AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಸೆಮಿಫೈನಲ್ ವೇಳಾಪಟ್ಟಿ ಪ್ರಕಟ

ACC Mens Asia Cup Rising Stars 2025: ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. 8 ತಂಡಗಳೊಂದಿಗೆ ಶುರುವಾದ ಟೂರ್ನಿಯಲ್ಲಿ ಇದೀಗ ನಾಲ್ಕು ತಂಡಗಳು ನಾಕೌಟ್ ಹಂತಕ್ಕೇರಿದೆ. ಅದರಂತೆ ಭಾರತ, ಪಾಕಿಸ್ತಾನ್, ಬಾಂಗ್ಲಾದೇಶ್ ಹಾಗೂ ಶ್ರೀಲಂಕಾ ನಡುವೆ ಸೆಮಿಫೈನಲ್ ಪಂದ್ಯಗಳು ನಡೆಯಲಿದೆ.

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಸೆಮಿಫೈನಲ್ ವೇಳಾಪಟ್ಟಿ ಪ್ರಕಟ
Ind Vs Ban
ಝಾಹಿರ್ ಯೂಸುಫ್
|

Updated on: Nov 20, 2025 | 4:43 PM

Share

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟಿ20 ಟೂರ್ನಿಯ ಸೆಮಿಫೈನಲ್ಸ್ ವೇಳಾಪಟ್ಟಿ ಪ್ರಕಟವಾಗಿದೆ. ದೋಹಾದಲ್ಲಿ ನಡೆಯುತ್ತಿರುವ ಈ ಟೂರ್ನಿಯ ಸೆಮಿಫೈನಲ್ಸ್ ಪಂದ್ಯಗಳು ನವೆಂಬರ್ 21 ರಂದು ನಡೆಯಲಿದೆ. ಅಂದರೆ ಒಂದೇ ದಿನ ಎರಡು ಸೆಮಿಫೈನಲ್ ಪಂದ್ಯಗಳು ಜರುಗಲಿದೆ.

  • ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ಎ ಮತ್ತು ಬಾಂಗ್ಲಾದೇಶ್ ಎ ತಂಡಗಳು ಮುಖಾಮುಖಿಯಾಗಲಿದೆ.
  • ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ಎ ಮತ್ತು ಶ್ರೀಲಂಕಾ ಎ ತಂಡಗಳು ಸೆಣಸಲಿದೆ.
  • ಫೈನಲ್ ಪಂದ್ಯವು ನವೆಂಬರ್ 23 ರಂದು ಜರುಗಲಿದೆ.

ಈ ಮೂರು ಪಂದ್ಯಗಳೂ ದೋಹಾದ ಈಸ್ಟ್ ಎಂಡ್ ಪಾರ್ಕ್​ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟಿ20 ಟೂರ್ನಿಯ ಸೆಮಿಫೈನಲ್ಸ್ ಹಾಗೂ ಫೈನಲ್ ಪಂದ್ಯಗಳನ್ನು ಸೋನಿ ಲೈವ್ ಚಾನೆಲ್​ನಲ್ಲಿ ವೀಕ್ಷಿಸಬಹುದು. ಹಾಗೆಯೇ ಸೋನಿ ಲೈವ್ ಆ್ಯಪ್ ಹಾಗೂ ವೆಬ್​ಸೈಟ್​ನಲ್ಲೂ ಈ ಪಂದ್ಯದ ನೇರ ಪ್ರಸಾರ ಇರಲಿದೆ.

ಎಷ್ಟು ಗಂಟೆಗೆ ಪಂದ್ಯ ಶುರು?

ಭಾರತ ಎ ಮತ್ತು ಬಾಂಗ್ಲಾದೇಶ್ ಎ ನಡುವಣ ಮೊದಲ ಸೆಮಿಫೈನಲ್ ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಯಿಂದ ಶುರುವಾಗಲಿದೆ. ಇನ್ನು ಪಾಕಿಸ್ತಾನ್ ಎ ಮತ್ತು ಶ್ರೀಲಂಕಾ ನಡುವಣ ದ್ವಿತೀಯ ಸೆಮಿಫೈನಲ್ ಪಂದ್ಯವು ರಾತ್ರಿ 8 ಗಂಟೆಯಿಂದ ಆರಂಭವಾಗಲಿದೆ. ಹಾಗೆಯೇ ಫೈನಲ್ ಮ್ಯಾಚ್ ನವೆಂಬರ್ 23 ರಂದು ರಾತ್ರಿ 8 ಗಂಟೆಯಿಂದ ಶುರುವಾಗಲಿದೆ.

