AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆ ಒಂದು ಪಂದ್ಯಕ್ಕೆ ಏಕೆ ಅಷ್ಟೊಂದು ಮನ್ನಣೆ’?; ವಿಶ್ವಕಪ್​ಗೂ ಮುನ್ನ ಸ್ಮೃತಿ ಮನವಿ

Smriti Mandhana:2026ರ ಮಹಿಳಾ ಟಿ20 ವಿಶ್ವಕಪ್ ಸಮೀಪಿಸುತ್ತಿದ್ದು, ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ವಿಶೇಷ ಮನವಿ ಮಾಡಿದ್ದಾರೆ. ಭಾರತ-ಪಾಕ್ ಪಂದ್ಯಕ್ಕೆ ಮಾತ್ರವಲ್ಲದೆ, ಪಂದ್ಯಾವಳಿಯ ಎಲ್ಲಾ ಪಂದ್ಯಗಳಿಗೂ ಅಭಿಮಾನಿಗಳು ಮತ್ತು ಮಾಧ್ಯಮಗಳು ಸಮಾನ ಗಮನ ಮತ್ತು ಬೆಂಬಲ ನೀಡಬೇಕು. ಮಹಿಳಾ ಕ್ರಿಕೆಟ್ ಪ್ರಗತಿಗೆ ಇದು ಅತ್ಯಗತ್ಯ ಎಂದು ಮಂಧಾನ ಒತ್ತಿ ಹೇಳಿದ್ದಾರೆ.

‘ಆ ಒಂದು ಪಂದ್ಯಕ್ಕೆ ಏಕೆ ಅಷ್ಟೊಂದು ಮನ್ನಣೆ’?; ವಿಶ್ವಕಪ್​ಗೂ ಮುನ್ನ ಸ್ಮೃತಿ ಮನವಿ
Smriti Mandhana
ಪೃಥ್ವಿಶಂಕರ
|

Updated on:Jun 04, 2026 | 9:14 PM

Share

2026 ರ ಮಹಿಳಾ ಟಿ20 ವಿಶ್ವಕಪ್ (2026 Women’s T20 World Cup) ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಈ ಚುಟುಕು ಸಮರ ಜೂನ್ 12 ರಿಂದ ಜುಲೈ 5 ರವರೆಗೆ ನಡೆಯಲಿದೆ. ಭಾರತ ವನಿತಾ ಪಡೆ ಜೂನ್ 14 ರಂದು ನಡೆಯಲಿರುವ ಪಾಕಿಸ್ತಾನ ವಿರುದ್ಧದ ( India vs Pakistan) ಪಂದ್ಯದೊಂದಿಗೆ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಪಂದ್ಯಕ್ಕಾಗಿ ಇಡೀ ವಿಶ್ವ ಕ್ರಿಕೆಟ್ ಕಾದು ಕುಳಿತಿದೆ. ಏಕೆಂದರೆ ಉಭಯ ದೇಶಗಳ ತಂಡಗಳ ನಡುವಿನ ಕ್ರಿಕೆಟ್ ಪಂದ್ಯಕ್ಕೆ ವಿಶೇಷ ಅಭಿಮಾನಿಗಳ ಬಳಗವೇ ಇದೆ. ಅದು ಪುರುಷರ ಕ್ರಿಕೆಟ್ ಆಗಿರಲಿ ಅಥವಾ ಮಹಿಳಾ ಕ್ರಿಕೆಟ್ ಆಗಿರಲಿ, ಪಂದ್ಯ ನಡೆದಾಗಲೆಲ್ಲ ಮೈದಾನಗಳು ತುಂಬಿ ತುಳುಕುತ್ತವೆ. ಆದರೆ ಈ ಪಂದ್ಯ ನಡೆಯುವುದಕ್ಕೂ ಮುನ್ನವೇ ಭಾರತ ಮಹಿಳಾ ತಂಡದ ಉಪನಾಯಕಿ ಮತ್ತು ಸ್ಟಾರ್ ಓಪನರ್ ಸ್ಮೃತಿ ಮಂಧಾನ (Smriti Mandhana) ಮಾಧ್ಯಮ ಮತ್ತು ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿದ್ದಾರೆ.

