
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೀನಾಯ ಸೋಲು ಅನುಭವಿಸಿತು. ಅರ್ಷದ್ ಖಾನ್, ಜೇಸನ್ ಹೋಲ್ಡರ್ ಮತ್ತು ಶುಭ್‌ಮನ್ ಗಿಲ್ ಗುಜರಾತ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳನ್ನು ಪೂರ್ಣಗೊಳಿಸಲು ವಿಫಲವಾಗಿ 155 ರನ್‌ಗಳಿಗೆ ಆಲೌಟ್ ಆಯಿತು. ನಂತರ ಗುಜರಾತ್ ಟೈಟಾನ್ಸ್ ಸುಲಭವಾಗಿ ಗುರಿ ತಲುಪಿತು. ಈ ಆವೃತ್ತಿಯಲ್ಲಿ ಆಡಿರುವ ಒಂಬತ್ತು ಪಂದ್ಯಗಳಲ್ಲಿ ಗುಜರಾತ್ ಪಡೆದ ಐದನೇ ಗೆಲುವು ಇದು, ಆದರೆ ಆರ್‌ಸಿಬಿ ಒಂಬತ್ತು ಪಂದ್ಯಗಳಲ್ಲಿ ಮೂರನೇ ಸೋಲನ್ನು ಅನುಭವಿಸಿತು.
ಗುಜರಾತ್ ತಂಡವು ಬೆಂಗಳೂರು ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿ, ಕೇವಲ 15.5 ಓವರ್‌ಗಳಲ್ಲಿ ಗುರಿ ಬೆನ್ನಟ್ಟಿ ಜಯ ಸಾಧಿಸಿತು. ರಶೀದ್ ಖಾನ್ 16 ನೇ ಓವರ್‌ನಲ್ಲಿ ಬೌಂಡರಿ ಬಾರಿಸಿ ತಂಡವನ್ನು ಗುರಿ ದಾಟಿಸಿದರು. ರಶೀದ್ 7 ರನ್ ಗಳಿಸಿ ಅಜೇಯರಾಗಿ ಉಳಿದರೆ, ಇಂಪ್ಯಾಕ್ಟ್ ಪ್ಲೇಯರ್ ರಾಹುಲ್ ತೆವಾಟಿಯಾ ಕೇವಲ 17 ಎಸೆತಗಳಲ್ಲಿ 27 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಋತುವಿನಲ್ಲಿ ಗುಜರಾತ್ ತಂಡಕ್ಕೆ ಇದು 5 ನೇ ಗೆಲುವು.
ಗುಜರಾತ್ ತನ್ನ ಐದನೇ ವಿಕೆಟ್ ಕಳೆದುಕೊಂಡಿದೆ. ವಾಷಿಂಗ್ಟನ್ ಸುಂದರ್ ಅವರನ್ನು ರೊಮಾರಿಯೊ ಶೆಫರ್ಡ್ ಔಟ್ ಮಾಡಿದರು.
ಗುಜರಾತ್ ಟೈಟಾನ್ಸ್ ತಂಡವು ತನ್ನ ನಾಲ್ಕನೇ ವಿಕೆಟ್ ಕಳೆದುಕೊಂಡಿದ್ದು, ಈ ಬಾರಿ ಶಾರುಖ್ ಖಾನ್ ಅವರನ್ನು ಔಟ್ ಮಾಡಿದವರು ರೊಮಾರಿಯೊ ಶೆಫರ್ಡ್.
ಗುಜರಾತ್ ಕೇವಲ 7 ಓವರ್‌ಗಳಲ್ಲಿ 86 ರನ್ ಗಳಿಸಿ ಕೇವಲ 2 ವಿಕೆಟ್‌ಗಳನ್ನು ಮಾತ್ರ ಕಳೆದುಕೊಂಡಿತು. ಜೋಸ್ ಬಟ್ಲರ್ ಸಿಕ್ಸರ್‌ಗಳ ಮಳೆಗರೆದು ತಂಡವನ್ನು ಸುಲಭ ಗೆಲುವಿನ ಹಾದಿಯಲ್ಲಿ ಸಾಗಿಸಿದರು.
