
ಬೆಂಗಳೂರು (ಜು. 03): ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ನಾಯಕ ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ (Shubman Gill) ಶತಕ ಗಳಿಸಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗಿಲ್, ಮೊದಲ ದಿನದ ಕೊನೆಯ ಸೆಷನ್‌ನಲ್ಲಿ ತಮ್ಮ 7 ನೇ ಟೆಸ್ಟ್ ಶತಕವನ್ನು ಪೂರೈಸಿದರು. ಅವರು 199 ಎಸೆತಗಳಲ್ಲಿ 11 ಬೌಂಡರಿಗಳ ಸಹಾಯದಿಂದ ಶತಕವನ್ನು ತಲುಪಿದರು. ಅವರ ಈ ಸೆಂಚುರಿ ಸಹಾಯದಿಂದ, ಭಾರತ ಮೊದಲ ದಿನದಂದು 5 ವಿಕೆಟ್‌ಗಳಿಗೆ 310 ರನ್ ಗಳಿಸಿದೆ. ಗಿಲ್ 216 ಎಸೆತಗಳಲ್ಲಿ 114 ರನ್ ಗಳಿಸಿದ ನಂತರ ಆಟವಾಡುತ್ತಿದ್ದಾರೆ. ಶತಕ ಗಳಿಸುವುದರ ಜೊತೆಗೆ, ಗಿಲ್ ಅನೇಕ ದೊಡ್ಡ ದಾಖಲೆಗಳನ್ನು ಸಹ ಮಾಡಿದ್ದಾರೆ, ಅವುಗಳಲ್ಲಿ ಪ್ರಮುಖವಾದ ಐದು ರೆಕಾರ್ಡ್ಗಳ ಬಗ್ಗೆ ನೋಡುವುದಾದರೆ..
ಇಂಗ್ಲೆಂಡ್ ವಿರುದ್ಧದ ಸತತ ಮೂರನೇ ಟೆಸ್ಟ್ ಪಂದ್ಯದಲ್ಲಿ ಶುಭ್ಮನ್ ಗಿಲ್ ಶತಕ ಬಾರಿಸಿದ್ದಾರೆ. ಲೀಡ್ಸ್ ಗೂ ಮುನ್ನ, ಕಳೆದ ವರ್ಷ ಧರ್ಮಶಾಲಾದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಮೊಹಮ್ಮದ್ ಅಜರುದ್ದೀನ್, ದಿಲೀಪ್ ವೆಂಗ್ಸಾಕರ್ ಮತ್ತು ರಾಹುಲ್ ದ್ರಾವಿಡ್ ನಂತರ, ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸತತ ಮೂರು ಶತಕಗಳನ್ನು ಬಾರಿಸಿದ ನಾಲ್ಕನೇ ಭಾರತೀಯ ಎಂಬ ಹೆಗ್ಗಳಿಕೆಗೆ ಶುಭ್ಮನ್ ಗಿಲ್ ಪಾತ್ರರಾಗಿದ್ದಾರೆ.
ಈ ಸರಣಿಗೂ ಮುನ್ನ ಶುಭ್ಮನ್ ಗಿಲ್ ಭಾರತೀಯ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡರು. ನಾಯಕನಾಗಿ, ಅವರು ಸತತ ಎರಡನೇ ಪಂದ್ಯದಲ್ಲಿ ಶತಕ ಗಳಿಸಿದರು. ಅವರು ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ. ವಿಜಯ್ ಹಜಾರೆ ಮತ್ತು ಸುನಿಲ್ ಗವಾಸ್ಕರ್ ಜೊತೆಗೆ, ವಿರಾಟ್ ಕೊಹ್ಲಿ ಕೂಡ ನಾಯಕನಾಗಿ ಮೊದಲ ಎರಡು ಪಂದ್ಯಗಳಲ್ಲಿ ಶತಕ ಗಳಿಸಿದರು.
IND vs ENG: ಸತತ 3 ಇನ್ನಿಂಗ್ಸ್ಗಳಲ್ಲಿ ಮುಗ್ಗರಿಸಿದ ಕರುಣ್ ನಾಯರ್; ಮುಂದಿನ ಇನ್ನಿಂಗ್ಸ್ ನಿರ್ಣಾಯಕ
ಶುಭ್ಮನ್ ಗಿಲ್ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಸತತ ಎರಡು ಟೆಸ್ಟ್ ಪಂದ್ಯಗಳಲ್ಲಿ ಎರಡು ಶತಕಗಳನ್ನು ಗಳಿಸಿದ ಎರಡನೇ ಭಾರತೀಯ ನಾಯಕ. ಇದಕ್ಕೂ ಮೊದಲು, ಮೊಹಮ್ಮದ್ ಅಜರುದ್ದೀನ್ ಈ ಸಾಧನೆ ಮಾಡಿದ್ದರು. 1990 ರಲ್ಲಿ, ಲಾರ್ಡ್ಸ್ ನಂತರ, ಅವರು ಓಲ್ಡ್ ಟ್ರಾಫರ್ಡ್‌ನಲ್ಲಿಯೂ ಶತಕ ಗಳಿಸಿದರು.
ಶುಭ್ಮನ್ ಗಿಲ್ ಇನ್ನಿಂಗ್ಸ್ ಉದ್ದಕ್ಕೂ ನಿಯಂತ್ರಣದಲ್ಲಿ ಕಾಣುತ್ತಿದ್ದರು. ಯಾವುದೇ ಇಂಗ್ಲಿಷ್ ಬೌಲರ್ ಅವರಿಗೆ ತೊಂದರೆ ನೀಡಲು ಸಾಧ್ಯವಾಗಲಿಲ್ಲ. ಅವರು ಶತಕ ತಲುಪಿದಾಗ, ಅವರ ನಿಯಂತ್ರಣ ಶೇಕಡಾವಾರು 96.5 ಆಗಿತ್ತು. ಇದು ಇಂಗ್ಲೆಂಡ್‌ನಲ್ಲಿ ಶತಕ ಗಳಿಸಿದ ಯಾವುದೇ ಬ್ಯಾಟ್ಸ್‌ಮನ್‌ನ ಅತ್ಯುತ್ತಮ ನಿಯಂತ್ರಣ ಶೇಕಡಾವಾರು ಕೂಡ ಆಗಿದೆ.
ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಭಾರತ ತಂಡ ಇದುವರೆಗೆ ಯಾವುದೇ ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ. ಗಿಲ್ ಈ ಮೈದಾನದಲ್ಲಿ ಶತಕ ಬಾರಿಸಿದ ಎರಡನೇ ಭಾರತೀಯ ನಾಯಕ. ಇದಕ್ಕೂ ಮೊದಲು, 2018 ರಲ್ಲಿ, ವಿರಾಟ್ ಕೊಹ್ಲಿ ಇಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:51 am, Thu, 3 July 25