AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs PAK: ಪೋಸ್ಟ್ ಮ್ಯಾಚ್​ನಲ್ಲಿ ಹ್ಯಾರಿಸ್ ರೌಫ್​ನ ಮೈಚಳಿ ಬಿಡಿಸಿದ ಅಭಿಷೇಕ್ ಶರ್ಮಾ: ಏನು ಹೇಳಿದ್ರು ನೋಡಿ

Abhishek Sharma and Haris Rauf Fight: ಟೀಮ್ ಇಂಡಿಯಾ ಏಷ್ಯಾ ಕಪ್ 2025 ರ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿತು. ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅಬ್ಬರದ ಇನ್ನಿಂಗ್ಸ್ ಮೂಲಕ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದು. ಪಂದ್ಯದ ಮಧ್ಯೆ ಅನಗತ್ಯವಾಗಿ ಗಲಾಟೆ ಮಾಡಲು ಬಂದ ಹ್ಯಾರಿಸ್ ರೌಫ್ ಹಾಗೂ ಇತರೆ ಆಟಗಾರರ ಬಗ್ಗೆ ಅಭಿಷೇಕ್ ಶರ್ಮಾ ಪಂದ್ಯ ಮುಗಿದ ಬಳಿಕ ಮಾತನಾಡಿದ್ದಾರೆ.

IND vs PAK: ಪೋಸ್ಟ್ ಮ್ಯಾಚ್​ನಲ್ಲಿ ಹ್ಯಾರಿಸ್ ರೌಫ್​ನ ಮೈಚಳಿ ಬಿಡಿಸಿದ ಅಭಿಷೇಕ್ ಶರ್ಮಾ: ಏನು ಹೇಳಿದ್ರು ನೋಡಿ
Abhishek Sharma And Haris Rauf
ಪ್ರೀತಿ ಭಟ್​, ಗುಣವಂತೆ
| Edited By: |

Updated on: Sep 22, 2025 | 10:24 AM

Share

ಬೆಂಗಳೂರು (ಸೆ. 22): ಏಷ್ಯಾ ಕಪ್ 2025 ರ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ (Indian Cricket Team) ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 172 ರನ್‌ಗಳ ಗುರಿಯನ್ನು ನೀಡಿತು. ಆದಾಗ್ಯೂ, ಅಭಿಷೇಕ್ ಶರ್ಮಾ ಅವರ ಸ್ಫೋಟಕ ಇನ್ನಿಂಗ್ಸ್‌ನಿಂದಾಗಿ, ಟೀಮ್ ಇಂಡಿಯಾ ಸುಲಭವಾಗಿ ಪಂದ್ಯವನ್ನು ಗೆದ್ದಿತು. ಪಂದ್ಯದ ಸಮಯದಲ್ಲಿ, ಪಾಕಿಸ್ತಾನಿ ಆಟಗಾರರು ಅಭಿಷೇಕ್ ಶರ್ಮಾ ಅವರೊಂದಿಗೆ ಹಲವಾರು ಬಾರಿ ವಾಗ್ವಾದ ನಡೆಸಿದ್ದು ಕಂಡುಬಂದಿತು, ಇದಕ್ಕೆ ಅಭಿಷೇಕ್ ತಕ್ಕ ಉತ್ತರ ಕೂಡ ನೀಡಿದರು. ಪಂದ್ಯದ ನಂತರವೂ, ಅಭಿಷೇಕ್ ಪಾಕಿಸ್ತಾನ ತಂಡದ ಆಟಗಾರರನ್ನು ಸುಮ್ಮನೆ ಬಿಡದೆ ಖಡಕ್ ಆಗಿ ಮಾತನಾಡಿದ್ದಾರೆ.

ಪಾಕಿಸ್ತಾನದ ಬಗ್ಗೆ ಅಭಿಷೇಕ್ ಶರ್ಮಾ ಹೇಳಿದ್ದೇನು?

ಆಕ್ರಮಣಕಾರಿ ಇನ್ನಿಂಗ್ಸ್‌ಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅಭಿಷೇಕ್, ಪಾಕಿಸ್ತಾನಿ ಆಟಗಾರರು ಭಾರತದ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿದ್ದರು ಮತ್ತು ಅವರ ಆಕ್ರಮಣಕ್ಕೆ ನಾನು ನನ್ನ ಬ್ಯಾಟ್‌ನಿಂದ ಪ್ರತಿಕ್ರಿಯಿಸಿದೆ ಎಂದು ಹೇಳಿದರು. “ಅವರು (ಪಾಕಿಸ್ತಾನಿ ಆಟಗಾರರು) ನಮ್ಮ ಮೇಲೆ ದಾಳಿ ಮಾಡುತ್ತಿದ್ದ ರೀತಿ ನನಗೆ ಇಷ್ಟವಾಗಲಿಲ್ಲ ಮತ್ತು ನಾನು ಅವರಿಗೆ ಪ್ರತಿಕ್ರಿಯಿಸಲು ಸಾಧ್ಯವಿರುವ ಏಕೈಕ ಮಾರ್ಗ ಬ್ಯಾಟ್ ಮೂಲಕ” ಎಂದು ಅವರು ಹೇಳಿದರು.

Abhishek Sharma

ಅಭಿಷೇಕ್ ಶರ್ಮಾ ಬ್ಯಾಟಿಂಗ್ ವೈಖರಿ.

