ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಎ ತಂಡದ ವಿರುದ್ಧದ 2ನೇ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಭಾರತ ಎ ತಂಡವು ಕೇವಲ 161 ರನ್ಗಳಿಗೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಎ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ.
ಆರಂಭಿಕರಾಗಿ ಕಣಕ್ಕಿಳಿದ ಅಭಿಮನ್ಯು ಈಶ್ವರನ್ (0) ಶೂನ್ಯಕ್ಕೆ ಔಟಾದರೆ, ಕೆಎಲ್ ರಾಹುಲ್ 4 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಯಿ ಸುದರ್ಶನ್ (0) ರನ್ಗಳಿಸದೇ ಪೆವಿಲಿಯನ್ಗೆ ಹಿಂತಿರುಗಿದರು.
ಆ ಬಳಿಕ ಬಂದ ನಾಯಕ ರುತುರಾಜ್ ಗಾಯಕ್ವಾಡ್ 4 ರನ್ಗಳಿಸಿ ಔಟಾದರೆ, ದೇವದತ್ತ್ ಪಡಿಕ್ಕಲ್ 26 ರನ್ ಬಾರಿಸಿ ವಿಕೆಟ್ ಕೈಚೆಲ್ಲಿದರು. ಈ ಹಂತದಲ್ಲಿ ಕಣಕ್ಕಿಳಿದ ಧ್ರುವ್ ಜುರೇಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು.
ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಧ್ರುವ್ ಜುರೇಲ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆಸೀಸ್ ಬೌಲರ್ಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ಯುವ ದಾಂಡಿಗ 186 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 80 ರನ್ ಬಾರಿಸಿದರು.
ಧ್ರುವ್ ಜುರೇಲ್ ಅವರ ಏಕಾಂಗಿ ಹೋರಾಟದ ಫಲವಾಗಿ ಭಾರತ ಎ ತಂಡದ ಸ್ಕೋರ್ 150ರ ಗಡಿದಾಟಿತು. ಆದರೆ ಜುರೇಲ್ ಔಟಾಗುತ್ತಿದ್ದಂತೆ ಮತ್ತೆ ಕುಸಿತಕ್ಕೊಳಗಾದ ಭಾರತ ಎ ತಂಡವು 161 ರನ್ಗಳಿಗೆ ಸರ್ವಪತನ ಕಂಡಿದೆ.
ಇದೀಗ ಪ್ರಥಮ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡವು 14 ಓವರ್ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 41 ರನ್ ಕಲೆಹಾಕಿದೆ.
ಆಸ್ಟ್ರೇಲಿಯಾ ಎ ಪ್ಲೇಯಿಂಗ್ 11: ಮಾರ್ಕಸ್ ಹ್ಯಾರಿಸ್ , ಸ್ಯಾಮ್ ಕಾನ್ಸ್ಟಾಸ್ , ಕ್ಯಾಮರೋನ್ ಬ್ಯಾಂಕ್ರಾಫ್ಟ್ , ನಾಥನ್ ಮೆಕ್‌ಸ್ವೀನಿ (ನಾಯಕ) , ಬ್ಯೂ ವೆಬ್‌ಸ್ಟರ್ , ಒಲಿವರ್ ಡೇವಿಸ್ , ಜಿಮ್ಮಿ ಪೀರ್ಸನ್ (ವಿಕೆಟ್ ಕೀಪರ್) , ಮೈಕೆಲ್ ನೆಸರ್ , ನಾಥನ್ ಮ್ಯಾಕ್‌ಆಂಡ್ರ್ಯೂ , ಸ್ಕಾಟ್ ಬೋಲ್ಯಾಂಡ್ , ಕೋರೆ ರೊಚಿಚಿಯೋಲಿ.
ಇದನ್ನೂ ಓದಿ: IPL 2025: ಐಪಿಎಲ್ ಮೆಗಾ ಹರಾಜಿಗೆ ಇಟಲಿ ಆಟಗಾರ ಎಂಟ್ರಿ
ಭಾರತ ಎ ಪ್ಲೇಯಿಂಗ್ 11: ಅಭಿಮನ್ಯು ಈಶ್ವರನ್ , ರುತುರಾಜ್ ಗಾಯಕ್ವಾಡ್ (ನಾಯಕ) , ಸಾಯಿ ಸುದರ್ಶನ್ , ಕೆಎಲ್ ರಾಹುಲ್ , ದೇವದತ್ತ್ ಪಡಿಕ್ಕಲ್ , ಧ್ರುವ ಜುರೇಲ್ (ವಿಕೆಟ್ ಕೀಪರ್) , ನಿತೀಶ್ ರೆಡ್ಡಿ , ತನುಷ್ ಕೋಟ್ಯಾನ್ , ಖಲೀಲ್ ಅಹ್ಮದ್ , ಪ್ರಸಿದ್ಧ್ ಕೃಷ್ಣ , ಮುಖೇಶ್ ಕುಮಾರ್.
Published On - 11:44 am, Thu, 7 November 24