ಫಿಟ್​ನೆಸ್ ಟೆಸ್ಟ್​ನಲ್ಲಿ ಫೇಲ್: ಟೀಮ್ ಇಂಡಿಯಾದಿಂದ ಯುವ ವೇಗಿ ಔಟ್!

ಭಾರತ ಮತ್ತು ಅಫ್ಘಾನಿಸ್ತಾನ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಸೆಪ್ಟೆಂಬರ್ 13, 2026 ರಿಂದ ಆರಂಭವಾಗಲಿದೆ. ಈ ಸರಣಿಯ ದ್ವಿತೀಯ ಪಂದ್ಯ ಸೆಪ್ಟೆಂಬರ್ 15 ರಂದು ಹಾಗೂ ತೃತೀಯ ಪಂದ್ಯ ಸೆಪ್ಟೆಂಬರ್ 17 ರಂದು ಜರುಗಲಿದೆ. ಇನ್ನು ಈ ಸರಣಿಯ ಎಲ್ಲಾ ಪಂದ್ಯಗಳಿಗೂ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಆತಿಥ್ಯ ವಹಿಸಲಿದೆ.

ಫಿಟ್​ನೆಸ್ ಟೆಸ್ಟ್​ನಲ್ಲಿ ಫೇಲ್: ಟೀಮ್ ಇಂಡಿಯಾದಿಂದ ಯುವ ವೇಗಿ ಔಟ್!
ಟೀಮ್ ಇಂಡಿಯಾ
Image Credit source: BCCI

Updated on: Sep 10, 2026 | 11:35 AM

ಭಾರತ ತಂಡದ ಯುವ ವೇಗಿ ಹರ್ಷಿತ್ ರಾಣಾ ಮುಂಬರುವ ಅಫ್ಘಾನಿಸ್ತಾನ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಿಂದ ಹೊರ ಬಿದ್ದಿದ್ದಾರೆ. ಸೆಪ್ಟೆಂಬರ್ 13 ರಿಂದ ನವದೆಹಲಿಯಲ್ಲಿ ಆರಂಭವಾಗಲಿರುವ ಈ ಸರಣಿಗೆ 24 ವರ್ಷದ ರಾಣಾ ಸಂಪೂರ್ಣ ಫಿಟ್​ನೆಸ್​ ಸಾಧಿಸದ ಕಾರಣ, ಅವರಿಗೆ ಮತ್ತಷ್ಟು ವಿಶ್ರಾಂತಿ ನೀಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರ್ಧರಿಸಿದೆ.

ಹರ್ಷಿತ್ ರಾಣಾ ಗಾಯದ ಸಮಸ್ಯೆ:

ಕಳೆದ ಜುಲೈನಲ್ಲಿ ನಡೆದ ಇಂಗ್ಲೆಂಡ್ ಪ್ರವಾಸದ ವೇಳೆ ಹರ್ಷಿತ್ ರಾಣಾ ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೆ ತುತ್ತಾಗಿದ್ದರು. ಇದಕ್ಕೂ ಮುನ್ನ ಮೊಣಕಾಲು ಗಾಯದ ಸಮಸ್ಯೆಯಿಂದಾಗಿ ಅವರು ಟಿ20 ವಿಶ್ವಕಪ್ ಮತ್ತು ಐಪಿಎಲ್ ಟೂರ್ನಿಗಳಿಂದಲೂ ಹೊರಗುಳಿದಿದ್ದರು. ಜೂನ್ ಮತ್ತು ಜುಲೈ ತಿಂಗಳಲ್ಲಿ ತಂಡಕ್ಕೆ ಮರಳಿದ್ದ ಅವರಿಗೆ ಈ ಹ್ಯಾಮ್‌ಸ್ಟ್ರಿಂಗ್ ಗಾಯ ಮತ್ತೊಂದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.

ಫಿಟ್​ನೆಸ್ ಟೆಸ್ಟ್‌ನಲ್ಲಿ ಏನಾಯ್ತು?

ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿ ಸೆಪ್ಟೆಂಬರ್ 9 ರಂದು ಹರ್ಷಿತ್ ರಾಣಾ ಅವರಿಗೆ ಮ್ಯಾಚ್ ಸಿಮ್ಯುಲೇಶನ್ (ಪಂದ್ಯದ ಮಾದರಿಯ ಅಭ್ಯಾಸ) ಫಿಟ್​ನೆಸ್​ ಪರೀಕ್ಷೆ ನಡೆಸಲಾಯಿತು. ಈ ಟೆಸ್ಟ್​ನಲ್ಲಿ ಅವರ ರಿಪೋರ್ಟ್ ಹೀಗಿದೆ…

ಮ್ಯಾಚ್ ಸಿಮ್ಯುಲೇಶನ್ ಟೆಸ್ಟ್: ಹರ್ಷಿತ್ ರಾಣಾ ಅವರಿಗೆ ಪಂದ್ಯದ ಪರಿಸ್ಥಿತಿಯನ್ನೇ ಹೋಲುವ ಕಠಿಣ ಅಭ್ಯಾಸ ಮತ್ತು ಬೌಲಿಂಗ್ ಪರೀಕ್ಷೆಯನ್ನು ನಡೆಸಲಾಯಿತು. ಈ ವೇಳೆ ಅವರು ಸಂಪೂರ್ಣ ಫಿಟ್​ ಆಗಿರುವುದು ಕಂಡು ಬಂದಿಲ್ಲ.

ವೈದ್ಯಕೀಯ ಮಂಡಳಿಯ ವರದಿ: ಬಿಸಿಸಿಐ ವೈದ್ಯಕೀಯ ತಂಡದ ಮೌಲ್ಯಮಾಪನದ ಪ್ರಕಾರ, ರಾಣಾ ಅವರ ಗಾಯವು ಕ್ಲಿನಿಕಲ್ ಆಗಿ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದೆ ಅಷ್ಟೇ. ಪಂದ್ಯವಾಡಲು ಸಂಪೂರ್ಣ ಫಿಟ್ ಆಗಿಲ್ಲ.

ಸಮಯವಕಾಶ: ಹರ್ಷಿತ್ ರಾಣಾ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದರೂ, ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲು ಸಂಪೂರ್ಣ ಫಿಟ್​ನೆಸ್​ ಸಾಧಿಸಲು ಅವರಿಗೆ ಇನ್ನೂ 10 ರಿಂದ 15 ದಿನಗಳ ಹೆಚ್ಚುವರಿ ಸಮಯ ಬೇಕಾಗುತ್ತದೆ ಎಂದು ವೈದ್ಯಕೀಯ ತಜ್ಞರು ತಿಳಿಸಿದ್ದಾರೆ.

ಹೀಗಾಗಿ ಸೆಪ್ಟೆಂಬರ್ 13 ರಿಂದ ಆರಂಭವಾಗಲಿರುವ ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿಯಿಂದ ಹರ್ಷಿತ್ ರಾಣಾ ಅವರನ್ನು ಹೊರಗಿಡಲಾಗಿದೆ. ಅವರ ಬದಲಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿ ಪ್ರಿನ್ಸ್ ಯಾದವ್ ಅವರನ್ನು ಟೀಮ್ ಇಂಡಿಯಾಗೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ: ರೋ-ಕೊ ಅಭಿಮಾನಿಗಳಿಗೆ ಗುಡ್ ನ್ಯೂಸ್: ಐಪಿಎಲ್​ಗೂ ಮುನ್ನ 14 ಪಂದ್ಯಗಳು

ಅಫ್ಘಾನಿಸ್ತಾನ್ ಸರಣಿಗೆ ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ (ಉಪನಾಯಕ), ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ಜಸ್​ಪ್ರೀತ್ ಬುಮ್ರಾ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us