ತಿದ್ದ ಕೆರಿಬಿಯನ್ ದೈತ್ಯರನ್ನು ಮಣಿಸಿ ಭಾರತ ವಿಶ್ವಕಪ್ ಗೆದ್ದ ದಿನ. ಆಂಗ್ಲರ ನಾಡಲ್ಲಿ ಟೀಂ ಇಂಡಿಯಾ ವಿಜಯ ಪತಾಕೆ ಹಾರಿಸಿದ ದಿನ. ಲಾರ್ಡ್ಸ್‌ನ ಐತಿಹಾಸಿಕ ಮೈದಾನದಲ್ಲಿ ಕಪಿಲ್ ದೇವ್ (Kapil Dev) ನಾಯಕತ್ವದ ಭಾರತ ವಿಶ್ವಕಪ್ ಎತ್ತಿ ಹಿಡಿದು ಇಂದಿಗೆ ಭರ್ತಿ 40 ವರ್ಷಗಳು ಪೂರ್ಣಗೊಂಡಿದೆ. ಆದರೆ ಅದೆಷ್ಟೇ ವರ್ಷಗಳು ಕಳೆದರು ಭಾರತ ಕ್ರಿಕೆಟ್​ಗೆ ಮಾತ್ರ 1983 ರ ವಿಶ್ವಕಪ್ (1983 Cricket World Cup) ಮಹತ್ವದ ತಿರುವು ನೀಡಿತು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಆ ಒಂದು ವಿಶ್ವಕಪ್ ಗೆಲುವು ಟೀಂ ಇಂಡಿಯಾದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಈಗ ಎಂತಹದ್ದೆ ಬಲಿಷ್ಠ ತಂಡವನ್ನು ಮಣಿಸುವ ಸಾಮಥ್ರ್ಯ ಟೀಂ ಇಂಡಿಯಾಕ್ಕಿದೆ. ಆದರೆ 40 ವರ್ಷಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಆ ವಿಶ್ವಕಪ್​ನಲ್ಲಿ ಪಾಲ್ಗೊಂಡಿದ್ದ 8 ದೇಶಗಳ ಪೈಕಿ ಯಾವ ದೇಶವೂ ಸಹ ಭಾರತ ವಿಶ್ವಕಪ್​ ಗೆಲ್ಲಲಿದೆ ಎಂಬುದನ್ನು ಕನಸಲ್ಲು ಊಹಿಸಿರಲಿಲ್ಲ. ಆದರೆ ಎಲ್ಲಾ ದೇಶಗಳನ್ನು ಮಂತ್ರಮುಗ್ದಗೊಳಿಸಿದ್ದ ಕಪಿಲ್ ನಾಯಕತ್ವದ ಭಾರತ ವಿಶ್ವಕಪ್ ಎತ್ತಿಹಿಡಿದಿತ್ತು. ಆದರೆ ಈ ವಿಶ್ವಕಪ್ ಪ್ರಯಾಣದಲ್ಲಿ ಭಾರತ ಎದುರಿಸಿದ ಅವಮಾನ ಒಂದೆರಡಲ್ಲ. ಪ್ರಶಸ್ತಿಗೆ ಸ್ಪರ್ಧಿಯೇ ಆಗಿರದ ಟೀಂ ಇಂಡಿಯಾವನ್ನು ಅತಿಥೇಯ ಇಂಗ್ಲೆಂಡ್ ನಿಕೃಷ್ಟವಾಗಿ ನಡೆಸಿಕೊಂಡಿತ್ತು. ಆಗಿನ ಬಿಸಿಸಿಐ ಅಧ್ಯಕ್ಷ ಎನ್‌ಕೆಪಿ ಸಾಳ್ವೆಗೆ ಇಂಗ್ಲೆಂಡ್ ಮಾಡಿದ ಅವಮಾನಕ್ಕೆ ಭಾರತ ನೀಡಿದ ತಿರುಗೇಟು ನೀಡಿದ ರೀತಿ ಈಗಲೂ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದಂತೆ ಉಳಿದಿದೆ.