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಸೆಮಿಫೈನಲ್ ವೇಳಾಪಟ್ಟಿ:

  • ಭಾರತ A vs ಬಾಂಗ್ಲಾದೇಶ್ A: 3:00 PM IST – ನವೆಂಬರ್ 21
  • ಪಾಕಿಸ್ತಾನ್ A vs ಶ್ರೀಲಂಕಾ A: 8:00 PM IST – ನವೆಂಬರ್ 21

4 ತಂಡಗಳಲ್ಲಿರುವ ಆಟಗಾರರು:

ಭಾರತ ಎ: ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ನೆಹಾಲ್ ವಧೇರಾ, ನಮನ್ ಧೀರ್, ಸೂರ್ಯಾಂಶ್ ಶೆಡ್ಗೆ, ಜಿತೇಶ್ ಶರ್ಮಾ (ನಾಯಕ), ರಮಣ್‌ದೀಪ್ ಸಿಂಗ್, ಹರ್ಷ್ ದುಬೆ, ಅಶುತೋಷ್ ಶರ್ಮಾ, ಯಶ್ ಠಾಕೂರ್, ಗುರ್ಜಪ್ನೀತ್ ಸಿಂಗ್, ವಿಜಯ್ ಕುಮಾರ್ ವೈಶಾಕ್, ಯುಧ್ವೀರ್ ಸಿಂಗ್ ಚರಕ್, ಅಭಿಷೇಕ್ ಪೊರೆಲ್, ಸುಯಶ್ ಶರ್ಮಾ.

ಬಾಂಗ್ಲಾದೇಶ್ ಎ: ಅಕ್ಬರ್ ಅಲಿ (ನಾಯಕ), ಹಬೀಬುರ್ ರೆಹಮಾನ್, ಯಾಸಿರ್ ಅಲಿ, ಜಿಶಾನ್ ಆಲಂ, ಆರಿಫುಲ್ ಇಸ್ಲಾಂ, ರಕಿಬುಲ್ ಹಸನ್, ಮಹಿದುಲ್ ಅಂಕನ್, ತೋಫೆಲ್ ಅಹ್ಮದ್ ರೇಹಾನ್, ಮೃತುನ್‌ಜೋಯ್ ಚೌಧರಿ, ಮೆಹೆರೋಬ್ ಹಸನ್, ರಿಪಾನ್ ಮೊಂಡೋಲ್, ಅಬು ಹಿದರ್ ರೋನಿ, ಶಾದಿನ್‌ ಇಸ್ಲಾಮ್.

ಪಾಕಿಸ್ತಾನ್ ಎ: ಇರ್ಫಾನ್ ಖಾನ್ (ನಾಯಕ), ಯಾಸಿರ್ ಖಾನ್, ಮುಹಮ್ಮದ್ ನಯೀಮ್, ಮುಹಮ್ಮದ್ ಫೈಕ್, ಮಾಝ್ ಸದಾಖತ್, ಗಾಝಿ ಘೋರಿ, ಮುಹಮ್ಮದ್ ಶಹಝಾದ್, ಸಾದ್ ಮಸೂದ್, ಅರಾಫತ್ ಮಿನ್ಹಾಸ್, ಮುಬಾಸಿರ್ ಖಾನ್, ಶಾಹಿದ್ ಅಜೀಜ್, ಸುಫ್ಯಾನ್ ಮೊಕಿಮ್, ಉಬೈದ್ ಶಾ, ಮುಹಮ್ಮದ್ ಸಲ್ಮಾನ್, ಅಹ್ಮದ್ ದಾನಿಯಾಲ್.

ಇದನ್ನೂ ಓದಿ: VIDEO: ಪಾಕ್ ಆಟಗಾರನೊಂದಿಗೆ ಶೇಕ್ ಹ್ಯಾಂಡ್ ಮಾಡಿದ ಭಾರತೀಯ ಕ್ರಿಕೆಟಿಗ

ಶ್ರೀಲಂಕಾ ಎ: ದುನಿತ್ ವೆಲ್ಲಲಾಗೆ (ನಾಯಕ), ವಿಶೇನ್ ಹಳಂಬಗೆ, ನಿಸಾನ್ ಮದುಷ್ಕ, ಲಸಿತ್ ಕ್ರೂಸ್‌ಪುಲ್ಲೆ, ನುವಾನಿಡು ಫೆರ್ನಾಂಡೊ, ರಮೇಶ್ ಮೆಂಡಿಸ್, ಕವಿಂದು ಡಿ ಲಿವೇರಾ, ಸಹನ್ ಅರಾಚ್ಚಿಗೆ, ಅಹಾನ್ ವಿಕ್ರಮಸಿಂಘೆ, ಪ್ರಮೋದ್ ಮದುಶನ್, ಗರುಕ ಸಂಕೇತ್, ಇಸಿತಾ ವಿಜೆಸುಂದರ, ಮಿಕಂತ್ ವಿಜೇಸುಂದರ್.

Follow Us