AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯರನ್ನು ಕೆಣಕಿದ ಹಾರಿಸ್ ರೌಫ್, ಫರ್ಹಾನ್​ಗೆ ಬ್ಯಾನ್ ಭೀತಿ

India vs Pakistan: ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದ ವೇಳೆ ಹಾರಿಸ್ ರೌಫ್ ಹಾಗೂ ಸಾಹಿಬ್​ಝಾದ ಫರ್ಹಾನ್ ಹದ್ದುಮೀರಿ ವರ್ತಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಕ್ರಿಕೆಟ್ ಮಂಡಳಿ ಇದೀಗ ಇಬ್ಬರು ಪಾಕ್ ಆಟಗಾರರ ವಿರುದ್ಧ ಮ್ಯಾಚ್ ರೆಫರಿಗೆ ದೂರು ಸಲ್ಲಿಸಿದ್ದಾರೆ.

ಭಾರತೀಯರನ್ನು ಕೆಣಕಿದ ಹಾರಿಸ್ ರೌಫ್, ಫರ್ಹಾನ್​ಗೆ ಬ್ಯಾನ್ ಭೀತಿ
Farhan - Haris Rauf
ಝಾಹಿರ್ ಯೂಸುಫ್
|

Updated on:Sep 25, 2025 | 8:55 AM

Share

Asia Cup 2025: ಏಷ್ಯಾಕಪ್​ನ ಸೂಪರ್​-4 ಪಂದ್ಯದ ವೇಳೆ ಭಾರತೀಯರನ್ನು ಕೆಣಕಿದ ಪಾಕಿಸ್ತಾನ್ ಆಟಗಾರರಾದ ಹಾರಿಸ್ ರೌಫ್ ಹಾಗೂ ಸಾಹಿಬ್​ಝಾದ ಫರ್ಹಾನ್​ಗೆ ಬ್ಯಾನ್ ಭೀತಿ ಎದುರಾಗಿದೆ. ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಕ್ರೀಡಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪಾಕ್ ಆಟಗಾರರ ವಿರುದ್ಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಔಪಚಾರಿಕವಾಗಿ ದೂರು ದಾಖಲಿಸಿದೆ. ಈ ದೂರಿನಲ್ಲಿ ಭಾರತೀಯ ಮಂಡಳಿಯು ವೀಡಿಯೊ ತುಣುಕನ್ನು ಸಹ ಸಾಕ್ಷ್ಯವಾಗಿ ಸಲ್ಲಿಸಿದ್ದು, ಈ ಜೋಡಿಯ ಮೇಲೆ ಕಠಿಣ ಶಿಸ್ತು ಕ್ರಮ ಕೈಗೊಳ್ಳುವಂತೆ ಮ್ಯಾಚ್ ರೆಫರಿ  ಆ್ಯಂಡಿ ಪೈಕ್ರಾಫ್ಟ್‌ಗೆ ಆಗ್ರಹಿಸಿದ್ದಾರೆ.

ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಭಾರತದ ವಿರುದ್ಧ ಪಂದ್ಯದ ವೇಳೆ ಹಾರಿಸ್ ರೌಫ್ ಕೈ ಸನ್ನೆಯೊಂದಿಗೆ ಭಾರತೀಯರನ್ನು ಅಣಕಿಸಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.

ಸ್ಟೇಡಿಯಂನಲ್ಲಿದ್ದ ಭಾರತೀಯ ಅಭಿಮಾನಿಗಳು ಕೊಹ್ಲಿ, ಕೊಹ್ಲಿ” ಎಂದು ಘೋಷಣೆ ಕೂಗಿದಾಗಲೆಲ್ಲಾ ಹಾರಿಸ್ ರೌಫ್ ಕೈ ಸನ್ನೆ ಮೂಲಕ ಫೈಟರ್ ಜೆಟ್‌ ಬೀಳುವುದನ್ನು ತೋರಿಸಿ ಹೀಯಾಳಿಸಿದ್ದರು. ಅಲ್ಲದೆ 6-0 ಎಂದು ತೋರಿಸುವ ಮೂಲಕ ಕೆಣಕಿದ್ದರು.

ಪಹಲ್ಗಾಮ್ ದಾಳಿ ನಂತರ ಪಾಕಿಸ್ತಾನ್ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ್ ವೇಳೆ ಪಾಕ್ ಆರ್ಮಿ ಭಾರತೀಯ ವಾಯು ಪಡೆಯ 6 ಫೈಟರ್​ ಜೆಟ್​ಗಳನ್ನು ಹೊಡೆದುರುಳಿಸಿದೆ ಎಂಬ ವದಂತಿಯನ್ನು ಪ್ರಸ್ತಾಪಿಸಿ ಹಾರಿಸ್ ರೌಫ್  ಈ ರೀತಿಯಾಗಿ ಕೈ ಸನ್ನೆ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಬಿಸಿಸಿಐ ತನ್ನ ದೂರಿನಲ್ಲಿ ಉಲ್ಲೇಖಿಸಿದೆ.

