ICC Player Of The Month Award: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಮೂವರು ಭಾರತೀಯರ ನಡುವೆ ಪೈಪೋಟಿ: ಯಾರೆಲ್ಲ ನೋಡಿ
ICC Player of the Month Award September 2025: ಸೆಪ್ಟೆಂಬರ್ 2025 ರ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಜಿಂಬಾಬ್ವೆಯ ಬ್ರಿಯಾನ್ ಬೆನೆಟ್ ಜೊತೆಗೆ ಭಾರತದ ತಾರೆಯರಾದ ಅಭಿಷೇಕ್ ಶರ್ಮಾ ಮತ್ತು ಕುಲ್ದೀಪ್ ಯಾದವ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಮಹಿಳೆಯರ ಕೋಟಾದಿಂದ ಭಾರತದ ಸ್ಮೃತಿ ಮಂಧಾನ ಕೂಡ ಆಯ್ಕೆ ಆಗಿದ್ದಾರೆ.

ಬೆಂಗಳೂರು (ಅ. 07): ಭಾರತದ ಸ್ಫೋಟಕ ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ (Abhishek Sharma) ಮತ್ತು ಕುಲ್ದೀಪ್ ಯಾದವ್ ಪುರುಷರ ವಿಭಾಗದಲ್ಲಿ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಮಹಿಳಾ ವಿಭಾಗದಲ್ಲಿ ಸ್ಮೃತಿ ಮಂಧಾನ ಸೆಪ್ಟೆಂಬರ್ ತಿಂಗಳ ಪ್ರಶಸ್ತಿಗೆ ಸ್ಪರ್ಧಿಸುತ್ತಿದ್ದಾರೆ. ಯುಎಇಯಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಅಭಿಷೇಕ್ ಶರ್ಮಾ ಅದ್ಭುತ ಪ್ರದರ್ಶನ ನೀಡಿದರು. ಅವರು ಏಳು ಟಿ20 ಪಂದ್ಯಗಳಲ್ಲಿ 200 ಸ್ಟ್ರೈಕ್ ರೇಟ್‌ನೊಂದಿಗೆ ಮೂರು ಅರ್ಧಶತಕಗಳ ಸಹಾಯದಿಂದ 314 ರನ್ ಗಳಿಸಿದರು. ಅವರನ್ನು ಟೂರ್ನಮೆಂಟ್‌ನ ಅತ್ಯುತ್ತಮ ಆಟಗಾರ ಎಂಬ ಪ್ರಶಸ್ತಿ ಕೂಡ ಬಾಚಿಕೊಂಡರು.
ಏತನ್ಮಧ್ಯೆ, ಅಭಿಷೇಕ್ ಶರ್ಮಾ ಐಸಿಸಿ ಟಿ20 ಶ್ರೇಯಾಂಕದಲ್ಲಿ ತಮ್ಮ ಪ್ರಾಬಲ್ಯವನ್ನು ಕಾಯ್ದುಕೊಂಡಿದ್ದಾರೆ. ಅವರ ರೇಟಿಂಗ್ ಈಗ 931 ತಲುಪಿದೆ, ಇದು ಐಸಿಸಿ ಟಿ20 ಶ್ರೇಯಾಂಕದಲ್ಲಿ ಇದುವರೆಗಿನ ಅತ್ಯಧಿಕವಾಗಿದೆ. ಇದುವರೆಗೆ ಯಾರೂ ಇಂತಹ ರೇಟಿಂಗ್ ಸಾಧಿಸಿಲ್ಲ.
