AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಮೈದಾನದಲ್ಲೇ ಜಗಳಕ್ಕಿಳಿದ ಬಾಬರ್ ಆಝಂ

BPL 2024: ಪಾಕಿಸ್ತಾನ್ ತಂಡದ ಮಾಜಿ ನಾಯಕ ಬಾಬರ್ ಆಝಂ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ ಆಡುತ್ತಿದ್ದಾರೆ. ಈ ಲೀಗ್​ನ 12ನೇ ಪಂದ್ಯದಲ್ಲಿ ಬಾಬರ್ ಮೈದಾನದಲ್ಲೇ ಜಗಳಕ್ಕಿಳಿದಿರುವ ಘಟನೆ ನಡೆದಿದೆ. ಬಾಬರ್ ಆಝಂ ಅವರ ಈ ಜಗಳದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

VIDEO: ಮೈದಾನದಲ್ಲೇ ಜಗಳಕ್ಕಿಳಿದ ಬಾಬರ್ ಆಝಂ
Babar Azam
TV9 Web
| Edited By: |

Updated on: Jan 28, 2024 | 9:03 AM

Share

ಪಾಕಿಸ್ತಾನ್ ತಂಡದ ಮಾಜಿ ನಾಯಕ ಬಾಬರ್ ಆಝಂ (Babar Azam) ಕೂಲ್ ಕ್ಯಾಪ್ಟನ್ ಎಂದೇ ಗುರುತಿಸಿಕೊಂಡವರು. ಇದಾಗ್ಯೂ ಮೈದಾನದಲ್ಲಿ ಕೋಪ-ತಾಪ ಪ್ರಕಟಿಸಿದ್ದೇ ಕಂಡು ಬಂದಿರಲಿಲ್ಲ. ಆದರೀಗ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ನಲ್ಲಿ ತನ್ನ ಹೊಸ ಅವತಾರವನ್ನು ಬಿಚ್ಚಿಟ್ಟಿದ್ದಾರೆ. ಬಿಪಿಎಲ್​ನಲ್ಲಿ ರಂಗ್‌ಪುರ್ ರೈಡರ್ಸ್ ತಂಡದ ಪರ ಕಣಕ್ಕಿಳಿಯುತ್ತಿರುವ ಬಾಬರ್ ಮೈದಾನದಲ್ಲೇ ವಾಗ್ವಾದಕ್ಕಿಳಿದ್ದಾರೆ.

ರಂಗ್​ಪುರ್ ರೈಡರ್ಸ್ ಇನ್ನಿಂಗ್ಸ್‌ 13ನೇ ಓವರ್​ ವೇಳೆ ಈ ಘಟನೆ ನಡೆದಿದೆ. ಇನಿಂಗ್ಸ್​ನ ಬ್ರೇಕ್ ವೇಳೆ ಬಾಬರ್ ಹಾಗೂ ದುರ್ದಂತೋ ಢಾಕಾ ತಂಡದ ವಿಕೆಟ್‌ಕೀಪರ್ ಇರ್ಫಾನ್ ಸುಕ್ಕೂರ್ ಪರಸ್ಪರ ಮಾತಿನ ಚಕಮಕಿ ನಡೆಸಿದ್ದಾರೆ. ಅಷ್ಟರಲ್ಲಿ ಮಧ್ಯ ಪ್ರವೇಶಿಸಿದ ಅಂಪೈರ್ ಹಾಗೂ ಸಹ ಆಟಗಾರರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇದೀಗ ಸಿಟ್ಟುಗೊಂಡಿರುವ ಬಾಬರ್ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಗೆದ್ದು ಬೀಗಿದ ರಂಗ್​ಪುರ್:

ಈ ಪಂದ್ಯದಲ್ಲಿ ಟಾಸ್ ಗೆದ್ದ ದುರ್ದಂತೋ ಢಾಕಾ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಇನಿಂಗ್ಸ್​ ಆರಂಭಿಸಿದ ರಂಗ್​ಪುರ್ ರೈಡರ್ಸ್ ತಂಡಕ್ಕೆ ಆರಂಭಿಕ ಆಟಗಾರ ಬಾಬರ್ ಆಝಂ ಉತ್ತಮ ಆರಂಭ ಒದಗಿಸಿದ್ದರು. 46 ಎಸೆತಗಳನ್ನು ಎದುರಿಸಿದ ಬಾಬರ್ 1 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 62 ರನ್ ಬಾರಿಸಿದರು.

