AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BCCI Rewards Team India: ಮೂರು ಟ್ರೋಫಿ ಗೆದ್ದ ಟೀಂ ಇಂಡಿಯಾಗೆ 204 ಕೋಟಿ ರೂ. ಬಹುಮಾನ

BCCI Rewards Team India: ಟೀಂ ಇಂಡಿಯಾ ಇತ್ತೀಚೆಗೆ ಕ್ರಿಕೆಟ್ ಜಗತ್ತಿನಲ್ಲಿ ಅದ್ಭುತ ಪ್ರದರ್ಶನ ನೀಡಿದೆ. 2024 ರ ಟಿ20 ವಿಶ್ವಕಪ್, 2025 ರ ಚಾಂಪಿಯನ್ಸ್ ಟ್ರೋಫಿ ಮತ್ತು 2025 ರ ಏಷ್ಯಾಕಪ್ ಸೇರಿದಂತೆ ಸತತ ಮೂರು ಪ್ರಮುಖ ಪಂದ್ಯಾವಳಿಗಳನ್ನು ಗೆದ್ದಿದೆ. ಈ ಐತಿಹಾಸಿಕ ಸಾಧನೆಗಾಗಿ ಬಿಸಿಸಿಐ ತಂಡಕ್ಕೆ ಒಟ್ಟು 204 ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಿದೆ. ಇದು ಭಾರತದ ಕ್ರಿಕೆಟ್ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

BCCI Rewards Team India: ಮೂರು ಟ್ರೋಫಿ ಗೆದ್ದ ಟೀಂ ಇಂಡಿಯಾಗೆ 204 ಕೋಟಿ ರೂ. ಬಹುಮಾನ
Team India
ಪೃಥ್ವಿಶಂಕರ
|

Updated on:Sep 29, 2025 | 7:35 PM

Share

ಕಳೆದ ಕೆಲವು ವರ್ಷಗಳಿಂದ ತನ್ನ ಅದ್ಭುತ ಪ್ರದರ್ಶನದೊಂದಿಗೆ ಟೀಂ ಇಂಡಿಯಾ (Team India) ಕ್ರಿಕೆಟ್ ಜಗತ್ತನ್ನು ಬಿರುಗಾಳಿಯಂತೆ ಆವರಿಸಿಕೊಂಡಿದೆ. ಸತತ ಮೂರು ಬಹು-ತಂಡ ಪಂದ್ಯಾವಳಿಗಳನ್ನು ಗೆಲ್ಲುವ ಮೂಲಕ, ಭಾರತೀಯ ಕ್ರಿಕೆಟ್ ತಂಡವು ತನ್ನ ಅಭಿಮಾನಿಗಳ ಹೃದಯವನ್ನು ಗೆದ್ದಿದೆ ಮಾತ್ರವಲ್ಲದೆ ತನ್ನ ಶಕ್ತಿಯನ್ನು ಸಾಬೀತುಪಡಿಸಿದೆ. ಕಳೆದ 15 ತಿಂಗಳುಗಳಲ್ಲಿ, ಟೀಂ ಇಂಡಿಯಾ ಮೂರು ಪ್ರಮುಖ ಪಂದ್ಯಾವಳಿಗಳನ್ನು ಗೆದ್ದಿದೆ. ಅವುಗಳಲ್ಲಿ 2024 ರ ಟಿ20 ವಿಶ್ವಕಪ್, 2025 ರ ಚಾಂಪಿಯನ್ಸ್ ಟ್ರೋಫಿ ಮತ್ತು 2025 ರ ಏಷ್ಯಾಕಪ್ (Asia Cup 205) ಸೇರಿವೆ. ಈ ಎಲ್ಲಾ ಪಂದ್ಯಾವಳಿಗಳನ್ನು ಗೆದ್ದಿರುವ ಟೀಂ ಇಂಡಿಯಾಕ್ಕೆ ಭಾರಿ ಮೊತ್ತದ ಹಣವೂ ಬಹುಮಾನವಾಗಿ ಸಿಕ್ಕಿದೆ. ಇದು ಮಾತ್ರವಲ್ಲದೆ ಬಿಸಿಸಿಐ ಕೂಡ ತನ್ನ ಆಟಗಾರರ ಮೇಲೆ ಹಣದ ಮಳೆ ಸುರಿಸಿದೆ.