ಗುಜರಾತ್ ಪರ ಗಿಲ್ ತ್ವರಿತ ಆರಂಭ ನೀಡಿದರು. ಆದರೆ ಭುವನೇಶ್ವರ್ ಕುಮಾರ್ ಎಸೆದ ಮೂರನೇ ಓವರ್‌ನಲ್ಲಿ ಸಾಯಿ ಸುದರ್ಶನ್ ಅವರನ್ನು ಔಟ್ ಮಾಡುವ ಮೂಲಕ ಮೊದಲ ಶಾಕ್ ನೀಡಿದರು.
ಶುಭಮನ್ ಗಿಲ್ ಕೇವಲ ಎರಡು ಓವರ್‌ಗಳಲ್ಲಿ ಆರ್‌ಸಿಬಿ ಬೌಲರ್‌ಗಳನ್ನು ಚೂರುಚೂರು ಮಾಡಿದರು. ಮೊದಲ ಓವರ್‌ನಲ್ಲಿ, ಗಿಲ್ ಭುವನೇಶ್ವರ್ ಕುಮಾರ್ ಎಸೆದ ಬೌಲಿಂಗ್‌ನಲ್ಲಿ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು. ನಂತರ, ಎರಡನೇ ಓವರ್‌ನಲ್ಲಿ, ಅವರು ಹ್ಯಾಜಲ್‌ವುಡ್ ವಿರುದ್ಧ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು.
ಬೆಂಗಳೂರು ತಂಡದ ಇನ್ನಿಂಗ್ಸ್ ಕೇವಲ 155 ರನ್‌ಗಳಿಗೆ ಅಂತ್ಯವಾಯಿತು. ಪೂರ್ಣ 20 ಓವರ್‌ಗಳನ್ನು ಪೂರ್ಣಗೊಳಿಸಲು ವಿಫಲರಾವಾದ ಆರ್‌ಸಿಬಿ 19.2 ಓವರ್‌ಗಳಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಕಳೆದುಕೊಂಡರು. ಜೋಶ್ ಹ್ಯಾಜಲ್‌ವುಡ್ ಕೊನೆಯ ವಿಕೆಟ್ ಆಗಿ ರನ್ ಔಟ್ ಆದರು.
ಎಂಟು ವಿಕೆಟ್‌ಗಳನ್ನು ಕಳೆದುಕೊಂಡು ಬೆಂಗಳೂರು ತಂಡದ ದೊಡ್ಡ ಮೊತ್ತದ ಕನಸು ಭಗ್ನವಾಯಿತು. 14ನೇ ಓವರ್‌ನಲ್ಲಿ ರಶೀದ್ ದೇವದತ್ ಪಡಿಕ್ಕಲ್ (40) ಅವರನ್ನು ಔಟ್ ಮಾಡಿದರೆ, ಮುಂದಿನ ಓವರ್‌ನಲ್ಲಿ ಹೋಲ್ಡರ್ ಶೆಫರ್ಡ್ (17) ಅವರನ್ನು ಔಟ್ ಮಾಡಿದರು.
ಹಾಲಿ ಚಾಂಪಿಯನ್ ಬೆಂಗಳೂರು ತಂಡ ಕೇವಲ 11 ಓವರ್‌ಗಳಲ್ಲಿ 96 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದೆ. ಅರ್ಷದ್ ಖಾನ್ ಕೃನಾಲ್ ಪಾಂಡ್ಯ ಅವರನ್ನು ಔಟ್ ಮಾಡುವ ಮೂಲಕ ತಮ್ಮ ಎರಡನೇ ವಿಕೆಟ್ ಪಡೆದರು. ಜೇಸನ್ ಹೋಲ್ಡರ್ ಸತತ ಮೂರನೇ ಕ್ಯಾಚ್ ಪಡೆದರು.
ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ (19) ಕೂಡ ಅರ್ಷದ್ ಖಾನ್ ಬೌಲಿಂಗ್‌ನಲ್ಲಿ ಔಟ್ ಆದರು. ಆದಾಗ್ಯೂ, ಜೇಸನ್ ಹೋಲ್ಡರ್ ಹಿಡಿದ ಕ್ಯಾಚ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಏಕೆಂದರೆ ಹೋಲ್ಡರ್ ಚೆಂಡನ್ನು ಹಿಡಿದು ಅದನ್ನು ನೆಲಕ್ಕೆ ತಾಗಿಸಿದ್ದು ಸ್ಪಷ್ಟವಾಗಿ ಗೋಚರಿಸುತಿತ್ತು. ಆದರೆ ಅಂಪೈರ್ ಅದನ್ನು ಔಟ್ ಎಂದು ತೀರ್ಪು ನೀಡಿದರು.