1983 Cricket World Cup: ಭಾರತ ತನ್ನ ಚೊಚ್ಚಲ ವಿಶ್ವಕಪ್ ಗೆದ್ದು ಇಂದಿಗೆ ಭರ್ತಿ 40 ವರ್ಷ..!

ಕೇವಲ ಎರಡೇ ಎರಡು ಟಿಕೆಟ್ ಕೇಳಿದ್ದರು ಸಾಳ್ವೆ

ವಾಸ್ತವವಾಗಿ ಎನ್‌ಕೆಪಿ ಸಾಳ್ವೆ ಅವರು 1982 ರಿಂದ 1985 ರವರೆಗೆ ಬಿಸಿಸಿಐ ಅಧ್ಯಕ್ಷರಾಗಿದ್ದರು. ಅವರ ಅವಧಿಯಲ್ಲೇ ಭಾರತ 1983ರ ವಿಶ್ವಕಪ್‌ಗೆ ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಿತ್ತು. ಊಹೆಗೂ ಮೀರಿದ ಪ್ರದರ್ಶನ ನೀಡುವುದರೊಂದಿಗೆ ಭಾರತ ಫೈನಲ್​ಗೂ ಎಂಟ್ರಿಕೊಟ್ಟಿತ್ತು. ಆ ವೇಳೆ ಬಿಸಿಸಿಐ ಅಧ್ಯಕ್ಷ ಎನ್‌ಕೆಪಿ ಸಾಳ್ವೆ ಅವರು ಫೈನಲ್ ಪಂದ್ಯವನ್ನು ವೀಕ್ಷಿಸಲು ಅತಿಥೇಯ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಬಳಿ ಕೇವಲ ಎರಡೇ 2 ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದರು. ಆದರೆ ತನ್ನ ಬಳಿ ಟಿಕೆಟ್ ಇದ್ದರೂ ಸಹ ಇಂಗ್ಲೆಂಡ್ ಮಂಡಳಿ ಸಾಳ್ವೆ ಅವರಿಗೆ ಟಿಕೆಟ್ ನೀಡಲು ನಿರಾಕರಿಸಿತ್ತು. ಇದರಿಂದ ಅಸಮಾಧಾನಗೊಂಡ ಸಾಳ್ವೆ ಅವರು ಇಂಗ್ಲೆಂಡ್ ಮಂಡಳಿಯ ಸೊಕ್ಕು ಮುರಿಯುವ ಪಣ ತೊಟ್ಟರು. ಕೇವಲ ನಾಲ್ಕೇ ವರ್ಷಗಳಲ್ಲಿ ಸಾಳ್ವೆ ತಮ್ಮ ಪ್ರತಿಕಾರವನ್ನು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಅಂತಿಮವಾಗಿ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದ ಭಾರತ ವಿಶ್ವಕಪ್ ಗೆದ್ದು ತವರಿಗೆ ಮರಳಿತು. ಆದರೆ ಸಾಳ್ವೆ ಅವರ ಮನದಲ್ಲಿ ಮಾತ್ರ ಇಂಗ್ಲೆಂಡ್ ಮಂಡಳಿ ಮಾಡಿದ ಅವಮಾನ ಹಾಗೆಯೇ ಕುಳಿತಿತ್ತು. ಇಂಗ್ಲೆಂಡ್ ವಿರುದ್ಧ ಪ್ರತಿಕಾರದ ಪಣತೊಟ್ಟ ಸಾಳ್ವೆ ಅವರು ಕೇವಲ ನಾಲ್ಕೇ ವರ್ಷಗಳಲ್ಲಿ ಆಂಗ್ಲರು ಮಾಡಿದ್ದ ಅವಮಾನಕ್ಕೆ ಪ್ರತಿಕಾರ ತೀರಿಸಿಕೊಂಡಿದ್ದರು.