ಹೈಪ್ ಸೃಷ್ಟಿಸುವ ಅಗತ್ಯವಿಲ್ಲ

ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಸ್ಮೃತಿ ಮಂಧಾನ ಮಾತನಾಡಿ, ‘ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ, ಭಾರತ-ಪಾಕಿಸ್ತಾನ ಪಂದ್ಯದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿದ್ದವು. ಇದನ್ನು ಉಲ್ಲೇಖಿಸಿರುವ ಮಂಧಾನ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮಾತ್ರವಲ್ಲ.. ಇತರ ಪಂದ್ಯಗಳಿಗೂ ಅದೇ ಮಟ್ಟದ ಕ್ರೇಜ್ ಇರಬೇಕೆಂದು ನಾನು ಬಯಸುತ್ತೇನೆ. ಈ ಒಂದು ಪಂದ್ಯಕ್ಕೆ ವಿಶೇಷ ಹೈಪ್ ಸೃಷ್ಟಿಸುವ ಅಗತ್ಯವಿಲ್ಲ, ಏಕೆಂದರೆ ಈಗಾಗಲೇ ಅದರ ಬಗ್ಗೆ ಸಾಕಷ್ಟು ಕ್ರೇಜ್ ಇದೆ. ಟೂರ್ನಿಯಾದ್ಯಂತ ಎಲ್ಲಾ ಅಭಿಮಾನಿಗಳು ನಮ್ಮನ್ನು ಬೆಂಬಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ.

ಮಹಿಳಾ ಕ್ರಿಕೆಟ್ ಪ್ರಸ್ತುತ ಪ್ರಪಂಚದಾದ್ಯಂತ ಅಪಾರ ಜನಪ್ರಿಯತೆಯನ್ನು ಗಳಿಸುತ್ತಿದೆ ಮತ್ತು ಪ್ರತಿಯೊಂದು ತಂಡದಲ್ಲೂ ಸಾಕಷ್ಟು ಪ್ರತಿಭಾನ್ವಿತ ಆಟಗಾರ್ತಿಯರು ಇದ್ದಾರೆ. ಹೀಗಾಗಿ ಅಭಿಮಾನಿಗಳು, ಕ್ರೀಡಾ ವಿಶ್ಲೇಷಕರು ಮತ್ತು ಮಾಧ್ಯಮಗಳು ಭಾರತ-ಪಾಕ್ ಪಂದ್ಯಕ್ಕೆ ಮಾತ್ರವಲ್ಲದೆ ಪಂದ್ಯಾವಳಿಯ ಇತರ ಎಲ್ಲಾ ಪಂದ್ಯಗಳಿಗೂ ಸಮಾನ ಗಮನ ನೀಡಬೇಕು, ಆಗ ಮಾತ್ರ ಮಹಿಳಾ ಕ್ರಿಕೆಟ್‌ಗೆ ನಿಜವಾದ ಮನ್ನಣೆ ಸಿಗುತ್ತದೆ ಎಂದಿದ್ದಾರೆ.

ಲೀಗ್ ಹಂತದಲ್ಲಿ ಭಾರತದ ವೇಳಾಪಟ್ಟಿ

ಈ ವಿಶ್ವಕಪ್‌ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಮಾತ್ರವಲ್ಲದೆ ಇತರ ಕೆಲವು ಬಲಿಷ್ಠ ತಂಡಗಳನ್ನೂ ಎದುರಿಸಬೇಕಾಗಿದೆ. ಜೂನ್ 14 ರಂದು ಪಾಕಿಸ್ತಾನ ವಿರುದ್ಧ ಭಾರತ ಗುಂಪು ಹಂತದಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಅದರ ನಂತರ, ನೆದರ್ಲ್ಯಾಂಡ್ಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಲೀಗ್ ಪಂದ್ಯಗಳನ್ನು ಆಡಲಿದೆ. ಆದ್ದರಿಂದ, ಪಂದ್ಯಾವಳಿಯಲ್ಲಿ ಮುಂದುವರಿಯಲು ಪ್ರತಿಯೊಂದು ಪಂದ್ಯವು ಬಹಳ ಮುಖ್ಯ ಎಂಬುದು ಸ್ಮೃತಿ ಮಂಧಾನ ಅವರ ಅಭಿಪ್ರಾಯವಾಗಿದೆ.

