AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಸತತ 2ನೇ ಪಂದ್ಯದಲ್ಲಿ ಶತಕ ಬಾರಿಸಿದ ನಾಯಕ ಶುಭ್​ಮನ್ ಗಿಲ್

Shubman Gill Century: ಭಾರತದ ಟೆಸ್ಟ್ ನಾಯಕ ಶುಭ್ಮನ್ ಗಿಲ್ ಅವರು ಇಂಗ್ಲೆಂಡ್ ವಿರುದ್ಧದ ಎಡ್ಜ್‌ಬಾಸ್ಟನ್ ಪಂದ್ಯದಲ್ಲಿ ಅದ್ಭುತ ಶತಕ ಸಿಡಿಸಿದ್ದಾರೆ. ನಾಯಕನಾಗಿ ತಮ್ಮ ಮೊದಲ ಪಂದ್ಯದಲ್ಲಿ ಸೋತರೂ, ಆಟಗಾರನಾಗಿ ಅಮೋಘ ಪ್ರದರ್ಶನ ನೀಡಿದ್ದ ಗಿಲ್, ಇದೀಗ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಶತಕದ ಇನ್ನಿಂಗ್ಸ್ ಆಡಿದ್ದಾರೆ. 199 ಎಸೆತಗಳಲ್ಲಿ 11 ಬೌಂಡರಿಗಳೊಂದಿಗೆ ಅವರು ಶತಕ ಪೂರ್ಣಗೊಳಿಸಿದ್ದು ವಿಶೇಷ.

IND vs ENG: ಸತತ 2ನೇ ಪಂದ್ಯದಲ್ಲಿ ಶತಕ ಬಾರಿಸಿದ ನಾಯಕ ಶುಭ್​ಮನ್ ಗಿಲ್
Shubman Gill
ಪೃಥ್ವಿಶಂಕರ
|

Updated on:Jul 02, 2025 | 11:09 PM

Share

ಭಾರತ ಟೆಸ್ಟ್ ತಂಡದ ನಾಯಕತ್ವವಹಿಸಿಕೊಂಡ ಬಳಿಕ ಶುಭ್​ಮನ್ ಗಿಲ್ (Shubman Gill) ಅವರ ಬ್ಯಾಟ್ ಘರ್ಜಿಸಲು ಶುರು ಮಾಡಿದೆ. ನಾಯಕನಾಗಿ ಮೊದಲ ಟೆಸ್ಟ್ ಪಂದ್ಯವನ್ನು ಶುಭ್​ಮನ್ ಗಿಲ್ ಸೋತಿರಬಹುದು ಆದರೆ ಆಟಗಾರನಾಗಿ ಅವರ ಪ್ರದರ್ಶನ ಅಮೋಘವಾಗಿತ್ತು. ಇದೀಗ ತಮ್ಮ ನಾಯಕತ್ವದಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಗಿಲ್, ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಆರಂಭದಿಂದಲೂ ತಾಳ್ಮೆಯ ಆಟಕ್ಕೆ ಮುಂದಾಗಿರುವ ಗಿಲ್ ಬರೋಬ್ಬರಿ 199 ಎಸೆತಗಳನ್ನು ಎದುರಿಸಿ 11 ಬೌಂಡರಿಗಳ ಸಹಿತ ತಮ್ಮ ಶತಕ ಪೂರೈಸಿದರು. ಗಿಲ್ ಸತತ 2 ಬೌಂಡರಿಗಳನ್ನು ಬಾರಿಸುವುದರೊಂದಿಗೆ ತಮ್ಮ ಶತಕವನ್ನು ಪೂರೈಸಿದ್ದು ವಿಶೇಷವಾಗಿತ್ತು.

ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ಗಿಲ್

ಎಡ್ಜ್‌ಬಾಸ್ಟನ್ ಟೆಸ್ಟ್‌ನ ಮೊದಲ ದಿನದಂದು, ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಆದರೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಹೀಗಾಗಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ನಾಯಕ ಗಿಲ್ ಬಲವಾದ ಇನ್ನಿಂಗ್ಸ್ ಆಡಿದರು. 125 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದ ಗಿಲ್ ಇದುವರೆಗೆ ಆಡಿರುವ ಮೂರು ಇನ್ನಿಂಗ್ಸ್‌ಗಳಲ್ಲಿ ಎರಡು ಬಾರಿ 50 ರನ್‌ಗಳ ಗಡಿ ದಾಟಿ ತಮಗೆ ನೀಡಿರುವ ಜವಾಬ್ದಾರಿಯನ್ನು ಬಹಳ ಚೆನ್ನಾಗಿ ನಿಭಾಯಿಸಿದ್ದಾರೆ.

ಮೇಲೆ ಹೇಳಿದಂತೆ ಶುಭ್​ಮನ್ ಗಿಲ್ ಎಡ್ಜ್‌ಬಾಸ್ಟನ್ ಟೆಸ್ಟ್‌ಗೂ ಮೊದಲು ಲೀಡ್ಸ್ ಟೆಸ್ಟ್‌ನಲ್ಲಿ ನಾಯಕತ್ವದ ಇನ್ನಿಂಗ್ಸ್ ಆಡಿದ್ದರು. ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 147 ರನ್​ಗಳ ಇನ್ನಿಂಗ್ಸ್ ಆಡಿದ್ದ ಗಿಲ್, ತಮ್ಮ ತಮ್ಮ ಇನ್ನಿಂಗ್ಸ್​ನಲ್ಲಿ 227 ಎಸೆತಗಳನ್ನು ಎದುರಿಸಿ 19 ಬೌಂಡರಿಗಳು ಮತ್ತು 1 ಸಿಕ್ಸರ್ ಸಹ ಬಾರಿಸಿದರು. ಇದೀಗ ಗಿಲ್, ಎಡ್ಜ್‌ಬಾಸ್ಟನ್‌ನಲ್ಲಿಯೂ ಇದೇ ರೀತಿಯ ಪ್ರದರ್ಶನ ನೀಡಿದ್ದಾರೆ. ಇದು ಗಿಲ್ ಅವರ ಟೆಸ್ಟ್ ವೃತ್ತಿಜೀವನದ 7 ನೇ ಶತಕವಾಗಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿಡಿದ 16ನೇ ಶತಕವಾಗಿದೆ.

IND vs ENG: ಗಿಲ್ ಪಡೆಗೆ ಮತ್ತೊಂದು ಆಘಾತ; ಬುಮ್ರಾ 2ನೇ ಟೆಸ್ಟ್ ಆಡುವುದು ಡೌಟ್ ಎಂದ ಮಾಜಿ ಕೋಚ್

ಕೊಹ್ಲಿಯನ್ನು ಸರಿಗಟ್ಟಿದ ಗಿಲ್

ಈ ಶತಕದೊಂದಿಗೆ, ಶುಭ್​ಮನ್ ಗಿಲ್ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸಹ ಸರಿಗಟ್ಟಿದ್ದಾರೆ. ವಾಸ್ತವವಾಗಿ, ಗಿಲ್ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಭಾರತೀಯ ನಾಯಕನಾಗಿ ಶತಕ ಗಳಿಸಿದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು, ವಿರಾಟ್ ಕೊಹ್ಲಿ ಮಾತ್ರ ಈ ಸಾಧನೆ ಮಾಡಿದ್ದರು. 2018 ರಲ್ಲಿ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಾಯಕನಾಗಿ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:49 pm, Wed, 2 July 25

