Ashes 2023: ಆಸೀಸ್ ವಿರುದ್ಧದ ಮೊದಲ ಪಂದ್ಯಕ್ಕೆ ಬಲಿಷ್ಠ ತಂಡ ಪ್ರಕಟಿಸಿದ ಇಂಗ್ಲೆಂಡ್..!

Ashes 2023: ಇಂಗ್ಲೆಂಡ್ ತಂಡದಲ್ಲಿ 7ಬ್ಯಾಟ್ಸ್‌ಮನ್‌ಗಳಿಗೆ ಅವಕಾಶ ನೀಡಲಾಗಿದ್ದು, ಬ್ಯಾಟಿಂಗ್ ಆಲ್​ರೌಂಡರ್​ ಆಗಿ 8ನೇ ಕ್ರಮಾಂಕದಲ್ಲಿ ಮೊಯಿನ್ ಅಲಿ ಆಡಲಿದ್ದಾರೆ. ಹಾಗೆಯೇ ತಂಡದಲ್ಲಿ ಮೂರು ಪ್ರಮುಖ ವೇಗದ ಬೌಲರ್​ಗಳನ್ನು ಆಯ್ಕೆ ಮಾಡಲಾಗಿದ್ದಾರೆ.

Ashes 2023: ಆಸೀಸ್ ವಿರುದ್ಧದ ಮೊದಲ ಪಂದ್ಯಕ್ಕೆ ಬಲಿಷ್ಠ ತಂಡ ಪ್ರಕಟಿಸಿದ ಇಂಗ್ಲೆಂಡ್..!
ಇಂಗ್ಲೆಂಡ್ ತಂಡ

Updated on: Jun 15, 2023 | 7:21 AM

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (WTC Final 2023) ಮುಗಿದ ನಂತರ, ಈಗ ಮತ್ತೊಂದು ಪ್ರಮುಖ ಟೆಸ್ಟ್ ಸರಣಿ ಪ್ರಾರಂಭವಾಗಲಿದೆ. ಪ್ರತಿಷ್ಠಿತ ಆಶಸ್ ಸರಣಿ (Ashes 2023) ಜೂನ್ 16 ಶುಕ್ರವಾರದಿಂದ ಆರಂಭವಾಗಲಿದ್ದು, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ (ENG vs AUS) ನಡುವಿನ ಈ ಐದು ಪಂದ್ಯಗಳ ಟೆಸ್ಟ್ ಸರಣಿಯು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಿಂದ ಪ್ರಾರಂಭವಾಗಲಿದೆ. ಇದಕ್ಕಾಗಿ ಎರಡೂ ತಂಡಗಳು ತಮ್ಮ ಸಿದ್ಧತೆಗೆ ಅಂತಿಮ ಸ್ಪರ್ಶ ನೀಡುತ್ತಿದ್ದು, ಉಭಯ ತಂಡಗಳ ನಡುವಿನ ಮೊದಲ ಪಂದ್ಯಕ್ಕೆ ಬೆನ್ ಸ್ಟೋಕ್ಸ್ (Ben Stokes) ನಾಯಕತ್ವದ ಇಂಗ್ಲೆಂಡ್ ತಂಡವನ್ನು ಎರಡು ದಿನ ಮುಂಚಿತವಾಗಿ ಪ್ರಕಟಿಸಲಾಗಿದೆ.

ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಹಿರಿಯ ವೇಗದ ಬೌಲರ್‌ಗಳಾದ ಜೇಮ್ಸ್ ಆಂಡರ್ಸನ್ ಮತ್ತು ಓಲಿ ರಾಬಿನ್ಸನ್ ಇಂಗ್ಲೆಂಡ್ ತಂಡಕ್ಕೆ ಮರಳಿದ್ದಾರೆ. ಅದೇ ಸಮಯದಲ್ಲಿ, ಆಶಸ್‌ಗಾಗಿ ನಿವೃತ್ತಿಯಿಂದ ಹಿಂತಿರುಗಿದ ಸ್ಪಿನ್ ಆಲ್‌ರೌಂಡರ್ ಮೊಯಿನ್ ಅಲಿ ಕೂಡ ಆಡುವ ಹನ್ನೊಂದರಲ್ಲಿ ಸೇರ್ಪಡೆಗೊಂಡಿದ್ದಾರೆ. ಎರಡು ವಾರಗಳ ಹಿಂದೆ ಐರ್ಲೆಂಡ್ ವಿರುದ್ಧ ಟೆಸ್ಟ್ ಆಡಿದ ಹೆಚ್ಚಿನ ಆಟಗಾರರನ್ನೇ ಇಂಗ್ಲೆಂಡ್ ಆಯ್ಕೆ ಮಾಡಿದೆ.

