AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs BAN: ಭಾರತ-ಬಾಂಗ್ಲಾದೇಶ ನಡುವೆ ಏಷ್ಯಾ ಕಪ್ ಫೈನಲ್?: ಒಂದು ಪಂದ್ಯದಿಂದ ಎಲ್ಲ ನಿರ್ಧಾರ

Asia Cup 2025 Final: ಭಾರತದ ವಿರುದ್ಧದ ಸೂಪರ್ ಫೋರ್ ಪಂದ್ಯಕ್ಕೂ ಮುನ್ನ ಏಷ್ಯಾಕಪ್ ಫೈನಲ್ ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಏಷ್ಯಾಕಪ್ ಇತಿಹಾಸದಲ್ಲಿ ಈವರೆಗೆ ಬಾಂಗ್ಲಾದೇಶ ತಂಡ ಶ್ರೀಲಂಕಾವನ್ನು ಸೋಲಿಸಿದಾಗಲೆಲ್ಲಾ ಅದು ಫೈನಲ್ ತಲುಪಿದೆ. ಈ ಬಾರಿ ಕೂಡ ಅದೇರೀತಿ ಆಗಲಿದೆಯಂತೆ.

IND vs BAN: ಭಾರತ-ಬಾಂಗ್ಲಾದೇಶ ನಡುವೆ ಏಷ್ಯಾ ಕಪ್ ಫೈನಲ್?: ಒಂದು ಪಂದ್ಯದಿಂದ ಎಲ್ಲ ನಿರ್ಧಾರ
Ind Vs Ban Asia Cup Final
ಪ್ರೀತಿ ಭಟ್​, ಗುಣವಂತೆ
| Updated By: Vinay Bhat|

Updated on: Sep 23, 2025 | 9:54 AM

Share

ಬೆಂಗಳೂರು (ಸೆ. 23): 2025 ರ ಕ್ರಿಕೆಟ್ ಏಷ್ಯಾ ಕಪ್‌ನಲ್ಲಿ ಸದ್ಯ ಸೂಪರ್ 4 ಸುತ್ತು ನಡೆಯುತ್ತಿದೆ. ಇಂದು ಶ್ರೀಲಂಕಾ (Sri Lanka Cricket Team) ಮತ್ತು ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ. ಭಾರತದ ಮುಂದಿನ ಪಂದ್ಯ ಬುಧವಾರ ಬಾಂಗ್ಲಾದೇಶ ವಿರುದ್ಧ ನಡೆಯಲಿದೆ. ಈವರೆಗೆ ಯಾವುದೇ ತಂಡವು ಅಧಿಕೃತವಾಗಿ ಫೈನಲ್‌ಗೆ ಅರ್ಹತೆ ಪಡೆದಿಲ್ಲ, ಆದರೆ ಫೈನಲ್ ಪಂದ್ಯ ಭಾರತ vs ಬಾಂಗ್ಲಾದೇಶ ನಡುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ ಕೂಡ ಇದೆ. ಏಷ್ಯಾಕಪ್ ಪಂದ್ಯಾವಳಿಯ ಇತಿಹಾಸವು ಇದೇ ಸೂಚಿಸುತ್ತದೆ.

