DPL 2024: 4.1 ಓವರ್​ನಲ್ಲಿ ಪಂದ್ಯ ಮುಗಿಸಿದ ಡೆಲ್ಲಿ ರೈಡರ್ಸ್

DPL 2024: ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿರುವ ಅನೂಜ್ ರಾವತ್ ದೆಹಲಿ ಪ್ರೀಮಿಯರ್ ಲೀಗ್​ನಲ್ಲಿ ಈಸ್ಟ್ ಡೆಲ್ಲಿ ರೈಡರ್ಸ್ ಪರ ಆಡುತ್ತಿದ್ದಾರೆ. ಇದೀಗ ಡೆಲ್ಲಿ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ಯುವ ಎಡಗೈ ದಾಂಡಿಗ ಮುಂಬರುವ ಐಪಿಎಲ್​ನಲ್ಲೂ ಚಾನ್ಸ್​ ಗಿಟ್ಟಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

DPL 2024: 4.1 ಓವರ್​ನಲ್ಲಿ ಪಂದ್ಯ ಮುಗಿಸಿದ ಡೆಲ್ಲಿ ರೈಡರ್ಸ್
DPL 2024
Follow us
ಝಾಹಿರ್ ಯೂಸುಫ್
|

Updated on: Aug 19, 2024 | 12:57 PM

ದೆಹಲಿ ಪ್ರೀಮಿಯರ್ ಲೀಗ್​ನ 2ನೇ ಪಂದ್ಯದಲ್ಲಿ ಈಸ್ಟ್ ಡೆಲ್ಲಿ ರೈಡರ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೆಂಟ್ರಲ್ ಡೆಲ್ಲಿ ಕಿಂಗ್ಸ್​ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಹಿಮಾಂಶು ಚೌಹಾಣ್ ಅವರ ಮಾರಕ ದಾಳಿಗೆ ತತ್ತರಿಸಿದ ಡೆಲ್ಲಿ ಕಿಂಗ್ಸ್ ಬ್ಯಾಟರ್​ಗಳು ಪೆವಿಲಿಯನ್ ಪೆರೇಡ್ ನಡೆಸಿದರು.

ಪರಿಣಾಮ 50 ರನ್​ಗಳಿಸುವಷ್ಟರಲ್ಲಿ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ತಂಡವು 5 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ದಾಳಿಗಿಳಿದ ಸಿಮರ್ಜೀತ್ ಸಿಂಗ್ ಹಾಗೂ ರೌನಕ್ ವಘೇಲಾ ಸಹ ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ಇದರೊಂದಿಗೆ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ತಂಡವು 8.1 ಓವರ್​ಗಳಲ್ಲಿ 61 ರನ್​ಗಳಿಸಿ ಆಲೌಟ್ ಆಯಿತು.

25 ಎಸೆತಗಳಲ್ಲಿ ಪಂದ್ಯ ಫಿನಿಶ್:

62 ರನ್​ಗಳ ಗುರಿಯನ್ನು ಬೆನ್ನತ್ತಲು ಈಸ್ಟ್ ಡೆಲ್ಲಿ ರೈಡರ್ಸ್ ​ಪರ ಆರಂಭಿಕರಾಗಿ ಕಣಕ್ಕಿಳಿದ ಅನೂಜ್ ರಾವತ್ ಹಾಗೂ ಹಿಮ್ಮತ್ ಸಿಂಗ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್​ನಿಂದಲೇ ಸಿಡಿಲಬ್ಬರ ಆರಂಭಿಸಿದ ಅನೂಜ್ 12 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 1 ಫೋರ್​ನೊಂದಿಗೆ 25 ರನ್​ ಬಾರಿಸಿದರು.

ಮತ್ತೊಂದೆಡೆ 13 ಎಸೆತಗಳನ್ನು ಎದುರಿಸಿದ ಹಿಮ್ಮತ್ ಸಿಂಗ್ 2 ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ ಅಜೇಯ 31 ರನ್​ ಚಚ್ಚಿದ್ದರು. ಈ ಮೂಲಕ ಕೇವಲ 4.1 ಓವರ್​ಗಳಲ್ಲಿ 62 ರನ್ ಬಾರಿಸಿ ಈಸ್ಟ್ ಡೆಲ್ಲಿ ರೈಡರ್ಸ್ ತಂಡವು 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಈಸ್ಟ್ ಡೆಲ್ಲಿ ರೈಡರ್ಸ್ ತಂಡ: ಅನೂಜ್ ರಾವತ್, ಸಿಮರ್ಜೀತ್ ಸಿಂಗ್, ಹಿಮ್ಮತ್ ಸಿಂಗ್, ಹಿಮಾಂಶು ಚೌಹಾಣ್, ಹರ್ಷ್ ತ್ಯಾಗಿ, ವೈಭವ್ ಶರ್ಮಾ, ಮಯಾಂಕ್ ರಾವತ್, ಸಮರ್ಥ್ ಸೇಠ್, ಪ್ರಣವ್ ಪಂತ್, ಸುಜಲ್ ಸಿಂಗ್, ಹಾರ್ದಿಕ್ ಶರ್ಮಾ, ರೌನಕ್ ವಘೇಲಾ, ಅಗ್ರಿಮ್ ಶರ್ಮಾ, ಶಂತನು ಸಿಂಗ್, ಭಗವಾನ್ ಯಾದವ್, ಭಗವಾನ್ ಯಾದವ್ ಚೌಧರಿ, ಸಾಗರ್ ಖತ್ರಿ, ಶಿವಂ ಕುಮಾರ್ ತ್ರಿಪಾಠಿ, ರಿಷಭ್ ರಾಣಾ, ಲಕ್ಷಯ ಸಾಂಗ್ವಾನ್.

ಇದನ್ನೂ ಓದಿ: IPL 2025: RCB ಪರ ಆಡುವ ಇಂಗಿತ ವ್ಯಕ್ತಪಡಿಸಿದ ರಿಂಕು ಸಿಂಗ್

ಸೆಂಟ್ರಲ್ ಡೆಲ್ಲಿ ಕಿಂಗ್ಸ್ ತಂಡ: ಯಶ್ ಧುಲ್, ಪ್ರಿನ್ಸ್ ಚೌಧರಿ, ಹಿತೇನ್ ದಲಾಲ್, ಜಾಂಟಿ ಸಿಧು, ಲಕ್ಷಯ್ ಥರೇಜಾ, ಯೋಗೇಶ್ ಶರ್ಮಾ, ಮನಿ ಗ್ರೆವಾರ್, ಕೇಶವ್ ದಬಾಸ್, ಶೌರ್ಯ ಮಲಿಕ್, ಸೌರವ್ ದಾಗರ್, ಆರ್ಯನ್ ರಾಣಾ, ಸಿದ್ಧಾಂತ್ ಬನ್ಸಾಲ್, ರಜನೀಶ್ ದಾದರ್, ಸುಮಿತ್ ಕುಮಾರ್, ಕೌಶಲ್ ಸುಮನ್, ದೀಪ್ ಬಲ್ಯಾನ್, ವಿಶಾಂತ್ ಭಾಟಿ, ಧ್ರುವ ಕೌಶಿಕ್, ಅಜಯ್ ಗುಲಿಯಾ.

ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