ಹಾಗೆಯೇ ಭಾರತದ ವಿರುದ್ಧ ಅರ್ಧಶತಕ ಬಾರಿಸಿದ ಬಳಿಕ ಸಾಹಿಬ್​ಝಾದ ಫರ್ಹಾನ್ ಗನ್ ಶಾಟ್ ಸೆಲೆಬ್ರೇಷನ್ ಮಾಡಿದ್ದರು. ಇದು ಸಹ ಉದ್ದೇಶಪೂರ್ವಕ ಪ್ರಚೋದನೆಯ ಸೆಲೆಬ್ರೇಷನ್ ಎಂದು ಭಾರತೀಯ ಕ್ರಿಕೆಟ್ ಮಂಡಳಿ ತನ್ನ ಎಂದು ದೂರಿನಲ್ಲಿ ಪ್ರಸ್ತಾಪಿಸಿದೆ.

ಮೈದಾನದಲ್ಲಿ ಇಂತಹ ವರ್ತನೆ ಆಟದ ಉತ್ಸಾಹಕ್ಕೆ ವಿರುದ್ಧವಾಗಿದೆ. ನಾವು ಈ ಬಗ್ಗೆ ಆ್ಯಂಡಿ ಪೈಕ್ರಾಫ್ಟ್‌ಗೆ ದೂರು ನೀಡಿದ್ದೇವೆ. ಅಲ್ಲದೆ ಇಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದೇವೆ. ಪೈಕ್ರಾಫ್ಟ್‌ಗೆ ಅಧಿಕೃತ ದೂರು ನೀಡಿರುವುದು ಮಾತ್ರವಲ್ಲದೆ, ರೌಫ್ ಮತ್ತು ಸಾಹಿಬ್‌ಝಾದ ಅವರ ವೀಡಿಯೊಗಳನ್ನು ಸಹ ಇಮೇಲ್‌ಗೆ ಲಗತ್ತಿಸಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೂರಿನ ಪ್ರಕಾರ, ಇಬ್ಬರು ಆಟಗಾರರ ನಡವಳಿಕೆಯು ಉದ್ದೇಶಪೂರ್ವಕವಾಗಿದೆ ಮತ್ತು ಕ್ರೀಡಾ ಮನೋಭಾವದ ಸ್ವೀಕಾರಾರ್ಹ ಮಿತಿಗಳನ್ನು ಮೀರಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ ಆರೋಪಿಸಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಧ್ಯಪ್ರವೇಶಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಸಿಸಿಐ ಆಗ್ರಹಿಸಿದೆ.

ಬ್ಯಾನ್ ಆಗ್ತಾರಾ?

ಐಸಿಸಿ ನಿಯಮದ ಪ್ರಕಾರ ಮೈದಾನದಲ್ಲಿ ಅನುಚಿತವಾಗಿ ವರ್ತಿಸಿದ ಆಟಗಾರರನ್ನು ಅಮಾನತುಗೊಳಿಸಬಹುದು ಅಥವಾ ನಿಷೇಧಿಸಬಹುದು. ಇದು ಅವರು ಆಡುವ ಆಟದ ನಿಯಮಗಳು ಮತ್ತು ಸಂಯೋಜಿತ ನಿಯಮಗಳನ್ನು ಉಲ್ಲಂಘಿಸಿದರ ಮೇಲೆ ಅವಲಂಬಿತವಾಗಿರುತ್ತದೆ

ಇದನ್ನೂ ಓದಿ: ಹಿಸ್ಟರಿ… ಹಿಸ್ಟರಿ… ಹಿಸ್ಟರಿ… ಕ್ಯಾಚ್ ಕೈಚೆಲ್ಲಿ ಇತಿಹಾಸ ನಿರ್ಮಿಸಿದ ಟೀಮ್ ಇಂಡಿಯಾ

ಇತ್ತ ಕ್ರೀಡಾ ಕ್ಷೇತ್ರದಲ್ಲಿ ಯುದ್ಧದ ಸನ್ನಿವೇಶಗಳನ್ನು ಪ್ರಸ್ತಾಪಿಸಿರುವುದನ್ನು ಮ್ಯಾಚ್ ರೆಫರಿ ಗಂಭೀರವಾಗಿ ಪರಿಗಣಿಸಿದರೆ, ಹಾರಿಸ್ ರೌಫ್ ಹಾಗೂ ಸಾಹಿಬ್​ಝಾದ ಫರ್ಹಾನ್ ಒಂದು ಪಂದ್ಯದಿಂದ ನಿಷೇಧಕ್ಕೆ ಒಳಗಾಗಬಹುದು. ಅಥವಾ ಡಿಮೆರಿಟ್ ಪಾಯಿಂಟ್ ನೀಡಬಹುದು. ಅದರಂತೆ ಮ್ಯಾಚ್​ ರೆಫರಿ ಆ್ಯಂಡಿ ಪೈಕ್ರಾಫ್ಟ್‌ ಪಾಕ್ ಆಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದಾರಾ ಕಾದು ನೋಡಬೇಕಿದೆ.

Published On - 8:54 am, Thu, 25 September 25

Follow Us
ಬಿಎಸ್​​ವೈ ಬರ್ತಿದ್ದಂತೆ ಜೈಕಾರ; ಹೇಗಿದೆ ನೋಡಿ ರಾಜಾಹುಲಿ ಎಂಟ್ರಿ
ಬಿಎಸ್​​ವೈ ಬರ್ತಿದ್ದಂತೆ ಜೈಕಾರ; ಹೇಗಿದೆ ನೋಡಿ ರಾಜಾಹುಲಿ ಎಂಟ್ರಿ
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