Asia Cup Super 4 Schedule: ಏಷ್ಯಾಕಪ್‌ನ ಸೂಪರ್-4 ನಲ್ಲಿ ಭಾರತದ ಮೊದಲು ಎದುರಾಳಿ ಯಾರು?, ಪಂದ್ಯ ಯಾವಾಗ?

India vs Pakistan, Super 4: 2025 ರ ಏಷ್ಯಾಕಪ್‌ನ ಸೂಪರ್-4 ರಲ್ಲಿ ಭಾರತ ತಂಡದ ವೇಳಾಪಟ್ಟಿಯನ್ನು ನೋಡಿದರೆ, ಅದು ಸೆಪ್ಟೆಂಬರ್ 21 ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ವಿರುದ್ಧ ಮೈದಾನಕ್ಕಿಳಿಯಲಿದೆ. ಇದರ ನಂತರ, ಟೀಮ್ ಇಂಡಿಯಾ ಸೆಪ್ಟೆಂಬರ್ 24 ರ ಬುಧವಾರ ಬಾಂಗ್ಲಾದೇಶ ತಂಡದ ವಿರುದ್ಧ ತನ್ನ ಮುಂದಿನ ಪಂದ್ಯವನ್ನು ಆಡಲಿದೆ.

Asia Cup Super 4 Schedule: ಏಷ್ಯಾಕಪ್‌ನ ಸೂಪರ್-4 ನಲ್ಲಿ ಭಾರತದ ಮೊದಲು ಎದುರಾಳಿ ಯಾರು?, ಪಂದ್ಯ ಯಾವಾಗ?
India Vs Pakistan Super 4
Edited By:

Updated on: Sep 20, 2025 | 9:51 AM

ಬೆಂಗಳೂರು (ಸೆ. 20): 2025 ರ ಏಷ್ಯಾ ಕಪ್ ನ ಲೀಗ್ ಹಂತ ಮುಕ್ತಾಯಗೊಂಡಿದೆ. ಸೂಪರ್ 4 ಹಂತ ಸೆಪ್ಟೆಂಬರ್ 20 ರಂದು ಆರಂಭವಾಗುತ್ತದೆ. ಭಾರತ (Indian Cricket Team), ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೂಪರ್ 4 ಹಂತ ತಲುಪಿದ ತಂಡಗಳು. ಭಾರತವು ಒಮಾನ್ ವಿರುದ್ಧದ ಪಂದ್ಯಾವಳಿಯ ಕೊನೆಯ ಲೀಗ್ ಪಂದ್ಯವನ್ನು ಆಡಿತು. ಈ ಪಂದ್ಯದಲ್ಲಿ, ಟೀಮ್ ಇಂಡಿಯಾ ಓಮನ್ ಅನ್ನು 21 ರನ್‌ಗಳಿಂದ ಸೋಲಿಸಿತು. ವಿಸೇಷ ಎಂದರೆ ಸೂರ್ಯಕುಮಾರ್ ನೇತೃತ್ವದ ಭಾರತ ತಂಡ ತನ್ನ ಲೀಗ್ ಹಂತದ ಮೂರೂ ಪಂದ್ಯಗಳನ್ನು ಗೆದ್ದು ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ. ಸದ್ಯ, ಭಾರತ ತಂಡವು ತನ್ನ ಮೊದಲ ಸೂಪರ್ 4 ಪಂದ್ಯವನ್ನು ಯಾವಾಗ ಮತ್ತು ಯಾರ ವಿರುದ್ಧ ಆಡಲಿದೆ ಎಂಬುದನ್ನು ನೋಡೋಣ.