ಲಿಟನ್ ದಾಸ್ ನಾಯಕತ್ವದಲ್ಲಿ, ಬಾಂಗ್ಲಾದೇಶ ಕ್ರಿಕೆಟ್ ತಂಡವು ಸೂಪರ್ 4 ಸುತ್ತಿನಲ್ಲಿ ಶ್ರೀಲಂಕಾವನ್ನು ಸೋಲಿಸಿತು, ಸದ್ಯ ಬಾಂಗ್ಲಾವನ್ನು ಭಾರತದ ನಂತರ ಟೂರ್ನಮೆಂಟ್‌ನ ಬಲಿಷ್ಠ ತಂಡವೆಂದು ಪರಿಗಣಿಸಲಾಗಿದೆ. ಈ ಗೆಲುವು ಬಾಂಗ್ಲಾದೇಶಕ್ಕೆ ಫೈನಲ್‌ನಲ್ಲಿ ಸ್ಥಾನ ಖಚಿತಪಡಿಸುತ್ತದೆ ಎಂದು ನಂಬಲಾಗಿದೆ. ಏತನ್ಮಧ್ಯೆ, ಟೂರ್ನಮೆಂಟ್‌ನಲ್ಲಿ ಒಂದು ಪಂದ್ಯವನ್ನು ಸಹ ಸೋಲದ ಏಕೈಕ ತಂಡ ಭಾರತವಾಗಿದೆ. ಭಾರತದ ಫೈನಲ್ ಹಾದಿ ಕೂಡ ಬಹುತೇಕ ಖಚಿತವಾಗಿದೆ.

ಶ್ರೀಲಂಕಾವನ್ನು ಸೋಲಿಸಿದ ನಂತರ ಬಾಂಗ್ಲಾದೇಶ ಫೈನಲ್ ತಲುಪುವ ಸಾಧ್ಯತೆಗಳು ಹೆಚ್ಚಿವೆ ಮತ್ತು ಇತಿಹಾಸವೂ ಇದನ್ನೇ ಸೂಚಿಸುತ್ತದೆ. ಕಳೆದ 13 ವರ್ಷಗಳಲ್ಲಿ, ಬಾಂಗ್ಲಾದೇಶ ಏಷ್ಯಾ ಕಪ್‌ನಲ್ಲಿ ಶ್ರೀಲಂಕಾವನ್ನು ಸೋಲಿಸಿದಾಗಲೆಲ್ಲ, ಬಾಂಗ್ಲಾದೇಶ ಫೈನಲ್ ತಲುಪಿದೆ. ಬಾಂಗ್ಲಾದೇಶ 2012 ರ ಆವೃತ್ತಿಯಲ್ಲಿ ಶ್ರೀಲಂಕಾವನ್ನು ಮೊದಲು ಸೋಲಿಸಿತು, ಆ ಋತುವಿನಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತು. ಆದಾಗ್ಯೂ, ಅವರು ಪಾಕಿಸ್ತಾನದ ವಿರುದ್ಧ ಫೈನಲ್‌ನಲ್ಲಿ ಸೋತರು.

ಇದನ್ನೂ ಓದಿ
Image
ಇಂದು ಪಾಕಿಸ್ತಾನ- ಶ್ರೀಲಂಕಾ ನಡುವೆ ಮಾಡು ಇಲ್ಲವೇ ಮಡಿ ಪಂದ್ಯ
Image
ಟೀಮ್ ಇಂಡಿಯಾ ಮುಂದಿನ ಪಂದ್ಯ ಯಾವಾಗ?, ಎದುರಾಳಿ ಯಾರು?, ಇಲ್ಲಿದೆ ಮಾಹಿತಿ
Image
ಪೋಸ್ಟ್ ಮ್ಯಾಚ್​ನಲ್ಲಿ ಹ್ಯಾರಿಸ್ ರೌಫ್​ನ ಮೈಚಳಿ ಬಿಡಿಸಿದ ಅಭಿಷೇಕ್ ಶರ್ಮಾ
Image
ಇನ್‌ಸ್ಟಾ ಪೋಸ್ಟ್‌ ಮೂಲಕ ಪಾಕಿಸ್ತಾನಿಗಳ ಮಾನಹರಾಜು ಮಾಡಿದ ಗಿಲ್-ಅಭಿಷೇಕ್

