26 ರನ್‌ಗೆ ನೇಪಾಳ ಆಲೌಟ್; ಭಾರತ ಎಗೆ 306 ರನ್‌ಗಳ ಐತಿಹಾಸಿಕ ಜಯ

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026ರಲ್ಲಿ ಭಾರತ ಎ ತಂಡ ನೇಪಾಳ ವಿರುದ್ಧ 306 ರನ್‌ಗಳಿಂದ ಭರ್ಜರಿ ಶುಭಾರಂಭ ಮಾಡಿದೆ. ತಿಲಕ್ ವರ್ಮಾ (107) ಮತ್ತು ಕುಮಾರ್ ಕುಶಾಗ್ರ (117) ಅವರ ಸ್ಫೋಟಕ ಶತಕಗಳ ನೆರವಿನಿಂದ ಭಾರತ ಎ 332 ರನ್ ಗಳಿಸಿತು. ನಂತರ ಹರ್ಷಿತ್ ರಾಣಾ (4 ವಿಕೆಟ್) ಹಾಗೂ ಪ್ರಿನ್ಸ್ ಯಾದವ್ (5 ವಿಕೆಟ್) ಮಾರಕ ಬೌಲಿಂಗ್ ದಾಳಿಗೆ ನೇಪಾಳ ಕೇವಲ 26 ರನ್‌ಗಳಿಗೆ ಆಲೌಟ್ ಆಯಿತು, ಇದು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಮೊತ್ತಗಳಲ್ಲಿ ಒಂದಾಗಿದೆ.

26 ರನ್‌ಗೆ ನೇಪಾಳ ಆಲೌಟ್; ಭಾರತ ಎಗೆ 306 ರನ್‌ಗಳ ಐತಿಹಾಸಿಕ ಜಯ
Team India

Updated on: Nov 20, 2026 | 9:40 PM

ತಿಲಕ್ ವರ್ಮಾ ಹಾಗೂ ಕುಮಾರ್ ಕುಶಾಗ್ರ ಅವರ ಸ್ಫೋಟಕ ಶತಕಗಳು, ಹರ್ಷಿತ್ ರಾಣಾ ಮತ್ತು ಪ್ರಿನ್ಸ್ ಯಾದವ್ ಅವರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ಎ ತಂಡ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಶುಕ್ರವಾರ ದೋಹಾದಲ್ಲಿ ನಡೆದ ಪಂದ್ಯದಲ್ಲಿ ನೇಪಾಳ ತಂಡವನ್ನು ಬರೋಬ್ಬರಿ 306 ರನ್‌ಗಳಿಂದ ಮಣಿಸಿದ ಭಾರತ ಎ ಭರ್ಜರಿ ಗೆಲುವು ದಾಖಲಿಸಿತು. ಭಾರತ ನೀಡಿದ 332 ರನ್​ಗಳ ಗುರಿ ಬೆನ್ನಟ್ಟಿದ ನೇಪಾಳ ತಂಡ ಕೇವಲ 26 ರನ್‌ಗಳಿಗೆ ಆಲೌಟ್ ಆಯಿತು. ಇದು ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲೇ ದಾಖಲಾದ ನಾಲ್ಕನೇ ಅತಿ ಕಡಿಮೆ ತಂಡದ ಮೊತ್ತವಾಗಿದೆ.

Loading...
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us