Womens T20 World Cup 2026: ಮಹಿಳಾ ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾ ಪ್ರಕಟ

ಭಾರತ- ಪಾಕ್ ಮುಖಾಮುಖಿ ದಾಖಲೆ

ಮಹಿಳಾ ಟಿ20 ಕ್ರಿಕೆಟ್ ಇತಿಹಾಸವನ್ನು ನೋಡಿದರೆ, ಭಾರತ ತಂಡವು ಪಾಕಿಸ್ತಾನದ ವಿರುದ್ಧ ಅಜೇಯ ದಾಖಲೆಯನ್ನು ಹೊಂದಿದೆ. ಇಲ್ಲಿಯವರೆಗೆ, ಎರಡೂ ತಂಡಗಳು 16 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಟೀಂ ಇಂಡಿಯಾ 13 ಬಾರಿ ಗೆದ್ದಿದ್ದರೆ, ಪಾಕಿಸ್ತಾನ ಕೇವಲ 3 ಪಂದ್ಯಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಎರಡು ವರ್ಷಗಳ ಹಿಂದೆ 2024 ರ ಟಿ20 ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದಾಗ ಭಾರತ ತಂಡ, ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿತು. ಹೀಗಾಗಿ ಈ ಬಾರಿಯೂ ಟೀಂ ಇಂಡಿಯಾವೇ ಗೆಲ್ಲುತ್ತದೆ ಎಂಬುದು ಅಭಿಮಾನಿಗಳ ಆಶಯವಾಗಿದೆ.

Published On - 9:13 pm, Thu, 4 June 26

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ದರ್ಶನ್ ತಂಡದ ನೊಟೀಸ್​​ ಬಗ್ಗೆ ‘ಬಾಸ್’ ಸಿನಿಮಾ ತಂಡ ಮಾತು
ದರ್ಶನ್ ತಂಡದ ನೊಟೀಸ್​​ ಬಗ್ಗೆ ‘ಬಾಸ್’ ಸಿನಿಮಾ ತಂಡ ಮಾತು
ಜಿಲ್ಲೆಗಳ ಸಮಸ್ಯೆ ಪಟ್ಟಿ ಮಾಡಿ 25 ದಿನಗಳ ಒಳಗೆ ಕೊಡಿ: ಡಿಕೆಶಿ ಸೂಚನೆ
ಜಿಲ್ಲೆಗಳ ಸಮಸ್ಯೆ ಪಟ್ಟಿ ಮಾಡಿ 25 ದಿನಗಳ ಒಳಗೆ ಕೊಡಿ: ಡಿಕೆಶಿ ಸೂಚನೆ
ಸಿಎಂ ಆದ 2ನೇ ದಿನಕ್ಕೆ ರೌಡಿಗಳ ವಿರುದ್ಧ ಸಮರ ಸಾರಿದ ಡಿಕೆ ಶಿವಕುಮಾರ್!
ಸಿಎಂ ಆದ 2ನೇ ದಿನಕ್ಕೆ ರೌಡಿಗಳ ವಿರುದ್ಧ ಸಮರ ಸಾರಿದ ಡಿಕೆ ಶಿವಕುಮಾರ್!
ಪಾರದರ್ಶಕವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಡಿಕೆಶಿ ಖಡಕ್ ಸೂಚನೆ​​
ಪಾರದರ್ಶಕವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಡಿಕೆಶಿ ಖಡಕ್ ಸೂಚನೆ​​
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್