GAM vs ZIM: 120 ಎಸೆತಗಳಲ್ಲಿ ಬರೋಬ್ಬರಿ 344 ರನ್; ವಿಶ್ವ ದಾಖಲೆ ನಿರ್ಮಿಸಿದ ಜಿಂಬಾಬ್ವೆ..!

GAM vs ZIM: ಪ್ರಸ್ತುತ ಟಿ20 ವಿಶ್ವಕಪ್ ಪ್ರಾದೇಶಿಕ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿವೆ. ಇದರ ಅಂಗವಾಗಿ ಇಂದು ಗ್ಯಾಂಬಿಯಾ ಹಾಗೂ ಜಿಂಬಾಬ್ವೆ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡ ನಿಗದಿತ 20 ಓವರ್​ಗಳಲ್ಲಿ ಬರೋಬ್ಬರಿ 344 ರನ್ ಕಲೆಹಾಕಿ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇನ್ನಿಂಗ್ಸ್​ವೊಂದರಲ್ಲಿ ಅತ್ಯಧಿಕ ಮೊತ್ತ ಕಲೆಹಾಕಿದ ತಂಡವೆಂಬ ವಿಶ್ವ ದಾಖಲೆ ಬರೆದಿದೆ.

GAM vs ZIM: 120 ಎಸೆತಗಳಲ್ಲಿ ಬರೋಬ್ಬರಿ 344 ರನ್; ವಿಶ್ವ ದಾಖಲೆ ನಿರ್ಮಿಸಿದ ಜಿಂಬಾಬ್ವೆ..!
ಜಿಂಬಾಬ್ವೆ ತಂಡ
Follow us
|

Updated on:Oct 23, 2024 | 7:46 PM

ಪ್ರಸ್ತುತ ಟಿ20 ವಿಶ್ವಕಪ್ ಪ್ರಾದೇಶಿಕ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿವೆ. ಇದರ ಅಂಗವಾಗಿ ಇಂದು ಗ್ಯಾಂಬಿಯಾ ಹಾಗೂ ಜಿಂಬಾಬ್ವೆ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡ ನಿಗದಿತ 20 ಓವರ್​ಗಳಲ್ಲಿ ಬರೋಬ್ಬರಿ 344 ರನ್ ಕಲೆಹಾಕಿ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇನ್ನಿಂಗ್ಸ್​ವೊಂದರಲ್ಲಿ ಅತ್ಯಧಿಕ ಮೊತ್ತ ಕಲೆಹಾಕಿದ ತಂಡವೆಂಬ ವಿಶ್ವ ದಾಖಲೆ ಬರೆದಿದೆ. ಇದಕ್ಕೂ ಮುನ್ನ ಮಂಗೋಲಿಯಾ ವಿರುದ್ಧ 314 ರನ್ ಗಳಿಸಿದ್ದ ನೇಪಾಳ ಹೆಸರಿನಲ್ಲಿ ಈ ದಾಖಲೆ ದಾಖಲಾಗಿತ್ತು. ಇದೀಗ ಈ ದಾಖಲೆಯನ್ನೂ ಮುರೆಯುವಲ್ಲಿ ಜಿಂಬಾಬ್ವೆ ತಂಡ ಯಶಸ್ವಿಯಾಗಿದೆ. ಇನ್ನು ಕೆಲವೇ ದಿನಗಳ ಹಿಂದೆ ಬಾಂಗ್ಲಾದೇಶ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 297 ರನ್ ಕಲೆಹಾಕುವ ಮೂಲಕ ಈ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತ್ತು. ಇದೀಗ ಜಿಂಬಾಬ್ವೆಯ ತ್ರಿಶತಕದ ಇನ್ನಿಂಗ್ಸ್​ನಿಂದಾಗಿ ಟೀಂ ಇಂಡಿಯಾ ಮೂರನೇ ಸ್ಥಾನಕ್ಕೆ ಕುಸಿದಿದೆ.

ಜಿಂಬಾಬ್ವೆಗೆ ಸ್ಫೋಟಕ ಆರಂಭ

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಆರಂಭಿಕ ಬ್ರಿಯಾನ್ ಬೆನೆಟ್ ಕೇವಲ 26 ಎಸೆತಗಳಲ್ಲಿ 50 ರನ್​ಗಳ ಇನ್ನಿಂಗ್ಸ್ ಆಡಿದರೆ, ತಡಿವಾನಾಶೆ ಮರುಮಣಿ ಕೂಡ ಕೇವಲ 19 ಎಸೆತಗಳಲ್ಲಿ 62 ರನ್ ಚಚ್ಚಿದರು. ಹೀಗಾಗಿ ಈ ಇಬ್ಬರು 5.4 ಓವರ್‌ಗಳಲ್ಲಿ 98 ರನ್ ಕಲೆಹಾಕಿದರು. ಆ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದ ಜಿಂಬಾಬ್ವೆಯ ಅತ್ಯಂತ ಅನುಭವಿ ಮತ್ತು ಅನುಭವಿ ಆಲ್‌ರೌಂಡರ್ ಸಿಕಂದರ್ ರಾಝಾ, ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆ ಸುರಿಸುವ ಮೂಲಕ ಗ್ಯಾಂಬಿಯಾದ ಬೌಲರ್‌ಗಳ ಬೆವರಿಳಿಸಿದರು.