Asia Cup2025: ಇಂದು ಪಾಕಿಸ್ತಾನ- ಶ್ರೀಲಂಕಾ ನಡುವೆ ಮಾಡು ಇಲ್ಲವೇ ಮಡಿ ಪಂದ್ಯ

ನಂತರ 2016 ರಲ್ಲಿ ಬಾಂಗ್ಲಾದೇಶ ಶ್ರೀಲಂಕಾವನ್ನು ಮತ್ತೊಮ್ಮೆ ಸೋಲಿಸಿತು, ಆ ಆವೃತ್ತಿಯಲ್ಲೂ ಫೈನಲ್ ತಲುಪಿತು ಆದರೆ ಭಾರತ ವಿರುದ್ಧ ಸೋತಿತು. 2018 ರಲ್ಲಿಯೂ ಅದೇ ರೀತಿ ಸಂಭವಿಸಿತು, ಬಾಂಗ್ಲಾದೇಶದ ಮೂರನೇ ಬಾರಿ ಫೈನಲ್​ಗೇರಿತು. ಈ ಬಾರಿಯೂ ಅವರು ಭಾರತ ವಿರುದ್ಧ ಸೋತರು. ಇದು ಒಟ್ಟು ಮೂರು ಬಾರಿ ಸಂಭವಿಸಿದೆ, ತಂಡವು ಶ್ರೀಲಂಕಾವನ್ನು ಸೋಲಿಸಿದ ಅದೇ ಆವೃತ್ತಿಯಲ್ಲಿ ಫೈನಲ್ ತಲುಪಿದೆ.

ಬಾಂಗ್ಲಾದೇಶ ಭಾರತ ವಿರುದ್ಧ ಸೋತರೆ ಏನಾಗುತ್ತದೆ?

ಬಾಂಗ್ಲಾದೇಶ ಭಾರತ ವಿರುದ್ಧ ಎಲ್ಲಾದರು ಸೋತರೆ 2025 ರ ಏಷ್ಯಾ ಕಪ್ ಫೈನಲ್‌ಗೆ ಸ್ಪರ್ಧಿಸುವುದಿಲ್ಲ ಎಂದು ಅರ್ಥವಲ್ಲ. ಆಗ ಭಾರತ ಶ್ರೀಲಂಕಾವನ್ನು ಸೋಲಿಸಬೇಕಾಗುತ್ತದೆ ಮತ್ತು ಬಾಂಗ್ಲಾ ಪಾಕಿಸ್ತಾನವನ್ನು ಸೋಲಿಸಬೇಕಾಗುತ್ತದೆ. ಈ ಸನ್ನಿವೇಶದಲ್ಲಿ, ಶ್ರೀಲಂಕಾ ಮತ್ತು ಪಾಕಿಸ್ತಾನ ತಲಾ ಶೂನ್ಯ ಅಂಕಗಳು ಮತ್ತು ಎರಡು ಅಂಕಗಳನ್ನು ಹೊಂದಿದ್ದರೆ, ಬಾಂಗ್ಲಾದೇಶ ನಾಲ್ಕು ಅಂಕಗಳನ್ನು ಹೊಂದಿ, ಏಷ್ಯಾ ಕಪ್ ಫೈನಲ್ ಭಾರತ ಮತ್ತು ಬಾಂಗ್ಲಾದೇಶವಾಗಲಿದೆ.

2025 ರ ಏಷ್ಯಾ ಕಪ್ ಫೈನಲ್ ಯಾವಾಗ ಮತ್ತು ಎಲ್ಲಿ ನಡೆಯಲಿದೆ?

ಸೂಪರ್ 4 ಸುತ್ತಿನ ನಂತರ, ಏಷ್ಯಾಕಪ್ 2025 ಸೆಪ್ಟೆಂಬರ್ 28 ರ ಭಾನುವಾರದಂದು ಫೈನಲ್‌ನಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಎರಡು ತಂಡಗಳ ನಡುವೆ ನಡೆಯಲಿದೆ. ಪ್ರಶಸ್ತಿ ಹಣಾಹಣಿಯ ಪಂದ್ಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಾತ್ರಿ 8 ಗಂಟೆಗೆ ಶುರುವಾಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