ವಿರಾಟ್ ಕೊಹ್ಲಿ (28) ಅವರ ಸಣ್ಣ ಆದರೆ ವೇಗದ ಇನ್ನಿಂಗ್ಸ್ ಕೊನೆಗೊಂಡಿತು. ಕಗಿಸೊ ರಬಾಡ ತಮ್ಮ ಮುಂದಿನ ಓವರ್‌ನಲ್ಲಿ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಸೇಡು ತೀರಿಸಿಕೊಂಡರು.
ಉತ್ತಮ ಆರಂಭದ ನಂತರ ಬೆಂಗಳೂರು ತಂಡ ಮೊದಲ ವಿಕೆಟ್ ಕಳೆದುಕೊಂಡಿತು. ಮೂರನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಜಾಕೋಬ್ ಬೆಥೆಲ್ (5) ಅವರನ್ನು ಮಿಡ್ ವಿಕೆಟ್‌ನಲ್ಲಿ ಕ್ಯಾಚ್ ನೀಡಿ ಔಟ್ ಮಾಡಿದರು.
ಎರಡನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಬೌಂಡರಿಗಳ ಮಳೆಗರೆದರು. ಕಗಿಸೊ ರಬಾಡ ಅವರ ಓವರ್‌ನ ಐದು ಸತತ ಎಸೆತಗಳಲ್ಲಿ ಐದು ಬೌಂಡರಿಗಳನ್ನು ಬಾರಿಸಿದರು. ಆರನೇ ಎಸೆತದಲ್ಲಿ ಕೊಹ್ಲಿ ಸಿಂಗಲ್ ಪಡೆದರು.
ವಿರಾಟ್ ಕೊಹ್ಲಿ ಮತ್ತು ಜಾಕೋಬ್ ಬೆಥೆಲ್ ಬ್ಯಾಟಿಂಗ್ ಆರಂಭಿಸಿದರು. ಗುಜರಾತ್ ಪರ ಮೊಹಮ್ಮದ್ ಸಿರಾಜ್ ಮೊದಲ ಓವರ್ ಎಸೆದು ಕೇವಲ ಆರು ರನ್‌ಗಳನ್ನು ನೀಡಿದರು.
ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಸುಯಾಶ್ ಶರ್ಮಾ, ರಸಿಖ್ ಸಲಾಂ.
ಇಂಪ್ಯಾಕ್ಟ್ ಪ್ಲೇಯರ್: ಜಾಕೋಬ್ ಬೆಥೆಲ್, ಜೋರ್ಡಾನ್ ಕಾಕ್ಸ್, ಮಂಗೇಶ್ ಯಾದವ್, ವಿಕಿ ಓಸ್ಟ್ವಾಲ್ ಮತ್ತು ವೆಂಕಟೇಶ್ ಅಯ್ಯರ್
ಶುಭಮನ್ ಗಿಲ್(ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್(ವಿಕೆಟ್ ಕೀಪರ್), ಜೇಸನ್ ಹೋಲ್ಡರ್, ಶಾರುಖ್ ಖಾನ್, ವಾಷಿಂಗ್ಟನ್ ಸುಂದರ್, ಅರ್ಷದ್ ಖಾನ್, ರಶೀದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಮಾನವ್ ಸುತಾರ್.
ಇಂಪ್ಯಾಕ್ಟ್ ಪ್ಲೇಯರ್: ರಾಹುಲ್ ತೆವಾಟಿಯಾ, ಗ್ಲೆನ್ ಫಿಲಿಪ್ಸ್, ಅನುಜ್ ರಾವತ್, ನಿಶಾಂತ್ ಸಿಂಧು,ಕುಲ್ವಂತ್ ಖೆಜ್ರೋಲಿಯಾ.
Published On - 7:02 pm, Thu, 30 April 26