ಏಷ್ಯಾಕಪ್‌ನಲ್ಲಿ ಕುಲ್ದೀಪ್ 17 ವಿಕೆಟ್‌ಗಳನ್ನು ಕಬಳಿಸಿದ್ದರು
ಎಡಗೈ ಮಣಿಕಟ್ಟಿನ ಸ್ಪಿನ್ನರ್ ಕುಲ್ದೀಪ್ ಯಾದವ್ ಕೂಡ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ತೋರಿದರು. ಅವರು ಏಷ್ಯಾ ಕಪ್‌ನಲ್ಲಿ 17 ವಿಕೆಟ್‌ಗಳನ್ನು ಕಬಳಿಸಿದರು, 6.27 ರ ಎಕಾನಮಿ ದರದಲ್ಲಿ ಬೌಲಿಂಗ್ ಮಾಡಿದರು. ಅವರು ಯುಎಇ ವಿರುದ್ಧ ಏಳು ರನ್‌ಗಳಿಗೆ ನಾಲ್ಕು ವಿಕೆಟ್‌ಗಳೊಂದಿಗೆ ತಮ್ಮ ಅಭಿಯಾನವನ್ನು ಪ್ರಾರಂಭಿಸಿದರು ಮತ್ತು ನಂತರ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ 30 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಪಡೆಯುವ ಮೂಲಕ ಭಾರತದ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತವು ಪಂದ್ಯಾವಳಿಯಲ್ಲಿ ಪಾಕಿಸ್ತಾನವನ್ನು ಮೂರು ಬಾರಿ ಸೋಲಿಸಿತು.
Team India: ಗಂಭೀರ್ ಮನೆಯಲ್ಲಿ ಟೀಮ್ ಇಂಡಿಯಾಕ್ಕೆ ಭರ್ಜರಿ ಭೋಜನ: ಔತಣಕೂಟಕ್ಕೆ ಸಜ್ಜು
ಜಿಂಬಾಬ್ವೆಯ ಬ್ರಿಯಾನ್ ಬೆನೆಟ್ ಕೂಡ ಈ ರೇಸ್‌ನಲ್ಲಿದ್ದಾರೆ
ಜಿಂಬಾಬ್ವೆಯ ಬ್ರಿಯಾನ್ ಬೆನೆಟ್ ಈ ನಾಮನಿರ್ದೇಶನ ಪಡೆದ ಮೂರನೇ ಆಟಗಾರ. ಇವರು ಸೆಪ್ಟೆಂಬರ್‌ನಲ್ಲಿ ಒಂಬತ್ತು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 497 ರನ್ ಗಳಿಸಿದರು, ಸರಾಸರಿ 55.22 ಮತ್ತು 165.66 ಸ್ಟ್ರೈಕಿಂಗ್. ಶ್ರೀಲಂಕಾ ಮತ್ತು ನಮೀಬಿಯಾ ವಿರುದ್ಧದ ಸರಣಿಯಲ್ಲಿ ಬೆನೆಟ್ ಅಗ್ರ ಸ್ಕೋರರ್ ಆಗಿದ್ದರು. ನಂತರ ಅವರು ಟಿ20 ವಿಶ್ವಕಪ್ ಆಫ್ರಿಕಾ ಪ್ರದೇಶ ಫೈನಲ್ಸ್‌ನ ಮೊದಲ ಮೂರು ಪಂದ್ಯಗಳಲ್ಲಿ 72, 65 ಮತ್ತು 111 ರನ್ ಗಳಿಸಿದರು. ಅವರ ಅಮೋಘ ಬ್ಯಾಟಿಂಗ್ ಜಿಂಬಾಬ್ವೆ 2026 ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಹಾಯ ಮಾಡಿತು.
ಪಾಕಿಸ್ತಾನಿ ಆಟಗಾರ್ತಿಯೊಂದಿಗೆ ಸ್ಮೃತಿ ಪೈಪೋಟಿ
ಮಹಿಳಾ ವಿಭಾಗದಲ್ಲಿ ಭಾರತದ ಅನುಭವಿ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರನ್ನು ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಸೆಪ್ಟೆಂಬರ್‌ನಲ್ಲಿ ನಾಲ್ಕು ಏಕದಿನ ಪಂದ್ಯಗಳಲ್ಲಿ 308 ರನ್ ಗಳಿಸಿದ್ದು, ಸರಾಸರಿ 77 ಮತ್ತು 135.68 ಸ್ಟ್ರೈಕಿಂಗ್‌ನೊಂದಿಗೆ. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅವರು 58, 117 ಮತ್ತು 125 ರನ್ ಗಳಿಸಿದ್ದಾರೆ. ಮಂಧಾನ ಜೊತೆಗೆ, ಪಾಕಿಸ್ತಾನದ ಸಿದ್ರಾ ಅಮೀನ್ ಮತ್ತು ದಕ್ಷಿಣ ಆಫ್ರಿಕಾದ ತಾಜ್ಮಿನ್ ಬ್ರಿಟ್ಸ್ ಕೂಡ ಮಹಿಳಾ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