ಇನ್ನು ಅಂತಿಮ ಓವರ್​ಗಳ ವೇಳೆ ಅಬ್ಬರಿಸಿದ ಅಝ್ಮತುಲ್ಲಾ ಓಮರ್​ಝೈ 15 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ 32 ರನ್ ಬಾರಿಸಿದರು. ಈ ಮೂಲಕ ರಂಗ್​ಪುರ್ ರೈಡರ್ಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿತು.

184 ರನ್​ಗಳ ಗುರಿಯನ್ನು ಬೆನ್ನತ್ತಿದ ದುರ್ದಂತೋ ಢಾಕಾ ಪರ ಅಲೆಕ್ಸ್ ರೋಸ್ 35 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 51 ರನ್ ಬಾರಿಸಿದ್ದರು. ಇದಾಗ್ಯೂ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅಂತಿಮವಾಗಿ 16.3 ಓವರ್​ಗಳಲ್ಲಿ 104 ರನ್​ಗಳಿಗೆ ಆಲೌಟ್ ಆಗುವ ಮೂಲಕ ದುರ್ದಂತೋ ಢಾಕಾ 79 ರನ್​ಗಳಿಂದ ಸೋಲೊಪ್ಪಿಕೊಂಡಿತು.

ರಂಗ್​ಪುರ್ ರೈಡರ್ಸ್​ ಪ್ಲೇಯಿಂಗ್ 11: ರೋನಿ ತಾಲೂಕ್ದಾರ್ , ಬಾಬರ್ ಆಝಂ , ಬ್ರ್ಯಾಂಡನ್ ಕಿಂಗ್ , ಶಮೀಮ್ ಹೊಸೈನ್ , ಅಜ್ಮತುಲ್ಲಾ ಒಮರ್ಜಾಯ್ , ಶಕೀಬ್ ಅಲ್ ಹಸನ್ , ಮೊಹಮ್ಮದ್ ನಬಿ , ನೂರುಲ್ ಹಸನ್ (ನಾಯಕ) , ಮಹೇದಿ ಹಸನ್ , ರಿಪಾನ್ ಮೊಂಡೋಲ್ , ಹಸನ್ ಮಹಮೂದ್.

ಇದನ್ನೂ ಓದಿ: IPL 2024: ಐಪಿಎಲ್​ಗೆ ಸ್ಟಾರ್ ಆಟಗಾರರು ಕೈ ಕೊಡುವ ಸಾಧ್ಯತೆ

ದುರ್ದಂತೋ ಢಾಕಾ ಪ್ಲೇಯಿಂಗ್ 11: ಮೊಹಮ್ಮದ್ ನಯಿಮ್ , ದನುಷ್ಕ ಗುಣತಿಲಕ , ಸೈಮ್ ಅಯೂಬ್ , ಮೊಸದ್ದೆಕ್ ಹೊಸೈನ್ (ನಾಯಕ) , ಅಲೆಕ್ಸ್ ರಾಸ್ , ಇರ್ಫಾನ್ ಸುಕ್ಕೂರ್,, ಲಸಿತ್ ಕ್ರೂಸ್ಪುಲ್ಲೆ , ಅಲಾವುದ್ದೀನ್ ಬಾಬು , ಅರಾಫತ್ ಸನ್ನಿ , ತಸ್ಕಿನ್ ಅಹ್ಮದ್ , ಶೋರಿಫುಲ್ ಇಸ್ಲಾಂ.