AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SL vs BAN: ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ್

Sri Lanka vs Bangladesh: ಬಾಂಗ್ಲಾದೇಶ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್​ನಲ್ಲಿ ಶ್ರೀಲಂಕಾ ತಂಡವು 7 ವಿಕೆಟ್​ಗಳ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವು 83 ರನ್​ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಇದೀಗ ಮೂರನೇ ಟಿ20 ಪಂದ್ಯದಲ್ಲೂ 8 ವಿಕೆಟ್​ಗಳ ಜಯ ಸಾಧಿಸಿ ಬಾಂಗ್ಲಾ ಪಡೆ ಸರಣಿ ಗೆದ್ದುಕೊಂಡಿದೆ.

SL vs BAN: ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ್
Bangladesh
ಝಾಹಿರ್ ಯೂಸುಫ್
|

Updated on: Jul 17, 2025 | 10:06 AM

Share

ಕೊಲಂಬೊದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡ ಜಯಭೇರಿ ಬಾರಿಸಿದೆ. ಈ ಗೆಲುವಿನೊಂದಿಗೆ ಇದೇ ಮೊದಲ ಬಾರಿಗೆ ಬಾಂಗ್ಲಾ ಪಡೆ ಲಂಕಾ ವಿರುದ್ಧ ಟಿ20 ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ. ಆರ್​ ಪ್ರೇಮದಾಸ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಚರಿತ್ ಅಸಲಂಕಾ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಲಂಕಾ ತಂಡವು ನಿರೀಕ್ಷಿತ ಆರಂಭ ಪಡೆಯಲು ಸಾಧ್ಯವಾಗಿರಲಿಲ್ಲ. ಕೇವಲ 66 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಶ್ರೀಲಂಕಾ ತಂಡಕ್ಕೆ ಕೊನೆಯ ಹಂತದಲ್ಲಿ ದಸುನ್ ಶಾನಕ ಆಸರೆಯಾಗಿ ನಿಂತರು. ಏಳನೇ ಕ್ರಮಾಂಕದಲ್ಲಿ ಶಾನಕ ಕಲೆಹಾಕಿದ 35 ರನ್​ಗಳ ನೆರವಿನೊಂದಿಗೆ ಶ್ರೀಲಂಕಾ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 132 ರನ್ ಕಲೆಹಾಕಿತು.

ಈ ಸುಲಭ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ಪರ ತಂಝೀಮ್ ಹಸನ್ ತಮೀಮ್ 47 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 1 ಫೋರ್​ನೊಂದಿಗೆ ಅಜೇಯ 73 ರನ್ ಬಾರಿಸಿದರು. ಇನ್ನು ನಾಯಕ ಲಿಟ್ಟನ್ ದಾಸ್ 32 ರನ್ ಕಲೆಹಾಕಿದರು. ಇನ್ನು ತೌಹಿದ್ ಹೃದೋಯ್ 27 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಬಾಂಗ್ಲಾದೇಶ್ ತಂಡವು 16.3 ಓವರ್​ಗಳಲ್ಲಿ 133 ರನ್ ಬಾರಿಸಿ, 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಈ ಭರ್ಜರಿ ಗೆಲುವಿನೊಂದಿಗೆ ಬಾಂಗ್ಲಾದೇಶ್ ತಂಡವು ಶ್ರೀಲಂಕಾ ವಿರುದ್ಧ ಟಿ20 ಸರಣಿ ಗೆದ್ದುಕೊಂಡಿದೆ. ಅದು ಕೂಡ ಇದೇ ಮೊದಲ ಬಾರಿಗೆ. ಅಂದರೆ ಬಾಂಗ್ಲಾದೇಶ್ ತಂಡವು ಈವರೆಗೆ ಶ್ರೀಲಂಕಾ ವಿರುದ್ಧ ಟಿ20 ಸರಣಿ ಗೆದ್ದಿಲ್ಲ. ಈ ಬಾರಿ ಲಂಕಾ ಪಡೆ ವಿರುದ್ಧ 2-1 ಅಂತರದಿಂದ ಸರಣಿ ಗೆಲ್ಲುವ ಮೂಲಕ ಬಾಂಗ್ಲಾದೇಶ್ ತಂಡವು ಹೊಸ ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ.

ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ , ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್) , ಕುಸಲ್ ಪೆರೇರಾ , ದಿನೇಶ್ ಚಂಡಿಮಾಲ್ , ಕಮಿಂದು ಮೆಂಡಿಸ್ , ಚರಿತ್ ಅಸಲಂಕ (ನಾಯಕ) , ದಸುನ್ ಶಾನಕ , ಮಹೀಶ್ ತೀಕ್ಷಣ , ಜೆಫ್ರಿ ವಾಂಡರ್ಸೆ , ಬಿನೂರ ಫೆರ್ನಾಂಡೋ , ನುವಾನ್ ತುಷಾರ.

ಇದನ್ನೂ ಓದಿ:ಬರೋಬ್ಬರಿ 1202 ದಿನಗಳು… ಟಿ20 ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ವಿಶ್ವ ದಾಖಲೆ

ಬಾಂಗ್ಲಾದೇಶ್ ಪ್ಲೇಯಿಂಗ್ 11: ತಂಝಿದ್ ಹಸನ್ ತಮೀಮ್ , ಪರ್ವೇಜ್ ಹೊಸೈನ್ ಎಮೋನ್ , ಲಿಟ್ಟನ್ ದಾಸ್ (ನಾಯಕ) , ತೌಹಿದ್ ಹೃದೋಯ್ , ಜೇಕರ್ ಅಲಿ , ಶಮೀಮ್ ಹೊಸೈನ್ , ಮಹೇದಿ ಹಸನ್ , ರಿಶಾದ್ ಹೊಸೈನ್ , ತಂಝಿಮ್ ಹಸನ್ ಸಾಕಿಬ್ , ಶೋರಿಫುಲ್ ಇಸ್ಲಾಂ , ಮುಸ್ತಾಫಿಝುರ್ ರೆಹಮಾನ್.