AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜೆ ಸಿಗಲಿಲ್ಲ, ಮಗ ಉಳಿಯಲಿಲ್ಲ, ನನಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು: ಕಾನ್ಸಸ್ಟೇಬಲ್ ಅಳಲು

ವಿಜಯಪುರದ ಗಾಂಧಿ ಚೌಕ್ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಎ.ಎಸ್. ಬಂಡುಗೋಳ ಅವರ ನವಜಾತ ಶಿಶು ಅನಾರೋಗ್ಯದಿಂದ ಮೃತಪಟ್ಟಿದೆ. ಮಗು ಆಸ್ಪತ್ರೆಗೆ ದಾಖಲಾಗಿದ್ದಾಗ ಅಧಿಕಾರಿಗಳು ರಜೆ ನೀಡಿಲ್ಲ ಎಂದು ಕಾನ್‌ಸ್ಟೆಬಲ್ ಎ.ಎಸ್. ಬಂಡುಗೋಳ ಆರೋಪ ಮಾಡಿದ್ದಾರೆ. ಹಿರಿಯ ಅಧಿಕಾರಿಗಳು ರಜೆ ನೀಡದಿದ್ದಕ್ಕೆ ಕಾನ್‌ಸ್ಟೆಬಲ್ ಎ.ಎಸ್. ಬಂಡುಗೋಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ಏನಿದು ಪ್ರಕರಣ? ಇಲ್ಲಿದೆ ವಿವರ

ರಜೆ ಸಿಗಲಿಲ್ಲ, ಮಗ ಉಳಿಯಲಿಲ್ಲ, ನನಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು: ಕಾನ್ಸಸ್ಟೇಬಲ್ ಅಳಲು
ಪೇದೆ ಎ.ಎಸ್ ಬಂಡುಗೊಳ ವಾಟ್ಸಪ್​ ಸಂದೇಶ
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on: Mar 04, 2025 | 11:52 AM

Share

ವಿಜಯಪುರ, ಮಾರ್ಚ್​ 04: “ನನ್ನ ಮಗನಿಗೆ ಚಿಕಿತ್ಸೆ ಕೊಡಿಸಲು ರಜೆ ಸಿಗಲಿಲ್ಲ, ಕಡೆಗೂ ‌ನನ್ನ ಮಗ ಉಳಿಯಲಿಲ್ಲ. ನನಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು. ನನಗೆ ಬಹಳ ನೋವಾಗಿದೆ” ಈ ರೀತಿಯಾಗಿ ವಿಜಯಪುರ (Vijayapura) ಜಿಲ್ಲಾ ಪೊಲೀಸ್ ಸಿಬ್ಬಂದಿಗಳ ವಾಟ್ಸಪ್​ ಗ್ರೂಪ್​ನಲ್ಲಿ ಗಾಂಧಿ ಚೌಕ್​ ಪೊಲೀಸ್ ಠಾಣೆಯ (Gandhi Chowk Police Station) ಪೊಲೀಸ್​ ಪೇದೆ ಎ. ಎಸ್ ಬಂಡುಗೊಳ ಸಂದೇಶ ಕಳುಹಿಸಿದ್ದಾರೆ.

ಕಾನ್ಸಸ್ಟೇಬಲ್ ಎಎಸ್ ಬಂಡುಗೋಳ ಅವರ ನವಜಾತ ಶಿಶು ಅನಾರೋಗ್ಯದ ಕಾರಣ ಐಸಿಯುನಲ್ಲಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಗು‌ ಮೃತಪಟ್ಟಿದೆ. ಮಗು ಮೃತಪಟ್ಟ ಬಳಿಕ ಎಎಸ್ ಬಂಡುಗೊಳ ಅವರು ಐಸಿಯುನಲ್ಲಿನ ಮಗುವಿನ ಫೋಟೋ ತೆಗೆದು ಪೊಲೀಸ್ ಸಿಬ್ಬಂದಿಗಳ ಗ್ರೂಪ್​ನಲ್ಲಿ ಈ ರೀತಿಯಾಗಿ ಬರೆದು ಹಾಕಿದ್ದಾರೆ. ಈ‌ ಘಟನೆಯನ್ನು ಜೊಹೇದ್ ಕಿಂಗ್ ಎಂಬ ಹೆಸರಿನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಸ್ಟ್​ ಮಾಡಿ, ಡಿಜಿಪಿ, ಗೃಹ ಸಚಿವ ಜಿ‌. ಪರಮೇಶ್ವರ್​ ಹಾಗೂ ಟಿವಿ9ಗೆ ಟ್ಯಾಗ್ ಮಾಡಲಾಗಿದೆ.

ಇದನ್ನೂ ಓದಿ: ಕಿರುಸಾಲ, ಬಡ್ಡಿ ವ್ಯವಹಾರ: ವಿಜಯಪುರ ಜಿಲ್ಲೆಯ 25 ಠಾಣಾ ವ್ಯಾಪ್ತಿಯ 104 ಕಡೆ ಪೊಲೀಸರು ದಾಳಿ

ಇದನ್ನೂ ಓದಿ
Image
ವಿಜಯಪುರ ವೈದ್ಯಕೀಯ​ ಕಾಲೇಜಿನಲ್ಲಿ ಕಾಶ್ಮೀರಿ ವಿದ್ಯಾರ್ಥಿಗೆ ರ‍್ಯಾಗಿಂಗ್
Image
ಆರೋಪಿಗಳನ್ನು ವಿಜಯಪುರದ ದರ್ಗಾ ಜೈಲಿಗೆ ಕರೆದೊಯ್ದ ಪೊಲೀಸರು
Image
ಭೀಮಾತೀರದ ಹಂತಕ ಬಾಗಪ್ಪ ಹರಿಜನ ಕೊಲೆ ರಹಸ್ಯ ಬಯಲು
Image
ಮುಖ್ಯವಾಹಿನಿಗೆ ಬರುವ ಪ್ರಮಾಣಿಕ ಪ್ರಯತ್ನ ಬಾಗಪ್ಪ ಮಾಡುತ್ತಿದ್ದ: ಮಲಗೊಂಡ

ಈ ಕುರಿತು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಕಾನ್ಸಸ್ಟೇಬಲ್ ಎ ಎಸ್ ಬಂಡುಗೋಳ ಮೌಖಿಕವಾಗಿ ಹಾಗೂ ಲಿಖಿತವಾಗಿ ಗಾಂಧಿಚೌಕ್ ಪೊಲೀಸ್ ಠಾಣಾಧಿಕಾರಿಗಳ ಬಳಿ‌‌ ರಜೆ ಕೇಳಿಲ್ಲ. ಕಾನ್ಸಸ್ಟೇಬಲ್ ಎ ಎಸ್ ಬಂಡುಗೋಳ ಎರಡು ದಿನ ಕರ್ತವ್ಯಕ್ಕೆ ಹಾಜರಾಗಿಲ್ಲ. ಎ ಎಸ್ ಬಂಡುಗೋಳ‌ ಪತ್ನಿಗೆ ಇದು ಮೂರನೇ ಹೆರಿಗೆ ಎಂದು ತಿಳಿದು‌ಬಂದಿದೆ. ಇಲಾಖಾ‌ ಸಿಬ್ಬಂದಿಗಳ ಗ್ರೂಪ್​ನಲ್ಲಿ ಪೋಸ್ಟ್ ಹಾಕಿದ್ದಾನೆ. ಈ ಘಟನೆ ಕುರಿತು ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್