Big Bash League 2023: ಬಿಬಿಎಲ್ ಫೈನಲ್ ಫೈಟ್ನಲ್ಲಿ ಗೆದ್ದು ಬೀಗಿದ ಪರ್ತ್ ಸ್ಕಾಚರ್ಸ್
Perth Scorchers vs Brisbane Heat: ಕೊನೆಯ ಓವರ್ಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಕೂಪರ್ ಕೊನೊಲಿ (25) ಹಾಗೂ ನಿಕ್ ಹಾಬ್ಸನ್ (18) 41 ರನ್ಗಳ ಜೊತೆಯಾಟವಾಡಿದರು.
Big Bash League 2023: ಆಸ್ಟ್ರೇಲಿಯಾದಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್ ಸೀಸನ್ 12 ನಲ್ಲಿ ಪರ್ತ್ ಸ್ಕಾಚರ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ತಂಡ ವಿರುದ್ಧ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಪರ್ತ್ ತಂಡವು ಟ್ರೋಫಿ ಎತ್ತಿ ಹಿಡಿಯಿತು. ಇದಕ್ಕೂ ಮುನ್ನ ಟಾಸ್ ಗೆದ್ದ ಬ್ರಿಸ್ಬೇನ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಜೋಶ್ ಬ್ರೌನ್ (25) ಹಾಗೂ ಸ್ಯಾಮ್ ಹೀಝ್ಲೆಟ್ (34) ಉತ್ತಮ ಆರಂಭ ಒದಗಿಸಿದ್ದರು.
ಆ ಬಳಿಕ ಬಂದ ಮೆಕ್‌ಸ್ವೀನಿ 41 ರನ್ ಬಾರಿಸಿ 12ನೇ ಓವರ್ನಲ್ಲಿ ತಂಡದ ಮೊತ್ತವನ್ನು 100 ರ ಗಡಿದಾಟಿಸಿದರು. ಅಂತಿಮ ಹಂತದಲ್ಲಿ ಮ್ಯಾಕ್ಸ್ ಬ್ರ್ಯಾಂಟ್ 14 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 2 ಫೋರ್ನೊಂದಿಗೆ 31 ರನ್ ಚಚ್ಚಿದರು. ಪರಿಣಾಮ ಬ್ರಿಸ್ಬೇನ್ ಹೀಟ್ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿತು.
176 ರನ್ಗಳ ಕಠಿಣ ಗುರಿ ಪಡೆದ ಪರ್ತ್ ಸ್ಕಾಚರ್ಸ್ ತಂಡಕ್ಕೆ ಸ್ಟೀಫನ್ ಎಸ್ಕಿನಾಜಿ (21) ಹಾಗೂ ಕ್ಯಾಮರೂನ್ ಬ್ಯಾಂಕ್ರಾಫ್ಟ್ (15) ಬಿರುಸಿನ ಆರಂಭ ಒದಗಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಜೋಶ್ ಇಂಗ್ಲಿಸ್ 26 ರನ್ಗಳ ಅಮೂಲ್ಯ ಕಾಣಿಕೆ ನೀಡಿದರು. ಆ ಬಳಿಕ ಬಂದ ನಾಯಕ ಆಷ್ಟನ್ ಟರ್ನರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಬ್ರಿಸ್ಬೇನ್ ಬೌಲರ್ಗಳ ಬೆಂಡೆತ್ತಿದ ಟರ್ನರ್ 32 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 5 ಫೋರ್ನೊಂದಿಗೆ 52 ರನ್ ಚಚ್ಚಿದರು.
ಇದನ್ನೂ ಓದಿ: Shubman Gill: 1 ಶತಕದೊಂದಿಗೆ 10 ದಾಖಲೆಗಳನ್ನು ನಿರ್ಮಿಸಿದ ಶುಭ್ಮನ್ ಗಿಲ್
ಇನ್ನು ಕೊನೆಯ ಓವರ್ಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಕೂಪರ್ ಕೊನೊಲಿ (25) ಹಾಗೂ ನಿಕ್ ಹಾಬ್ಸನ್ (18) 41 ರನ್ಗಳ ಜೊತೆಯಾಟವಾಡಿದರು. ಇದರೊಂದಿಗೆ ಪರ್ತ್ ಸ್ಕಾಚರ್ಸ್ ತಂಡವು 19.2 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 178 ರನ್ಗಳೊಂದಿಗೆ ಗುರಿ ಮುಟ್ಟಿತು. ಈ ಮೂಲಕ ಬಿಬಿಎಲ್ ಸೀಸನ್ 12 ನ ಚಾಂಪಿಯನ್ ತಂಡವಾಗಿ ಪರ್ತ್ ಸ್ಕಾಚರ್ಸ್ ತಂಡವು ಹೊರಹೊಮ್ಮಿದೆ.
Nick ‘The Hero’ Hobson.
Never paying for a beer in Perth again #BBL12 #BBLFinals pic.twitter.com/1PURp6pjSg
— KFC Big Bash League (@BBL) February 4, 2023
ಪರ್ತ್ ಸ್ಕಾಚರ್ಸ್ ಪ್ಲೇಯಿಂಗ್ 11: ಸ್ಟೀಫನ್ ಎಸ್ಕಿನಾಜಿ , ಕ್ಯಾಮರೂನ್ ಬ್ಯಾಂಕ್ರಾಫ್ಟ್ , ಆರನ್ ಹಾರ್ಡಿ , ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್) , ಆಷ್ಟನ್ ಟರ್ನರ್ (ನಾಯಕ) , ನಿಕ್ ಹಾಬ್ಸನ್ , ಕೂಪರ್ ಕೊನೊಲಿ , ಆಂಡ್ರ್ಯೂ ಟೈ , ಡೇವಿಡ್ ಪೇನ್ , ಜೇಸನ್ ಬೆಹ್ರೆಂಡಾರ್ಫ್ , ಮ್ಯಾಥ್ಯೂ ಕೆಲ್ಲಿ.
ಬ್ರಿಸ್ಬೇನ್ ಹೀಟ್ ಪ್ಲೇಯಿಂಗ್ 11: ಸ್ಯಾಮ್ ಹೀಝ್ಲೆಟ್ , ಜೋಶ್ ಬ್ರೌನ್ , ನಾಥನ್ ಮೆಕ್‌ಸ್ವೀನಿ , ಸ್ಯಾಮ್ ಹೈನ್ , ಜಿಮ್ಮಿ ಪೀರ್ಸನ್ (ನಾಯಕ) , ಮ್ಯಾಕ್ಸ್ ಬ್ರ್ಯಾಂಟ್ , ಮೈಕೆಲ್ ನೆಸರ್ , ಜೇಮ್ಸ್ ಬಾಜ್ಲಿ , ಕ್ಸೇವಿಯರ್ ಬಾರ್ಟ್ಲೆಟ್ , ಸ್ಪೆನ್ಸರ್ ಜಾನ್ಸನ್ , ಮ್ಯಾಥ್ಯೂ ಕುಹ್ನೆಮನ್.
Published On - 6:30 pm, Sat, 4 February 23