40 ಎಸೆತಗಳಲ್ಲಿ 141 ರನ್‌ಗಳ ಜೊತೆಯಾಟ

ಹೀಗಾಗಿ ಸಿಕಂದರ್ ಕೇವಲ 33 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಇದರೊಂದಿಗೆ ಐಸಿಸಿಯ ಪೂರ್ಣ ಸದಸ್ಯರ ತಂಡಗಳಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ಹೊಸ ದಾಖಲೆಯನ್ನು ಸೃಷ್ಟಿಸಿದರು. ಈ ಸ್ಫೋಟಕ ಶತಕದೊಂದಿಗೆ ರೋಹಿತ್ ಶರ್ಮಾ ಮತ್ತು ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಅವರ ದಾಖಲೆಯನ್ನು ಸಹಮುರಿದರು. ಈ ಇಬ್ಬರೂ ಈ ಹಿಂದೆ 35 ಎಸೆತಗಳಲ್ಲಿ ಶತಕ ಸಿಡಿಸಿ ಈ ದಾಖಲೆ ನಿರ್ಮಿಸಿದ್ದರು. ಅಂತಿಮವಾಗಿ ರಾಝಾ ಅವರು ಕ್ಲೈವ್ ಮದಾಂಡೆ ಅವರೊಂದಿಗೆ 40 ಎಸೆತಗಳಲ್ಲಿ 141 ರನ್‌ಗಳ ಜೊತೆಯಾಟವನ್ನಾಡಿ ತಂಡವನ್ನು 20 ಓವರ್‌ಗಳಲ್ಲಿ 344 ರನ್‌ಗಳ ವಿಶ್ವ ದಾಖಲೆಯ ಸ್ಕೋರ್‌ಗೆ ಕೊಂಡೊಯ್ದರು.

ಅತಿ ಹೆಚ್ಚು ಸಿಕ್ಸರ್‌ಗಳ ಹೊಸ ದಾಖಲೆ

ಈ ಇನ್ನಿಂಗ್ಸ್‌ನಲ್ಲಿ ಜಿಂಬಾಬ್ವೆಯ ಬ್ಯಾಟ್ಸ್‌ಮನ್‌ಗಳು ಸಿಕ್ಸರ್‌ಗಳ ಮಳೆಯನ್ನೇ ಸುರಿಸಿದರು. ನಾಯಕ ಸಿಕಂದರ್ ರಾಝಾ ಗರಿಷ್ಠ 15 ಸಿಕ್ಸರ್‌ಗಳನ್ನು ಬಾರಿಸಿದರೆ, ಇದಲ್ಲದೇ ಅವರ ಬ್ಯಾಟ್‌ನಿಂದ 7 ಬೌಂಡರಿಗಳೂ ಸಹ ಬಂದವು. 17 ಎಸೆತಗಳಲ್ಲಿ 55 ರನ್ ಗಳಿಸಿದ ಮಾದಂಡೆ ಕೂಡ 5 ಸಿಕ್ಸರ್ ಬಾರಿಸಿದರೆ, ಮರುಮಣಿ 4 ಸಿಕ್ಸರ್ ಬಾರಿಸಿದರು. ಒಟ್ಟಾರೆ ಈ ಇನ್ನಿಂಗ್ಸ್‌ನಲ್ಲಿ ಜಿಂಬಾಬ್ವೆ 27 ಸಿಕ್ಸರ್‌ಗಳನ್ನು ಬಾರಿಸಿದ್ದು, ಈ ಸಂದರ್ಭದಲ್ಲಿ ನೇಪಾಳದ (26) ವಿಶ್ವ ದಾಖಲೆಯನ್ನೂ ಸಹ ಮುರಿದಿದೆ.

ಗ್ಯಾಂಬಿಯಾ ತಂಡ 54 ರನ್​​ಗಳಿಗೆ ಆಲೌಟ್

ಇನ್ನು ಜಿಂಬಾಬ್ವೆ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಿದ ಗ್ಯಾಂಬಿಯಾ ತಂಡ 14.4 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 54 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಮೂಲಕ 290 ರನ್​ಗಳ ಬೃಹತ್ ಅಂತರದ ಸೋಲನ್ನು ಎದುರಿಸಬೇಕಾಯಿತು. ತಂಡದ ಪರ 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಅಂದ್ರೆ ಜಾರ್ಜು ಅತ್ಯಧಿಕ 12 ರನ್​ಗಳ ಇನ್ನಿಂಗ್ಸ್ ಆಡಿದರು. ಉಳಿದ ಎಲ್ಲಾ ಬ್ಯಾಟ್ಸ್​ಮನ್​ಗಳು ಕೇವಲ ಒಂದಂಕಿಗೆ ಸುಸ್ತಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:28 pm, Wed, 23 October 24

