Video: ನಾಟಕೀಯ ರನೌಟ್ ಮಾಡಿದ ಡಿಕೆ: ಕೋಪಗೊಂಡ ಮ್ಯಾಕ್ಸ್ವೆಲ್
India vs Australia: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ನಿಗದಿತ 20 ಓವರ್ಗಳಲ್ಲಿ 186 ರನ್ ಕಲೆಹಾಕಿತು. ಈ ಬೃಹತ್ ಗುರಿಹನ್ನು ಬೆನ್ನತ್ತಿದ ಟೀಮ್ ಇಂಡಿಯಾ 19.5 ಓವರ್ಗಳಲ್ಲಿ 187 ರನ್ ಬಾರಿಸಿ, 6 ವಿಕೆಟ್ಗಳಿಂದ ಜಯ ಸಾಧಿಸಿತು.
ಹೈದರಾಬಾದ್ನಲ್ಲಿ ನಡೆದ ಭಾರತ – ಆಸ್ಟ್ರೇಲಿಯಾ (India vs Australia) ನಡುವಣ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಭರ್ಜರಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದಿತ್ತು. ಇದಾಗ್ಯೂ ಕಂಬ್ಯಾಕ್ ಮಾಡಿದ ಟೀಮ್ ಇಂಡಿಯಾಗೆ ಪ್ಲಸ್ ಪಾಯಿಂಟ್ ಆಗಿದ್ದು ಡೇಂಜರಸ್ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್ವೆಲ್ ಅವರ ರನೌಟ್. ಆದರೆ ಮ್ಯಾಕ್ಸ್ವೆಲ್ ಅವರ ರನೌಟ್ ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಗಿತ್ತು.
8ನೇ ಓವರ್ನಲ್ಲಿ ಮ್ಯಾಕ್ಸ್ವೆಲ್ ಲೆಗ್ ಸೈಡ್ನತ್ತ ಭರ್ಜರಿ ಶಾಟ್ ಬಾರಿಸಿದ್ದರು. ಅಲ್ಲದೆ 2 ರನ್ ಕದಿಯುವ ಯತ್ನದಲ್ಲಿ ರನೌಟ್ ಆಗಿದ್ದರು. ಬೌಂಡರಿ ಲೈನ್ನಿಂದ ಅಕ್ಷರ್ ಪಟೇಲ್ ಎಸೆದ ಚೆಂಡು ವಿಕೆಟ್ಗೆ ತಾಗುವ ಮುನ್ನವೇ ಬಾಲ್ ಹಿಡಿಯುವ ತವಕದಲ್ಲಿ ದಿನೇಶ್ ಕಾರ್ತಿಕ್ ಅಚಾನಕ್ಕಾಗಿ ಬೇಲ್ಸ್ ಎಗರಿಸಿದ್ದರು. ಇದಾದ ಬಳಿಕ ಚೆಂಡು ವಿಕೆಟ್ಗೆ ತಗುಲಿತ್ತು.
Go GOA GONE..Glenn Maxwell Run OUT. #glennmaxwell #Maxwell #INDvsAUS pic.twitter.com/eZ05nB8Qtt
— Avinash Aryan (@AvinashArya09) September 25, 2022
ಇತ್ತ ಮೂರನೇ ಅಂಪೈರ್ ರಿಪ್ಲೇ ವೇಳೆ ಮೊದಲೇ ವಿಕೆಟ್ ಕೀಪರ್ ಕೈ ತಾಗಿ ಬೇಲ್ಸ್ ಎಗರಿದ್ದ ಕಾರಣ ನಾಟೌಟ್ ನೀಡಲಿದ್ದಾರೆ ಎಂದೇ ಮ್ಯಾಕ್ಸ್ವೆಲ್ ಭಾವಿಸಿದ್ದರು. ಆದರೆ ಥರ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡುತ್ತಿದ್ದಂತೆ ಮ್ಯಾಕ್ಸಿ ಕೋಪಗೊಂಡರು. ಅಲ್ಲದೆ ಅಂಪೈರ್ ತೀರ್ಪಿಗೆ ಅಸಮಾಧಾನವನ್ನು ಹೊರಹಾಕುತ್ತಾ ಮೈದಾನ ತೊರೆದರು.
ಆದರೆ ಚೆಂಡು ತಾಗುವ ಮುನ್ನವೇ ಬೇಲ್ಸ್ ಎಗರಿದ್ದರೂ, ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಲು ಮುಖ್ಯ ಕಾರಣ ಐಸಿಸಿ ನಿಯಮ. ಅಂದರೆ ಐಸಿಸಿ ನಿಯಮದ ಪ್ರಕಾರ ರನೌಟ್ ವೇಳೆ ಸ್ಟಂಪ್‌ನ ಮೇಲಿರುವ ಎರಡು ಬೇಲ್‌ಗಳಲ್ಲಿ ಒಂದು ಇದ್ದರೂ ಸಾಕು. ಇತ್ತ ದಿನೇಶ್ ಕಾರ್ತಿಕ್ ಕೈ ತಾಗಿ ಒಂದು ಬೇಲ್ ಬಿದ್ದಿದ್ದರೂ ಮತ್ತೊಂದು ಬೇಲ್ ಹಾಗೇಯೇ ಇತ್ತು. ಆ ಬೇಲ್ಸ್ ಬೀಳುವ ಮೊದಲು ಮ್ಯಾಕ್ಸ್ವೆಲ್ ಕ್ರೀಸ್ಗೆ ತಲುಪಿರಲಿಲ್ಲ.
ಅತ್ತ ಅಕ್ಷ ಪಟೇಲ್ ಎಸೆದ ಥ್ರೋ ನೇರವಾಗಿ ಇನ್ನೊಂದು ಬೇಲ್ ಅನ್ನು ಎಗರಿಸಿತು. ಹೀಗಾಗಿ ಮೊದಲ ದಿನೇಶ್ ಕಾರ್ತಿಕ್ ಅವರ ಗ್ಲೌಸ್ ತಾಗಿ ಒಂದು ಬೇಲ್ಸ್ ಬಿದ್ದರೂ, ಆ ಬಳಿಕ ರನೌಟ್ ಆಗಿ ಗ್ಲೆನ್ ಮ್ಯಾಕ್ಸ್ವೆಲ್ ಹೊರಹೋಗಬೇಕಾಯಿತು.
— Richard (@Richard10719932) September 25, 2022
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ನಿಗದಿತ 20 ಓವರ್ಗಳಲ್ಲಿ 186 ರನ್ ಕಲೆಹಾಕಿತು. ಈ ಬೃಹತ್ ಗುರಿಹನ್ನು ಬೆನ್ನತ್ತಿದ ಟೀಮ್ ಇಂಡಿಯಾ 19.5 ಓವರ್ಗಳಲ್ಲಿ 187 ರನ್ ಬಾರಿಸಿ, 6 ವಿಕೆಟ್ಗಳಿಂದ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ 3 ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.
Published On - 1:25 pm, Mon, 26 September 22