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಧನ್ವೀರ್ ವಿರುದ್ಧ ನಿರ್ಬಂಧಜಾಜ್ಞೆ: ದರ್ಶನ್ ಪರ ವಕೀಲರು ಹೇಳಿದ್ದಿಷ್ಟು
ಧನ್ವೀರ್ ವಿರುದ್ಧ ನಿರ್ಬಂಧಜಾಜ್ಞೆ: ದರ್ಶನ್ ಪರ ವಕೀಲರು ಹೇಳಿದ್ದಿಷ್ಟು
ರಷ್ಯಾದ ತೈಲ ಸಂಸ್ಕರಣಾಗಾದ ಮೇಲೆ ಉಕ್ರೇನ್​ನ ಡ್ರೋನ್ ದಾಳಿ
ರಷ್ಯಾದ ತೈಲ ಸಂಸ್ಕರಣಾಗಾದ ಮೇಲೆ ಉಕ್ರೇನ್​ನ ಡ್ರೋನ್ ದಾಳಿ
ಹೆಲಿಕಾಪ್ಟರ್​​ ದುರಂತದಲ್ಲಿ ಸಾವನ್ನಪ್ಪಿದ CCB ಇನ್ಸ್​ಪೆಕ್ಟರ್ ಅರುಣ್ ಯಾರು
ಹೆಲಿಕಾಪ್ಟರ್​​ ದುರಂತದಲ್ಲಿ ಸಾವನ್ನಪ್ಪಿದ CCB ಇನ್ಸ್​ಪೆಕ್ಟರ್ ಅರುಣ್ ಯಾರು
ದೇವೇಗೌಡರ ಭೇಟಿಯಾದ ಯಡಿಯೂರಪ್ಪ: ಕುತೂಹಲ ಮೂಡಿಸಿದ ಮಾಜಿ CM ನಡೆ
ದೇವೇಗೌಡರ ಭೇಟಿಯಾದ ಯಡಿಯೂರಪ್ಪ: ಕುತೂಹಲ ಮೂಡಿಸಿದ ಮಾಜಿ CM ನಡೆ
ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ, ರಜನೀಕಾಂತ್ ಅತಿಥಿ?
ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ, ರಜನೀಕಾಂತ್ ಅತಿಥಿ?
‘ಪ್ರೇಮದ ಊರಲಿ ಪಾರ್ಟ್ 2’ ಬರುತ್ತ? ನೇರವಾಗಿ ಉತ್ತರ ನೀಡಿದ ನಿರ್ದೇಶಕ ಮನೋಜ್
‘ಪ್ರೇಮದ ಊರಲಿ ಪಾರ್ಟ್ 2’ ಬರುತ್ತ? ನೇರವಾಗಿ ಉತ್ತರ ನೀಡಿದ ನಿರ್ದೇಶಕ ಮನೋಜ್
AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಅಶೋಕ್​​ ಸವಾಲು
AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಅಶೋಕ್​​ ಸವಾಲು
‘ಕೆಲಸ ಮಾಡಲ್ಲ ಅಂದ್ರೆ ಮಾಡಲ್ಲ’: ಸೌಂದರ್ಯಾ ಜೊತೆ ಗಗನ್ ಜಗಳ
‘ಕೆಲಸ ಮಾಡಲ್ಲ ಅಂದ್ರೆ ಮಾಡಲ್ಲ’: ಸೌಂದರ್ಯಾ ಜೊತೆ ಗಗನ್ ಜಗಳ
ಬಿಗ್ ಬಾಸ್ ಮನೆಯಲ್ಲಿ ಸೋನಿಕಾ, ತಾಂಡವ್, ಗಗನ್ ಮದುವೆ ಮಾತುಕತೆ
ಬಿಗ್ ಬಾಸ್ ಮನೆಯಲ್ಲಿ ಸೋನಿಕಾ, ತಾಂಡವ್, ಗಗನ್ ಮದುವೆ ಮಾತುಕತೆ
ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರ: ಪೊಲೀಸರ ಜೊತೆಗೆ ಫೀಲ್ಡಿಗಿಳಿದ ಸಚಿವ
ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರ: ಪೊಲೀಸರ ಜೊತೆಗೆ ಫೀಲ್ಡಿಗಿಳಿದ ಸಚಿವ