ಆಟಗಾರರ ಮೇಲೆ ಹಣದ ಮಳೆ

2025 ರ ಏಷ್ಯಾಕಪ್ ಗೆಲುವು ಟೀಂ ಇಂಡಿಯಾಗೆ ಮಹತ್ವದ ಸಾಧನೆಯಾಗಿದೆ. ಫೈನಲ್‌ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಸೋಲಿಸಿತು. ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿ ಮತ್ತು ಮೇ 7 ರಂದು ನಡೆದ ಆಪರೇಷನ್ ಸಿಂಧೂರ್ ನಂತರ ಎರಡೂ ದೇಶಗಳ ಕ್ರಿಕೆಟ್ ತಂಡಗಳು ಮುಖಾಮುಖಿಯಾದ ಮೊದಲ ಪಂದ್ಯಾವಳಿ ಏಷ್ಯಾಕಪ್ ಆಗಿದೆ. ಇಡೀ ಟೂರ್ನಿಯಲ್ಲಿ ಪಾಕಿಸ್ತಾನದ ಮೇಲೆ ಪಾರುಪತ್ಯ ಸಾಧಿಸಿದ ಟೀಂ ಇಂಡಿಯಾ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿತು. ಇದೀಗ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಟ್ರೋಫಿ ಗೆದ್ದಿರುವ ಭಾರತ ತಂಡಕ್ಕೆ ಬಿಸಿಸಿಐ ಬರೋಬ್ಬರಿ 21 ಕೋಟಿ ರೂಗಳನ್ನು ಬಹುಮಾನವನ್ನಾಗಿ ಘೋಷಿಸಿದೆ.

ಇದಕ್ಕೂ ಮೊದಲು ಮಾರ್ಚ್ 9, 2025 ರಂದು ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿದ್ದ ರೋಹಿತ್ ಪಡೆಗೆ ಬಿಸಿಸಿಐ 58 ಕೋಟಿ ರೂಗಳನ್ನು ಬಹುಮಾನವಾಗಿ ಘೋಷಿಸಿತ್ತು.

ಟಿ20 ವಿಶ್ವಕಪ್‌ ಗೆದ್ದಿದ್ದಕ್ಕೆ 125 ಕೋಟಿ ರೂ.

ಈ ಎರಡು ಪಂದ್ಯಾವಳಿಗಳಿಗೂ ಮೊದಲು, ಟೀಂ ಇಂಡಿಯಾ ಜೂನ್ 2024 ರಲ್ಲಿ ಟಿ20 ವಿಶ್ವಕಪ್ ಗೆದ್ದಿತು. ಪ್ರಶಸ್ತಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಸೋಲಿಸಿದ ಟೀಂ ಇಂಡಿಯಾ 17 ವರ್ಷಗಳ ಕಾಯುವಿಕೆಯನ್ನು ಅಂತ್ಯಗೊಳಿಸಿತ್ತು. ಆ ಸಮಯದಲ್ಲಿ, ಬಿಸಿಸಿಐ ಟೀಮ್ ಇಂಡಿಯಾಕ್ಕೆ 125 ಕೋಟಿ ರೂ ಬಹುಮಾನವನ್ನು ಘೋಷಿಸಿತು, ಅದು ಇದುವರೆಗಿನ ಅತ್ಯಧಿಕ ಬಹುಮಾನದ ಮೊತ್ತವಾಗಿದೆ. ಅಂದರೆ ಈ ಮೂರು ಪಂದ್ಯಾವಳಿಗಳನ್ನು ಗೆದ್ದಿದ್ದಕ್ಕಾಗಿ ಟೀಂ ಇಂಡಿಯಾಕ್ಕೆ ಬಿಸಿಸಿಐ ಒಟ್ಟು 204 ಕೋಟಿ ರೂಗಳನ್ನು ಬಹುಮಾನವನ್ನಾಗಿ ನೀಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:33 pm, Mon, 29 September 25

Follow Us