5+5+2 ರೀಸನ್: ಕ್ಯಾಚೂ ಹಿಡೀತಿಲ್ಲ, ಮ್ಯಾಚೂ ಗೆಲ್ತಿಲ್ಲ, CSK ಫ್ಯಾನ್ಸ್ ಅಳಲು

|

Updated on: Apr 09, 2025 | 11:30 AM

IPL 2025 PBKS vs CSK: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್​ 2025) 22ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಗ್ಗರಿಸಿದೆ. ಮುಲ್ಲನ್​ಪುರ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 219 ರನ್​ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 201 ರನ್​ಗಳಿಸಲಷ್ಟೇ ಶಕ್ತರಾದರು.

5+5+2 ರೀಸನ್: ಕ್ಯಾಚೂ ಹಿಡೀತಿಲ್ಲ, ಮ್ಯಾಚೂ ಗೆಲ್ತಿಲ್ಲ, CSK ಫ್ಯಾನ್ಸ್ ಅಳಲು
Csk
Follow us on

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ ಬಲಿಷ್ಠ ತಂಡಗಳಲ್ಲಿ ಒಂದೆನಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ (CSK)​ ಸತತ ಸೋಲುಗಳಿಂದ ಕಂಗೆಟ್ಟಿದೆ. ಅದು ಸಹ ಸತತ ನಾಲ್ಕು ಪಂದ್ಯಗಳಲ್ಲಿ ಪರಾಜಯಗೊಳ್ಳುವ ಮೂಲಕ. ಈ ಬಾರಿಯ ಐಪಿಎಲ್​ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿರುವುದು ಬಿಟ್ಟರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಿಎಸ್​ಕೆ ತಂಡದ ತವರು ಮೈದಾನದಲ್ಲಿ 17 ವರ್ಷಗಳ ಬಳಿಕ ಗೆಲುವು ದಾಖಲಿಸಿದೆ. ಚೆಪಾಕ್​ನಲ್ಲಿ 15 ವರ್ಷಗಳ ಸಿಎಸ್​ಕೆ ತಂಡವನ್ನು ಬಗ್ಗು ಬಡಿಯುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಯಶಸ್ವಿಯಾಗಿದೆ.

ಇದೀಗ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡ 18 ರನ್​ಗಳಿಂದ ಸೋಲನುಭವಿಸಿದೆ. ಈ ಸೋಲಿಗೆ ಪ್ರಮುಖ ಕಾರಣ ತಂಡದ ಕಳಪೆ ಫೀಲ್ಡಿಂಗ್. ಏಕೆಂದರೆ ಈ ಮ್ಯಾಚ್​ನಲ್ಲಿ ಸಿಎಸ್​ಕೆ ಫೀಲ್ಡರ್​ಗಳು ಬರೋಬ್ಬರಿ 5 ಕ್ಯಾಚ್​ಗಳನ್ನು ಕೈಚೆಲ್ಲಿದ್ದಾರೆ.

5+5+2 ರೀಸನ್:

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಬಾರಿಯ ಐಪಿಎಲ್​ನಲ್ಲಿ ಕೈಚೆಲ್ಲಿರುವ ಕ್ಯಾಚ್​ಗಳ ಸಂಖ್ಯೆ ಬರೋಬ್ಬರಿ 12. ಅಂದರೆ ಆಡಿರುವ 5 ಮ್ಯಾಚ್​ಗಳಲ್ಲಿ 12 ಕ್ಯಾಚ್ ಬಿಟ್ಟಿದ್ದಾರೆ. ಇದುವೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತಿದೆ.

ಇದನ್ನೂ ಓದಿ
ಹುಡುಗಿಯಾಗಿ ಬದಲಾದ ಟೀಮ್ ಇಂಡಿಯಾದ ಮಾಜಿ ಆಟಗಾರನ ಪುತ್ರ
VIDEO: ವಿರಾಟ್ ಕೊಹ್ಲಿಗೆ ಬೌಲಿಂಗ್: ಭಾವುಕರಾಗಿ ಅರ್ಧದಲ್ಲೇ ನಿಂತ ಸಿರಾಜ್
11ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ವಿಶ್ವ ದಾಖಲೆ ಬರೆದ ನಸೀಮ್ ಶಾ
MS Dhoni: ಕೇವಲ 3 ರನ್​: ಗ್ರೇಟ್​ ಫಿನಿಶರ್ ಫಿನಿಶ್..!

ಇದನ್ನೆ ಸಿಎಸ್​ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಹಾಗೂ ಕೋಚ್ ಸ್ಟೀಫನ್ ಫ್ಲೆಮಿಂಗ್ ಒತ್ತಿ ಹೇಳಿದ್ದಾರೆ. ನಮ್ಮ ಫೀಲ್ಡರ್​ಗಳು ಕ್ಯಾಚ್​ಗಳನ್ನು ಕೈಚೆಲ್ಲುತ್ತಿರುವುದರಿಂದ ಎದುರಾಳಿ ತಂಡ 15-20 ರನ್​ಗಳನ್ನು ಹೆಚ್ಚುವರಿಯಾಗಿ ಗಳಿಸುತ್ತಿದ್ದಾರೆ. ಇದುವೇ ಸಿಎಸ್​ಕೆ ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ ಎಂದು ರುತುರಾಜ್ ಗಾಯಕ್ವಾಡ್ ಅಭಿಪ್ರಾಯಪಟ್ಟಿದ್ದಾರೆ.

ಕ್ಯಾಚೂ ಇಲ್ಲ, ಮ್ಯಾಚೂ ಗೆಲ್ತಿಲ್ಲ:

ಒಂದೆಡೆ ಕ್ಯಾಚ್ ಕೈ ಚೆಲ್ಲುತ್ತಿರುವ ಫೀಲ್ಡಿಂಗ್​ಗಳಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮ್ಯಾಚ್​ಗಳನ್ನೂ ಸಹ ಕಳೆದುಕೊಳ್ಳುತ್ತಿದೆ. ಈಗಾಗಲೇ 5 ಪಂದ್ಯಗಳಿಂದ ಸಿಎಸ್​ಕೆ ಒಟ್ಟು 12 ಕ್ಯಾಚ್​ಗಳನ್ನು ಕೈ ಬಿಟ್ಟಿರುವುದು ಸೋಲಿಗೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಅಳಲು ತೋಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Priyansh Arya: ಪ್ರಿಯಾಂಶ್ ಆರ್ಯನ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್

ಸದ್ಯ ಐದು ಪಂದ್ಯಗಳಲ್ಲಿ 4 ಮ್ಯಾಚ್​ಗಳನ್ನು ಸೋತಿರುವ ಚೆನ್ನೈ ಸೂಪರ್ ಕಿಂಗ್ಸ್ ಮುಂದೆ ಇನ್ನೂ 9 ಪಂದ್ಯಗಳಿವೆ. ಈ 9 ಮ್ಯಾಚ್​ಗಳಲ್ಲಿ ಕಂಬ್ಯಾಕ್ ಮಾಡುವ ಮೂಲಕ ಸಿಎಸ್​ಕೆ ತಂಡವು ಈ ಬಾರಿ ಪ್ಲೇಆಫ್ ಹಂತಕ್ಕೇರಲಿದೆಯಾ ಕಾದು ನೋಡಬೇಕಿದೆ.