ಕುಮಾರಸ್ವಾಮಿ ಸೂಚಿಸುವ ಅಭ್ಯರ್ಥಿಗೆ ಎನ್​ಡಿಎ ಒಮ್ಮತದ ಬೆಂಬಲ: ವಿಜಯೇಂದ್ರ
ಕುಮಾರಸ್ವಾಮಿ ಸೂಚಿಸುವ ಅಭ್ಯರ್ಥಿಗೆ ಎನ್​ಡಿಎ ಒಮ್ಮತದ ಬೆಂಬಲ: ವಿಜಯೇಂದ್ರ
ಬಿಗ್​ಬಾಸ್​ನಲ್ಲಿ ಶುರುವಾಯ್ತು ಪಕ್ಷ ರಾಜಕೀಯ, ಸ್ಪರ್ಧಿಗಳ ನಡುವೆ ಗಲಾಟೆ
ಬಿಗ್​ಬಾಸ್​ನಲ್ಲಿ ಶುರುವಾಯ್ತು ಪಕ್ಷ ರಾಜಕೀಯ, ಸ್ಪರ್ಧಿಗಳ ನಡುವೆ ಗಲಾಟೆ
ಭಾರತ- ಪಾಕಿಸ್ತಾನದ ನಡುವೆ ರಾಜಿಯಾಗಬೇಕು; ಮೆಹಬೂಬಾ ಮುಫ್ತಿ ಹೇಳಿಕೆ
ಭಾರತ- ಪಾಕಿಸ್ತಾನದ ನಡುವೆ ರಾಜಿಯಾಗಬೇಕು; ಮೆಹಬೂಬಾ ಮುಫ್ತಿ ಹೇಳಿಕೆ
ಎನ್​ಡಿಎ ಅಭ್ಯರ್ಥಿ ಗೆಲ್ಲಿಸಲು ಕುಮಾರಸ್ವಾಮಿ ಶ್ರಮಿಸಬೇಕು: ಪ್ರೀತಂ ಗೌಡ
ಎನ್​ಡಿಎ ಅಭ್ಯರ್ಥಿ ಗೆಲ್ಲಿಸಲು ಕುಮಾರಸ್ವಾಮಿ ಶ್ರಮಿಸಬೇಕು: ಪ್ರೀತಂ ಗೌಡ
ಯೋಗೇಶ್ವರ್​ನನ್ನು ಸೇರಿಸಿಕೊಂಡು ಸಿದ್ದರಾಮಯ್ಯ ಪಕ್ಷ ಹಾಳುಮಾಡಿತ್ತಿದ್ದಾರೆ:
ಯೋಗೇಶ್ವರ್​ನನ್ನು ಸೇರಿಸಿಕೊಂಡು ಸಿದ್ದರಾಮಯ್ಯ ಪಕ್ಷ ಹಾಳುಮಾಡಿತ್ತಿದ್ದಾರೆ:
ಇವತ್ತು ಸಾಯಂಕಾಲ ಎನ್​ಡಿಎ ಅಭ್ಯರ್ಥಿ ಹೆಸರು ಘೋಷಣೆ ಸಾಧ್ಯತೆ: ನಿಖಿಲ್
ಇವತ್ತು ಸಾಯಂಕಾಲ ಎನ್​ಡಿಎ ಅಭ್ಯರ್ಥಿ ಹೆಸರು ಘೋಷಣೆ ಸಾಧ್ಯತೆ: ನಿಖಿಲ್
ಕಂಜನ್​ ಮತ್ತು ಧನಂಜಯ ಆನೆಗಳ ನಡುವೆ ಮತ್ತೆ ಗಲಾಟೆ: ತಪ್ಪಿದ ಭಾರೀ ಅನಾಹುತ
ಕಂಜನ್​ ಮತ್ತು ಧನಂಜಯ ಆನೆಗಳ ನಡುವೆ ಮತ್ತೆ ಗಲಾಟೆ: ತಪ್ಪಿದ ಭಾರೀ ಅನಾಹುತ
ತನ್ನನ್ನು ತಾನೇ ನಾಮಿನೇಟ್ ಮಾಡಿಕೊಂಡ ಹನುಮಂತ; ಈ ವಾರವೇ ಔಟ್?
ತನ್ನನ್ನು ತಾನೇ ನಾಮಿನೇಟ್ ಮಾಡಿಕೊಂಡ ಹನುಮಂತ; ಈ ವಾರವೇ ಔಟ್?
ನಾನು ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವಂತೆ ಹೈಕಮಾಂಡ್ ಹೇಳಿದೆ: ಸುರೇಶ್
ನಾನು ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವಂತೆ ಹೈಕಮಾಂಡ್ ಹೇಳಿದೆ: ಸುರೇಶ್
ಡಿಕೆ ಸುರೇಶ್ ಗೆಲುವು ಮತ್ತು ಸೋಲು ಎರಡಕ್ಕೂ ಕಾರಣನಾಗಿದ್ದೇನೆ: ಯೋಗೇಶ್ವರ್
ಡಿಕೆ ಸುರೇಶ್ ಗೆಲುವು ಮತ್ತು ಸೋಲು ಎರಡಕ್ಕೂ ಕಾರಣನಾಗಿದ್ದೇನೆ: ಯೋಗೇಶ್ವರ್