Ashes 2023: ಟೆಸ್ಟ್ ನಿವೃತ್ತಿ ಹಿಂಪಡೆದ ಇಂಗ್ಲೆಂಡ್​ನ ಸ್ಟಾರ್ ಆಲ್​ರೌಂಡರ್! ಆಶಸ್ ಸರಣಿಗೆ ಆಯ್ಕೆ

4 ವೇಗಿಗಳು, ಒಬ್ಬ ಸ್ಪಿನ್ನರ್

ಇಂಗ್ಲೆಂಡ್ ತಂಡದಲ್ಲಿ 7ಬ್ಯಾಟ್ಸ್‌ಮನ್‌ಗಳಿಗೆ ಅವಕಾಶ ನೀಡಲಾಗಿದ್ದು, ಬ್ಯಾಟಿಂಗ್ ಆಲ್​ರೌಂಡರ್​ ಆಗಿ 8ನೇ ಕ್ರಮಾಂಕದಲ್ಲಿ ಮೊಯಿನ್ ಅಲಿ ಆಡಲಿದ್ದಾರೆ. ಅದೇ ಸಮಯದಲ್ಲಿ, ಆಂಡರ್ಸನ್, ರಾಬಿನ್ಸನ್ ಹೊರತುಪಡಿಸಿ, ಸ್ಟುವರ್ಟ್ ಬ್ರಾಡ್ ಸೇರಿದಂತೆ ತಂಡದಲ್ಲಿ ಮೂರು ಪ್ರಮುಖ ವೇಗದ ಬೌಲರ್​ಗಳನ್ನು ಆಯ್ಕೆ ಮಾಡಲಾಗಿದೆ. ಈ ಮೂವರನ್ನು ಹೊರತುಪಡಿಸಿ, ತಂಡದ ಕ್ಯಾಪ್ಟನ್ ಸ್ಟೋಕ್ಸ್ ಕೂಡ ಬೌಲಿಂಗ್ ಮಾಡುವ ಸಾಧ್ಯತೆಗಳಿವೆ. ಆದರೆ ಐರ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದ ಸ್ಟೋಕ್ಸ್ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದು, ಬೌಲಿಂಗ್ ಮಾಡುತ್ತಾರಾ ಅಥವಾ ಇಲ್ಲವಾ ಎಂಬುದು ಖಚಿತವಾಗಿಲ್ಲ.

ಸ್ಪಿನ್ ವಿಭಾಗದ ಜವಾಬ್ದಾರಿ ಮುಖ್ಯವಾಗಿ ಮೊಯಿನ್ ಅಲಿ ಮೇಲಿದೆ, ಅಗತ್ಯವಿದ್ದರೆ ಮಾಜಿ ನಾಯಕ ಜೋ ರೂಟ್ ಕೂಡ ಸ್ಪಿನ್ನರ್ ಆಗಿ ಕಾರ್ಯನಿರ್ವಹಿಸಲಾಗಿದ್ದಾರೆ. ಎಡ್ಜ್‌ಬಾಸ್ಟನ್‌ ಪಿಚ್ ವೇಗದ ಬೌಲರ್-ಸ್ನೇಹಿಯಾಗಿರುವುದರಿಂದ ಸ್ಪಿನ್ನರ್​ಗಳಿಗೆ ಹೆಚ್ಚಿನ ಅವಕಾಶ ಸಿಗುವುದು ಅನುಮಾನ

ಇಂಗ್ಲೆಂಡ್ ತಂಡ ಹೀಗಿದೆ

ಬೆನ್ ಸ್ಟೋಕ್ಸ್ (ನಾಯಕ), ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಮೊಯಿನ್ ಅಲಿ, ಸ್ಟುವರ್ಟ್ ಬ್ರಾಡ್, ಓಲಿ ರಾಬಿನ್ಸನ್ ಮತ್ತು ಜೇಮ್ಸ್ ಆಂಡರ್ಸನ್.

ಆಸ್ಟ್ರೇಲಿಯಾ ತಂಡ ಯಾವಾಗ ಪ್ರಕಟ?

ಆಸ್ಟ್ರೇಲಿಯಾದ ಮಟ್ಟಿಗೆ ಪ್ಯಾಟ್ ಕಮ್ಮಿನ್ಸ್ ತಂಡ ಇನ್ನೂ ಆಡುವ ಹನ್ನೊಂದನ್ನು ಪ್ರಕಟಿಸಿಲ್ಲ. ಆದರೆ, ಈ ತಂಡದಲ್ಲಿ ಹೆಚ್ಚಿನ ಬದಲಾವಣೆಯ ನಿರೀಕ್ಷೆ ಇಲ್ಲ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತದ ವಿರುದ್ಧ ಆಡಿದ ಪ್ಲೇಯಿಂಗ್ ಇಲೆವೆನ್ ಇಲ್ಲಿಯೂ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಸ್ಕಾಟ್ ಬೋಲ್ಯಾಂಡ್ ಮತ್ತು ಜೋಶ್ ಹ್ಯಾಜಲ್‌ವುಡ್ ನಡುವೆ ಯಾರಿಗೆ ಸ್ಥಾನ ಸಿಗುತ್ತದೆ ಎಂಬುದು ಒಂದೇ ಪ್ರಶ್ನೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:18 am, Thu, 15 June 23

Follow Us