ಏಷ್ಯಾಕಪ್ 2025 ಸೂಪರ್ 4 ನಲ್ಲಿ ಭಾರತೀಯ ತಂಡದ ಪೂರ್ಣ ವೇಳಾಪಟ್ಟಿ

ಏಷ್ಯಾ ಕಪ್ ಸೂಪರ್ 4 ನಲ್ಲಿ ಭಾರತ ತಂಡವು ಎರಡು ಪಂದ್ಯಗಳನ್ನು ಆಡಲಿದೆ. ಟೀಮ್ ಇಂಡಿಯಾದ ಮೊದಲ ಪಂದ್ಯ ಸೆಪ್ಟೆಂಬರ್ 21 ರಂದು ನಡೆಯಲಿದೆ. ಈ ಪಂದ್ಯದಲ್ಲಿ, ಟೀಮ್ ಇಂಡಿಯಾ ಪಾಕಿಸ್ತಾನವನ್ನು ಎದುರಿಸಲಿದೆ. ಲೀಗ್ ಹಂತದಲ್ಲಿಯೂ ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾಗಿವೆ, ಇದರಲ್ಲಿ ಭಾರತ 7 ವಿಕೆಟ್‌ಗಳಿಂದ ಗೆದ್ದಿತ್ತು. ಇದು ಇಬ್ಬರ ನಡುವಿನ ಎರಡನೇ ಮುಖಾಮುಖಿಯಾಗಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಸೂಪರ್ 4 ಪಂದ್ಯವು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ತಂಡವು ತನ್ನ ಎರಡನೇ ಸೂಪರ್ ಫೋರ್ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಈ ಪಂದ್ಯವು ಸೆಪ್ಟೆಂಬರ್ 24 ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಬಳಿಕ ಶ್ರೀಲಂಕಾ ವಿರುದ್ಧ ಸೆಪ್ಟೆಂಬರ್ 26 ರಂದು ಮೂರನೇ ಪಂದ್ಯ ಆಡಲಿದೆ. ಇದುಕೂಡ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸೂಪರ್ 4 ಅಂಕಪಟ್ಟಿಯಲ್ಲಿ ಅಗ್ರ ಎರಡು ತಂಡಗಳು 2025 ರ ಏಷ್ಯಾಕಪ್‌ನ ಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಸೂಪರ್-4 ರಲ್ಲಿ ಟೀಮ್ ಇಂಡಿಯಾದ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದ್ದು, ಟಾಸ್ ಸಂಜೆ 7:30 ಕ್ಕೆ ನಡೆಯಲಿದೆ.

ಇದನ್ನೂ ಓದಿ
ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತಕ್ಕೆ ಬಿಗ್ ಶಾಕ್
ಪಾಕ್​ಗೆ ಟಾಂಗ್ ಕೊಟ್ಟು ಓಮನ್ ತಂಡವನ್ನು ಹಾಡಿ ಹೊಗಳಿದ ಸೂರ್ಯಕುಮಾರ್
ನಿಧಾನಗತಿಯ ಅರ್ಧಶತಕ; ಬೇಡದ ದಾಖಲೆ ನಿರ್ಮಿಸಿದ ಸಂಜು
ಪ್ಲೇಯಿಂಗ್ 11 ಮರೆತು ರೋಹಿತ್​ರನ್ನು ನೆನೆದ ಸೂರ್ಯ

IND vs PAK, Super 4: ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತಕ್ಕೆ ಬಿಗ್ ಶಾಕ್: ಅಕ್ಷರ್ ಪಟೇಲ್ ಇಂಜುರಿ

ಲೀಗ್ ಹಂತದಲ್ಲಿ ಟೀಮ್ ಇಂಡಿಯಾ ಅಸಾಧಾರಣ ಪ್ರದರ್ಶನ ನೀಡಿತು. ಟೀಮ್ ಇಂಡಿಯಾದ ಮೊದಲ ಪಂದ್ಯ ಯುಎಇ ವಿರುದ್ಧವಾಗಿತ್ತು, ಅಲ್ಲಿ ಅವರು 9 ವಿಕೆಟ್‌ಗಳಿಂದ ಜಯಗಳಿಸಿದರು. ಭಾರತ ಕೇವಲ 27 ಎಸೆತಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ಇದಲ್ಲದೆ, ತಮ್ಮ ಎರಡನೇ ಪಂದ್ಯದಲ್ಲಿ, ಭಾರತ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿತು, ಬಳಿಕ ಸೂರ್ಯ ಪಡೆ ತಮ್ಮ ಅಂತಿಮ ಲೀಗ್ ಪಂದ್ಯದಲ್ಲಿ ಓಮನ್ ತಂಡವನ್ನು 21 ರನ್‌ಗಳಿಂದ ಸೋಲಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us