ಏಷ್ಯಾದ ದೇಶಗಳ ಕೈಯಲ್ಲಿ ಇದು ಸಾಧ್ಯವಿಲ್ಲ

ಇಂಗ್ಲೆಂಡ್‌ನ ಸೊಕ್ಕು ಮುರಿಯಲು ಸಾಳ್ವೆ ಅವರು ಮಾಡಿದ ಮೊದಲ ಕೆಲಸವೆಂದರೆ ಇಂಗ್ಲೆಂಡ್​ ನೆಲದ ಹೊರಗೆ ವಿಶ್ವಕಪ್ ಆಯೋಜಿಸಲು ಮುಂದಾದರು. ಆದರೆ ಈಗಿನಂತೆ ಭಾರತ ಕ್ರಿಕೆಟ್ ಆಗ ಅಷ್ಟು ಬಲಿಷ್ಠವಾಗಿರಲಿಲ್ಲ. ಹೀಗಾಗಿ ಇಂಗ್ಲೆಂಡ್ ನೆಲದ ಹೊರಗೆ ವಿಶ್ವಕಪ್ ಆಯೋಜಿಸುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಧೃತಿಗೆಡದ ಸಾಳ್ವೆ ಅವರು ಸತತ ಪ್ರಯತ್ನ ಮಾಡಿ ಭಾರತ ಹಾಗೂ ಪಾಕಿಸ್ತಾನದ ಸಹಭಾಗಿತ್ವದೊಂದಿಗೆ 1987 ರ ವಿಶ್ವಕಪ್ ಆಯೋಜಿಸಲು ಮುಂದಾದರು. ವಿಶ್ವಕಪ್‌ ಆತಿಥ್ಯದಿಂದ ದಿಗ್ಭ್ರಮೆಗೊಂಡ ಇಂಗ್ಲೆಂಡ್, ಏಷ್ಯಾದ ದೇಶಗಳು ಇಂತಹ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಲು ಸಾಧ್ಯವಿಲ್ಲ ಎಂದಿತ್ತು.

ಮೊದಲ ಬಾರಿಗೆ ಇಂಗ್ಲೆಂಡ್‌ನ ಹೊರಗೆ ವಿಶ್ವಕಪ್

ಇಂಗ್ಲೆಂಡ್ ಮಂಡಳಿಯ ಈ ಹೇಳಿಕೆಯು ಸಾಳ್ವೆ ಅವರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿತು. ಅವರು ಲಾಹೋರ್‌ನಲ್ಲಿ ಪಾಕಿಸ್ತಾನ ಮಂಡಳಿಯೊಂದಿಗೆ ಸಭೆ ನಡೆಸಿ ಎಲ್ಲದಕ್ಕೂ ಅಂತಿಮ ಸ್ಪರ್ಷ ನೀಡಿದರು. ಸಾಳ್ವೆ ಅವರ ಪ್ರಯತ್ನದ ಫಲವೆಂದರೆ 1987 ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್‌ನ ಹೊರಗೆ ವಿಶ್ವಕಪ್ ಆಡಲಾಯಿತು. ಅದೂ ಸಹ ಒಂದು ಕ್ರಿಕೆಟ್ ಮಂಡಳಿಯ ಅಧ್ಯಕ್ಷರಿಗೆ ಇಂಗ್ಲೆಂಡ್ ಟಿಕೆಟ್ ನೀಡಲು ನಿರಾಕರಿಸಿದ ದೇಶದಲ್ಲಿ ಆಡಲಾಯಿತು. ಭಾರತವು ಪಾಕಿಸ್ತಾನದೊಂದಿಗೆ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿತು. ಆ ನಂತರ ಭಾರತ ಇಲ್ಲಿಯವರೆಗೆ 3 ಬಾರಿ ಆತಿಥ್ಯ ವಹಿಸಿದ್ದು, ಈ ವರ್ಷ ನಾಲ್ಕನೇ ಬಾರಿಗೆ ಆತಿಥ್ಯ ವಹಿಸಲು ಸಕಲ ತಯಾರಿ ಮಾಡಿಕೊಂಡಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:13 am, Sun, 25 June 23