ಪಾಕ್ ಆಟಗಾರರು ಗಿಲ್-ಅಭಿಷೇಕ್ ಜೊತೆ ಅನಗತ್ಯವಾಗಿ ಜಗಳವಾಡಲು ಪ್ರಾರಂಭಿಸಿದರು. ಶಾಹೀನ್ ಶಾ ಅಫ್ರಿದಿ, ಹ್ಯಾರಿಸ್ ರೌಫ್ ಯಾವುದೇ ಕಾರಣವಿಲ್ಲದೆ, ಅಭಿಷೇಕ್ ಶರ್ಮಾ ಅವರನ್ನು ನಿರಂತರವಾಗಿ ದಿಟ್ಟಿಸಿನೋಡುತ್ತಿದ್ದರು, ಆದರೆ ಇದಕ್ಕೆ ತಗ್ಗದ ಭಾರತೀಯ ಬ್ಯಾಟರ್​ ಬ್ಯಾಟ್ ಮೂಲಕ ಪ್ರತಿಕ್ರಿಯಿಸಿದರು.

ಇದನ್ನೂ ಓದಿ
Image
ಇನ್‌ಸ್ಟಾ ಪೋಸ್ಟ್‌ ಮೂಲಕ ಪಾಕಿಸ್ತಾನಿಗಳ ಮಾನಹರಾಜು ಮಾಡಿದ ಗಿಲ್-ಅಭಿಷೇಕ್
Image
ಹುಟ್ಟು ಟೆರರಿಸ್ಟ್​ಗಳು: ಪಾಕ್ ಆಟಗಾರನ ಗನ್ ಸೆಲೆಬ್ರೇಷನ್​ಗೆ ಆಕ್ರೋಶ
Image
ಕೈ ಸನ್ನೆಯೊಂದಿಗೆ ಭಾರತೀಯ ಸೈನಿಕರನ್ನು ಹೀಯಾಳಿಸಿದ ಹಾರಿಸ್ ರೌಫ್
Image
ಪಾಕ್ ತಂಡದ ಮಾನ ಕಳೆದ ಸೂರ್ಯಕುಮಾರ್

IND vs PAK: ಇನ್‌ಸ್ಟಾಗ್ರಾಮ್ ಪೋಸ್ಟ್‌ ಮೂಲಕ ಪಾಕಿಸ್ತಾನಿಗಳ ಮಾನಹರಾಜು ಮಾಡಿದ ಶುಭ್​ಮನ್ ಗಿಲ್-ಅಭಿಷೇಕ್ ಶರ್ಮಾ

ಗಿಲ್ ಜೊತೆಗಿನ ಪಾಲುದಾರಿಕೆಯ ಬಗ್ಗೆ ಮಾತನಾಡಿದ ಅಭಿಷೇಕ್, “ನಾನು ಶಾಲಾ ದಿನಗಳಿಂದಲೂ ಶುಭ್‌ಮನ್ ಜೊತೆ ಆಡುತ್ತಿದ್ದೇನೆ ಮತ್ತು ಇಂತಹ ಪಾಲುದಾರಿಕೆಗಾಗಿ ಬಹಳ ಸಮಯದಿಂದ ಕಾಯುತ್ತಿದ್ದೆ. ನಾವು ಆಡುವ ರೀತಿ ತಂಡಕ್ಕೆ ಮುಖ್ಯವಾಗಿದೆ ಮತ್ತು ತಂಡವು ನನ್ನನ್ನು ಆ ರೀತಿಯಲ್ಲಿ ಆಡಲು ಪ್ರೋತ್ಸಾಹಿಸುವುದರಿಂದ ನಾನು ತುಂಬಾ ಆಕ್ರಮಣಕಾರಿಯಾಗಿ ಆಡಲು ಸಾಧ್ಯವಾಗುತ್ತಿದೆ” ಎಂದರು.

ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಶಾಹೀನ್ ಶಾ ಅಫ್ರಿದಿ ಅವರ ಪಂದ್ಯದ ಮೊದಲ ಎಸೆತದಲ್ಲೇ ಅವರು ಸಿಕ್ಸರ್ ಬಾರಿಸಿದರು. ಅದಾದ ನಂತರ, ಬಂದ ಬೌಲರ್​ಗಳ ಪೈಕಿ ಯಾರನ್ನೂ ಬಿಡದೆ ಬಿರುಸಿನ ವೇಗದಲ್ಲಿ ರನ್ ಗಳಿಸಿದರು.

ಅಭಿಷೇಕ್ ಶರ್ಮಾ 24 ಎಸೆತಗಳಲ್ಲಿ ಅರ್ಧಶತಕ

ಅಭಿಷೇಕ್ ಶರ್ಮಾ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರೊಂದಿಗೆ, ಪಾಕಿಸ್ತಾನ ವಿರುದ್ಧ ಟಿ20ಯಲ್ಲಿ ಅತಿ ವೇಗದ ಅರ್ಧಶತಕ ಗಳಿಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ಅಭಿಷೇಕ್ ಪಾತ್ರರಾದರು. ಟೀಮ್ ಇಂಡಿಯಾ ಪರ ಇನ್ನಿಂಗ್ಸ್ ಆರಂಭಿಸಿದ ಅಭಿಷೇಕ್ ಮತ್ತು ಶುಭಮನ್ ಗಿಲ್ ಮೊದಲ ವಿಕೆಟ್‌ಗೆ 105 ರನ್‌ಗಳ ದೊಡ್ಡ ಪಾಲುದಾರಿಕೆಯನ್ನು ಗಳಿಸಿದರು. ಈ ಪಾಲುದಾರಿಕೆಯಿಂದ ಟೀಮ್ ಇಂಡಿಯಾ 7 ಎಸೆತಗಳು ಬಾಕಿ ಇರುವಾಗ 6 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